भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರಾಜತಾದ್ರಿ

[ನಾ] ಬೆಳ್ಳಿ ಬೆಟ್ಟ (ರಾಜತಾದ್ರೀಂದ್ರಶೋಭಾವಿಭವಕ್ಕೆ ಅೞ್ಕರ್ತು ತತ್ಪರ್ವತನಿಕಟವನೋಪಾಂತದೊಳ್ ಬೀಡುವಿಟ್ಟಂ: ಆದಿಪು, ೧೩. ೭೮)

ರಾಜತ್

[ಗು] ಹೊಳೆಯುವ (ಅಂತು ಸೊಗಯಿಸುವ ಕುರುಜಾಂಗಣಕ್ಕೆ ರಾಜದ್ರಾಜಧಾನಿಯಾಗಿರ್ದು .. .. ಸೊಗಯಿಸುತಿರ್ದುದು ಕಸ್ತಿನಪುರಮೆಂಬುದು ಪೊೞಲ್: ಪಂಪಭಾ, ೧. ೫೭ ವ)

ರಾಜದಾರಕ

[ನಾ] ರಾಜಪುತ್ರ (ಸಹಪಾಂಸುಕ್ರೀಡಾನೇಕ ವಿಭ್ರಮ ಕ್ರೀಡಾರಸೋದಾರ ರಾಜದಾರಕಪರಿವೃತನಾಗಿ: ಆದಿಪು, ೮. ೪೧ ವ)

ರಾಜಧಾನಿ

[ನಾ] ರಾಜನ ಆವಾಸನಗರ (ಅಂತು ಕೆಲವು ಪಯಣಂಗಳಿಂದಂ ನಿಜಾನ್ವಯರಾಜಧಾನಿಯಂ ಅಯೋಧ್ಯಾಪುರಮಂ ಎಯ್ದೆವಂದಾಗಳ್: ಆದಿಪು, ೧೪. ೨ ವ)

ರಾಜನಾಮ

[ನಾ] ರಾಜನೆಂಬ ಹೆಸರು (ಧರೆಯಂ ಕುಡುವಂದು ಎನಗಂ ಗುರು ತನಗಂ ರಾಜನಾಮಮಂ ಕೊಟ್ಟೊಡೆ ನೋಡಿರೆ ತನಗೀಗಳ್ ರಾಜಾಧಿರಾಜನೆಂದಿಟ್ಟುಕೊಂಡಂ ಅಡಕಿಲ್ವೆಸರಂ: ಆದಿಪು, ೧೪. ೭೮)

ರಾಜನ್ಯಕ

[ನಾ] ರಾಜಸಮೂಹ (ಅನೇಕ ರಾಜನ್ಯಕಮಕುಟಸಂಘಟ್ಟ ಉಚ್ಚಳತ್ ಮಣಿಮರೀಚಿಗಳ್ ವಿಳಯಾನಿಳ ವಿಸ್ಫುಲಿಂಗಂಗಳಂತೆ ದೆಸೆದೆಸೆಗೆ ಕೆದಱೆ: ಆದಿಪು, ೧೪. ೮೨ ವ)

ರಾಜನ್ವತಿ

[ನಾ] ಒಳ್ಳೆಯ ರಾಜನಿರುವ ನಾಡು (ರಾಜವತಿಯಕ್ಕುಮಲ್ಲದೆ ರಾಜನ್ವತಿಯಾಗದಲ್ತೆ ಧರೆ ಮತ್ತೊರ್ವಂ ತೇಜಸ್ವಿ ಪೊಡರ್ವೊಡೆ ಅದಱಿಂ ರಾಜನ್ವತಿ ಮಾಡು ಧರಣಿಪತೀ: ಆದಿಪು, ೧೪. ೨೦)

ರಾಜಪ್ರಸೂತ

[ಗು] ಕ್ಷತ್ರಿಯನು ಹುಟ್ಟಿನಿಂದ ಪಡೆದ (ರಾಜಪ್ರಸೂತವಿಜಯಯಶಶ್ಶರೀರಮಂ ಮೆಱೆವ ರಿಪುಗಳ ರೇಖೆಯೊಳಂ: ಆದಿಪು, ೧೪. ೮೪ ವ)

ರಾಜಬೀಜ

ರಾಜರ ವೀರ್ಯ, ಅರಸು ಕುಲ (ಅತ್ತ ಮದಾನ್ವಿತ ರಾಜಬೀಜಸಂಜನಿತಗುಣಂ ಮದಂ: ಪಂಪಭಾ, ೧೨. ೯೩)

ರಾಜಮಂದಿರ

[ನಾ] ಅರಮನೆ (ಅಂತು ರಾಜಮಂದಿರಮಂ ಪೊಕ್ಕು ಧರ್ಮಪುತ್ರನಂ ಅಗಲ್ದ ಪನ್ನೆರಡು ಮಾಸದೊಳಾದ ದಿಗ್ವಿಜಯಪ್ರಪಂಚಮುಮಂ .. .. ಅಱಿದು: ಪಂಪಭಾ, ೫. ೨೩ ವ)

ರಾಜಮಹಿಷೀ

[ನಾ] ಪಟ್ಟದ ರಾಣಿ (ವಿಜಯರಾಜಮಹಿಷೀ ಮಯೂರಾತಪತ್ರ ಶಂಕಾವಹ ಶಂಕುಸಂಕುಳಂಗಳಿಂದಂ: ಆದಿಪು, ೧೪. ೯೦ ವ)

