भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಶಂಖಧವಳ

[ನಾ] ಶಂಖುವಿನಂತೆ ಹೊಳೆಯುವ (ಕಣ್ಗೊಪ್ಪಿ ತೋರ್ಪುದಿದು ಉತ್ಪ್ರೇಂಖತ್ ಅಸಂಖ್ಯ ಶಂಖಧವಳಂ ಗಂಭೀರನೀರಾಕರಂ: ಪಂಪಭಾ, ೪. ೨೪)

ಶಂಖನಿಧಿ

[ನಾ] ಕುಬೇರನ ನವನಿಧಿಗಲ್ಲಿ ಒಂದು (ಧೃತರತ್ನಾರ್ಘ್ಯಂ ಬಂದಂ ಪತಿಗಿದಿರಂ ಶಂಖನಿಧಿಯೆ ಬರ್ಪಂತಾಗಳ್: ಆದಿಪು, ೧೩. ೧೨)

ಶಂಖಾಸ

[ನಾ] ತುಂಬೆ (ಅಪ್ರಿಣಾಕ ಭಾವಿಳಶ್ಲಿಸ್ಥಿತಚಳನುಂ ಶ್ಲಕ್ಷ್ಣ ಸ್ನಿಗ್ಧ ಮೃದು ಬಹಳಚ್ಛವಿಯುಂ ಬಂಧುಜೀವ ಶಾಕ ಪುಷ್ಟ ಸಪದ್ಮಮಹಾರಜಶಂಖಾಸತಳವೆಂಬ ಸಪ್ತದ್ವಾಸ್ಥಿತನುಂ: ಆದಿಪು, ೧೨. ೫೬ ವ)

ಶತಕ್ರತು

[ನಾ] ನೂರು ಯಜ್ಞಗಳು (ಆ ಮಖದ ಮಾಹಾತ್ಮ್ಯಮಂ ಪೇೞ್ವೊಡೆ ಮುನ್ನಂ ಕೃತಯುಗದೊಳ್ ಹರಿಶ್ಚಂದ್ರನೆಂಬ ಚಕ್ರವರ್ತಿ ಶತಕ್ರತುವಂ ನಿರ್ವರ್ತಿಸಿ: ಪಂಪಭಾ, ೬. ೧೭ ವ)

ಶತಚತುಷ್ಟಯ

[ನಾ] ನಾಲ್ಕು ನೂರು (ಮತ್ತಂ ಘಾತಿಗಳ ಕೇಡಿನೊಳ್ ಗವ್ಯೂತಿಶತಚತುಷ್ಟಯ ಸುಭಿಕ್ಷತೆ ಮೊದಲಾಗೆ: ಆದಿಪು, ೧೦. ೪೨ ವ)

ಶತಚೂರ್ಣ

[ನಾ] ನೂರು ಚೂರು, ಪುಡಿಪುಡಿ (ಅಂತೆಯ್ದಿ ತದ್ಗದಾಘಾತದೊಳಂ ಬಾಣಪಾತದೊಳಂ ಅವನ ರಥಮಂ ಶಚಚೂರ್ಣಂ ಮಾಡಿ: ಪಂಪಭಾ, ೭. ೩೧ ವ)

ಶತಪತ್ರ

[ನಾ] ಕಮಲ (ಸರೋಜನಿಳಯೆ ಎನ್ನ ಬರ್ಪನ್ನಂ ಅರಸನಂ ಅಗಲದೆ ವಿಕಸಿತಶತಪತ್ರ ಆತಪತ್ರದ ತಣ್ಣೆೞಲುಮಂ ಕುಂದಲೀಯದಿರು: ಪಂಪಭಾ, ೧೩. ೧೦೫ ವ)

ಶತಪತ್ರಿಕಾ

[ನಾ] ಸೇವಂತಿಗೆ (ಮತ್ತೊರ್ವಳ್ ಶತಪತ್ರಿಕಾ ಕುಬ್ಜಕುಸುಮಮಾಳಾಕೋಮಳೆ: ಆದಿಪು ೧೧. ೧೨೨ ವ) [‘ಶತಪತ್ರ’ ಎಂಬುದರ ಬದಲು ನರಸಿಂಹಶಾಸ್ತ್ರಿಗಳು ಸ್ವೀಕರಿಸಿರುವ ಪಾಠ]

ಶತಮಖ

[ನಾ] ಶತಕ್ರತು, ಇಂದ್ರ (ಶತಮಖನರಸಿಗೆ ಕರ್ಣಾವತಂಸಮಾಗಲ್ಕೆ ನೋಂತ ಪಲ್ಲವಪುಷ್ಪ ಪ್ರತತಿಯನೆ ಮೆಱೆದು ಚೆಲ್ವೆಡೆಗೆ ಅತಿಶಯಮೆನಿಸಿದುದು ಪಾರಿಜಾತಕುಜಾತಂ: ಆದಿಪು, ೬. ೯೯)

ಶತಶೃಂಗ

[ನಾ] ಒಂದು ಪರ್ವತದ ಹೆಸರು, ಪಾಂಡು ವನವಾಸಕ್ಕೆ ಹೋದ ಜಾಗ (ಮುನಿಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯತ್ ಶೃಂಗಮಂ ಶತಶೃಂಗಮಂ: ಪಂಪಭಾ, ೧. ೧೧೫)

