भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶಶಿವಂಶ

[ನಾ] ಚಂದ್ರವಂಶ (ಭರತ ಯಯಾತಿ ಕುತ್ಸ ಪುರುಕುತ್ಸ ಪುರೂರವದಿಂದಂ ಇನ್ನೆಗಂ ಪರಿವಿಡಿಯಿಂದೆ ಬಂದ ಶಶಿವಂಶಂ: ಪಂಪಭಾ, ೭. ೧೬)

ಶಶಿವಿಶದ

[ನಾ] ಚಂದ್ರನಂತೆ ಬೆಳ್ಳಗಿನ, ನಿರ್ಮಲವಾದ (ಅಂತು ವರ ಶಶಿವಿಶದಯಶಃಪಟಂಗಳಂ ನನ್ನಿಪಟಂಗೊಳ್ವಂತೆ ವಿವಿಧ ಧ್ವಜಪಟಂಗಳಂ ಕೊಂಡು: ಪಂಪಭಾ, ೮. ೧೦೯ ವ)

ಶಶ್ವತ್

[ಅ] ಪುನಃಪುನಃ (ಗುಣಮೆಂಟುಂ ಬಂದು ತನ್ನೊಳ್ ಪೆಣೆದಿಱೆ ಸುಖಸೋದ್ಭೂತನುಂ ಲೋಕಚೂಡಾಮಣಿಯುಂ ಶಶ್ವತ್ ತ್ರಿಲೋಕೀಪ್ರಣುತನುಂ: ಆದಿಪು, ೧೬. ೪೯ ವ); [ಅ] ಶಾಶ್ವತವಾದ (ಶ್ರುತದೇವೀವಚನಾಮೃತಂ ಶ್ರುತಕಥಾಳಾಪಂ ಶ್ರುತಸ್ಕಂಧಸಂತತಿ ಶಶ್ವಚ್ಛ್ರುತಪಾರಗಶ್ರುತಿ ಮಹೋರ್ಮ್ಯುಲ್ಲಾಸಿ: ಪಂಪಭಾ, ೧೪. ೩೨)

ಶಷ್ಪಸರೋವರ

[ನಾ] ದಂಡೆಯಲ್ಲಿ ಎಳೆ ಗರುಕೆ ಬೆಳೆದಿರುವ ಸರೋವರ (ಶ್ರೀಮತಿಯಾದ ಭವದೊಳ್ ವಜ್ರಜಂಘನುಂ ತಾನುಮಿರ್ದ ಶಷ್ಪಸರೋವರದೊಳ್ ಚಾರಣಯುಗಳಕ್ಕೆ ವಿಧಿಪೂರ್ವಕಂ ಮಹಾದಾನಮನಿತ್ತುದಂ: ಆದಿಪು, ೯. ೧೩೧ ವ)

ಶಸ್ತ್ರ

[ನಾ] ಆಯುಧ (ಶಸ್ತ್ರ ಪಾಷಾಣ ಆತಪ ವರ್ಷ ವಿಷ ಅಗ್ನಿ ಕಾಷ್ಠ ಕಂಟಕ ತ್ರಿದೋಷಸಂಭವಾಮಯ ಜರಾದಿ ಬಾಧಾವಿದೂರನುಂ: ಆದಿಪು, ೮. ೪ ವ) [ಬಸವರಾಜು ಮತ್ತು ನರಸಿಂಹಶಾಸ್ತ್ರಿ ಅವರ ಆವೃತ್ತಿಗಳಲ್ಲಿ]; [ನಾ] ಆಯುಧಗಳ ಪ್ರಯೋಗ, ಅಂದರೆ ಯುದ್ಧ (ಷೋಡಶಕ್ರಿಯೆಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ ಶಸ್ತ್ರಶಾಸ್ತ್ರಂಗಳೊಳ್ ಅತಿಪರಿಣತರಂ ಮಾಡಿ: ಪಂಪಭಾ, ೧, ೮೭, ವ)

ಶಸ್ತ್ರಕರ್ಮ

[ನಾ] ಶಸ್ತ್ರಗಳನ್ನು ಪ್ರಯೋಗಿಸುವ ಕಾರ್ಯ, ಕರ್ತವ್ಯ (ನಿಖಿಲಕ್ಷತ್ರಿಯಸಮೂಹಕ್ಕೆ ಶಸ್ತ್ರಕರ್ಮಮುಮಂ .. .. ಯಥಾಯೋಗ್ಯಮುಪದೇಶಂಗೆಯ್ದು: ಆದಿಪು, ೮. ೬೪ ವ)

ಶಸ್ತ್ರವಿದ್ಯೆ

[ನಾ] ಆಯುಧ ವಿದ್ಯೆ (ಈ ಕೂಸುಗಳ್ ಯೋಗ್ಯರಪ್ಪುದಂ ಇನ್ನೊಲ್ವೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ: ಪಂಪಭಾ, ೨. ೫೩)

ಶಾಕವರ್ತಿಕ

[ನಾ] ತರಕಾರಿಯ ಪಲ್ಯ (ಅನಿಷ್ಠುರೋಷ್ಠಪುಟಮಧ್ಯ ಸಂಧಾರಣಮಾತ್ರ ಚೂರ್ಣನೀಯ ಶಾಕವರ್ತಿಕಮುಮಂ: ಆದಿಪು, ೧೧. ೨೬ ವ)

