भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರಾಜಾಂಗಣ

[ನಾ] ಅರಮನೆಯ ಅಂಗಳ (ವಿವಿಧಫಲಪ್ರಸೂನ ಪಲ್ಲವತತಿಯಿಂ ತೀವಿದ ರಾಜಾಂಗಣಮಂ ಇಳಾವಂದ್ಯರ್ ಮೆಟ್ಟಲೊಲ್ಲದೆ ಅಲ್ಲಿಯೆ ನಿಂದರ್: ಆದಿಪು, ೧೫. ೯)

ರಾಜಾಧಿರಾಜ

[ನಾ] ಚಕ್ರವರ್ತಿ (ರಾಜಾಧಿರಾಜಂ ಅಳಿಯನ ಮೊಗಮಂ ನೋಡಿ: ಆದಿಪು, ೪. ೫೪ ವ)

ರಾಜಾವರ್ತ

[ನಾ] ನೀಲ ರತ್ನ (ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ ರಾಜಾವರ್ತದ ಕಂಬದೊಳಂ .. .. ವಿವಾಹಗೇಹಮಂ ಸಮೆಯಿಸಿ: ಪಂಪಭಾ, ೩. ೭೪ ವ)

ರಾಜಿ

[ನಾ] ಸಾಲು (ಸರಳ ತಮಾಳ ತಾಳ ಹರಿಚಂದನ ನಂದನ ಭೂಜರಾಜಿಯಿಂ ಸುರಿವ ಅಲರೋಳಿ ತದ್ವನಲತಾಂಗಿಯ ಸೂಸುವ ಸೇಸೆಯಾಯ್ತು: ಪಂಪಭಾ, ೫. ೫೨)

ರಾಜೋತ್ತರ

[ನಾ] [ರಾಜ+ಉತ್ತರ] ಚಂದ್ರನ ಹಾಗೆ ಹೆಚ್ಚುವಿಕೆ,ಅಭಿವೃದ್ಧಿ (ಅಂತುತ್ತರಂ ತನಗೆ ಅಳವುಂ ಅದಟುಂ ರಾಜೋತ್ತರಮಾಗೆ ಕಾದಿದೊಡೆ ಶಲ್ಯಂ ವಿರಥನಾಗಿ ಸಿಗ್ಗಾಗಿ: ಪಂಪಭಾ, ೧. ೧೧೧ ವ)

ರಾಜ್ಯವಿಳಾಸ

[ನಾ] ಆಳ್ವಿಕೆಯ ಸೊಗಸು (ಉಳ್ಳುಡೆಯಂ ಆಕೆಯೋಸರಿಸುವ ಸೂಸುವ ಹಾರಲತೆಯನಳವಡಿಸುವ ಭಂಗಿಯೆ ಮದನರಾಜರಾಜ್ಯವಿಳಾಸಂ: ಆದಿಪು, ೯. ೩೬)

ರಾಜ್ಯಾಶ್ರಮ

[ನಾ] ರಾಜ್ಯದ ನೆಲೆ (ತ್ರಿಲೋಕಗುರು ಧರಾತಳಂ ಪೊಗೞ್ವಿನಂ ಯತ್ಯಾಶ್ರಮದೊಳ್ ನಿಂದಂ ಈ ಧರಾಧಿಪಂ ಗುರುರಾಜ್ಯಾಶ್ರಮದೊಳ್ ನಿಂದಂ: ಆದಿಪು, ೬. ೨೪ ವ)

ರಾಜ್ಯೋನ್ನತಿ

[ನಾ] ಒಡೆತನದ ಆಧಿಕ್ಯ (ನಿನ್ನಿಂದಂ ತ್ರಿಭುವನ ರಾಜ್ಯೋನ್ನತಿ ಬಂದೆನಗೆ ಸಾರ್ಗುಮಪ್ಪೊಡಂ ಒಲ್ಲೆಂ: ಪಂಪಭಾ, ೧೩. ೨೭)

ರಾಣಿಯವಾಸ

[ನಾ] ಅಂತಃಪುರ (ಭೂಷಣಾಡಂಬರ ಉದ್ಯೋತಿಯಿಂ ಒಪ್ಪಿರ್ದುದ್ವಿಳಾಸಂ ವಿಳಸಿತಕಮಳಾವಾಸಮೀ ಬರ್ಪುದೇಂ ರಾಣಿಯವಾಸಂ: ಆದಿಪು, ೧೧. ೪೬)

ರಾಣಿವಾಸ

[ನಾ] ಪೆಂಡವಾಸ, ಅಂತಃಪುರ (ಬಾಣಸಿನ ಮಜ್ಜನದ ರಾಣಿವಾಸಮಂ ಮನೆಗಳುಮಂ: ಪಂಪಭಾ, ೫. ೪೭ ವ)

ರಾಧೆ

[ನಾ] ಬೆಸ್ತನ ಹೆಂಡತಿ, ಕರ್ಣನ ಸಾಕು ತಾಯಿ (ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನಿಟ್ಟೊಡೆ ರಾಗಿಸಿ ಸುತನ ಸೂತಕಮಂ ಕೊಂಡಾಡೆ ಅಗುೞ್ದಿರಲ್: ಪಂಪಭಾ, ೧. ೯೬ ವ ಮತ್ತು ೧. ೯೭)

