भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹಿಮವತ್ಪರ್ವತ

[ನಾ]ಹಿಮದಿಂದ ಆವೃತವಾದ ಪರ್ವತ, ಹಿಮಾಲಯ (ಆಗಳ್ ಅಶ್ವತ್ಥಾಮನುಂ ಕೃಪನುಂ ಸಿಗ್ಗಾಗಿ ಹಿಮವತ್ಪರ್ವತಕ್ಕೆ ನಡೆಗೊಂಡರ್:ಪಂಪಭಾ, ೧೩. ೧೦೭ ವ)

ಹಿಮವದಚಳ

[ನಾ][ಹಿಮವತ್+ಅಚಳ] ಹಿಮವತ್ಪರ್ವತ (ಲೀಲಾಭವನೋಪವನಕೃತಕಗಿರಿಗಳಿರ್ದಂತೆ ವಿಜಯಾರ್ಧ ಹಿಮವದಚಳಕೂಟಂಗಳೊಳ್ ವಿಹಾರಿಸಲುಂ:ಆದಿಪು, ೮. ೩೨ ವ)

ಹಿಮವನ್ಮಹೀಧರ

[ನಾ][ಹಿಮವತ್+ಮಹೀಧರ] ಹಿಮವತ್ಪರ್ವತ (ಎಂದು ಗುಹ್ಯಕಂ ಹಿಮನ್ಮಹೀಧರಮಂ ತೋಱುತ್ತುಂ ಬಂದು ಕೈಲಾಸಪರ್ವತಮಂ ಕಂಡು:ಪಂಪಭಾ, ೭. ೭೩ ವ)

ಹಿಮಶಿಖರಿ

[ನಾ]ಹಿಮವದ್ಗಿರಿ (ಅವಱೊಳುತ್ತರಶ್ರೇಣಿಯೊಳ್ ಉದಗ್ರಹಿಮಶಿಖರಿಶೇಖರ ಶಾರದನೀರದಾಕಾರ ಸುಧಾಧವಲಿತ ಉತ್ತುಂಗ ಪ್ರಾಸಾದಕೂಟಕೋಟಿ ಸಂಕೀರ್ಣಮುಂ .. .. ಆಗಿ:ಆದಿಪು,೧. ೭೦ ವ)

ಹಿಮಶಿಶಿರ

[ಗು]ತುಂಬ ತಣ್ಣಗಿರುವ (ಅನ್ನೆಗಂ ಅತ್ತ ದುರ್ಯೋಧನಂ ಅತಿಸಂಭ್ರಮಾಕುಳಿತಪರೀತಜನ ಉಪನೀತ ಚಂದನಕರ್ಪೂರಮಿಶ್ರಿತ ಹಿಮಶಿಶಿರ ಧಾರಾಪರಿಷೇಕದಿಂದ ಎಂತಾನುಂ ಮೂರ್ಛೆಯಿಂದೆೞ್ಚತ್ತು:ಪಂಪಭಾ, ೧೩. ೨ ವ)

ಹಿಮಸೇತುಪ್ರತಿಬದ್ಧಭೂವಳಯ

[ನಾ] ಉತ್ತರದಲ್ಲಿ ಹಿಮಾಲಯ ದಕ್ಷಿಣದಲ್ಲಿ ರಾಮಸೇತು ಇವುಗಳಿಂದ ಮಿತಿಗೊಂಡ ಭೂಮಂಡಲ (ಹಿಮಸೇತುಪ್ರತಿಬದ್ಧ ಭೂವಳಯಮಂ ನಿಷ್ಕಂಟಕಂ ಮಾಡಿ ವಿಕ್ರಮಮಂ ತೋಱೆ ನಿಜಾನುಜರ್ ನೆರಪಿದೊಂದು ಐಶ್ವರ್ಯದಿಂ: ಪಂಪಭಾ, ೬. ೬೬)

ಹಿಮಾಂಶು

[ನಾ]ಶೀತಲ ಕಿರಣಗಳುಳ್ಳವನು, ಚಂದ್ರ (ಪಾಱುವ ಪಾಱುಗಳಂದಮಂ ಬೆಡಂಗು ಅಣಿಯರಂ ಈಕೆಗೆಂದು ಪೊಗೞ್ವರ್ ಕೆಲರಲ್ಲಿ ಹಿಮಾಂಶುವಕ್ತ್ರೆಯಂ:ಆದಿಪು, ೪. ೪೭)