ಶಾಕ್ವರ

[ನಾ] ಎತ್ತು (ನೆರೆದೊಂದಿ ನಿಂದ ಶಾಕ್ವರವರಯೂಥಮಂ ಅವನಿನಾಥ ಕಂಡುದಱಿಂದೊರ್ವರೆ ವಿಹರಿಪುದಂ ಬಿಸುಟಂಬಂರಾಂಬರರ್ ತಮ್ಮ ಸಮುದಯಂ ಬೆರಸಿರ್ಪರ್: ಆದಿಪು, ೧೫. ೩೨)

ಶಾಖಿ

[ನಾ] ಕೊಂಬೆಯನ್ನುಳ್ಳದ್ದು, ಮರ (ರಾಗದಿಂ ಅೞ್ಕಾಡುವಂತಾಯ್ತು ಅನಿಲವಶಚಳತ್ ಶಾಖಿಶಾಖಾಳಿಯಿಂ: ಆದಿಪು, ೭. ೬೧)

ಶಾತಕುಂಭ

[ನಾ] ಚಿನ್ನ (ರಂಭಾಸ್ತಂಭೋಪಮಾನ ಊರುಯುಗಳೆಯರ್ ಶಾತಕುಂಭ ರಂಭಾವನಂಗಳುಮಂ: ಆದಿಪು, ೧೧. ೯೫ ವ)

ಶಾಂತರಸ

[ನಾ] ದ್ವೇಷರಹಿತ ಮನೋಭಾವ (ಈ ಜಗದ್ಗುರು ಬಂದಿರ್ದುದದಱಿಂದೆ ಶಾಂತರಸಮಂ ಕೈಕೊಂಡುದೀ ಪರ್ವತಂ: ಆದಿಪು, ೧೩. ೮೨)

ಶಾತಶರ

[ನಾ] ಹರಿತವಾದ ಬಾಣ (ಎಚ್ಚ ಶಾತಶರಸಂತತಿಯಂ ಭಗದತ್ತಂ ಎಯ್ದೆ ಖಂಡಿಸಿ ರಥಮಂ ಪಡಲ್ವಡಿಸೆ: ಪಂಪಭಾ, ೧೧. ೯)

ಶಾಂತಿಕಪೌಷ್ಟಿಕಕ್ರಿಯೆ

[ನಾ] ಅನಿಷ್ಟನಿವಾರಣೆಯ ಒಂದು ಕರ್ಮ (ಪಂಚಪರಮೇಷ್ಠಿಗಳ್ಗೆ ಪೂಜೆಯಂ ಪುರೋಹಿತಂ ಮಾಡಿ ಶಾಂತಿಕಪೌಷ್ಟಿಕ್ರಿಯೆಯಂ ನಿರ್ವರ್ತಿಸಿ: ಆದಿಪು, ೧೨. ೭೪ ವ)

ಶಾತ್ರವ

[ಗು] ಶತ್ರುಸಂಬಂಧಿ (ಕುಳಶೈಲೋನ್ನತಂ ಉಗ್ರಶಾತ್ರವ ಶಿರೋಮಾಣಿಕ್ಯಮಾಳಾಂಶುಮಾಂಸಳಿತ ಶ್ರೀಪದಪೀಠ ರತ್ನಕಿರಣಂ: ಆದಿಪು, ೧೨. ೧೨೦)

ಶಾಪಭ್ರಾಂತ

[ಗು] ಶಾಪದಿಂದ ತೊಳಲಾಡುವ (ವಸಿಷ್ಠನ ಶಾಪಭ್ರಾಂತಿಯೊಳೆ ಬಂದು ನಿರ್ಜಿತಕಂತುವೆನಲ್ಕಂತು ಪುಟ್ಟಿದಂ ಗಾಂಗೇಯಂ: ಪಂಪಭಾ, ೧. ೬೭)

ಶಾಪಹತ

[ನಾ] ಶಾಪಕ್ಕೆ ಗುರಿಯಾದವನು (ಅಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಂ: ಪಂಪಭಾ, ೧. ೧೦೫ ವ)

ಶಾರದ

[ನಾ] ಶರತ್ಕಾಲ (ಚಕೋರಂ ಇಂದುಮಂಡಳಗಳಿತ ಆಸವಾಮೃತಮನುಂಡುಸಿರುತ್ತಿರೆ ಚೆಲ್ವು ಶಾರದಂ: ಪಂಪಭಾ, ೭. ೭೦)

ಶಾರದನೀರದ

[ನಾ] ಶರತ್ಕಾಲದ ಮೋಡ (ಶಾರದನೀರದಾಕಾರ ಸುಧಾಧವಳಿತ ಉತ್ತುಂಗ ಪ್ರಾಸಾದಕೂಟಕೋಟಿ ಸಂಕೀರ್ಣಮುಂ: ಆದಿಪು, ೧. ೭೦ ವ)

ಶಾರದಶ್ರೀ

[ನಾ] ಶರತ್ಕಾಲವೆಂಬ ಲಕ್ಷ್ಮಿ (ಅಂತು ತನ್ನ ದಿಗ್ವಿಜಯೋದ್ಯೋಗಕ್ಕುಪಯೋಗಿಯಾಗಿ ಬಂದ ಶಾರದಶ್ರೀಯಂ ಇದಿರ್ಗೊಂಡು: ಆದಿಪು, ೧೧. ೯ ವ)

Search Dictionaries

Loading Results

Follow Us :   
  Download Bharatavani App
  Bharatavani Windows App