भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಛಟಾ

[ನಾ] ರಾಶಿ (ಕಾಶ್ಮೀರಮೃಗಮದಚ್ಛಟಾಸಿಕ್ತಾಂಗಣಮುಂ ಅಂಗಣರಚಿತ ಮೌಕ್ತಿಕರಂಗಬಲಿಯುಂ: ಆದಿಪು, ೪. ೫೮ ವ)

ಛತ್ರರತ್ನ

[ನಾ] [ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲಿ ಒಂದು (ಅಡಿಯೊಳ್ ಪಾಸಿದ ಚರ್ಮರತ್ನಪಟಮಂ ತಚ್ಛತ್ರರತ್ನಂ ಬೆಡಂಗಿಡಿದೋರಂತಿರೆ ಮುಟ್ಟಿ ಪೊಲ್ದ ತೆಱದಿಂಬಾಗೆ: ಆದಿಪು, ೧೩. ೬೦)

ಛಂದೋವಿಚಿತಿ

[ನಾ] ಛಂದಶ್ಶಾಸ್ತ್ರ (ಸ್ವಯಂಭುವ ಆಭಿಧಾನ ಪದವಿದ್ಯಾ ಛಂದೋವಿಚಿತಿ ಅಲಂಕಾರಗಳೆಂಬ ಮೂಱಱಿಂ ಪೆಸರ್ವಡೆದ ವಾಙ್ಮಯಮುಮಂ: ಆದಿಪು, ೮. ೬೦ ವ); [ನಾ] ವೃತ್ತಭೇದಗ¼ನ್ನು ವಿವರಿಸುವ ಶಾಸ್ತ್ರ (ಅಂತು ಪಂಚಾಂಗವ್ಯಾಕರಣದೊಳಂ ವೃತ್ತಭೇದಮಪ್ಪ ಛಂದೋವಿಚಿತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪ ಅಲಂಕಾರದೊಳಂ: ಪಂಪಭಾ, ೨. ೩೪ ವ)

ಛಂದೋವಿದ್ಯಾ

[ನಾ] ಛಂದಶ್ಶಾಸ್ತ್ರ (ಛಂದೋವಿದ್ಯಾಳಂಕಾರ ಪದವಿಚಾರ ಕಾವ್ಯ ಗೀತ ನೃತ್ಯ ಆತೋದ್ಯಾದಿ ಗೋಷ್ಠಿಗಳೊಳಂ: ಆದಿಪು, ೮. ೩ ವ)

ಛದ್ಮಸ್ಥಗುಣಸ್ಥಾನ

[ನಾ] [ಜೈನ] ಜ್ಞಾನಾವರಣ ಮತ್ತು ದರ್ಶನಾವರಣಗಳು ಛದ್ಮ, ಅದರಲ್ಲಿರುವವರು ಛದ್ಮಸ್ಥ; ೪ ರಿಂದ ೧೦ ಗುಣಸ್ಥಾನವರೆಗಿನವರು ಸರಾಗಛದ್ಮಸ್ಥರು, ೧೦ ರಿಂದ ೧೨ ರವರೆಗಿನವರು ವೀತರಾಗಛದ್ಮಸ್ಥರು (ವೀತರಾಗಛದ್ಮಸ್ಥಗುಣಸ್ಥಾನಂ ಏಕತ್ವವಿತರ್ಕವಿಚಾರಾಭಿಧಾನ ಪರಿಣತಂ ಅಪರಿಮಿತಪ್ರದೇಶನಿರ್ಜರಾದಿ ಕ್ರಿಯಾಕಳಾಫಂ: ಆದಿಪು, ೧೦. ೧೪ ವ)

ಛನ್ನ

[ಗು] ಆವರಿಸಿದ (ಉನ್ನತ ಧವಳಚ್ಛತ್ರಚ್ಛನ್ನ ವಿಯತ್ತಳನಂ ಇಂದುಕುಳತಿಳಕನಂ ಇಂತು ಅನ್ನೆಯದಿಂದ ಈ ಪೞುವಿನೊಳ್ ಎನ್ನರಸನಂ ಇಂತು ಬಿದಿಯೆ ತಂದಿಕ್ಕುವುದೇ: ಪಂಪಭಾ, ೨. ೨೨)

ಛವಿ

[ನಾ] ಚರ್ಮ (ಅಪ್ರಿಣಾಕ ಭಾವಿಳಶ್ಲಿಸ್ಥಿತಚಳನುಂ ಶ್ಲಕ್ಷ್ಣ ಸ್ನಿಗ್ಧ ಮೃದು ಬಹಳಚ್ಛವಿಯುಂ ಬಂಧು ಜೀವ ಶಾಕ ಪುಷ್ಟ ಸಪದ್ಮಮಹಾರಜಶಂಖಾಸತಳವೆಂಬ ಸಪ್ತದ್ವಾಸ್ಥಿತನುಂ: ಆದಿಪು, ೧೨. ೫೬ ವ); [ನಾ] ಕಾಂತಿ (ತನ್ನೊಳಗಣ ಪನ್ನಗನಂ ಮುಂ ನೀಂ ಪಿಡಿದು ಒಗೆಯೆ ಕಾಯಲಾಱದೆ ಪಿರಿದುಂ ಬನ್ನದ ಕರ್ಪೆಸೆದುದು ತೊಱೆಗೆ ಇನ್ನುಂ ಹರಗಳ ತಮಾಳ ನೀಳಚ್ಛವಿಯಿಂ: ಪಂಪಭಾ, ೫. ೫೪)

