भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರೂಪಪರಾವರ್ತನ

[ನಾ] ರೂಪವನ್ನು ಬದಲಾಯಿಸುವುದು (ರೂಪಪರಾವರ್ತನದಿಂ ವಿರಾಟಪುರಮಂ ಪೊಕ್ಕಿರ್ದು ಅದಂ ನೀಗೆಮೇ: ಪಂಪಭಾ, ೮. ೫೦)

ರೂಪಲಂಪಟವಿಟ

[ನಾ] ರೂಪದಲ್ಲಿ ತೀವ್ರಾಸಕ್ತಿ ಹೊಂದಿದ ರಸಿಕ (ಸೋಲ್ತೊಱಲ್ದು ನಡೆ ನೋೞ್ಪೆಡೆಯೊಳ್ ಭವದೀಯ ರೂಪಲಂಟವಿಟರಂ ಮರುಳ್ಗೊಳಿಸಿತು ಉತ್ಕಟ ಮೋಹತಮಃಪಟಂ ಪಟಂ: ಆದಿಪು, ೩. ೯೦)

ರೂಪೞಿ

[ಕ್ರಿ] ವಿರೂಪಗೊಳ್ಳು (ಇನರಥಹತಿಯಿಂ ನೆಗೆದ ಗಗನಧಾತುಸ್ಥಳಿರಜಂಗಳಿಂ ರೂಪೞಿದತ್ತೆನೆ ಸಂಜೆ ಕೆಂಪನುೞಿದಿರೆ: ಆದಿಪು, ೧೬. ೯೬)

ರೂಪಾಂತರಕ್ಕೊಯ್

[ಕ್ರಿ] ಆಕಾರ ಬದಲಾವಣೆ ಮಾಡು, [ಬೂದಿಮಾಡು] (ರೂಪಾಂತರಕ್ಕೊಯ್ದು ಭಾಸುರದಿಂ ತತ್ಸುರರಾಜನಂದು ಪಿರಿದೊಂದುತ್ಸಾಹಮಂ ಮಾಡಿದಂ: ಆದಿಪು, ೧೬. ೫೨)

ರೂಪು

[ನಾ] ಆಕಾರ (ಒಲಿಸುವ ರೂಪು ಗಾಡಿಯೊಳೊಡಂಬಡೆ ಗಾಡಿ ವಿಳಾಸದೇೞ್ಗೆಯೊಳ್ ನೆಲಸೆ ವಿಳಾಸಂ: ಆದಿಪು, ೧. ೭೨)

ರೂಪುಗರೆ

[ಕ್ರಿ] ರೂಪ ಮರೆಸು, ವೇಷ ಹಾಕು (ಪಾಂಚಾಳರಾಜ ತನೂಜೆಯುಂ ರೂಪುಗರೆದು ಸೈರಂಧ್ರೀವೇಷದೊಳ್: ಪಂಪಭಾ, ೮. ೫೫ ವ)

ರೂಪುವೋಗು

[ಕ್ರಿ] ಆಕಾರವನ್ನು ಕಳೆದುಕೊ (ಪೊದಳ್ದಾಜ್ಞೆಗಂ ಪೆಸರ್ಗಂ ಮುನ್ನಮೆ ರೂಪುವೋದುದು ವಿಯಚ್ಚಕ್ರಂ ಸಮಂತೆಂಬಿನಂ ಜಸಮಾಪಾಂಡುರಮಾದುದು ನೃಪರೊಳಾರಾ ಪಾಂಡುರಾಜಂಬರಂ: ಪಂಪಭಾ, ೧. ೧೧೦)

ರೂಪ್ಯಮಹೀಧರೇಂದ್ರ

[ನಾ] ಬೆಳ್ಳಿಯ ಬೆಟ್ಟ (ಐಶ್ವರ್ಯಾವಸಥಂ ರೂಪ್ಯಮಹೀಧರೇಂದ್ರಂ ಎನೆ ಪೂಣ್ದ ಆವಂಗಂ ಅಂತೆಯ್ದೆ ಬಣ್ಣಿಸಲ್ಕೇಂ ಬರ್ಕುಮೇ: ಆದಿಪು, . ೬೯)

ರೂಪ್ಯಾಚಲ

[ನಾ] ಬೆಳ್ಳಿ ಬೆಟ್ಟ, ಹಿಮಾಲಯ (ಇನ್ನಿಲ್ಲಿ ರೂಪ್ಯಾಚಲಮಂ ಪಾಯ್ವುತ್ತರಾರ್ಧಕ್ಕೆಮಗೆ ನಡೆವ ಸಾಮಗ್ರಿಯಂ ಮಾಡಲೀಗಳ್ ನೆಲೆ: ಆದಿಪು, ೧೩. ೨೦)

ರೇಖೆ

[ನಾ] ಗತ್ತು, ಠೀವಿ (ರಾಜಪ್ರಸೂತವಿಜಯಯಶಶ್ಶರೀರಮಂ ಮೆಱೆವ ರಿಪುಗಳ ರೇಖೆಯೊಳಂ ಬಗೆಯದೆ ನಿಮ್ಮ ಕಾರ್ಯಮಂ ಬಗೆಯಿಂ: ಆದಿಪು, ೧೪. ೮೪ ವ)

