भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶಾರಿಕೆ

[ನಾ] ಮೈನಾ ಹಕ್ಕಿ (ಮೃದುಮಧುರವಿದಗ್ಧ ಮುಗ್ಧ ಪರಿಹಾಸ ಮನೋಹರಾಳಾಪ ಶುಕಶಾರಿಕೆಗಳಿರ್ದಂತೆ ಪಂಜರಗತ ಕುಂಜರಾರಾತಿಕಿಶೋರಕೇಸರಿಗಳನೆ ತರಿಸಿ ನೋಡುತ್ತಿರಲುಂ: ಆದಿಪು, ೮. ೩೨ ವ)

ಶಾರೀರ

[ಗು] ಶರೀರಕ್ಕೆ ಸಂಬಂಧಿಸಿದ, ದೈಹಿಕ (ದುಷ್ಕೃತಂ ಸಡಿಲ್ದೊಡೆ ಪಡೆಗುಂ ಮಾನುಷ್ಯಮನತಿದಾರುಣ ಮಾನಸ ಶಾರೀರ ದುಃಖಪೀಡಿತನಕ್ಕುಂ: ಆದಿಪು, ೯. ೪೮)

ಶಾರ್ದೂಲ

[ನಾ] ಹುಲಿ (ಭೀಕರಶಾರ್ದೂಲಕುಳಂ ಕುರಂಗ ಕುಲದೊಳ್ ತಳ್ಪೊಯ್ದು ಬಂದಾಡೆ: ಆದಿಪು, ೯. ೯೭)

ಶಾರ್ದೂಲನಖಾಂಕುರ

[ನಾ] ಹುಲಿಯುಗುರು (ಕೊರಲೊಳ್ ಶಾರ್ದೂಲ ನಖಾಂಕುರಂಗಳುಂ ಹರಿ ನಖಾಂಕುರಂಗಳುಮಂ ಅಂದೇಂ ಕರಮೆಸೆದಿರ್ದುವೊ ಶೌರ್ಯಾಂಕುರಗಳೆಂಬಿನಂ ಆದಿದೇವಾತ್ಮಜನಾ: ಆದಿಪು, ೮. ೪೦)

ಶಾಲತರು

[ನಾ] ಸಾಲವೃಕ್ಷ (ಬಱಸಿಡಿಲ್ ಪೊಡೆಯೆ ಕೆಡೆದ ಶಾಲತರುಗಳಂತಿರ್ದ ನಾಲ್ವರ್ ತಮ್ಮಂದಿರುಮಂ ಕಂಡು ಬೆಕ್ಕಸಂಬಟ್ಟು: ಪಂಪಭಾ, ೮. ೪೫ ವ)

ಶಾಲ್ಮಲಿ

[ನಾ] ಬೂರುಗ (ಇದು ಶಾಲ್ಮಲಿಪಾದಪಂ ಇಂತಿದು ಜಂಬೂವೃಕ್ಷಂ: ಆದಿಪು, ೨. ೨೬)

ಶಾಶ್ವತಪದ

[ನಾ] ಮೋಕ್ಷ (ಶ್ರೀಮತ್ ಸಮಂತಭದ್ರಸ್ವಾಮಿಗಳ ಜಗತ್ ಪ್ರಸಿದ್ಧ ಕವಿಪರಮೇಷ್ಠಿಸ್ವಾಮಿಗಳ ಪೂಜ್ಯಪಾದಸ್ವಾಮಿಗಳ ಪದಂಗಳ್ ಈಗೆ ಶಾಶ್ವತಪದಮಂ: ಆದಿಪು, ೧. ೧೧)

ಶಾಶ್ವತಾಸ್ಪದ

[ನಾ] ಶಾಶ್ವತಪದವಿ, ಮೋಕ್ಷ (ನಿಂದಂ ಕೊಳಲ್ ಶಾಶ್ವತಾಸ್ಪದಮಂ ಯೋಗನಿಯೋಗನಿಶ್ಚಳಮನಂ ಸಂದಾಧಿಭಟ್ಟಾರಕಂ: ಆದಿಪು, ೯. ೧೨೩)