ಶತ್ರುಮಂಡಳಿಕ

[ನಾ] ಶತ್ರುಗಳ ಸಮೂಹ (ಮಲೆ ತಲೆದೋಱದೆಂದುದನೆ ಕೊಟ್ಟುದು ಡಂಗಮಡಂಗಿ ಬಂದುದು ಒಕ್ಕಲಿಗವೆಸರ್ಗೆ ಪೂಣ್ದುದು ಕುಱುಂಬು ತಱುಂಬದೆ ಮಿಕ್ಕ ಶತ್ರುಮಂಡಳಿಕರೆ ಮಿತ್ರಮಂಡಳಿಕರಾದರ್: ಪಂಪಭಾ, ೨. ೯೦)

ಶಫರ

[ನಾ] ಮೀನು (ತರಳತರಂಗತುರಂಗಂ ಕರಿಮಕರಕರೀಂದ್ರಂ ಅಖಿಳಶಫರಪದಾತತ್ಯುತ್ಕರಂ ಉಗ್ರಗ್ರಾಹರಥಂ ಭರತಂಗಿತ್ತುದು ಪಯೋಧಿಬಲ ವಿಳಸನಮಂ: ಆದಿಪು, ೧೨. ೭೮)

ಶಬರಖಂಡ

[ನಾ] ಬೇಡರ ಅರಸೊತ್ತು (ನಿಜವಿಜಯಕಟಕಂ ನಡೆಯೆ ವಿಜಯಾರ್ಧಾಚಳಮಂ ಪೆಱಗಿಕ್ಕಿ ಶಬರಖಂಡಂಗಳಂ ಸೇನಾನಾಯಕನೆ ಬಾಯ್ಕೇಳಿಸಿ ಬರೆ: ಆದಿಪು, ೧೪. ೫೭ ವ)

ಶಬರೀಜನ

[ನಾ] ಬೇಡಸ್ತ್ರೀಯರು (ಅದು ನಿರ್ಝರ ಉಚ್ಚಳಿತ ಶೀಕರಶೀತಳವಾತನರ್ತಿತ ಉನ್ಮದ ಶಬರೀಜನ ಅಳಕಂ: ಪಂಪಭಾ, ೩. ೧೦)

ಶಬಳ

[ನಾ] [ಶಬಲ] ಬಣ್ಣಬಣ್ಣದ (ಐರಾವತಕರಲೂನ ಸಲ್ಲಕೀಶಬಳಮುಂ: ಪಂಪಭಾ, ೪. ೧೮ ವ)

ಶಬಳಿತ

[ಗು] ಬಣ್ಣಬಣ್ಣವಾದ (ಭಯಾನಕೋಭಯತಟ ಗುಹಾಗಹ್ವರನಿರ್ಜಜ್ಜರತ್ ಅಜಗರ ಗಳಗಳಿತ ಗರಳಶಬಳಿತಸಲಿಲ ಪ್ರವಾಹೆಯುಂ: ಆದಿಪು, ೫. ೮೭ ವ)

ಶಂಭು

[ನಾ] ಶಿವ (ವನಚರನಾಗಿ ಶಂಭು ಗಿರಿಜಾತೆಯಂ ಓತು ಪುಳಿಂದಿ ಮಾಡಿ ನಚ್ಚಿನ ಗುಹನಂ ಕಿರಾತಬಲನಾಯಕನಾಗಿರೆ ಮಾಡಿ: ಪಂಪಭಾ, ೮. ೧೪)

ಶಮ

[ನಾ] ಶಾಂತಿ (ವಿಕ್ರಮಮಂ ಪಗೆಯಂ ಕಿಡಿಸುವ ಶಮದಿಂ ಮುನಿಗಾಯ್ತು ಸಿದ್ಧಿ ಭೂಪತಿಗಾಯ್ತೇ: ಪಂಪಭಾ. ೭. ೫೧)

ಶಮಂತಪಂಚಕ

[ನಾ] [ಸಮಂತಪಂಚಕ] ಪರಶುರಾಮನ ಎಲ್ಲ ಕ್ಷತ್ರಿಯರನ್ನೂ ಕೊಂದು ಅವರ ರಕ್ತದಿಂದ ನಿರ್ಮಿಸಿದ ಐದು ಮಡುಗಳು, ಕಾಲಾಂತರದಲ್ಲಿ ಈ ಜಾಗ ಕುರುಕ್ಷೇತ್ರ ಎನ್ನಿಸಿಕೊಂಡಿತು (ತಂದೆಗೆ ನೀರ್ಗುಡಲುಂ ಎಂದು ಮಾಡಿದ ಶಮಂತಪಂಚಕಗಳೆಂಬ ಅಯ್ದು ಪೆರ್ಮಡುಗಳ ಕೆಲದೊಳ್: ಪಂಪಭಾ, ೯. ೧೦೪ ವ)

ಶಮೀವೃಕ್ಷ

[ನಾ] ಬನ್ನಿ ಮರ (ತಮ್ಮ ದಿವ್ಯಾಯುಧಂಗಳೆಲ್ಲಮಂ ಆ ಪುರೋಪವನದ ಪಿತೃವನದ ಕೆಲದ ಶಮೀವೃಕ್ಷದ ಮೇಲೆ ಪುರುಷಾಕೃತಿಯಾಗಿ ನೇಲ್ಗಟ್ಟಿ: ಪಂಪಭಾ, ೮. ೫೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App