भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಯೂಪ

[ನಾ] ಬಲಿಗಂಬ, ಯಜ್ಞಪಶುವನ್ನು ಕಟ್ಟುವ ಕಂಬ (ಮನಂ ಆರಾಧಿತ ಹೋಮಭೂಮಿ ಪಶುಗಳ್ ಕಾಮಾತುರರ್ ಬಂದ ಮಾವನಿತುಂ ಸ್ಥಾಪಿತ ಯೂಪಕೋಟಿ: ಪಂಪಭಾ, ೪. ೫೯)

ಯೋಗತ್ಯಾಗಾಗ್ರನಿರ್ವೃತಿ

[ನಾ] [ಜೈನ] ಒಂದು ಗರ್ಭಾನ್ವಯ ಕ್ರಿಯೆ, ಸಮವಸರಣವನ್ನು ವಿಸರ್ಜಿಸಿ ವಿಹಾರಾದಿಗಳನ್ನು ಮಾಡುವುದು (ಆರ್ಹಂತ್ಯ ವಿಹಾರ ಯೋಗತ್ಯಾಗಾಗ್ರ ನಿರ್ವೃತಿಯೆಂಬ ಅಯ್ವತ್ತಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಯೋಗದ ಬಲ

[ನಾ] ಯೋಗಶಕ್ತಿ (ತ್ರಿದಶನರಾಸುರೋರಗಗಣಪ್ರಭು ನಿಶ್ಚಿತತತ್ತ್ವಯೋಗಿ ಯೋಗದ ಬಲಮುಣ್ಮಿ ಪೊಣ್ಮಿ ನಿಲೆ: ಪಂಪಭಾ, ೧. ೮೫)

ಯೋಗನಿಯೋಗ

[ನಾ] ಯೋಗಾಭ್ಯಾಸ (ಪನ್ನಗಕೇತಂಗೆ ಧರಾವಿಭಾಗಮನಿತ್ತು ಸಂಪನ್ನಯೋಗನಿಯೋಗದಿಂದಂ ಅರಣ್ಯದೊಳ್ ನೆಲೆಸಿರ್ದು: ಪಂಪಭಾ, ೯. ೧೭)

ಯೋಗನಿರೋಧ

[ನಾ] [ಜೈನ] ಮನೋವಾಕ್ಕಾಯಗಳ ಚಂಚಲತೆಯನ್ನು ನಿಗ್ರಹಿಸುವುದು (ಪೌಷ್ಯಮಾಸದ ಪೌರ್ಣಮೀ ದಿನದಂದು ಯೋಗಪಲ್ಯಂಕಾಸನದಿಂದಂ ಯೋಗನಿರೋಧದೊಳ್ ಪೂರ್ವಾಭಿಮುಖನಾಗಿರ್ದಂ: ಆದಿಪು, ೧೬. ೪೦ ವ)

ಯೋಗನಿರ್ವಾಣಸಂಪ್ರಾಪ್ತಿ

[ನಾ] [ಜೈನ] ಒಂದು ಗರ್ಭಾನ್ವಯ ಕ್ರಿಯೆ (ಯೋಗನಿರ್ವಾಣಸಂಪ್ರಾಪ್ತಿ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಯೋಗನಿರ್ವಾಣಸಾಧನ

[ನಾ] [ಜೈನ] ಒಂದು ಗರ್ಭಾನ್ವಯ ಕ್ರಿಯೆ (ಯೋಗ ನಿರ್ವಾಣಸಾಧನ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಯೋಗಪಲ್ಯಂಕಾಸನ

[ನಾ] [ಜೈನ] ಯೋಗದಲ್ಲಿನ ಅರ್ಧಪದ್ಮಾಸನ (ಪೌಷ್ಯಮಾಸದ ಪೌರ್ಣಮೀ ದಿನದಂದು ಯೋಗಪಲ್ಯಂಕಾಸನದಿಂದಂ ಯೋಗನಿರೋಧದೊಳ್ ಪೂರ್ವಾಭಿಮುಖನಾಗಿರ್ದಂ: ಆದಿಪು, ೧೬. ೪೦ ವ)

