भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456Next >

ಧಗಂ

[ಅ] ಧಸಕ್ ಎನ್ನುವಂತೆ ಅನುಕರಣ ಪದ (ನಿನ್ನನೊರ್ವನಂ ಪಗೆವಡೆಯೊಡ್ಡುಗಳಂ ಒಡೆಯಲ್ಕೆ ಪೇೞ್ದು ಎರ್ದೆ ಧಗಂ ಎನೆ ಸೈರಿಸುವ ಉಪಾಯಮಾವುದು ಕಱುವೇ: ಪಂಪಭಾ, ೧೧. ೯೧)

ಧಗದ್ಧಗಿತರವ

[ನಾ] ಧಗಧಗ ಎಂಬ ಶಬ್ದ (ಧೃತಧಗದ್ಧಗಿತರವನಿರ್ಮಳಶಿಖಾಳಿಯಂ ಸತತಗತಿ ಪಥಮನಡರ್ವುಜ್ಜ್ವಳಜ್ವಾಳೆಯಂ: ಆದಿಪು, ೭. ೨೭ ವ)

ಧನ

[ನಾ] ಸಂಪತ್ತು (ತನು ರೂಪ ವಿಭವ ಯೌವನ ಧನ ಸೌಭಾಗ್ಯ ಆಯುರಾದಿಗಳ್ಗೆಣೆ ಕುಡುಮಿಂಚಿನ ಪೊಳೆಪು ಮುಗಿಲ ನೆೞಲ್ ಇಂದ್ರನ ಬಿಲ್ ಬೊಬ್ಬುಳಿಕೆಯುರ್ಬು ಪರ್ಬಿದ ಭೋಗಂ: ಆದಿಪು, ೯. ೯. ೪೬)

ಧನಂಜಯ

[ನಾ] ಅರ್ಜುನ (ಅನ್ನೆಗಂ ತನ್ನ ಮಯ್ದುನನಪ್ಪ ಅಮೋಘಾಸ್ತ್ರಧನಂಜಯನ ಬರವಿನ ಸಂತಸದೊಸಗೆ ಪಡೆಮಾತಂ ಮುಂದುವರಿದಱಿಪುವಂತೆ: ಪಂಪಭಾ, ೪. ೩೨ ವ)

ಧನದ

[ನಾ] ಕುಬೇರ (ಧನದಂ ಕಾಂಚನಪಂಚರತ್ನಮಯಂ ರೈವೃಷ್ಟಿಯಂ ಮಾಡುವಲ್ಲಿ: ಆದಿಪು, ೭. ೨೪)

ಧನದಾನುಚರ

[ನಾ] ಕುಬೇರನ ಹಿಂಬಾಲಕ (ಅಱುವತ್ತುಕೋಟಿ ಧನದಾನುಚರರಂ ಅತಿರೌದ್ರಭಯಾನಕಮಾಗೆ ಕೊಂದು ಸೌಗಂಧಿಕ ಕಾಂಚನಕಮಳಹರಣಪರಿಣತನಾದಂ: ಪಂಪಭಾ, ೮. ೩೧)

ಧನಸಂಕುಲ

[ನಾ] ಸಂಪತ್ತೆಲ್ಲ (ಧರ್ಮಪುತ್ರನುಂ ಕುಲಧನಸಂಕುಲಗಳನೆ ತಂದಿಡೆ ಇಟ್ಟು ಅವನಾಡಿ ಸೋಲ್ತಂ ಆಕುಲಮತಿ ಮುಂದೆ ಭಾರತದೊಳೊಡ್ಡುವುದಂ ಕಡುನನ್ನಿ ಮಾೞ್ಪವೊಲ್: ಪಂಪಭಾ, ೬. ೭೨)

ಧನು

[ನಾ] [ಜೈನ] ಬಿಲ್ಲು, ಎತ್ತರದ ಒಂದು ಅಳತೆ (ಏೞೆ ಧನು ಮೂಱು ಮೊೞನಿಂ ಪೇೞೆ ಷಡಂಗುಲಮೆ ಮೊದಲ ನಾರಕರ ಒಡಲ್: ಆದಿಪು, ೫. ೯೨)

ಧನುರಾಗಮ

[ನಾ] ಧನುರ್ವಿದ್ಯೆ (ಇನಿಬರೊಳಗೀತನೊರ್ವನೆ ಧನುರಾಗಮದೆಡೆಗೆ ಕುಶಲನಕ್ಕುಂ ಅದರ್ಕೇಂ ಕಿನಿಸದಿರಿಂ ಮುನ್ನಱಿಪಿದೆಂ ಎನೆ ಭೀಷ್ಮನಲಂಪು ಮಿಗೆ ಮುಗುಳ್ನಗೆ ನಕ್ಕಂ: ಪಂಪಭಾ, ೨. ೫೫)

ಧನುರ್ಗುಣಲತಾನಿನಾದ

[ನಾ] ಬಿಲ್ಲಿನ ಬಳ್ಳಿಯಂತಿರುವ ಹಗ್ಗದ ಠೇಂಕಾರ (ಮನಂಪೆರ್ಚಿ ಧನುರ್ಲತಾಗುಣನಿನಾದಮನಾಲಿಸಿ ಕೇಳಲುಂ: ಪಂಪಭಾ, ೧. ೧೪೨)

ಧನುರ್ದಂಡ

[ನಾ] ಧನುಸ್ಸು, ಬಿಲ್ಲು (ಆತೋದ್ಯಪ್ರಗೀತಧ್ವನಿಗಳಿರೆ ಧನುರ್ದಂಡಟಂಕಾರಮಂ ಕೇಳಲುಂ: ಆದಿಪು, ೮. ೩೩)

