भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಜನ

[ನಾ] (ಆ ರಥದೊಳ್ ಒಡಂಬಡೆ ಪೂಡಿದ ನಾಲ್ನೂಱು ಗೊಂಕುಱುಗೞ್ತೆಯುಂ ಅಂಬರಸ್ಥಲಮನಡರ್ವ ಗೃಧ್ರಧ್ವಜಮುಂ ಅಂಜನಪುಂಜದಂತಾಗಿ: ಪಂಪಭಾ, ೧೨. ೭ ವ)

ಅಂಜನಪುಂಜ

[ನಾ] ಕಾಡಿಗೆಯ ಮುದ್ದೆ (ಅಂಜನಪುಂಜದಂತಪ್ಪ ಮೆಯ್ಯುಂ ಸಿಡಿಲಂ ಅಡಸಿದಂತಪ್ಪ ದಾಡೆಯುಂ ಉರಿಯ ಉರುಳಿಯಂತಪ್ಪ ಕಣ್ಣುಂ ಕೃತಾಂತನಂತೆ ಆಕಾರಮಾಗಿ: ಪಂಪಭಾ, ೪. ೪೨ ವ)

ಅಂಜಮೆಗುಡು

[ಕ್ರಿ] ಹೆದರಿಕೆಯನ್ನು ಹೋಗಲಾಡಿಸು, ಅಭಯ ಕೊಡು (ಜನಮಂ ನೀಮಂಜಲಿಂ ಎಂದಱಿವಂ ಅರ್ವಿನಮಂಜನೆಗೊಟ್ಟಱಿದು ನಿಱಿಸಿದಂ: ಆದಿಪು, ೬. ೬೧)

ಅಂಜರಿಕಾಸ್ತ್ರ

[ನಾ] ಅರ್ಜುನನಿಗೆ ಶಿವನು ಪಾಶುಪತಾಸ್ತ್ರವಿತ್ತಾಗ ಪಾರ್ವತಿ ನೀಡಿದ ದಿವ್ಯಾಸ್ತ್ರ (ಈಶ್ವರಂ ಕೊಟ್ಟುದರ್ಕೆ ತೆಲ್ಲಂಟಿಯೆಂದು ಗೌರಿದೇವಿಯುಂ ಅಂಜರಿಕಾಸ್ತ್ರಮೆಂಬ ಅಮೋಘಾಸ್ತ್ರಮಂ ವಿಕ್ರಮಾರ್ಜುನಂಗೆ ಕುಡೆ: ಪಂಪಭಾ, ೮. ೨೬ ವ)

ಅಂಜಲಿಂ

[ಗು] ಹೆದರಬೇಡಿ (ಕಾಗೆವೊಲಿಂತು ಬಿಲ್ಗೆ ಕರಂ ಅಂಜುವಿರಿ ಅಂಜಲಿಂ: ಪಂಪಭಾ, ೧೦. ೧೨೨)

ಅಂಜಲಿಪುಟ

[ನಾ] ಬೊಗಸೆ (ನೀರಂ ಕುಡಿಯಲೆಂದು ನಿಜಾಂಜಲಿಪುಟಮಂ ನೀಡಿದಾಗಳ್ ಒಂದು ದಿವ್ಯವಚನಂ ಆಕಾಶದೊಳ್: ಪಂಪಭಾ, ೮. ೩೮ ವ)

ಅಂಜಿಸು

[ಕ್ರಿ] ಹೆದರಿಸು, ಭಯವುಂಟುಮಾಡು (ದೇವಸೌಂದರೀಗಣದ ವಿಳಾಸಂ ಅಂಜಿಸುವವೋಲ್ ಪೆಡೆಯಂ ಮುಡಿಯಲ್ಲಿ ತೋರ್ಪ ನಾಗಿಣಿಯರ ಕೆಯ್ತಂ: ಆದಿಪು, ೪. ೪೭)

ಅಂಜು

[ಕ್ರಿ] ಹೆದರು (ಮುಳಿಸಱಿದು ಅಂಜಿ ಬಾೞ್ತೆಯಱಿದಿತ್ತು ಮನಂಗೊಳೆಯುಂ ಕನಲ್ವುದರ್ಕಳವಿಯುಂ ಅಂತುಂ ಇಲ್ಲ : ಪಂಪಭಾ, ೪. ೯೮)

ಅಂಜುಮೆ

[ನಾ] ಅಂಜಿಕೆ (ಚಲದಿನೆಱಗಿಸಲಿರೆ ಭರತಂಗೆಱಕಮ್ ಅಂಜುಮೆಯಲ್ತೇ: ಆದಿಪು, ೧೪. ೭೫)

ಅಂಟಪರಿಚೆ

[ನಾ] ಹಣೆಗೆ ಅಂಟಿಸಿಕೊಳ್ಳುವ ಬಟ್ಟು ? (ತೀವಿದ ಕೊಗ್ಗಿಯ ಕತ್ತುರಿಯುಂ ಕತ್ತುರಿಯೊಳ್ ಅಂಟಪರಿಚೆಯುಂ ಪರಿಚೆಯೊಳ್ ಪರಿಚಯಂಬಡೆದ ಮದವಟ್ಟೆಯುಂ: ಆದಿಪು, ೪. ೪೧ ವ)