ಯೋಗಪ್ರಯೋಗ

[ನಾ] ಯೋಗನಿರತತೆ (ಸ್ತಿಮಿತೇಕ್ಷಣವಭ್ರೂಭಂಗಂ ಅನಾಪಾಂಗಾವಳೋಕನಂ ಸುಶ್ಲಿಷ್ಟೋತ್ತಮದಶನಚ್ಛದ ಮಾನಸಮಮರ್ದುದು ಯೋಗಪ್ರಯೋಗದೊಳ್ ಮುನಿಪತಿಯಾ: ಆದಿಪು, ೯. ೮೭)

ಯೋಗಯೋಗ್ಯ

[ನಾ] ಯೋಗಸಾಧನೆಗೆ ಸೂಕ್ತ (ಅಂಬರತಿಳಕಮೆಂಬ ಗಿರಿವರದ ನಡುವೆ ಯೋಗಯೋಗ್ಯಮೆಂದು ಅದಂ ಅಳಂಕರಿಸಿ ನೆಲಸಿದಂದು: ಆದಿಪು, ೩. ೭೨ ವ)

ಯೋಗಶಾಸ್ತ್ರ

[ನಾ] ಪಾತಂಜಲ ಯೋಗ (ಕಾಪಿಲಸಿದ್ಧಾಂತಮುಮಂ ಯೋಗಶಾಸ್ತ್ರಮುಮಂ ತೋಱಿ ಲೋಕಮಂ ಸಮ್ಯಗ್‌ಜ್ಞಾನಪರಾಙ್ಮುಖಂ ಮಾಡಿರೆ: ಆದಿಪು, ೯. ೯೩ ವ)

ಯೋಗಸಮ್ಮಹ

[ನಾ] [ಜೈನ] ಒಂದು ಗರ್ಭಾನ್ವಯ ಕ್ರಿಯೆ; ಕೇವಲಜ್ಞಾನ ಪಡೆದನಂತರ ಹೊಂದುವ ಪೂಜೆ (ಯೋಗಸಮ್ಮಹ ಆರ್ಹಂತ್ಯವಿಹಾರಯೋಗತ್ಯಾಗಾಗ್ರನಿವೃತ್ತಿ ಎಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಯೋಗಾಚಾರ

[ನಾ] ಬೌದ್ಧಮತ (ಮಹಾಮತಿ ಸಂಭಿನ್ನಮತಿ ಶತಮತಿಗಳ್ ಲೋಕಾಯತಿಕ ಯೋಗಾಚಾರ ಮಾಧ್ಯಮಿಕಮತ ನಿತಥಾಭಿಧಾಯಿಗಳ್: ಆದಿಪು, ೨. ೭ ವ);

ಯೋಗಿನೀತಂತ್ರ

[ನಾ] ಜೋಗಿಣಿ ಎಂಬ ಮರುಳುಗಳ ಸಮೂಹ, ಅಥವಾ ಪ್ರಾಯಶಃ ಕೌಲವೆಂಬ ಶಾಕ್ತೇಯ ಪಂಥದ ಮಾರ್ಗ (ಆಮಂತ್ರಿತ ಡಾಕಿನೀ ದಶನಘಟ್ಟನಜಾತವಿಭೀಷಣಂ ಮದೇಭ ಅಂತ್ರನಿಯಂತ್ರಿತ ಅಶ್ವಶವಮಾಂಸರಸ ಆಸವಮತ್ತ ಯೋಗಿನೀತಂತ್ರಂ: ಪಂಪಭಾ, ೧೨. ೧೨೦)

ಯೋಜನ

[ನಾ] ಎರಡು ಗಾವುದ ಅಥವಾ ನಾಲ್ಕು ಹರಿದಾರಿ ದೂರ (ಇಲ್ಲಿಗೆ ಅಱುವತ್ತು ಯೋಜನದೊಳ್ ಇಂದ್ರಪ್ರಸ್ಥಮೆಂಬುದು ಪೊೞಲ್ ಅಲ್ಲಿಗೆ ಪೋಗಿ ಸುಖದಿಂ ರಾಜ್ಯಂಗೆಯ್ಯುತ್ತಿರಿ: ಪಂಪಭಾ, ೪. ೮ ವ)