ಛಾಯ

[ನಾ] ಕಾಂತಿ (ತಪ್ತತಪನೀಯಚ್ಛಾಯನುಂ ಸಪ್ತಹಸ್ತೋಚ್ಛ್ರಯನುಂ ನಿದ್ರಾಲಸ ಅಕ್ಷಿನಿಮೇಷ ಜರಾ ಶೋಕ ವಿಷಾದ ವಿರಹಿತನುಂ: ಆದಿಪು, ೬. ೬೯ ವ)

ಛಾಯಾಟೋಪ

[ನಾ] ಬಣ್ಣದ ವೈಭವ (ದಳಿತ ಕಮಲಚ್ಛಾಯಾಟೋಪಂ ಮನೋಜರಸ ಪ್ರಭಾವಳಯ ನಿಳಯಂ ಪ್ರೋದ್ಯತ್ ಭ್ರೂವಿಭ್ರಮಂ: ಪಂಪಭಾ, ೪. ೭೭)

ಛಾಯಾಲಕ್ಷ್ಯ

[ನಾ] ಪ್ರತಿಬಿಂಬವನ್ನು ನೋಡಿ ಹೊಡೆಯಬೇಕಾದ ಗುರಿ (ಛಾಯಾಲಕ್ಷ್ಯಮನೊಡ್ಡಿಯುಂ ಆಯದ ನೀರೊಳಗೆ ತನ್ನನಡಸಿದ ನೆಗೞಂ ಬಾಯೞಿವಿನಂ ಇಸಿಸಿಯುಂ ಅರೆ ಹೋಯಜ ಬಾಪ್ಪೆಂದು ಹರಿಗನಂ ಗುರು ಪೊಗೞೆ ಪಂಪಭಾ, ೨. ೬೦)

ಛಾಯೆ

[ನಾ] ಕಾಂತಿ (ಉನ್ಮಿಷತ್ ರತ್ನ ಹಟಚ್ಛಾಯೆಯೊಳೆ ಮುಸುಕಿ ದೇಹಚ್ಛಾಯೆಯುಮಂ ಪುದಿಯೆ ರತ್ನತರುವನೆ ಪೋಲ್ತಂ: ಆದಿಪು, ೪. ೪೦)

ಛಿದ್ರ

[ನಾ] ತೂತು, ರಂಧ್ರ (ದಿವ್ಯಾಸ್ತ್ರಂಗಳಿಂ ನೂಱುಯೋಜನದ ಅಳವಿಯ ಖಾಂಡವವನಮೆಲ್ಲಮಂ ತಟ್ಟಿ ಮೆಡಱಿ ಮಶಕಮಾತ್ರಮಪ್ಪೊಡಂ ಮಿಸುಕಲ್ ಛಿದ್ರಮಿಲ್ಲದಂತಾಗೆ: ಪಂಪಭಾ, ೫. ೯೬ ವ)

ಛಿದ್ರಿಸು

[ಕ್ರಿ] ನಾಶಮಾಡು (ರಸದಾನಾದಿಗಳೊಳ್ ಛಿದ್ರಿಸುವಮಪ್ಪೊಡೆ ಅವರ್ ಆಪ್ತವಂತರುಂ ಬುದ್ಧಿವಂತರುಂ ಆಗಿ ನೆಗೞ್ದರ್ ಇನ್ನಾವ ಮಾೞ್ಕೆಯೊಳ್ ಪಗೆಯಂ ಕೆಯ್ಗೆ ಮಾಡುವುದು ಪೇೞಿಂ: ಪಂಪಭಾ, ೬. ೬೭ ವ); [ರಹಸ್ಯ] [ಕ್ರಿ] ಭೇದಿಸು (ಒಂದು ದಿವಸಂ ದುರ್ಯೋಧನನ ಮಯ್ದುನಂ ಸಿಂಧುದೇಶಾಧೀಶ್ವರಂ ಸೈಂಧವಂ ಅವರಂ ಛಿದ್ರಿಸಲೆಂದು ಮೆಯ್ಗರೆದು ಬಂದು: ಪಂಪಭಾ, ೭. ೩೦ ವ)

ಛುರಿತ

[ಗು] ಬೆರೆತ, ಸೇರಿದ (ಪರಿವಿರಚಿತ ಚಿತ್ರಾಂಬರವಿತಾನ ಚ್ಛಾಯಾಚ್ಛುರಿತರಂಗಭೂಮಿಯೊಳ್: ಆದಿಪು, ೮. ೬೭ ವ)

ಛೇದ

[ನಾ] ಕತ್ತರಿಸುವುದು (ಧರ್ಮದ್ರುಚ್ಛೇದಪರಶುಧಾರೆಯುಂ ವಿಷಯವಿಷದ್ರುಮಕಂದಳಿಯುಂ: ಆದಿಪು, ೧೪. ೧೨೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App