ಹಿಮಾಂಶು ನಯನಾಗ್ನಿ ಕಷಾಯ ಹೃಷೀಕ ಷಣ್ಮುನಿ ಕ್ರಮನರಕಂಗಳ್

ಅಸಂಜ್ಞಿಜೀವ,ಸರೀಸೃಪ,ಪಕ್ಷಿ,ಹಾವು,ಸಿಂಹ,ಲಲನಾಜನಹಾಗೂಮನುಷ್ಯರುಮತ್ತುದುಷ್ಟಮೀನುಗಳುಕ್ರಮವಾಗಿಜೀವಿಸುವಒಂದರಿಂದಏಳರವರೆಗಿನನರಕಗಳಕ್ರಮ[ಚಂದ್ರ-೧ನಯನ-೨ಅಗ್ನಿ-೩ಕಷಾಯ-೪ಇಂದ್ರಿಯ-೫ಷಟ್-೬ಮತ್ತುಮುನಿ-೭] (ಹಿಮಾಂಶುನಯನಾಗ್ನಿಕಷಾಯಹೃಷೀಕಷಣ್ಮುನಿಕ್ರಮನರಕಂಗಳೊಳ್ನೆಲಸುಗುಂ:ಆದಿಪು,೫.೯೪)

ಹಿಮಾಂಶುಮಂಡಲ

[ನಾ]ಚಂದ್ರಮಂಡಲ (ಉದಯಾದ್ರಿಯೊಳ್ ಪದಂಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಗೆ ಹಿಮಾಂಶುಮಂಡಲಂ:ಪಂಪಭಾ, ೩. ೮೧)

ಹಿರಣ್ಯಗರ್ಭ

[ನಾ][ಜೈನ] ಆದಿ ತೀರ್ಥಂಕರ (ಧರೆ ರತ್ನಗರ್ಭಮಾದುದು ಸುರೆಲ್ಲಂ ಹರ್ಷಗರ್ಭರಾದರ್ ಪಿರಿದಚ್ಚರಿಯೆನೆ ಹಿರಣ್ಯಗರ್ಭನ ನಿರುಪಮ ಗರ್ಭಾವತರಣ ಮಂಗಳವಿಧಿಯೊಳ್:ಆದಿಪು,೭. ೨೬);[ನಾ]ಬ್ರಹ್ಮ (ಜಳರುಹನಾಭನ ನಾಭಿಯ ಜಳಬುದ್ಬುದದೊಳಗೆ ಸುರಭಿಪರಿಮಳಮಿಳಿತ ಉಲ್ಲುಳಿತ ಅಳಿ ಜಲಜಮಾಯ್ತು ಆ ಜಳಜದೊಳಗೆ ಒಗೆದಂ ಹಿರಣ್ಯಗರ್ಭಂ:ಪಂಪಭಾ, ೧. ೫೯)

ಹಿರಣ್ಯೋತ್ಕೃಷ್ಟಜನ್ಮತಾ

[ನಾ][ಜೈನ] ಒಂದು ಗರ್ಭಾನ್ವಯಕ್ರಿಯೆ, ಜಿನಜನನಿಯ ಗರ್ಭದಲ್ಲಿ ಅವತರಿಸುವುದು (ಹಿರಣ್ಯಗರ್ಭೋತ್ಕೃಷ್ಟಜನ್ಮತಾ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ:ಆದಿಪು,೧೫. ೧೫ ವ)

ಹಿಂಸಾರುಚಿ

[ನಾ]ಪರರಿಗೆ ತೊಂದರೆ ಕೊಟ್ಟು ಆನಂದಿಸುವ ಸ್ವಭಾವ (ಮಾಂಸ ಮಧು ಮದ್ಯಸೇವನೆ ಹಿಂಸಾರುಚಿ .. .. ಎಂಬಿವಲ್ಲದೆ ಸಂಸಾರಭ್ರಮಣಕಾರಣಂ ಪೆಱವೊಳವೇ:ಆದಿಪು,೫. ೮೦)