ರಾಜಮಾರ್ಗ

[ನಾ] ರಜೋಮಾರ್ಗ, ರಾಜರ ಹಾದಿ, ಹಿರಿಯ ಹಾದಿ (ಮನುಮಾರ್ಗನಿಪುಣನೆನಿಸಿದ ನಿನಗಾಂ ಈ ರಾಜಮಾರ್ಗಮಂ ತೋಱೆ ಜಗಜ್ಜನಕೆ ನಗೆಯಲ್ತೆ: ಆದಿಪು, ೮. ೧೨)

ರಾಜಮಾಷ

[ನಾ] ತುಡುಗುಣಿ ಕಾಳು (ಗೋಧೂಮ ಕಂಗು ಶ್ಯಾಮಾಕ ಕೋದ್ರವ ನೀವಾರ ತಿಳ ಅತಸಿ ಮಸೂರಿಕಾ ಕುಳಿತ್ಥ ಮಾಷ ರಾಜಮಾಷ: ಆದಿಪು, ೬. ೭೨ ವ)

ರಾಜಯಕ್ಷ್ಮ

[ನಾ] ಕ್ಷಯರೋಗ (ವಿಚಿತ್ರವೀರ್ಯನುಂ ಅವಾರ್ಯವೀರ್ಯನಾಗಿ ಕೆಲವು ಕಾಲಂ ರಾಜ್ಯಲಕ್ಷ್ಮಿಯಂ ತಾಳ್ದಿ ರಾಜಯಕ್ಷ್ಮತಪ್ತಶರೀರಂ ಆತ್ಮಜವಿಗತಜೀವಿಯಾಗಿ ಪರಲೋಕಪ್ರಾಪ್ತನಾದೊಡೆ: ಪಂಪಭಾ, ೧. ೮೦ ವ)

ರಾಜರಾಜ

[ನಾ] ಚಕ್ರವರ್ತಿ (ಮನುಕುಳತಿಳಕಂ ವೃಷಭಾಗ್ರನಂದನಂ ರಾಜರಾಜಂ ಅಧಿರಾಜಂ ಚಕ್ರನಿಧೀಶಂ ಆದಿಭೂಭುಜಂ ಎನೆ ನೆಗೞ್ದಂ ಭರತಚಕ್ರಿ ವಿಶ್ವಂಭರಯೊಳ್: ಆದಿಪು, ೧೫. ೩)

ರಾಜಲೋಕ

[ನಾ] ರಾಜತಂಡ (ಬಾಹುಬಲಿಕುಮಾರನ ಭರತೇಶ್ವರನ ಪಕ್ಷದ ರಾಜಲೋಕಮನೆರಡುಂ ದೆಸೆಯೊಳಂ ಮಧ್ಯಸ್ಥರಾಗಿ ಮಿಡುಕದೆ ನೋಡುತ್ತಿರ್ಪಂತು ನಿಯಮಿಸಿದಾಗಳ್: ಆದಿಪು, ೧೪. ೧೦೪ ವ)

ರಾಜವತಿ

[ನಾ] ನಾಮಮಾತ್ರ ರಾಜನಿರುವ ನಾಡು (ರಾಜವತಿಯಕ್ಕುಮಲ್ಲದೆ ರಾಜನ್ವತಿಯಾಗದಲ್ತೆ ಧರೆ ಮತ್ತೊರ್ವಂ ತೇಜಸ್ವಿ ಪೊಡರ್ವೊಡೆ ಅದಱಿಂ ರಾಜನ್ವತಿ ಮಾಡು ಧರಣಿಪತೀ: ಆದಿಪು, ೧೪. ೨೦)

ರಾಜವಿದ್ಯೆ

[ನಾ] ರಾಜರಿಗೆ ಬೇಕಾದ ವಿದ್ಯೆ, ಸಮಯಾನುಸಾರಿಯಾಗಿ ಸಾಮ ದಾನ ಭೇದ ದಂಡಗಳನ್ನು ಬಳಸುವ ತಿಳಿವಳಿಕೆ (ನೀನಾದಿರಾಜನೈ ನಿನಗಾ ನಾಲ್ಕುಂ ರಾಜವಿದ್ಯೆ ಪುಟ್ಟಿದುವು ಅದಱಿಂ ನೀನೆ ಬೆಸಸುವುದು ನಯಮಂ: ಆದಿಪು, ೧೪. ೧೦)

ರಾಜಸುತೆ

[ನಾ] ರಾಜಕುಮಾರಿ (ರಾಜಾಂತರದಿಂದೆ ರಾಜಸುತೆಯಂ ನಯದಿಂದವಳುಯ್ದಳ್: ಪಂಪಭಾ, ೩. ೫೭)

ರಾಜಸೂಯ

[ನಾ] ಚಕ್ರವರ್ತಿ ಮಾಡುವ ಒಂದು ಯಾಗ (ಗಾಳು ಗೊರವಂ ತಗುಳ್ಚಿ ಪಳಾಳಮಂ ಏನೊಂದನಪ್ಪೊಡಂ ಗೞಪಿದೊಡೆ ಆ ಬೇಳುನುಡಿ ಕೇಳ್ದು ಕೆಮ್ಮನೆ ಬೇಳಲ್ ನಿಮಗಂತು ರಾಜಸೂಯಂ ಮೊಗ್ಗೇ: ಪಂಪಭಾ, ೬. ೨೪)

Search Dictionaries

Loading Results

Follow Us :   
  Download Bharatavani App
  Bharatavani Windows App