भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಯಮಸ್ಥಾನ

[ನಾ] ಯಮನ ಜಾಗ, ಸಾವು (ಪತಿ ಪರಸಿ ಯಮಸ್ಥಾನಮನೆಂತೆಯ್ದಿಸಿದಿರೊ ಕಾನೀನನ ದೊರೆಯ ಕಲಿಯಂ ಉಗ್ರ ಆಹವದೊಳ್: ಪಂಪಭಾ, ೧೨. ೧೨೨)

ಯಮಳ

[ನಾ] ಅವಳಿ ಜವಳಿ, ನಕುಲ, ಸಹದೇವರು (ಅಡವಿಯ ಕಾಯಂ ಪಣ್ಣುಮಂ ಉದಿರ್ಪಿ ತಿಂದಗಲದೆ ನಿಂದೀ ಯಮಳರಾದ ತೆಱದಿಂ ನೋಯಿಸರಯ್ ನಿನ್ನ ನನ್ನಿಕಾಱನ ಮನಮಂ: ಪಂಪಭಾ, ೭. ೪೮)

ಯವ

[ನಾ] ಗೋಧಿ (ಮಲ್ಲಿಗೆಯಲರ್ಗಳಂ ಪೂವಾಸಿ ಮೃಣಾಳನಾಳದೊಳ್ ಸಮೆದ ಸರಿಗೆಗಂಕಣಗಳುಮಂ ಯವ ಕಲಿಕೆಗಳೊಳ್ ಸಮೆದ ಕಟಿಸೂತ್ರಮಂ: ಪಂಪಭಾ, ೫. ೬ ವ)

ಯವನಾಳ

[ನಾ] ಜೋಳ (ಕೞಮ ಷಷ್ಟಿಕಾ ವ್ರೀಹಿ ಯವನಾಳ ಗೋಧೂಮ ಕಂಗು ಶ್ಯಾಮಕ ಕೋದ್ರವ ನೀವಾರ ತಿಲಾತಸಿ ಮಸೂರಿಕಾ ಕುಳತ್ಥ: ಆದಿಪು, ೬. ೭೨ ವ) [ಎಲ್. ಬಸವರಾಜು ಆವೃತ್ತಿ]

ಯವನಿಕಾ

[ನಾ] ತೆರೆ, ಪರದೆ (ನವಮೇಘಧ್ವನಿ ಪುಷ್ಕರಧ್ವನಿ ತರತ್ತರಾಳಿ ಪುಷ್ಪೋಪಹಾರವಿಳಾಸಂ ರುಚಿರಾಂಬುದಂ ಯವನಿಕಾವಿನ್ಯಾಸಮಾದಲ್ಲಿ: ಆದಿಪು, ೬. ೭೨)

ಯವಸ

[ನಾ] ಹುಲ್ಲು (ಅಭಿರಾಮ ಜಲಾಶಂಗಳುಮಂ ಪ್ರಭೂತ ಯವಸ ಉದಕಂಗಳುಮಂ ಸಮಸ್ತಸಸ್ಯಸಂಪತ್ಸಂಪನ್ನ ಸುಕ್ಷೇತ್ರಂಗಳುಮಂ: ಆದಿಪು, ೮. ೬೩ ವ)

ಯಶಃಪಿಂಡ

[ನಾ] ಜಯಗಳ ಸಾಲು (ವಿಪುಯಶಃಪಿಂಡಂ ಪುಣ್ಯಪುಂಜಂ ಆ ಕ್ಷತ್ರಧಾಮಂ ತಾನಾ ನೃಪಸುತಂ: ಆದಿಪು, ೮. ೪೪)

ಯಶಃಪ್ರಕಾಶ

[ನಾ] ಕೀರ್ತಿಕಾಂತಿ (ಅೞಿಪದೆ ಪದಗೞಿಪದೆ ಪೊಂಪುೞಿವೋಗೆ ಯಶಃಪ್ರಕಾಶಂ ಈಗಳೆ ಧರೆಯಂ ಪೞಿಕೆಯ್ದು: ಆದಿಪು, ೪. ೮೭)

ಯಶೋದುಂದುಭಿ

[ನಾ] ಗೆಲವನ್ನು ಸಾರುವ ದುಂದುಭಿಧ್ವನಿ (ಪ್ರಕಟ ಯಶೋದುಂದುಭಿ ಸಿಂಹಾಸನ ಸುರದುಂದುಭಿ ಪತಿಚರಣಕ್ಕಮಳಭೃಂಗಂ ಪಂಪಂ: ಆದಿಪು, ೧. ೩೩)

ಯಶೋಭಾಗಿ

[ನಾ] ಕೀರ್ತಿಭಾಜನ (ತಾಂ ತಂದನಂದು ಅಂಬೆಯಂಬಿಕೆಯಂಬಾಲೆಯರೆಂಬ ಬಾಲೆಯರನೇಂ ಭೀಷ್ಮಂ ಯಶೋಭಾಗಿಯೋ: ಪಂಪಭಾ, ೧. ೭೪)