ಧನುರ್ಧರ

[ನಾ] ಬಿಲ್ಲನ್ನು ಹಿಡಿದವನು (ಪಿಡಿಕೆಯ್ ತೀವಿದ ಕೂರ್ಗಣೆ ಮಡಕಾಲ್ವರಂ ಅಲೆವ ಕಚ್ಚೆ ನಿಡಿಯಸಿಯ ಒಱೆ ಕರ್ಪಿಡಿದ ಪಣೆಕಟ್ಟು ಕೆಯ್ಪಡೆ ಬೆಡಂಗನೊಳಕೊಳೆ ಧನುರ್ಧರರ್ ಪೆಣೆದೆಚ್ಚರ್: ಪಂಪಭಾ, ೧೦. ೭೧)

ಧನುರ್ಧರಬಲ

[ನಾ] ಬಿಲ್ಗಾರರ ಸೈನ್ಯ (ಕಾೞ್ತುಱು ಮಸಗಿದಂತೆ ಮಸಗಿದ ದುರ್ಧರ ಧನುರ್ಧರಬಲಮುಮಂ ಶ್ವೇತ ಭೀಷ್ಮರ ಪೇೞ್ದ ಓಜೆಯೊಳೆರಡುಂ ಪಡೆಗಳ ಪಡೆವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೆ ಒಡ್ಡಿ ನಿಂದಾಗಳ್: ಪಂಪಭಾ, ೧೦. ೫೧ ವ)

ಧನುರ್ಧರಾಗ್ರಗಣ್ಯ

[ನಾ] ಶ್ರೇಷ್ಠ ಬಿಲ್ವಿದ್ಯೆಗಾರ (ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮಱೆದೊಱಗಿದಾ ಪ್ರಸ್ತಾವದೊಳ್: ಪಂಪಭಾ, ೧. ೧೦೪ ವ)

ಧನುರ್ವೇದ

[ನಾ] ಅಸ್ತ್ರಶಾಸ್ತ್ರ, ಒಂದು ಉಪವೇದ (ಧನುರ್ವೇದ ಹಸ್ತಿ ಅಶ್ವ ತಂತ್ರ ರತ್ನಪರೀಕ್ಷೆಗಳುಮಂ .. .. ಉಪದೇಶಂಗೆಯ್ದು: ಆದಿಪು, ೮. ೬೦ ವ)

ಧಮ್ಮಿಲ್ಲ

[ನಾ] ತುರುಬು (ಮೊಗಮಂ ತಾವರೆ ಕಣ್ಣನುತ್ಪಳದಳಂ ಧಮ್ಮಿಲ್ಲಮಂ ಸೋಗೆ .. .. ಪೋಲ್ತುವು: ಆದಿಪು, ೬. ೮೫)

ಧರ

[ನಾ] ಬೆಟ್ಟ (ಸುರಸಭೆಯಂತೆ ವಜ್ರಿಲಸಿತಂ ಧರನಂತೆ ಉರುಬಾಣಸಂಭೃತಂ: ತ್ರಿಷಷ್ಟಿಪು, ೨೭. ೧೫)

ಧರಣಿ

[ನಾ] ಭೂಮಿ, ರಾಜ್ಯ (ಲಾಕ್ಷಾಗೃಹಮಂ ಪುಗಿಸಲುಂ ಅಕ್ಷಕ್ರೀಡೆಯೊಳೆ ಧರಣಿಯಂ ಕೊಳಲುಂ ಪಿಂಗಾಕ್ಷಂಗೆ ವೇೞ್ದು ಸೈರಿಸದೆ ಆಕ್ಷೇಪದಿಂ ಎಮ್ಮನಿಲ್ಲಿ ಛಿದ್ರಿಸ ಬಂದೈ: ಪಂಪಭಾ, ೭. ೩೨)

ಧರಣೀಂದ್ರ

[ನಾ] [ಜೈನ] ಪಾರ್ಶ್ವನಾಥ ತೀರ್ಥಂಕರನ ಯಕ್ಷ; ಭವನವಾಸಿ ದೇವನಾದ ನಾಗೇಂದ್ರ (ಧರಣೀಂದ್ರನಱಿದು ಭೋಂಕೆನೆ ಧರಾತಳಂ ಬಿರಿಯೆ ನೆಗೆದು ಬರ್ಪಂ: ಆದಿಪು, ೯. ೧೦೦); ಸರ್ಪರಾಜ (ತಿಸರಮಿದಾವುದಕ್ಕ ಧರಣೀಂದ್ರನ ಕೊಟ್ಟುದು ವಜ್ರದಾಳಿ ಕಣ್ಗೆಸೆವುವುದಿದಾವುದು: ಪಂಪಭಾ, ೪. ೮೬)

ಧರಣೀವಿಭಾಗ

[ನಾ] ಭೂಪ್ರದೇಶ (ಕರಿಯ ಮುಗಿಲ್ಗಳಿಂ ಗಗನಮಂಡಳಮೊಪ್ಪಿರೆ ಸೋಗೆಯಿಂ ವನಾಂತರಂ ಎಸೆದು ಒಪ್ಪೆ ತೋರ್ಪ ಮೊಳೆವುಲ್ಗಳಿನೀ ಧರಣೀವಿಭಾಗಂ ಒಪ್ಪಿರೆ: ಪಂಪಭಾ, ೭. ೨೩)
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App