भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರಥಚೋದಕ

[ನಾ] ಸಾರಥಿ (ಕುದುರೆಯ ಬಣ್ಣದಿಂ ರಥದ ತೋರ್ಕೆಯಿಂ ಎತ್ತಿದ ಚಿತ್ರಕೇತುವೃಂದದ ಕುಱುಪಿಂದ ಉದಗ್ರ ರಥಚೋದಕಚಿಹ್ನದಿಂ ಈತನೆಂಬುದಂ ಅಱಿದು: ಪಂಪಭಾ, ೧೦. ೮೭)

ರಥಾಂಗ

[ನಾ] ಚಕ್ರವಾಕ (ಕಾಶ್ಮೀರರಾಗಾರುಣಿತಕುಚ ರಥಾಂಗ ಅಭಿಧಾನೋಜ್ಜ್ವಳಂ ನೀಹಾರಪ್ರಸ್ಪರ್ಧಿ ಚಂಚಚ್ಚಮರಜ ಕಳಹಂಸಾಸ್ಪದಂ: ಆದಿಪು, ೧೦. ೧೯); [ನಾ] ರಥದ ಗಾಲಿ (ತನ್ನ ರಥಾಂಗಾಹತಿಯಿಂ ಮುನ್ನಮೆ ನೀರ್ ತಳರೆ ಚೆಲ್ವುವರಿದಿತ್ತು ರಥಂ: ಆದಿಪು, ೧೨. ೮೪)

ರಥಾಂಗಧರ

[ನಾ] ಚಕ್ರವನ್ನು ಧರಿಸಿದವನು, ವಿಷ್ಣು, ಕೃಷ್ಣ (ನಿಜರಥಮಂ ರಥಾಂಗಧರಂ ಮುನ್ನಮೇಱಲ್ವೇೞ್ದು ಮೂಱುಸೂೞ್ ಬಲವಂದು ಪೊಡಮಟ್ಟು ರಥಮನೇಱಿ: ಪಂಪಭಾ, ೧೧. ೧೩೨ ವ)

ರಥಾಂಗಯುಗ

[ನಾ] ಚಕ್ರವಾಕದ ಜೋಡಿ (ಓಡೆ ತಮೋಬಳಂ ಅಗಿದಳ್ಳಾಡೆ ನಿಶಾಚರಬಲಂ ರಥಾಂಗಯುಗಂಗಳ್ ಕೂಡೆ ತೞತೞನೆ ನೇಸಱ್ ಮೂಡಿದುದು: ಪಂಪಭಾ, ೩. ೨೭)

ರಥಾಂಗಾಹತಿ

[ನಾ] ರಥಚಕ್ರದ ಹೊಡೆತ (ಇನ್ನಪ್ಪ ಚಕ್ರವರ್ತಿಗೇನ್ನೀ ಮಾರ್ಗದೊಳೆ ನಡೆಯಿಮೆಂದಱಿಪವೋಲ್ ತನ್ನ ರಥಾಂಗಾಹತಿಯಿಂ ಮುನ್ನಮೆ ನೀರ್ ತಳರೆ ಚೆಲ್ವುವರಿದಿತ್ತು ರಥಂ: ಆದಿಪು, ೧೨. ೮೪)

ರಥಿ

[ನಾ] ರಥವನ್ನೇರಿದವನು, ರಥದಲ್ಲಿದ್ದು ಯುದ್ಧಮಾಡುವವನು (ಪರಶುಶರನಿಕರದಿಂ ಕುಮ್ಮರಿಗಡಿದವೊಲ್ ಒಡನೆ ಕಡಿಯೆ ರಥಿಗಳ್ ರಥದಿಂ ಧರೆಗಿೞಿದು: ಪಂಪಭಾ, ೧೦. ೮೮)

ರಥಿನೀಪತಿ

[ನಾ] ಸೇನಾಪತಿ (ಎನೆ ರಥಿನೀಪತಿ ಚಕ್ರೇಶನ ಬೆಸನಂ ಪೂಣ್ದು ರಾಗದಿಂದೇಱಿ: ಆದಿಪು, ೧೩. ೩೪)

ರದ

[ನಾ] ಹಲ್ಲು, ದಂತ (ಅಜನ ಪದ್ಮವಿಷ್ಟರದ ಎಸಳ್ ಅಂದು ಅರೆಸೀದುವು ಅಖಿಳ ದಿಗ್ದ್ವಿರದರದಂಗಳ್ ಕರಮೆ ಕರಿಪುಗಾಱಿದುವಾಗಳ್: ಪಂಪಭಾ, ೧೦. ೩೬)

ರದನ

[ನಾ] ದಂತ (ದಕ್ಷಿಣಕಟಮನೆ ಸಿವುಱುವ ದಕ್ಷಿಣರದನದೊಳೆ ಹಸ್ತಮಂ ಪೇಱುವ ಚೆಲ್ವು ಈಕ್ಷಣಹರಂ: ಆದಿಪು, ೧೨. ೫೯)

ರದನೀಂದ್ರ

[ನಾ] ಸಲಗ (ಮಾದ್ಯತ್ ರದನೀಂದ್ರಸ್ಥೂಳದಂತಾಹತಿ ವಿದಳಿತ ಗೋಶೀರ್ಷ ಸಾರದ್ರವಾಮೋದದಿಂ ಎತ್ತಂ ಗಂಧವಾಹಂ ಮಗಮಗಿಸೆ: ಆದಿಪು, ೧೩. ೬೮)