ಯೋಜನಗಂಧಿ

[ನಾ] ಮತ್ಸ್ಯಗಂಧಿಯ ದುರ್ಗಂಧತ್ವವನ್ನು ಪರಾಶರಮುನಿಯು ನಿವಾರಿಸಿದ ಬಳಿಕ ಅವಳಿಗೆ ಬಂದ ಹೆಸರು, ಮುಂದೆ ಇವಳು ಶಂತನು ಚಕ್ರವರ್ತಿಯ ರಾಣಿಯಾಗಿ ಸತ್ಯವತಿಯೆಂಬ ಮತ್ತೊಂದು ಹೆಸರು ಪಡೆಯುತ್ತಾಳೆ (ಪರಲೋಕಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತಶೋಕಾನಲದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಂ ಮಾಡಿ ರಾಜ್ಯಂ ನಷ್ಟರಾಜಮಾದುದರ್ಕೆ ಮಮ್ಮಲ ಮಱುಗಿ ಯೋಜನಗಂಧಿ ಸಿಂಧುರಾಜನನಿಂತೆಂದಳ್: ಪಂಪಭಾ, ೧. ೮೦ ವ)

ಯೋಜನಗಂಧಿತ್ವ

[ನಾ] ಒಂದು ಯೋಜನ ದೂರ ದೇಹದ ಪರಿಮಳವನ್ನು ಸೂಸುವುದು (ಮುನೀಂದ್ರಂ ಆಕೆಯೊಡಲ ಈ ದುರ್ಗಂಧವೋಪಂತೆ ಯೋಜನಗಂಧಿತ್ವಮನಿತ್ತು .. .. ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾಮುನಿಪಂ ಪುಟ್ಟಿದಂ: ಪಂಪಭಾ, ೧. ೬೯)

ಯೋಧನ

[ನಾ] ಯುದ್ಧಮಾಡುವುದು (ಪರಿಪಠನ ನಟನ ಮೃದುಕೂಜಿತ ರಸಿತ ದರಹಸಿತ ಕ್ರೇಂಕಾರ ಆರೋಹಣಾದಿ ಯೋಧನಾದಿ ನಾನಾ ವಿನೋದಂಗಳೊಳ್: ಆದಿಪು, ೮. ೩ ವ)

ಯೋನ ಹನ್ಯಾತ್ಸ ಹನ್ಯತೇ

[ಯಃ ನಹನ್ಯಾತ್ ಸಃ ಹನ್ಯತೇ] ಯಾರು ಕೊಲ್ಲುವುದಿಲ್ಲವೋ ಅವನು ಕೊಲ್ಲಲ್ಪಡುತ್ತಾನೆ (ಸ್ವಾಮ್ಯಾರ್ಥಂ ಸ್ವಾಮ್ಯವಿಕ್ರಾಂತಂ ಮರ್ಮಜ್ಞಂ ವ್ಯವಸಾಯಿನಂ ಅರ್ಥರಾಜ್ಯಹರಂ ಭೃತ್ಯಂ ಯೋನ ಹನ್ಯಾನ್ಸಹನ್ಯತೇ: ಪಂಪಭಾ, ೨. ೯೦ ಶ್ಲೋಕ)

ಯೋನಿ

[ನಾ] ಜನ್ಮಸ್ಥಾನ (ನಾನಾಯೋನಿಗಳೊಳ್ ಸುೞಿದೇನಾನುಂ ದುಷ್ಕೃತಂ ಸಡಿಲ್ದೊಡೆ ಪಡೆಗುಂ ಮಾನುಷ್ಯಮಂ: ಆದಿಪು, ೯. ೪೮)

Search Dictionaries

Loading Results

Follow Us :   
  Download Bharatavani App
  Bharatavani Windows App