ರೇಚಕ

[ನಾ] ನೃತ್ಯದಲ್ಲಿ ಕೈಚಾಚುವುದು (ಕರಣಂ ರೇಚಕಂ ಅಂಗಹಾರಂ ಇನಿತೆಂದೋದುತ್ತುಮಿರ್ಪುದದು ಅತ್ತಿರಲಿ: ಆದಿಪು, ೭. ೧೨೦)

ರೇಚಕೋತ್ಥಾನಿಳ

[ನಾ] [ರೇಚಕ+ಉತ್ಥ+ಅನಿಳ] ನಿಃಶ್ವಾಸ (ತಾರಕಾಸಂಕುಳಂ ತೋಳ್ಗಳದೊಂದಳ್ಳೇಱಿನೊಳ್ ಪೂವಲಿವೊಲುದುರ್ವಿನಂ ವಾರ್ಧಿಗಳ್ ರೇಚಕೋತ್ಥಾನಳ ತೀವ್ರಾಘಾತದಿಂದುಚ್ಚಲಿನಂ: ಆದಿಪು, ೧೩. ೧೨೧);

ರೇಣುಕಾನಂದನ

[ನಾ] ಪರಶುರಾಮ (ನಿಜಭುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿ: ಪಂಪಭಾ, ೧. ೧೦೩ ವ)

ರೈಧಾರೆ

[ನಾ] ಚಿನ್ನದ ಮಳೆ (ಸುರತೂರ್ಯಧ್ವಾನಮೆಯ್ತರ್ಪಲರ ಸರಿ ಪೊದಳ್ದಿರ್ದ ರೈಧಾರೆ ದೇವೇಂದ್ರಹೋದಾನಪ್ರಸಿದ್ಧಧ್ವನಿ: ಆದಿಪು, ೪. ೯೮)

ರೈವೃಷ್ಟಿ

[ನಾ] ಕನಕವೃಷ್ಟಿ, ಚಿನ್ನದ ಮಳೆ (ಧನದಂ ಕಾಂಚನಪಂಚರತ್ನಮಯಮಂ ರೈವೃಷ್ಟಿಯಂ ಮಾಡುವಲ್ಲಿ: ಆದಿಪು, ೭. ೨೪)

ರೋದೋಂತ

[ನಾ] ದಿಗಂತ (ರೋದೋಂತಂ ಕೂಡೆ ರತ್ನೋಜ್ಜ್ವಳಗಿರಿಕುಳದಿಂ ತೂಂತನಿಟ್ಟಂತೆ ನೀಲಾಂಭೋದಂಗಳ್ ಕೂಡೆ: ಆದಿಪು, ೧೪. ೯೭)

ರೋದೋವಿವರ

[ನಾ] ಆಕಾಶದ ಬಿಲ, ಭೂಮಿ ಆಕಾಶಗಳ ನಡುವಣ ಪ್ರದೇಶ (ಪ್ರಚಂಡಪ್ರಳಯ ಘನಘಟಾ ರಾವದಿಂದಾರ್ದು ಬಾಣಾವಲಿಯಿಂದಂ ಪೂೞೆ ರೋದೋವಿವರಮನೊದವಿತ್ತೊಂದು ಘೋರಾಂಧಕಾರಂ: ಪಂಪಭಾ, ೧೧. ೧೪೮)

ರೋಮಕೂಪ

[ನಾ] ಮೈಕೂದಲ ಕುಳಿ (ಇಡಿದಿರೆ ರೋಮಕೂಪದೊಳಗೆ ಉರ್ಚಿದ ಸಾಲ ಸರಲ್ಗಳುಂ ತೆಱಂಬಿಡಿದಿರೆ ಬೆಟ್ಟು ಒರ್ಗುಡಿಸಿದಂತೆ ನೆಱಲ್ದಿರೆ: ಪಂಪಭಾ, ೧೩. ೬೨)

ರೋಮಾಂಕುರ

[ನಾ] ರೋಮಾಂಚನ, ಪುಲಕ (ಆತನ ಮೇಲ್ವಾಯೆ ರಾಗಿಸಿ ರೋಮಾಂಕುರಂ ಒಗೆದಂತೆ ಒಗೆದ ಕಳಿಕಾಂಕುರಂಗಳುಂ: ಪಂಪಭಾ, ೨. ೧೨ ವ)

ರೋಮಾಂಚಕ

[ನಾ] ರೋಮಾಂಚನಗೊಳ್ಳುವುದು (ಕಾಮಗ್ರಹ ಗ್ರಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸ್ತಂಭಕಂಪಸ್ವೇದವೈವರ್ಣ್ಯಸಂತಾಪನ ಅನಾಹಾರ ವ್ಯಾಮೋಹ ಗದ್ಗದಾಶ್ರುಮೋಕ್ಷಮೂರ್ಛಾದಿ ನಾನಾ ವಿಕಾರಂಗಳಂ ಒಡನೊಡನೆ ತೋಱುವುದುಂ: ಪಂಪಭಾ, ೪. ೫೯ ವ)

Search Dictionaries

Loading Results

Follow Us :   
  Download Bharatavani App
  Bharatavani Windows App