ರಪಣ

[ನಾ] [ರೈ+ಪಣ=ರೈಪಣ>ರವಣ] ಜೂಜಿನ ಒತ್ತೆಯ ಹಣ (ರಪಣಮಂ ತೋಱಿಯುಂ ಒತ್ತೆಯಂ ಉಗ್ಗಡಿಸಿಯುಂ ಆಡಿಂ ಎನೆ ಪೆಱತೇನುಪಾಯಮಿಲ್ಲದೆ ಎಮ್ಮಾಳ್ವ ನೆಲನೊತ್ತೆಯೆಂದೊಡೆ: ಪಂಪಭಾ, ೭. ೩ ವ)

ರಭಸ

[ನಾ] ಜೋರು, ತೀವ್ರತೆ (ಪ್ರತಿಮೆಗಳೞ್ತು ಮೊೞಗಿದುದತಿರಭಸದೆ ಧಾತ್ರಿ ದೆಸೆಗಳುರಿದುವು ಭೂತಪ್ರತತಿಗಳಾಡಿದುವು ಒಳಱಿದವು ಅತಿ ರಮ್ಯಸ್ಥಾನದೊಳ್ ಶಿವಾನಿವಹಂಗಳ್: ಪಂಪಭಾ, ೧. ೧೩೩); [ನಾ] ಬೊಬ್ಬಾಟ ತೀವ್ರತೆ (ಉಭಯಬಲದ ಅರಸುಗಳ್ ರಣರಭಸಂಗಳ್ವೆರಸು ಮುಳಿದು ಕೆಯ್ವೀಸೆ: ಪಂಪಭಾ, ೧೧. ೩೪)

ರಂಭಾಮೃದುಸ್ತಂಭ

[ನಾ] ಬಾಳೆಗಿಡದ ಮೃದುವಾದ ಕಾಂಡ (ಮೊಗಂ ಉತ್ಫುಲ್ಲಸರೋಜಹಾಸಿ ನಯನಂ ನೀಲಾಂಬುಜಸ್ಪರ್ಧಿ ಬಾಹುಗಳಾಜಾನುವಿಳಂಬಿಗಳ್ ತೊಡೆಗಳುಂ ರಂಭಾ ಮೃದುಸ್ತಂಭಶೋಭೆಗಳಂ ಗೆಲ್ದುವು: ಆದಿಪು, ೧. ೭೪)

ರಂಭಾವನ

[ನಾ] ಬಾಳೆಯ ತೋಟ (ಕೃತಕಗಿರಿಪರೀತ ನೂತಚೂತಲತಾಲಿಂಗಿತ ಶಾತಕುಂಭ ರಂಭಾವನಾಂತರ್ಗತ ಮಣಿಭವನಂಗಳೊಳಂ: ಆದಿಪು, ೬. ೧೦೧ ವ)

ರಂಭಾಸ್ತಂಭ

[ನಾ] ಬಾಳೆಯ ಗಿಡದ ಕಾಂಡ (ಅಲ್ಲಿ ನವಮಾಳಿಕಾ ಕುಸುಮಕುಮಾರಿಯರ್ ನವಮಾಳಿಕಾಲತೆಗಳುಮಂ ರಂಭಾಸ್ತಂಭೋಪಮಮಾನ ಊರುಯುಗಳೆಯರ್: ಆದಿಪು, ೧೧. ೯೫ ವ)

ರಮಣೀಜನ

[ನಾ] ಸುಂದರಿಯರು (ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಿಂ ಕೆದಱಿಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ: ಪಂಪಭಾ, ೫. ೬೦ ವ)

ರಮಣೀಜಾತಿ

[ನಾ] ಸ್ತ್ರೀವರ್ಗ (ರಮಣೀಜಾತಿಯೊಳಲ್ತೆ ನಂಬಿದವರ್ಗಳ್ ಸಮ್ಯಕ್ತ್ವಮಂ ಪುಟ್ಟರಾಱುಂ: ಆದಿಪು, ೫. ೬೩)

ರಮಣೀಯ

[ಗು] ಸಂತಸವುಂಟುಮಾಡುವ (ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಿಂ ಕೆದಱಿಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ: ಪಂಪಭಾ, ೫. ೬೦ ವ)

ರಮಿಯಿಸು

[ಕ್ರಿ] ಕ್ರೀಡಿಸು (ಅಲ್ಲಿಯೆ ನಿಂದಲ್ಲಿಯೆ ರಮಿಯಿಸಿದಳ್ ಆಕೆ ಮರುದಾತ್ಮಜನೊಳ್: ಪಂಪಭಾ, ೩. ೧೯)

ರಯ್ಯಮಾಗು

[ಕ್ರಿ] [ರಯ್ಯ=ರಮ್ಯ] ಮನೋಹರವಾಗು (ಚೆಲ್ವಾವೆಡೆಯುಮೆಸೆವಿನಂ ರಯ್ಯಮಾಯ್ತಿಂದ್ರಸೈನ್ಯಂ: ಆದಿಪು, ೭. ೫೮)

Search Dictionaries

Loading Results

Follow Us :   
  Download Bharatavani App
  Bharatavani Windows App