ಅಂಡಕೋಶ

[ನಾ] ಬೀಜಕೋಶ, ವೃಷಣ (ಸಮಸಂಕ್ಷಿಪ್ತ ಪ್ರಚ್ಛನ್ನವಾಯುಪ್ರವೇಶನುಂ ಅಪಿಂಜೋತ್ಪನ್ನಾಂಡಕೋಶನುಂ: ಆದಿಪು, ೧೨. ೫೬ ವ)

ಅಂಡುಗೊಳ್

[ಕ್ರಿ] ಹತ್ತಿರವಿರು (ಮತ್ತೊರ್ವಳ್ ಅತಿಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರಲುಳಿತಾಧರಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು: ಪಂಪಭಾ, ೪. ೩೬ ವ)

ಅಂತ

[ನಾ] ಗಡಿ, ಸೀಮೆ (ದೇವಮಾತೃಕ ಸಾಧಾರಣಾನೂಪ ಜಾಂಗಳಭೇದಂಗಳುಂ ಅನಂತಪಾಳಪಾಳಿತದುರ್ಗಪರಿವೃತ ಅಂತಗಳುಂ: ಆದಿಪು, ೮. ೬೩ ವ); [ನಾ] ತುತ್ತ ತುದಿ (ಅಂತು ಭರತಕುಲತಿಲಕರಪ್ಪ ಇರ್ವರ್ ಮಕ್ಕಳಂ ಪೆತ್ತು ಕೊಂತಿ ಸಂತಸದ ಅಂತಮನೆಯ್ದಿರ್ಪುದುಂ: ಪಂಪಭಾ, ೧. ೧೨೮ ವ)

ಅಂತಂ

[ನಾ] ಕೊನೆ, ಮುಗಿವು (ರಾಜಸೂಯಾಂತಂ ಕಳಹಮೆಂಬುದಂ ಬಗೆದು ತಾನುಂ ಕಲಹಪ್ರಿಯನಪ್ಪುದಱಿಂದಂ ಅನಿತೆ ನುಡಿದು ಮಾಣ್ದ: ಪಂಪಭಾ, ೬. ೧೮ ವ)

ಅಂತಂ ಬರ್

[ಕ್ರಿ] ಕೊನೆಗೊಳ್ಳು (ಆ ಮಧುರಾಕಾರ ಲತಾಕೋಮಳೆ ತನಗಾಗಳ್ ಆಯುರಂತಂ ಬರೆ ಸೌದಾಮಿನಿವೊಲ್ ಭೋಂಕೆನೆ ಸುರಕಾಮಿನಿ ರಂಗದೊಳ್ ಅದೃಶ್ಯೆಯಪ್ಪುದುಂ: ಆದಿಪು, ೯. ೪೧)

ಅಂತಂ ಮಾಡು

[ಕ್ರಿ] ಕೊಲ್ಲು, ಮುಗಿಸಿಬಿಡು (ಅಂಜಲಿಕಾಸ್ತ್ರಮಂ ಅಮೋಘಾಸ್ತ್ರಧನಂಜಯಂ ಆಕರ್ಣಾಂತಂಬರಂ ತೆಗೆದು ಆ ಕರ್ಣಾಂತಂ ಮಾಡಲ್ ಬಗೆದು: ಪಂಪಭಾ, ೧೨. ೨೧೨ ವ)

ಅಂತಃಪುರ

[ನಾ] ರಾಣಿವಾಸದ ಜನ (ಚೆಲ್ವೆಸೆದುದು ಷಣ್ಣವತಿಸಹಸ್ರ ಅಂತಃಪುರಮವಯವದೊಳೆ ಭರತಚಕ್ರವರ್ತಿಯ ಕೆಲದೊಳ್: ಆದಿಪು, ೧೧. ೩೯)

ಅಂತಃಪುರದಾಸೇರಕ

[ನಾ] ಅಂತಃಪುರದ ದಾಸೀಪುತ್ರ (ಅಂತಃಪುರದಾಸೇರಕನನೇಱಿ ಕಿಂಚಿದಾಕುಂಚಿತಾಗ್ರ ತರ್ಜನೀನಿಶಿತಾಂಕುಶಂ ಅಂತಃಪುರಪ್ರಮದವನವಿಷ್ಟನಾಗಿ: ಆದಿಪು, ೮. ೪೧ ವ)

ಅಂತಃಪ್ರತಿಹಾರಿ

[ನಾ] ಅಂತಃಪುರದ ದ್ವಾರಪಾಲಕ (ವಿಚಿತ್ರವೇತ್ರಲತಾ ಶೋಭಿತತಳಕಮಳೆಯರ್ ಅಂತಃಪ್ರತಿಹಾರಿಯರಾದರ್ ಅಮರಕಾಂತೆಯರರೆಬರ್: ಆದಿಪು, ೭. ೧೪)

ಅಂತಕತನಯ

[ನಾ] ಯಮನ ಮಗ, ಧರ್ಮರಾಯ (ಅೞ್ಕಱಂ ತನಗೆರ್ದೆಯೊಳ್ ಚೋದಿಸೆ ಪರಸಿದಂ ಆಶೀರ್ವಾದ ಪರಂಪರೆಯಿಂ ಆಗಳ್ ಅಂತಕತನಯಂ: ಪಂಪಭಾ, ೧೩. ೧)

Search Dictionaries

Loading Results

Follow Us :   
  Download Bharatavani App
  Bharatavani Windows App