भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಯಾನ

[ನಾ] ವಾಹನ (ಆತ್ಮೀಯ ಸ್ಥಪತಿರತ್ನವಿರಚಿತ ಮಣಿಕನಕಖಚಿತ ಶಿಬಿಕಾಂದೋಳಾದಿ ಯಾನಂಗಳುಮಂ: ಆದಿಪು, ೪. ೫೪ ವ); [ನಾ] [ಯುದ್ಧಕ್ಕೆ] ಹೊರಡುವುದು (ಸಮದಂ ಯಾನಮೆ ಮಂದಮಂದಗಮನಂ ಕಸ್ತೂರಿಕಾ ಪಂಕಪಟ್ಟಮೆ ಧಾರಾಮದವಟ್ಟಮಾಯ್ತೆನಿಪಿನಂ: ಆದಿಪು, ೧೧. ೨೧)

ಯಾನಪಾತ್ರ

[ನಾ] ಹಡಗು (ದ್ರೋಣಿಯಾನಪಾತ್ರಾದಿಗಳೊಳ್ ಜಲದುರ್ಗೋತ್ತರಣಮಂ ಉಪದೇಶಂಗೆಯ್ದು: ಆದಿಪು, ೬. ೬೨ ವ]

ಯಾನಹಸ್ತಿ

[ನಾ] ಸವಾರಿಯ ಆನೆ (ವಿಜಯಾರ್ಧಪರ್ವತಮೆಂಬ ಯಾನಹಸ್ತಿಯುಂ ಪವನಂಜಯಮೆಂಬ ತುರಗರತ್ನಮುಂ: ಆದಿಪು, ೧೫. ೩ ವ)

ಯಾಮನೀವಿರಾಮಸಮಯ

[ನಾ] ರಾತ್ರಿಯ ಕೊನೆ, ಬೆಳಗಿನ ಜಾವ (ಸುಧಾರಮ್ಯಹರ್ಮ್ಯತಳದೊಳ್ ಏೞನೆಯ ನೆಲೆಯೊಳ್ ಪುರುಪರಮೇಶ್ವರನೊಡನೆ ಪವಡಿಸಿ ಯಾಮಿನೀವಿರಾಮ ಸಮಯದೊಳ್: ಆದಿಪು, ೮. ೨೫ ವ)

ಯಾಮಿನಿ

[ನಾ] ರಾತ್ರಿ (ವಸುಧಾಂತರ್ವರ್ತಿಯಾಗಿರ್ದ ಅರಾತಿ ನಿಕಾಯಕ್ಕಿದು ಯಾಮಿನೀಸಮುದಿತಂ ದೇವೇಂದ್ರಚಾಪಂ ದಲೆಂಬಿನೆಗಂ: ಆದಿಪು, ೧೪. ೯೯)

ಯಾವನಾಳ

[ನಾ] ಜೋಳ (ಕಳಮ ಷಷ್ಟಿಕಾವ್ರೀಹಿ ಯವ ಯಾವನಾಳ .. .. ಧಾನ್ಯಕಾದಿ ವಿವಿಧಧಾನ್ಯಭೇದಂಗಳುಂ: ಆದಿಪು, ೬. ೭೨ ವ)

ಯುಕ್ತಾಯುಕ್ತ

ಸರಿತಪ್ಪು (ಅತಿಸುರಭಿಕುಸುಮ ಫಲ ಪವಿತ್ರಜಲಂಗಳಿಂದಂ ಆದಿಪುರುಷನ ಪದಪಯೋಜಂಗಳಂ ಅರ್ಚಿಸಿ ಯುಕ್ತಾಯುಕ್ತವಿಚಾರದೂರಮತಿಗಳಾಗಿ: ಆದಿಪು, ೯. ೯೭ ವ)

ಯುಗ

[ನಾ] ಒಂದು ಕಾಲಘಟ್ಟ ಹಾಗೂ ಜೋಡಿ (ಯುಗನಾಯಕನೆನೆ ಜಿನಪದಯುಗನಮಿತಸುರೇಂದ್ರನೆನೆ ಯುಗಂಧರದೇವಂ ನೆಗೞ್ದಪಂ: ಆದಿಪು, ೩. ೮೧); [ನಾ] ಜೊತೆ (ಕೇಯೂರಕಟಕಸಮಿತಿ ಯುಗಾಯತಬಾಹುಗಳಿಂ ಉನ್ಮಿಷತ್ ರತ್ನಹಟಚ್ಛಾಯೆಯೊಳೆ ಮುಸುಕಿ: ಆದಿಪು, ೪. ೪೦)

ಯುಗಂಧರ

[ನಾ] [ಜೈನ] ತೀರ್ಥಂಕರರ ಸಮವಸರಣ ಎಂಬ ತೀರ್ಥ (ಮಹಾಕಚ್ಛವಿಷಯದ ಅರಿಷ್ಟಪುರದಿಂದಂ ಯುಗಂಧರ ತೀರಸ್ಥ ಸರಸೀಹಂಸನಾಯಕರೆನಿಸಿದ ಗಗನಚಾರಣರ್: ಆದಿಪು, ೨. ೩೩ ವ); [ನಾ] ಒಬ್ಬ ದೇವನ ಹೆಸರು (ಯುಗನಾಯಕನೆನೆ ಜಿನಪದಯುಗನಮಿತ ಸುರೇಂದ್ರನೆನೆ ಯುಗಂಧರದೇವಂ ನೆಗೞ್ದಪಂ: ಆದಿಪು, ೩. ೮೧)

