भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸಗದ

[ನಾ]ಆನೆಯ ಮುಖದಲ್ಲಿ ದವಡೆಗಳ ಕೆಳಭಾಗದ ಒಂದು ಅಂಗ (ಆಯತ ಪೃಥುಪಿಬಸ್ತಾನುಪದಿಗ್ಧಾಂದಪೂರ್ವಪೀನ ರಕ್ತಾರೋಮಾಶ್ಲಿಷ್ಟಸಮಾಸಮ ಸಗದನುಂ:ಆದಿಪು, ೧೨. ೫೬ ವ)

ಸಂಗರ

[ನಾ] ಯುದ್ಧ (ಆಜಿಗೆ ಬಂದೊಡ್ಡಲ್ಕೆ ಪೇೞ್ ಸಂಗರನಿಕಷದೊಳ್ ಎಮ್ಮಂದಮಂ ನೀನೆ ಕಾಣ್ಬೈ: ಆದಿಪು, ೧೪. ೮೨)

ಸಂಗರಾಜಿರ

[ನಾ] [ಸಂಗರ+ಅಜಿರ] ಸಂಗರರಂಗ (ಸಂಗರಾಜಿರದೊಳ್ ಕೌರವರೆಂಬ ಕಾಕಕುಳಕೆ ಎನ್ನ ಈ ಒಂದೆ ಬಿಲ್ ಸಾಲದೇ: ಪಂಪಭಾ, ೧೨. ೧೩೫)

ಸಂಗಳಿಸು

[ಕ್ರಿ] ಉಂಟಾಗು (ಭಂಗಿಗಳೊಳೆಮ್ಮೊಳಾದೀ ಸಂಗಡಮಂ ನೀಮೆ ಮನದೆಗೊಂಡೆಮ್ಮ ಕಿಸುರ್ ಪಿಂಗುಗೆ ಅಗಲ್ವೆಡೆಯೊಳ್ ಕೆಳೆ ಸಂಗಳಿಸುಗೆ ನಿಮಗಂ ಎಮಗಂ ಇಂ ಲತೆಗಳಿರಾ: ಆದಿಪು, ೧೧. ೧೩೩); [ಕ್ರಿ] ಉಂಟುಮಾಡು (ನಿನ್ನಂ ನುಂಗುವುದರ್ಕೆ ಇವರಂ ಎತ್ತವೇೞ್ಕುಮೇ ನೆರಮಂ ಸಂಗಳಿಸಲ್ವೇೞ್ಕುಮೇ ಮಾತಂಗವಿರೋಧಿಗೆ ಕುರಂಗಸಂಗರ ಧರೆಯೊಳ್: ಪಂಪಭಾ, ೩. ೧೭); [ಕ್ರಿ] ಸೇರು (ಕೀರ್ತಿ ಪುರಾಕೃತಪುಣ್ಯದಿಂದೆ ಸಂಗಳಿಸುವುದೆಂದೊಡೆ ಈ ಮಖದೊಳೇಂ ತೊದಳುಂಟೇ: ಪಂಪಭಾ, ೬. ೧೯)

ಸಗಾಟಿಸು

[ಕ್ರಿ]ಗೆಳೆತನ ಮಾಡು (ಆಸೆದೋಱಿ ಬಗೆದೋಱದೊಡಂ ನೆರೆದಿರ್ದೊಡಂ ಸಗಾಟಿಸದೊಡಂ .. .. ಪೇಸದವಳ್ಗೆ ಮತ್ತಮಾಟಿಸುವುದೇ:ಪಂಪಭಾ,೪. ೯೨)

ಸಂಗಿ

[ನಾ] ಕೂಡಿದುದು (ದಿಶಾಯುವತಿಕೇಳಿಕೀರ್ಣ ಪಟವಾಸಚೂರ್ಣಂ .. .. ವಿಶಾಲತರತುಂಗಸೌಧತಳಸಂಗಿ ಪೌರಾಂಗನಾ ವಶೀಕರಣಚೂರ್ಣಮಾದುದು ಬಳೌಘ ಧೂಳೀಚಯಂ: ಆದಿಪು, ೧೧. ೧೫)

ಸಗಿರಿಸಾಗರದ್ವೀಪಯಾ

[ಗು]ಪರ್ವತ ಸಾಗರ ಹಾಗೂ ದ್ವೀಪಗಳಿಂದ ಕೂಡಿದ (ಸದಿಗ್ವಳಯಯಾ ಭುವಾ ಸಗಿರಿಸಾಗರದ್ವೀಪಯಾ:ಪಂಪಭಾ, ೪ ೨೭)

ಸಂಗೀತ ಕೀರ್ತಿ

[ನಾ]ಹಾಡಲ್ಪಟ್ಟ ಕೀರ್ತಿಯುಳ್ಳವನು (ಅತ್ರಿಯ ಪಿರಿಯ ಮಗಂ ಭುವನತ್ರಯ ಸಂಗೀತ ಕೀರ್ತಿ ಸೋಮಂ:ಪಂಪಭಾ,೧. ೬೧)

ಸಂಗೀತಕ

[ನಾ]ಹಾಡುವಿಕೆ (ನುತಸುರವೃಂದಂ ಸಂಗೀತಕಕ್ಕೊಡರ್ಚಲೆವೇೞ್ದಂ:ಆದಿಪು, ೯. ೧೩)

ಸಂಗೀತಕಸಂಗತ

[ಗು]ಹಾಡುವಿಕೆಯಿಂದ ಕೂಡಿದ (ಮೂವತ್ತಿರ್ಛಾಸಿರ ಸಂಗೀತಕಸಂಗತನಾಟ್ಯಶಾಲೆಗಳುಂ:ಆದಿಪು, ೧೫. ೩ ವ)

