भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರಸೆ

[ನಾ] ಪಾತಾಳ (ರಸೆ ಪತ್ತಿತ್ತೆತ್ತಂ ಆಕಾಶದೊಳ್ ಅನಿಲಪಥಂ ಧಾರಿಣೀಚಕ್ರದೊಳ್ ಕಾಳಸೆಗೊಂಡಿತ್ತೆಂಬಿನಂ ಮಂದಯಿಸಿ: ಆದಿಪು, ೧೪. ೯೫); [ನಾ] ಭೂಮಿ (ರಸೆಯೊಳ್ ಕಾಲಾಗ್ನಿರುದ್ರಂ ಜಲಶಯನದೊಳ್ ಅಂಭೋಜನಾಭಂ ಪೊದಳ್ದು ಆಗಸದಿಂ ಸುತ್ತಿರ್ದ ಅಜಾಂಡೋದರದೊಳ್ ಅಜಂ ಅಡಂಗಿರ್ಪವೋಲ್; ಪಂಪಭಾ, ೮. ೮೬)

ರಂಹ

[ನಾ] ವೇಗ (ದ್ವಾದಶಯೋಜನೋಲ್ಲಂಘನ ರಂಹೋನಿವಾಸ ಭೂಮಿಯುಮಪ್ಪ ಪವನಂಜಯಮೆಂಬ ತುರಗರತ್ನಮಂ: ಆದಿಪು, ೧೧. ೩ ವ)

ರಾಗ

[ನಾ] ಅನುರಾಗ ಹಾಗೂ ಸ್ವರಯುಕ್ತ ರಾಗ (ಎಸೆದೆರ್ದೆಯೊಳ್ ಪಳಂಚುವ ಕಲಧ್ವನಿಯಿಂ ಪೊಸತೊಂದು ರಾಗಮಂ ಪೊಸಯಿಸಿ: ಆದಿಪು, ೨. ೭೭); [ನಾ] ಪ್ರೀತಿ (ಭರತಂ ಷಟ್ಖಂಡಭೂವಲ್ಲಭನೆನೆ ಸಿರಿಯಂ ಗೆಂಟಱೊಳ್ ಕೇಳ್ದು ರಾಗಂ ಬೆರೆಸಿರ್ಪೀ ನಣ್ಪೆ ಸಾಲ್ಗುಂ: ಆದಿಪು, ೧೪. ೭೭); [ನಾ] ಕೆಂಬಣ್ಣ (ಎತ್ತಿದ ಪರಾಗರಾಗ ಮುದಿತ ಆಶಾ ಭಾಸಂ ಉದ್ಯತ್ ಮಧು ಉನ್ಮದಭೃಂಗಧ್ವನಿ ಮಂಗಳಧ್ವನಿಯೆನಲ್: ಪಂಪಭಾ, ೫. ೬); [ನಾ] ಸಂತೋಷ (ನಿನ್ನೊಂದು ಕಂದಿದ ಮೆಯ್ ಎನ್ನಯ ತೋಳೊಳೊಂದೆ ಸಿರಿಯಂ ನೀನುಯ್ದು ತೊೞ್ತಾಳ್ದು ರಾಗದಿಂ ಎನ್ನೊಳ್ ಸುಕಮಿರ್ಪುದು: ಪಂಪಭಾ, ೮. ೬೬)

ರಾಗಂಗಿಡು

[ಕ್ರಿ] ಪ್ರೀತಿಯನ್ನು ಕಳೆದುಕೊ (ಕೊಡುವ ಬಾಡಕ್ಕಂ ಜೀವಧನಂಗಳ್ಗಂ ಬಿಡುವೆಣ್ಗಂ ಲೆಕ್ಕಮಿಲ್ಲೆನಿಸಿ ರಾಗಂಗಿಡದೆ ಕೊಂಡಾಡಿದಂ ಬಲ್ಲಹನಱಿಯೆ ಗುಣಾರ್ಣವಂ ಕವಿತಾಗುಣಾರ್ಣವನಂ: ಪಂಪಭಾ, ೧೪. ೫೫)