ಯಶೋವಿತಾನ

[ನಾ] ಕೀರ್ತಿರಾಶಿ (ವಿಪುಲ ಯಶೋವಿತಾನ ಗುಣಮಿಲ್ಲದನಂ ಪ್ರಭು ಮಾಡಿ ಪೂರ್ವ ಭೂಮಿಪರ ಪದಂಗಳಂ ಪುಗಿಸಿ ಪೋಲಿಪೊಡೆ ಈತನುದಾತ್ತ ಪಂಪಭಾ, ೧. ೧೪)

ಯಷ್ಟಿ

[ನಾ] ಕೋಲು (ಪಾಪಸತ್ವಂಗಳ್ ಕಾಡೆ ಲಕುಟಯಷ್ಟ್ಯಾದಿ ವಿಧಿಯನುಪದೇಶಂಗೆಯ್ದಾತಂ ಕ್ಷೇಮಂಧರನೆಂಬ ಪೆಸರಂ ಪಡೆದಂ: ಆದಿಪು, ೬. ೫೬ ವ)

ಯಸ್ಯ

[ಗು] ಯಾರ (ಪ್ರಚಂಡಲಯತಾಂಡವಕ್ಷುಭಿತಯಾ ಯಸ್ಯಾನಯಾ: ಪಂಪಭಾ, ೪. ೨೭)

ಯಾಗ

[ನಾ] ಯಜ್ಞ (ಕರಂಗಳಡಂಗಿ ಕಿಲುಂಬುಗೊಂಡ ಕನ್ನಡಿಗೆಣೆಯಾಯ್ತು ಭಾನುವಳಯಂ ದಿವಿಜಾಪಗೆ ನೋಡೆ ನೋಡೆ ಕರ್ಪಡರ್ದೆಣೆಯಾದುದು ಆ ಯಮುನೆಗೆ ಅಗ್ಗದ ಯಾಗದ ಧೂಮದ ಏೞ್ಗೆಯೊಳ್: ಪಂಪಭಾ, ೬. ೩೬)

ಯಾಗಹಸ್ತಿ

[ನಾ] ಸವಾರಿಮಾಡುವ ಆನೆ, ಪಟ್ಟದ ಆನೆ ? (ವಿಜಯಪರ್ವತಮೆಂಬ ಯಾಗಹಸ್ತಿಯುಂ ಪವನಂಜಯಂ ಎಂಬ ತುರಗರತ್ನಮುಂ: ಆದಿಪು, ೧೫. ೩ ವ)

ಯಾಚಕ

[ನಾ] ಬೇಡುವವನು, ತಿರುಪೆಗಾರ (ಕೀಚಕಂ ಕಾಮದೇವಂ ಮಾಡಿದ ಯಾಚಕನಂತೆ ಕರಮೆ ನಾಣ್ಗೆಟ್ಟು ಮನಂಗಾಪು ಅೞಿದು ಅಳಿಪಿ ನೋಡಿ: ಪಂಪಭಾ, ೮. ೫೯ ವ)

ಯಾಜನ

[ನಾ] ಯಜ್ಞ ಮಾಡಿಸುವುದು, ಬ್ರಾಹ್ಮಣನ ಷಟ್ಕರ್ಮಗಳಲ್ಲಿ ಒಂದು (ಅಂತು ಭವಿಷ್ಯದ್ ದ್ವಿಜವರ್ಣಕೆ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹ ಯಜನ ಯಾಜನವಿಶಿಷ್ಟವೃತ್ತಿಯುಮಂ: ಆದಿಪು, ೮. ೭೩ ವ)

ಯಾಜಿ

[ನಾ] ಯಾಗ ಮಾಡಿದವನು (ಅಗುರ್ವು ಪರ್ವೆ ಸರ್ವಕ್ರತುಯಾಜಿಯಾದಂ ಅಳವು ಇಂತುಟು ಮಾಧವಸೋಮಯಾಜಿಯಾ: ಪಂಪಭಾ, ೧೪. ೪೩)

ಯಾತ್ರೋತ್ಸವ

[ನಾ] ಪ್ರವಾಸದ ಸಂಭ್ರಮ (ಮಂಗಳಾಕಾರಂ ಯಾತ್ರೋತ್ಸವಪ್ರಸ್ತುತಮೆನೆ ತಳರ್ದಂ ರಾಗದಿಂ ರಾಜರಾಜಂ: ಆದಿಪು, ೧೩. ೪೩)

ಯಾಥಾತ್ಮ್ಯ

[ನಾ] ಸ್ವಭಾವ (ಸಂಶಯವಿಪರ್ಯಯ ಸಾವದ್ಯಾನವದ್ಯವಸಾಯ ಸ್ವಭಾವರಹಿತಮಾಗಿ ಜೀವಾದಿ ಪದಾರ್ಥಯಾಥಾತ್ಮ್ಯಾವಗಂ ಸಮ್ಯಗ್‌ಜ್ಞಾನಂ: ಆದಿಪು, ೧೦. ೬೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App