ಯುಗಪತ್

[ಅ] ಏಕಕಾಲದಲ್ಲಿ (ನೆಗೞ್ದುದು ರಾಜ್ಯಸಮರ್ಪಣ ಯುಗಪತ್ ಪ್ರತಿಹತಂ ಅಮಂದರವಂ ಒಂದೆಡೆಯೊಳ್: ಆದಿಪು, ೯. ೬೬); [ಅ] ಒಟ್ಟಿಗೇ (ಯುಗಪತ್ ಸಕಳಪದಾರ್ಥ ಯಥಾರ್ಥಾವಭಾಸಿಯಪ್ಪ ಕೇವಲಜ್ಞಾನದಿಂ ವಿಶೇಷ ನಿಶ್ಚಯಮಂ ಮಾಡುವನೆಂದು: ಆದಿಪು, ೧೫. ೨೧ ವ)

ಯುಗಪ್ರಮಾಣ

[ನಾ] ಒಂದು ನೊಗದಷ್ಟು ಉದ್ದವಾದ (ಯುಗಪ್ರಮಾಣ ಕ್ಷೋಣೀನಿರೀಕ್ಷಣನಿರುತನುಂ ಅತಿದ್ರುತವಿಲಂಬಿತ ಗತಿವ್ಯಪೇತನುಂ ಆಗಿ: ಆದಿಪು, ೯. ೧೨೯ ವ)

ಯುಗಳ

[ನಾ] ಜೋಡಿ, ಜೊತೆ (ವಿಜಯಶ್ರೀನಿವಾಸ ಬಾಹುಬಾಹುಯುಗಳಕ್ಕೆ ಕೇಯೂರ ಹಾರ ಅಂಗದಕಟಕಾಳಂಕಾರಂ ಮಾಡಿ: ಆದಿಪು, ೭. ೧೦೬ ವ)

ಯುಗಾಂತ

[ನಾ] ಯುಗದ ಕೊನೆ, ಪ್ರಳಯ ಕಾಲ (ಯುಗಾಂತಪಯೋಧರಾಳಿ ಭೋಂಕೆನೆ ಕವಿವಂದದಿಂ ಕವಿದಂ ಆ ಬನಮಂ ಮೃಗಯಾನಿಧಾನಮಂ: ಪಂಪಭಾ, ೮. ೧೪)

ಯುಗಾಂತವಾತ

[ನಾ] ಪ್ರಳಯಕಾಲದ ಗಾಳಿ (ಅಂತು ಯುಗಾಂತ ವಾತಾಹತಿಕುಲಗಿರಿಯೆ ನೆಲೆಯಿಂ ತಳರ್ವಂತೆ ತಳರ್ದು ಧ್ವಾಂಕ್ಷಧ್ವಜಂ: ಪಂಪಭಾ, ೧೨. ೧೩೬ ವ)

ಯುಗಾದಿ

[ನಾ] [ಯುಗ+ಆದಿ] ಕಾಲಘಟ್ಟದ ಆರಂಭ (ಈ ಯುಗಾದಿಯೊಳ್ ಆದಿದಾನತೀರ್ಥ ಪ್ರವರ್ತನೈಕಪುಣ್ಯ ಭಾಜನನೈ ನೀಂ: ಆದಿಪು, ೦. ೧೩ ವ)

ಯುದ್ಧಮಲ್ಲ

[ನಾ] ಪಂಪನು ಹೇಳುವ ಚಾಳುಕ್ಯವಂಶದ ಮೊದಲ ರಾಜ (ಶ್ರೀಮಚ್ಚಳುಕ್ಯವಂಶ ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂಡೀ ಮಹಿಯೊಳಾತ್ಮ ವಂಶಶಿಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದಂ: ಪಂಪಭಾ, ೧. ೧೫)

ಯುವ

[ನಾ] ಯುವಕ (ಯುವಸಂಘಾತಮದೊಂದು ತೋಳ್ದುಱುಗಳೊಳ್ ಮತ್ತೊಂದು ತೋಳೋಳಿಯೊಳ್ ಯುವತೀವ್ರಾತಂ: ಆದಿಪು, ೭. ೧೨೬)

ಯುಷ್ಮತ್

[ಗು] ನಿನ್ನ (ಯುಷ್ಮತ್ ಪದಪಾಂಸುಗಳಿಂದಾಂ ಪವಿತ್ರಗಾತ್ರನೆನಾದೆಂ: ಪಂಪಭಾ, ೯. ೩೨)

ಯೂಥ

[ನಾ] [ಪ್ರಾಣಿಗಳ] ಗುಂಪು, ಹಿಂಡು (ತನ್ನಳಿಯನನೆಯ್ದೆ ಪಾಲಿಸುಗೆ ಬಂದಿದನೀಗಳನಾಥಯೂಥಮಂ: ಆದಿಪು, ೪. ೮೪)

ಯೂಥಪತಿ

[ನಾ] ಸಲಗ (ಕಳಭಂ ವನಪಥಮಂ ಯೂಥಪತಿಗೆ ತೋರ್ಪಂತಕ್ಕುಂ: ಆದಿಪು, ೮. ೧೨); ಹಿಂಡಿನ ಮುಖ್ಯ ಸಲಗ (ಯೂಥಪತಿ ಕೆಡೆಯೆ ದೆಸೆದಪ್ಪಿದ ವನಕರಿರೇಣುಗಳುಮಂ: ಪಂಪಭಾ, ೧೪. ೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App