ರಾಗದಿಂ

[ಗು] ಸಂತೋಷದಿಂದ (ಆಗಳ್ ಅನಂತಂ ಅನಂತಫಣಾಗಣಮಣಿಕಿರಣಂ ಎಸೆಯೆ ದುಗ್ಧಾರ್ಣವದೊಳ್ ರಾಗದಿನಿರ್ಪಂತಿರ್ದಂ ಭೋಗಿ ತೞತ್ತೞಿಸೆ ಬೆಳಗೆ ಕೆಯ್ದೀವಿಗೆಗಳ್: ಪಂಪಭಾ, ೪. ೫೩)

ರಾಗಧ್ವನಿ

[ನಾ] ರಾಗಚ್ಛಾಯೆ (ಧ್ವನಿಯೆನಿಸಿದ ಅಳಂಕಾರಧ್ವನಿಯೆಸೆವುದಲ್ಲಿ ಮಧುರವಿಪಂಚಧ್ವನಿಯೊಡನೆ ಅನೇಕರಾಗಧ್ವನಿಯೆನೆ ಸೊಗಯಿಪುದು: ಆದಿಪು, ೯. ೧೧೯)

ರಾಗರಸ

[ನಾ] ಭಕ್ತಿರಸ (ಕೆಲಂಬರ್ ಅರುಣಮಣಿಕುಳ ಪ್ರಭಾಜಾಳ ಜಟಿಳಿತಪಿಂಜರಂಗಳಾಗಿ ನಿಜರಾಗಪ್ರವಾಹಶಂಕೆಯಂ ಮಾಡುವ ಜಳಂಗಳಿಂದಂ: ಆದಿಪು, ೮. ೬೯ ವ)

ರಾಗರಸ

[ನಾ] ಪ್ರೀತಿರಸ [ಕೆಂಬಣ್ಣ] (ಆ ನವಮಾಳಿಕಾ ಕುಸುಮಕೋಮಳೆ ರಾಗರಸಪ್ರಪೂರ್ಣಂ ಚಂದ್ರನ ಆನನಲಕ್ಷ್ಮಿಯಿಂ: ಪಂಪಭಾ, ೪. ೭೧); ಸಂತೋಷರಸ (ಚಾರುವೀರಭಟಕೋಟಿಗೆ ರಾಗರಸಂ ಪೊದಳ್ದು ತುಳ್ಕುತ್ತಿರೆ ಬಂದು ಮೊಗೆದಂ ವಿಭು ಗೋಕುಲಮಂ ವಿರಾಟನಾ: ಪಂಪಭಾ, ೮. ೯೨)

ರಾಗಿ

[ನಾ] ಪ್ರೇಮಿ (ಆಗಳ್ ತನ್ನ ರಾಗರಸಮಂ ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ ಕೆಂಪು ಪತ್ತುವಿಡೆ: ಪಂಪಭಾ, ೪. ೫೦ ವ)

ರಾಗಿಸು

[ಕ್ರಿ] ಸಂತೋಷಿಸು (ಇದಱೊಳ್ ನೀಂ ರಾಗಿಸಲ್ ತಕ್ಕುದು ಏಕೊಳಕೊಳ್ವೈ ಜಡರಂತೆ ಶೋಕರಸಮಂ ಷಟ್ಖಂಡಧಾತ್ರೀಶ್ವರಾ: ಆದಿಪು, ೧೬. ೫೫)

ರಾಗೋತ್ಸವ

[ನಾ] [ರಾಗ+ಉತ್ಸವ] ಸಂತೋಷದ ಉತ್ಸವ (ಕೂಡಿದುದು ಶ್ರೀಮತಿಗಂ ಮನೋರಥಫಲಂ ಶ್ರೀವಜ್ರದಂತಂಗಂ ಆದುದು ರಾಗೋತ್ಸವಂ: ಆದಿಪು, ೪. ೧೮)

ರಾಜಕ

[ನಾ] ರಾಜರ ಗುಂಪು (ಕರಕಳಿತಾರ್ಘ್ಯಪಾದ್ಯನನವದ್ಯಗುಣಂಗೆ ಸಮಸ್ತ ರಾಜಕಂ ಬೆರಸಿದಿರೆೞ್ದು ರಾಜಗೃಹದಿಂ ಪೊಱಮಟ್ಟು: ಆದಿಪು, ೯. ೧೩೧); [ನಾ] ರಾಜ್ಯ (ಸಪ್ತಾಂಗಮೀ ರಾಜಕಕ್ಕೆ ಅರಸಂ ಧರ್ಮಜನಕ್ಕುಂ ಎಂದು ನಯದಿಂ ನಿಶ್ಚೈಸಿ: ಪಂಪಭಾ, ೪. ೮)