ರಾಧೇಯ

[ನಾ] ರಾಧೆಯ ಮಗ, ಕರ್ಣ (ಬೇಡಿದುದನರಿದುಕೊಳ್ಳೆನೆ ಬೇಡಿದುದಂ ಮುಟ್ಟಲಾಗದೆನಗೆನೆ ನೆಗೞ್ದಲ್ಲಾಡದೆ ಕೊಳ್ಳೆಂದರಿದೀಡಾಡಿದನಿಂದ್ರಂಗೆ ಕವಚಮಂ ರಾಧೇಯಂ: ಪಂಪಭಾ, ೧, ೧೦೧)

ರಾಮಮುನಿ

[ನಾ] ಪರಶುರಾಮ (ಭುಜ ವೀರ್ಯ ವಿಕ್ರಮಯುತಂ ಗಂಗಾತ್ಮಜನ್ಮಂ ಜಯಶ್ರೀಲೋಲಂ ಜಮದಗ್ನಿ ರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ: ಪಂಪಭಾ, ೧. ೬೮)

ರಾಯ

[ನಾ] ರಾಜ (ರಾಯೆಂಬೀ ಪೆಸರಿಲ್ಲದಂತು ಮುಳಿಸಿಂ ಮುಯ್ಯೇೞು ಸೂೞ್ ಇಂತು ಕಟ್ಟಾಯಂ ಪೊಂಪುೞಿವೋಗೆ ತಂದೆಯೞಿವಿಂಗೆ ಆ ಭಾರ್ಗವಂ ಕೊಂದಂ: ಪಂಪಭಾ, ೧೨. ೩೮)

ರಾವ

[ನಾ] ಶಬ್ದ (ಕದನ ಆನಕರಾವಂ ಅಗುರ್ವಿನಂ ಉರ್ವು ಪರ್ವುತ್ತಿರೆ ಚಾರುವೀರಭಟಕೋಟಿಗೆ ರಾಗರಸಂ ಪೊದಳ್ದು ತುಳ್ಕುತ್ತಿರೆ: ಪಂಪಭಾ, ೮. ೯೨)

ರಾವಾಕುಳ

[ನಾ] ಶಬ್ದದ ಮೊರೆತ (ಕಾಚಮೇಚಕ ಚಯಚ್ಛಾಯಾಂಬುವಿಂ ಗುಣ್ಪಿನಿಂ ಪುದಿದಿರ್ದತ್ತು ಸರೋವರಂ ಬಕಬಲಾಕಾನೀಕ ರಾವಾಕುಳಂ: ಪಂಪಭಾ, ೧೩. ೭೨)

ರಾಷ್ಟ್ರವ್ಯಸನ

[ನಾ] ರಾಜ್ಯದ ಆಸೆ ಎಂಬ ಪೀಡೆ (ಸಪ್ತವ್ಯಸನಂಗಳ್ ಅಯ್ವರುಮನೊಂದುಂ ಗೆಲ್ವುವಲ್ಲವು ರಾಷ್ಟ್ರವ್ಯಸನಮಂ ಬಳವ್ಯಸನಮಂ ಪಾರ್ವೆಮಪ್ಪೊಡೆ ಅವು ಮುನ್ನಮಿಲ್ಲ: ಪಂಪಭಾ, ೬. ೬೭ ವ)

ರಾಹು

[ನಾ] ಗ್ರಹಣದಂದು ಸೂರ್ಯಚಂದ್ರರನ್ನು ನುಂಗುವುದೆಂದು ನಂಬಲಾದ ಒಂದು ಗ್ರಹ (ಶಾಳಿಹರಿನೀಲಮಣಿಕಿರಣಾಳಿ ಪೊದಳ್ದೆಸೆಯೆ ರಾಹುಗೆತ್ತು ಅಗಿದಿರ್ದು ಅಟ್ಟಾಳಿಕೆಗಳಲ್ಲಿ ನಾಡೆಯುಂ ಆಳೋಚಂಬೆರಸು ತಡೆದು ನಡೆವಂ ದಿನಪಂ: ಆದಿಪು, ೬. ೧೦೫)

ರಿಂಗಣ

[ನಾ] ಸಮೂಹ, ಸುತ್ತು (ತಮಂ ಪಿಂಗೆ ದಿನಪತಿಯ ಬೆಳಪ ನಭೋಂಗಣಮಂ ಜ್ಯೋತಿರಿಂಗಣಂ ಬೆಳಗುಗುಮೇ: ಆದಿಪು, ೮. ೧೦)

ರಿತು ವಿಮಾನ

[ನಾ] ಋತು ವಿಮಾನ, ಸೌಧರ್ಮೇಂದ್ರನ ವಿಮಾನ (ಇದು ರಿತುವಿಮಾನಮಂ ತನ್ನುದಗ್ರಚೂಳಿಕೆಯೊಳ್ ಆಂತುಕೊಂಡಿರೆ ಸಗ್ಗಕ್ಕಿದು ನಿಚ್ಚಣಿಗಿಪ್ಪವೊಲಿರ್ದುದಲ್ತೆ: ಆದಿಪು, ೨. ೩೧)

Search Dictionaries

Loading Results

Follow Us :   
  Download Bharatavani App
  Bharatavani Windows App