ಶಾಸನ

[ನಾ] ಆಜ್ಞೆ (ಮತ್ತಂ ಅಮರಾಧೀಶಶಾಸನದೊಳ್ ನಾಭಿರಾಜ ರಾಜಮಂದಿರಾಂಗಣದೊಳ್: ಆದಿಪು, ೭. ೨೩ ವ); [ನಾ] ಸ್ಮಾರಕ ಶಿಲೆ (ಚಾಗದ ಕಂಬಮಂ ನಿಱಿಸಿ ಬೀರದ ಶಾಸನಮಂ ನೆಗೞ್ಚಿ ಕೋಳ್ಪೋಗದ ಮಂಡಲಂಗಳನೆ ಕೊಂಡು: ಪಂಪಭಾ, ೧. ೫೦)

ಶಾಸನಂಬರೆ

[ಕ್ರಿ] ವಿಧಿಯನ್ನು ಬರೆ, ಕಾನೂನು ಬರೆ (ಇರ್ದಂ ಅಟ್ಟವಣೆಕೋಲ್ಗಳ ಮೇಲೆಸೆದಿರ್ದ ವೀರಸಿದ್ಧಾಂತದ ಶಾಸನಂಬರೆದ ಪೊತ್ತಗೆಯಂತಮರಾಪಗಾತ್ಮಜಂ: ಪಂಪಭಾ, ೧೧. ೪೬)

ಶಾಸನಹರ

[ನಾ] ಓಲೆಕಾರ, ರಾಜಾಜ್ಞೆಯನ್ನು ಹೊತ್ತೊಯ್ಯುವವನು (ಬಗೆಯೊಳಗೆ ಬಳೆದ ಭೀತಿಯೆ ಮಿಗೆ ಭವದಾಸ್ಥಾನಭೂಮಿಯಂ ಪುಗುಗೆ ವನಂಬುಗುಗೆ ಅಲ್ಲದಂದು ಪೆಱತೆಡೆ ಪುಗುವೊಡೆಯಿಲ್ಲವರ್ಗೆ ಬೆಸಸು ಶಾಸನಹರರಂ: ಆದಿಪು, ೧೪. ೨೨)

ಶಾಸನಾಂಕಿತ

[ನಾ] ಆಜ್ಞೆಗೊಳಪಟ್ಟದ್ದು (ಆಗಳ್ ಪತಾಕಿನೀಪತಿಯ ನಿಯಮದಿಂ ಪೂರ್ವದಿಗ್ಭಾಗಸ್ಥಿತಮಂ ಮ್ಲೇಚ್ಛಖಂಡಮಂ ಅಪ್ರತಿಹತಶಾಸನಾಂಕಿತಂ ಮಾಡಿ ಬರೆ: ಆದಿಪು, ೧೩. ೮೧ ವ)

ಶಾಸನಾಯತ್ತ

[ನಾ] ಆಜ್ಞೆಗೆ ಅಧೀನವಾಗಿಸುವಿಕೆ (ಆ ದಿಶಾಭಾಗಮಂ ಆತ್ಮೀಯ ಶಾಸನಾಯತ್ತಂ ಮಾಡುತ್ತುಂ ಬಂದು: ಪಂಪಭಾ, ೪. ೧೮ ವ)

ಶಾಸನಾರೋಪಿತ

[ಗು] ಶಾಸನಗಳಲ್ಲಿ ಬರೆಯಲ್ಪಟ್ಟ (ಸಮಸ್ತಭವ್ಯಜನ ನಿರ್ವರ್ತ್ಯಮಾನ ಅಷ್ಟಾಹ್ನಿಕಮುಂ ಚೈತ್ಯಾಲಯನಿರ್ಮಾಣ ನಿರ್ಮಾಪಣ ಶಾಸನಾರೋಪಿತ ಗ್ರಾಮಕ್ಷೇತ್ರವಿತರಣಮುಂ: : ಆದಿಪು, ೧೫. ೧೩ ವ)

