भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರಜತಗಿರಿ

[ನಾ] ಬೆಳ್ಳಿಯ ಬೆಟ್ಟ (ಸಮುದ್ಯತ್ ರಜತಗಿರಿ ತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀನಿನದಂ ಪರ್ವಿತ್ತು ಅಕಾಂಡಪ್ರಳಯ ಘನಘಟಾಟೋಪ ಗಂಭೀರನಾದಂ: ಪಂಪಭಾ, ೧೨. ೧೩೭)

ರಜನೀಸಮಯ

[ನಾ] ರಾತ್ರಿಯ ಹೊತ್ತು (ಒಂದು ದಿವಸಂ ರಜನೀಸಮಯದೊಳ್ ಅನರ್ಘ್ಯ ಮರಕತಮಣಿಶಿಲಾ ಸಂಪಾದಿತ ಮೇದಿನೀವಿಭಾಗದೊಳ್: ಆದಿಪು, ೫. ೨೨ ವ)

ರಜಃಪಟಲ

[ನಾ] ದೂಳಿನ ಸಮೂಹ (ಎರಡು ರಥದ ಗಾಲಿಯ ಕೋಳಿಂದಾದ ರಜಃಪಟಲಂ ಕವಿದು ಆದಮೆ ತೀವಿದುದು ದಿವಿಜವಧುವಿರ ಕಣ್ಣೊಳ್: ಪಂಪಭಾ, ೫. ೭೯)

ರಜಃಪಟಾವೃತ

[ಗು] [ರಜಃಪಟ+ಆವೃತ] ದೂಳೆಂಬ ವಸ್ತ್ರದಿಂದ ಮುಚ್ಚಲ್ಪಟ್ಟ (ಅಂಭೋರುಹರಜಃಪಟಾವೃತವಾರಿಯಂ ಆ ನೃಪತಿ ಕುಡಿಯಲೊಡರಿಸಿದಾಗಳ್: ಪಂಪಭಾ, ೮. ೪೬)

ರಜಂಬೊರೆ

[ಕ್ರಿ] ಧೂಳಿನಿಂದ ಕೂಡಿರು (ಪರಿಜನಮನಿತುಂ ತುರಿಪದೆ ಪರಿತಂದಿನ್ನೇವೆವೆಂದು ಕಪ್ಪುರದ ರಜಂಬೊರೆದ ಕರಕಾಂಬುವಂ ತಳಿದು: ಆದಿಪು, ೪. ೧೩೭)

ರಜಸ್ವರ

[ನಾ] ಪರಾಗ (ಸಮೀರನುದಾರಕನೆಂಬ ಕೇತಕೀಪ್ರಸರ ರಜಸ್ವರಪ್ರಕಟಪಾಂಸುಳಮಾದುದು ಮೇಘಕಾಲದೊಳ್: ಪಂಪಭಾ, ೭. ೨೨)

ರಜಸ್ವಲೆ

[ನಾ] ಮುಟ್ಟಾದ ಹೆಂಗಸು (ರಜಸ್ವಲೆಯಾಗಿರ್ದೆಂ .. .. ಮುಟ್ಟಲಾಗದು ಎನೆಯುಂ .. .. ಮುಡಿಯಂ ಪಿಡಿದು: ಪಂಪಭಾ, ೭. ೪ ವ)

ರಜಸ್ಸಂಸಕ್ತ

[ಗು] ಪರಾಗದಲ್ಲಿ ಆಸಕ್ತವಾದ (ಪುಷ್ಪಿತ ಹೇಮಪಂಕಜ ರಜಸ್ಸಂಸಕ್ತ ಭೃಂಗಾಂಗನಾನಿಕರಂ ಸಾರಸ ಹಂಸ ಕೋಕಿಳಕುಳಧ್ವಾನೋತ್ಕರಂ ಚೆಲ್ವನಾಯ್ತು: ಪಂಪಭಾ, ೫. ೮೦)

ರಜೋಗಂಧ

[ನಾ] ಪರಾಗದ ಸುವಾಸನೆ (ಮಂದಾರವರ್ಷ ನವಮಕರಂದ ರಜೋಗಂಧಬಂಧು ವಿವಿಧಪತಾಕಾ ಸಂದೋಹಾಂದೋಳನಪಟು: ಆದಿಪು, ೧೪. ೧೩೪)

ರಜೋಮಯ

[ಗು] ಳಿನಿಂದ ತುಂಬಿದ (ಅಂತು ಮಹೀಭಾಗಮೆಲ್ಲಂ ಚತುರಂಗಮಯಮುಂ ದಿಗ್ವಿಭಾಗಮೆಲ್ಲಂ ರಜೋಮಯಮುಂ: ಆದಿಪು, ೧೧. ೩೫ ವ)

ರಜ್ಜು

[ನಾ] [ಜೈನ] ಒಂದು ಉದ್ದಳತೆ, ಎಂಟು ಹಸ್ತಗಳು (ಏಕರಜ್ಜುಪ್ರಮಾಣಂ ತಿರ್ಯಗಲೋಕಂ: ಆದಿಪು, ೧. ೪೮)