ಹುಂಡಸಂಸ್ಥಾನ

[ನಾ] [ಜೈನ] ದೇಹದ ಅಂಗೋಪಾಂಗಗಳನ್ನು ಅತಿ ಕುರೂಪಗೊಳಿಸುವ ಕರ್ಮಗಳ ಉದಯ (ಅದೇಂ ನೆಱೆ ಪೋಲ್ತುದೊ ಚಂಡ ಹುಂಡಸಂಸ್ಥಾನದ ದಗುಂತಿದೀವಿದ ತಡಂಗಮದಂಗದ ಪಾಂಗವಂದಿರಾ: ಆದಿಪು, ೫. ೯೦) [ಪದ್ಯದ ಕೊನೆಯ ಸಾಲು ಎಲ್. ಬಸವರಾಜು ಅವರ ಆವೃತ್ತಿಯದು]

ಹುಂಡಾವಸರ್ಪಿಣಿ

[ನಾ][ಜೈನ] ಅನೇಕ ಅವಸರ್ಪಿಣಿಗಳ ನಂತರ ಬರುವ ಕಾಲಾವಧಿ (ಅತಿಭಂಗಂ ದೊರೆಕೊಂಡುದಿಂದು ಭರತೇಶ್ವರಂಗೆ ಹುಂಡಾವಸರ್ಪಿಣೀ ವಿಳಸನದಿಂ:ಆದಿಪು, ೧೪. ೧೧೪)

ಹುತ

[ನಾ]ಹೋಮ ಮಾಡಲ್ಪಟ್ಟ, ಹವಿಸ್ಸು (ಹಿತ ಪುರೋಹಿತ ಪ್ರಾಜ್ಯಾಹುತಿ ಹುತವಹಸಮಕ್ಷದೊಳ್ ಕೆಯ್ನೀರೆಱೆದು ಪಾಣಿಗ್ರಹಣಂಗೆಯ್ಯೆ:ಪಂಪಭಾ, ೩. ೭೪ ವ)

ಹುತವಹ

[ನಾ]ಅಗ್ನಿ (ಪುರೋಹಿತಪ್ರಾಜ್ಯ ಆಜ್ಯಾಹುತಿ ಹುತವಹ ಸಮಕ್ಷಮದೊಳ್ ಕೆಯ್ನೀರೆಱೆದು ಪಾಣಿಗ್ರಹಂಗೆಯ್ಸೆ:ಪಂಪಭಾ, ೩. ೭೪ ವ)

ಹುತಾಶನಕುಂಡ

[ನಾ]ಹೋಮಕುಂಡ (ಅಪರದಿಗ್ಭಾಗದೊಳ್ ಅನಗಾರಕೇವಲಿ ಹುತಾಶನಕುಂಡಮಂ ಸ್ಥಾಪನಂಗೆಯ್ದು:ಆದಿಪು, ೧೬. ೫೨ ವ)

ಹೂಂಕರಣ

[ನಾ]ಹೂಂಕಾರ, ಗರ್ಜನೆ (ಕರಿಕಳಭಪ್ರಚಂಡ ಮೃಗರಾಜಕಿಶೋರ ಕಠೋರಘೋರ ಹೂಂಕರಣಭಯಂಕರ ಅಟವಿ:ಪಂಪಭಾ, ೯. ೪೨)

ಹೂನ್ಯ

[ನಾ]ಪುಣ್ಯ (ಪೊಸಹೂನ್ಯದ ಪಸರಮೆನಿಸಲಿದು ಮದನನ ಮಂಗಳಭವನಮೆನಿಸಲಿದು:ಆದಿಪು, ೩೦ ರಗಳೆ)

ಹೃಚ್ಛಲ್ಯ

[ನಾ][ಹೃತ್+ಶಲ್ಯ] ಹೃದಯಕ್ಕೆ ನಾಟಿದ ಮುಳ್ಳು, ಹೃದಯದ ನೋವು (ಎಂದು ಕುರುಕುಲಚೂಡಾಮಣಿ ಶಲ್ಯನ ಹೃಚ್ಛಲ್ಯಮೆಲ್ಲಮಂ ಕೞಲೆ ನುಡಿದೊಡೆ:ಪಂಪಭಾ, ೧೨. ೯೯ ವ)

Search Dictionaries

Loading Results

Follow Us :   
  Download Bharatavani App
  Bharatavani Windows App