ಶಾಸ್ತ್ರ

[ನಾ] ನಾನಾ ಬಗೆಯ ವಿಷಯಗಳ ತಿಳಿವು (ಷೋಡಶಕ್ರಿಯೆಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ ಶಸ್ತ್ರಶಾಸ್ತ್ರಂಗಳೊಳ್ ಅತಿಪರಿಣತರಂ ಮಾಡಿ: ಪಂಪಭಾ, ೧, ೮೭, ವ)

ಶಾಸ್ತ್ರದಾನ

[ನಾ] [ಜೈನ] ನಾಲ್ಕು ದಾನಪ್ರಕಾರಗಳಲ್ಲಿ ಒಂದು, ಜೈನ ಧಾರ್ಮಿಕಗ್ರಂಥಗಳ ಪುಸ್ತಕಗಳನ್ನು ಶ್ರಾವಕರಿಗೆ ಹಂಚುವುದು (ಅಭಯರ್ ನಿರೋಗರುಂ ಶ್ರುತವಿಭವಸಮನ್ವಿತರುಮಪ್ಪರ್ ಎಂಬುದು ಪಿರಿದಲ್ತು ಭವಾಂಬುಧಿಯುಮನೀಸುವರ್ ಅಭಯೌಷಧಶಾಸ್ತ್ರದಾನಫಲ ವಿಳಸನದಿಂ: ಆದಿಪು, ೧೦. ೧೧)

ಶಾಸ್ತ್ರಪಾರ

[ನಾ] ಶಾಸ್ತ್ರಗಳ ಆಚೆಯ ತೀರ (ಅಮಿತ ಮತಿ ಗುಣದಿನತಿ ವಿಕ್ರಮ ಗುಣದಿಂ ಶಾಸ್ತ್ರಪಾರಮುಂ ರಿಪುಬಳ ಪಾರಮುಮೊಡನೆ ಸಂದುವೆನಿಸಿದನಮೇಯ ಬಲಶಾಲಿ ಮನುಜ ಮಾರ್ತಾಂಡ ನೃಪಂ: ಪಂಪಭಾ, ೧. ೪೫)

ಶಾಸ್ತ್ರಾನುಗತ

[ಗು] [ಶಾಸ್ತ್ರ+ಅನುಗತ] ಶಾಸ್ತ್ರಾನುಸಾರವಾಗಿ ಬಂದ (ಸೇವಾಧರ್ಮೋಚಿತಮೆನಿಸುವ .. .. ಶಾಸ್ತ್ರಾನುಗತಮಪ್ಪ ವಿದ್ಯೆಯುಮಂ ವಣಿಗ್ವ್ಯವಹಾರಾನುಕಾರಿಯಪ್ಪ ವಾಣಿಜ್ಯಮುಮಂ: ಆದಿಪು, ೮. ೬೪ ವ)

ಶಾಳ

[ನಾ] ಸರ್ಜವೃಕ್ಷ, ಸಾಲವೃಕ್ಷ (ವೇಳಾವನಸ್ಥೂಳ ಶಾಳಂಗಳೊಳ್ ಆದಿಬ್ರಹ್ಮಪುತ್ರಂ ನಿಜವಿಜಯಗಜೇಂದ್ರಂಗಳಂ ಕಟ್ಟೆ: ಆದಿಪು, ೧೪. ೫೩); [ನಾ] ಸಾಲ, ಕೋಟೆಯ ಗೋಡೆ (ಲವಣಜಳಧಿ ಬಳಸಿದಂತೆ ಬಳಸಿದ ಅಗೞ ನೀಳದಿಂದ ಉದಗ್ರ ಕನಕ ಶಾಳದಿಂ: ಪಂಪಭಾ, ೧. ೫೮)

ಶಾಳಿ

[ನಾ] [ಶಾಲಿ] ಬತ್ತ (ಪೊಸ ನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂಗೊಲೆಯೊಳೆ ಜೋಲ್ವ ಶಾಳಿ ನವಶಾಳಿಗೆ ಪಾಯ್ವ ಶುಕಾಳಿ: ಪಂಪಭಾ, ೧. ೫೨)

Search Dictionaries

Loading Results

Follow Us :   
  Download Bharatavani App
  Bharatavani Windows App