ಸಗ್ಗ

[ನಾ][ಸ್ವರ್ಗ] ದೇವತೆಗಳ ವಾಸಸ್ಥಳ (ಕಡುತಪದಿಂದೆ ನಿನ್ನ ಪಡೆಪಾವುದೊ ಗಾವಿಲ ಸಗ್ಗಮಲ್ತೆ ಪೋ ನುಡಿಯವೊ ಮೂರ್ಖ ಸಗ್ಗದ ಫಲಂ ಸುಖಮಲ್ತೆ:ಪಂಪಭಾ,೭. ೯೩)

ಸಂಗ್ರಹಾಕರ

[ನಾ]ಹತ್ತು ಗ್ರಾಮಗಳ ಗುಂಪಿನ ನಡುವಣ ದೊಡ್ಡ ಊರು (ಘೋಷಾಕರ ಸಂಗ್ರಹಾಕರ ಗೋವ್ರಜಂಗಳುಮಂ:ಆದಿಪು, ೮. ೬೩ ವ)

ಸಂಘಟ್ಟನ

[ನಾ]ಹೊಡೆತ (ಪ್ರಕುಪಿತ ಸೂತಹೂಂಕಾರ ಕಾತರಿತ ತರಳತರ ತುರಂಗ ದ್ರುತವೇಗಾಕೃಷ್ಟ ಧನಂಜಯರಥ ಚಟುಳಚಕ್ರನೇಮಿ ಧಾರಾಪರಿವೃತ ಸಂಘಟ್ಟನ ಸಮುಚ್ಚಳಿತ ಪಾಂಸುಪಟಳ:ಪಂಪಭಾ, ೧೩. ೫೧ ವ)

ಸಂಘಾತ

[ನಾ]ಸಮೂಹ (ಎಚ್ಚೆಚ್ಚು ಸೂತ ಧ್ವಜ ಹಯ ರಥ ಸಂಘಾತಮಂ ನುರ್ಗೆ ಲೋಕಕ್ಕಂತಂ ಮಾೞ್ಪಂತೆ ಅಂತಕಂಬೋಲ್ ಗದೆವಿಡಿದು:ಪಂಪಭಾ, ೧೧. ೧೫೧)

ಸಂಚಕರ

[ನಾ] ಮುಂಗಡ ಹಣ (ತ್ರಿಕರಣಶುದ್ಧಿಯೊಳಾ ರಾಜಕುಮಾರಂ ಮಾರಮಥನನಂ ಸ್ತುತಿಯಿಸಿ ತತ್ಪ್ರಕಟಫಲಪ್ರಾಪ್ತಿಗೆ ಸಂಚಕರಂಗೊಳ್ವಂತೆ: ಆದಿಪು, ೪. ೨)

ಸಂಚಲ

[ನಾ]ಚಂಚಲ, ಅಸ್ಥಿರ (ತಮ್ಮೊಳಗ್ಗಲಿಸಿ ಪೊದಳ್ದು ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂಚಲಂ ಅದಱಿಂದಂ ಓಲಗಿಸಿ ಬಾೞ್ವುದೆ ಕಷ್ಟಂ ಇಳಾಧಿನಾಥರಂ:ಪಂಪಭಾ, ೧೨. ೯೨)

ಸಂಚಲಿತ

[ನಾ] ಕಂಪಿಸುವ (ಜಳಧರಸಮಯನಿಶಾಸಂಚಲಿತ ವಿದ್ಯುತ್ ಪಿಂಗಳಾಕ್ಷಪಾತಂಗಳಿಂ ದೆಸೆಗಳಂ ನುಂಗುವಂತೆ ಮುಳಿದು ನೋಡಿ: ಪಂಪಭಾ, ೧೩. ೭೫ ವ)

ಸಂಚಳನ

[ನಾ] ಚಲನೆ, ಅಲುಗಾಟ (ಅಮರಿ ನರ್ತಿಸೆ ಚೆಲ್ವಂ ಪುದಿದು ಉರಚೆಲ್ಲಿಯೊಳೆಸೆದುದು ತದುರೋಜ ಸರೋಜಮುಕುಳ ಯುಗಸಂಚಳನಂ: ಆದಿಪು, ೭. ೧೯)

ಸಂಚಾರ್ಯಮಾಣ

[ಗು] ಲಿಸುವ (ಸಂಚಾರ್ಯಮಾಣ ಚಾರುಚಾಮರನಿಚಯ ವಿಚಳದವಿರಳಾನಿಳಂಗಳಿಂದಂ ವಿರಳವಿರಳಮಾದಾಗಳ್: ಆದಿಪು, ೧೪. ೯೫ ವ)

ಸಂಚಿತಶೌರ್ಯಧನ

[ನಾ] ಒಗ್ಗೂಡಿಸಿಕೊಂಡ ಶೌರ್ಯವೇ ಧನವಾಗುಳ್ಳವನು (ತೊೞಲ್ದು ನಾರ್ಗಳನುಡಲ್ ತರುತಿರ್ದೆಲೆ ಮಾಡಲಾರ್ತನಿಲ್ಲಾ ಆಗಳೆ ಕೋಪಮಂ ನಿನಗೆ ಸಂಚಿತಶೌರ್ಯಧನಂ ಧನಂಜಯಂ: ಪಂಪಭಾ, ೭. ೪೭)

Search Dictionaries

Loading Results

Follow Us :   
  Download Bharatavani App
  Bharatavani Windows App