ರಾಜಕಂಠೀರವ

[ನಾ] ರಾಜಸಿಂಹ (ಆ ಕಾಮಕಾರ್ಮುಕ ಯಷ್ಟಿಮುಷ್ಟಿಸಮಾಯತಮಧ್ಯೆಯರೊಳ್ ಆ ರಾಜಕಂಠೀರವ ಮಧ್ಯಂ: ಆದಿಪು, ೮. ೨೩ ವ)

ರಾಜಕಠೀರವಮಧ್ಯ

[ನಾ] ರಾಜಸಿಂಹದ ಹಾಗೆ ಸಣ್ಣ ನಡುವಿರುವವನು (ಆ ಕಾಮಕಾರ್ಮುಕಯಷ್ಟಿಮುಷ್ಟಿ ಸಮಾಯುತಮಧ್ಯೆಯರೊಳ್ ಆ ರಾಜಕಂಠೀರವಮಧ್ಯಂ: ಆದಿಪು, ೮. ೨೩ ವ)

ರಾಜಕೀರ

[ನಾ] ಅರಗಿಳಿ (ಉರಿಯಿಂ ಕರಿಮುರಿಕನಾದುವು ಉನ್ಮದ ಪರಭೃತ ಷಟ್ಚರಣ ರಾಜಕೀರಕುಲಂಗಳ್: ಪಂಪಭಾ, ೫. ೯೦)

ರಾಜಗೇಹ

[ನಾ] ಅರಮನೆ (ಗೊಟ್ಟಿಗಾಣರಂತಿರೆ ಮಱಿದುಂಬಿ ಮೇಳದವರಂತಿರೆ ಸಾರಿಕೆ ರಾಜಗೇಹದಂತಿರೆ ಕೊಳಂ ಅಲ್ಲಿ ತಾಂ ಅರಸರಂತಿರೆ ತಾಮರಸಂಗಳೊಪ್ಪುಗುಂ: ಪಂಪಭಾ, ೫. ೫೮)

ರಾಜಚಕ್ರ

[ನಾ] ರಾಜರ ಸಮೂಹ (ತುಡುವ ಬಿಡುವ ಸೂೞ್ಗಯ್ಯ ಬೇಗಂಗಳಂ ನಿಟ್ಟಿಸಲಾರ್ಗಂ ಬಾರದಂತಾಗೆ ಅಸದಳಂ ಇಸೆ ತದ್ರಾಜಚಕ್ರಂ ಪೊದಳ್ದರ್ಬಿಸಿದತ್ತು: ಪಂಪಭಾ, ೧೨. ೨೦)

ರಾಜಚಿಹ್ನ

[ನಾ] ರಾಜರ ಅಧಿಕಾರ ಸಂಕೇತಗಳಾದ ಛತ್ರ, ಚಾಮರ, ಸಿಂಹಾಸನ, ಮುಕುಟ ಮತ್ತು ರಾಜದಂಡ (ಅಂತು ನಿಜಧವಳಚ್ಛತ್ರಚಾಮರಸಿಂಹಾಸನಾದಿ ರಾಜಚಿಹ್ನಂಗಳುೞಿಯೆ: ಪಂಪಭಾ, ೬. ೪೦ ವ)

ರಾಜಜಂಬೂ

[ನಾ] ಶ್ರೇಷ್ಠವಾದ ನೇರಿಳೆ, ಜಂಬು ನೇರಿಳೆ (ವಾರಾಕದಂಬ ಸುರಭಿಸಮೀರಂ ಪರಿಪಕ್ವ ರಾಜಜಂಬೂದ್ರುಮವಿಸ್ತಾರಂ: ಆದಿಪು, ೧೧. ೮೮)

ರಾಜತಾಚಳ

[ನಾ] ಬೆಳ್ಳಿ ಬೆಟ್ಟ (ರಮ್ಯರಾಜತಾಚಳ ತಿಳಕೋಪಮಾನಮೆನೆ ಸಂದಳಕಾಪುರಂ ಒಪ್ಪಿ ತೋಱುಗುಂ: ಆದಿಪು, ೧. ೭೧)

Search Dictionaries

Loading Results

Follow Us :   
  Download Bharatavani App
  Bharatavani Windows App