ರಟತ್

[ಗು] ಧ್ವನಿ ಮಾಡುವ (ಲಯಘನಘಟೆಗಳ ಮೊೞಗೆನಿಸೆ ಪೊಟ್ಟಗೆ ಒಡೆದತ್ತು ರಟತ್ ಪಟು ಪಟಹ ಶಂಖ ಭೇರಿಯ ಚಟುಳಿತದಿಂದ ಅತಳಪಟಂ ಅಂಬರಪಟಳಂ: ಪಂಪಭಾ, ೧೦. ೬೭)

ರಣಗೞ್ತಲೆ

[ನಾ] [ರಣ+ಕೞ್ತಲೆ] ಯುದ್ಧದ ಕತ್ತಲೆ (ದೆಸೆಗಾಣಲಾಗದು ದಲ್ ಆ ರಣಗೞ್ತಲೆ ಮಂದಮಾದುದೋ: ಪಂಪಭಾ, ೧೦. ೧೧೬)

ರಣಸ್ಥಾನ

[ನಾ] ಯುದ್ಧರಂಗ (ಹರಿಯೆಂದಂದಮದಂತೆ ಪಾಂಡುತನಯರ್ ನಿರ್ದೋಷಿಗಳ್ ತಥ್ಯಂ ಇಂತು ರಣಸ್ಥಾನದೊಳ್ ಇನ್ನೆರೞ್ನುಡಿವೆನೇ: ಪಂಪಭಾ, ೧೩. ೯೦)

ರಣಾಗ್ರಹಪ್ರಣಯ

[ನಾ] ಯುದ್ಧಾಪೇಕ್ಷೆಯ ಪ್ರೀತಿ (ಕೆಳರ್ದು ಅಂದುಗ್ರರಣಾಗ್ರಹಪ್ರಣಯದಿಂದಾಗಳ್ ಕುರುಕ್ಷೇತ್ರಮಂ ಕಳವೇೞ್ದು ಇರ್ವರುಂ ಐಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರಸಂಕುಳದಿಂದ ಒರ್ವರಂ ಒರ್ವರ್ ಎಚ್ಚು: ಪಂಪಭಾ, ೧. ೭೯)

ರಣಾನಂದ

[ನಾ] ಯುದ್ಧೋತ್ಸಾಹ (ಕದನೈಕದುರ್ಜಯ ಮದಸ್ಕಂಧ ಪ್ರಯಾಣಕ್ಷಮ ಅವನಿಪಾಳವ್ರಜಂ ಈಗಳ್ ಎಮ್ಮೊಡನೆ ಬರ್ಕೆಂದು ರಣಾನಂದದಿಂ: ಆದಿಪು, ೪. ೯೧)

ರಣಿತ

[ನಾ] ಸದ್ದು (ಮಣಿಪಾದುಕಾಪದವಿನ್ಯಾಸ ರಣಿತ ಮಣಿಕುಟ್ಟಿಮಮಂ: ಲೀಲಾವತಿ, ೩. ೭೮ ವ); [ಗು] ಸದ್ದುಮಾಡುವ (ಮೃದುಪದಂಗಳೊಳ್ ಕಳರವರನಿತ ಮಣಿನೂಪುರಂಗಳಿಂ ತುಡಿಸಿ: ಆದಿಪು, ೭. ೧೦೬ ವ)

ರಣೋದ್ಯತ

[ಗು] ಯುದ್ಧಸಿದ್ಧ (ನಿನ್ನ ಒರಂಟುತನಂ ಕೈಗೞಿವಾಯ್ತು ಅದಪ್ಪೊಡೆ ಮಹಾಭಾರಾವತಾರಂ ರಣೋದ್ಯತನಾಗು ಎಂಬುದಂ ಎಮ್ಮಂ ಅನ್ಯರವೊಲೇಂ ನೀಂ ಪ್ರಾರ್ಥಿಸಲ್ವೇೞ್ಪುದೇ: ಪಂಪಭಾ, ೧೦. ೧೦)

ರತ

[ನಾ] ಸಂಭೋಗ (ಸನ್ನತದಿಂ ರತಕ್ಕೆಳಸಿ ನಲ್ಲಳೊಳೋತು ಒಡಗೂಡಿದೆನ್ನನಿಂತು ಅನ್ನೆಯಂ ಎಚ್ಚುದರ್ಕೆ ಪೆಱತಿಲ್ಲದು ದಂಡಂ: ಪಂಪಭಾ, ೧. ೧೧೨)

ರತಾಂತ

[ನಾ] ಸಂಭೋಗದ ಕೊನೆ (ಅಂತು ಬೆಳರ್ತ ಅಧರಂ ಕಣ್ಣಿಂ ತುಳ್ಕುವ ಕೆಂಪು ಸರದ ನಡುಕಂ ಮಿಗೆ ತನ್ನಂತಃಪುರಲಲನೆಯರ್ಗೆ ರತಾಂತದ ವಿಭವಮನೆ ಮಾಡಿ ತಾಂ ಪೊಱಮಟ್ಟಂ: ಆದಿಪು, ೧೧. ೧೫೧)

Search Dictionaries

Loading Results

Follow Us :   
  Download Bharatavani App
  Bharatavani Windows App