भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891314Next >

ಚಕ್ಕಣ

[ನಾ] ಚಾಕಣ, ಮದ್ಯಪಾನದಲ್ಲಿ ನಂಜಿಕೊಳ್ಳುವ [ಖಾರವಾದ] ತಿಂಡಿ (ಗೇಯದೊಳ್ ಈಕೆ ಸೊರ್ಕನಿಕ್ಕಿದಳೆನೆ ಕಳ್ಗೆ ಚಕ್ಕಣಮೆನಿಪ್ಪುದು: ಪಂಪಭಾ, ೭. ೯೦)

ಚಕ್ಕುಚಕ್ಕನೆ

[ಅ] ಚಕ್ ಚಕ್ ಎಂದು (ನಿಶಾತಶರಾಳಿಗಳ್ ಎಯ್ದೆ ಚಕ್ಕುಚಕ್ಕನೆ ಕೊಳೆ ಮೊಕ್ಕುಮೊಕ್ಕೆನೆ ಶಿರಂಗಳುರುಳ್ದುವು ವೈರಿಭೂಪರಾ: ಪಂಪಭಾ, ೧೨. ೧೧೯)

ಚಕ್ಕುಮೊಕ್

[ಅ] ಚಕ್ ಮೊಕ್ ಎಂದು (ಬೇವ ಶವಸಂಘಾತಂಗಳಂ ಚಕ್ಕುಮೊಕ್ಕೆಂದು ಆಗಳ್ ಕಡಿದು ಉಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂಬಂದಂ: ಪಂಪಭಾ, ೧೩. ೭೧)

ಚಕ್ರ

[ನಾ] ಸೈನ್ಯ (ಚತುರಂಗ ಚಕ್ರಪಾಂಸುಪಟಲದಿಂದಂ ದಿಙ್ಮುಖಂಗಳುಂ ವಿರೋಧಿನರಪಾಳಯ ಪ್ರಿಯಸಖೀ ಮುಖಂಗಳುಂ ವಿಚ್ಛಾಯಂಗಳಾಗೆಯುಂ: ಆದಿಪು, ೧೩. ೭೭ ವ); [ನಾ] ಚಕ್ರವರ್ತಿಯ ಚಕ್ರ (ಹತವೈರಿಕ್ಷತ್ರಚಕ್ರಂ ಭಯಚಕಿತ ಜಗದ್ವೀರಚಕ್ರಂ ವಿನಮ್ರಕ್ಷಿತಿಚಕ್ರಂ: ಆದಿಪು, ೧೪. ೩); [ನಾ] ಒಂದು ಆಯುಧ (ಅನೇಕಾಕ್ಷರಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಂ: ಪಂಪಭಾ, ೨. ೩೪ ವ); [ನಾ] ಸುದರ್ಶನಚಕ್ರ (ಪಿಡಿಯೆಂ ಚಕ್ರಮನೆಂಬ ಚಕ್ರಿಯಂ ಇಳಾಚಕ್ರಂ ಭಯಂಗೊಳ್ವಿನಂ ಪಿಡಿಯಿಪ್ಪೆಂ ಕರಚಕ್ರಮಂ: ಪಂಪಭಾ, ೧೦. ೨೫); [ನಾ] ಸಮೂಹ (ತದ್ರಾಜಚಕ್ರಂ ಪೊದಳ್ದರ್ಬಿಸಿದತ್ತು ಉದ್ದಾಮ ಮೌರ್ವೀರವಮುಖರ ಮಹಾಚಾಪ ಚಕ್ರಾಂಧಕಾರಂ: ಪಂಪಭಾ, ೧೨. ೨೦); [ನಾ] ಗಾಲಿ (ಭೀಕರ ರಥಚಕ್ರಮಂ ಪಿಡಿದು ನುಂಗಿದಳೊರ್ಮೆಯೆ ಧಾತ್ರಿ ಕೋಪದಿಂ: ಪಂಪಭಾ, ೧೨. ೨೦೬)

ಚಕ್ರಧರ

[ನಾ] ಚಕ್ರವನ್ನು ಧರಿಸಿದವನು, ಶ್ರೀಕೃಷ್ಣ (ಸಾರವಸ್ತುಗಳಿಂ ನೆಱೆದ ಅಂಭೋರಾಶಿಯೆ ಕಾದಿಗೆ ಕಾವನುಂ ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ: ಪಂಪಭಾ, ೪. ೩೨); [ನಾ] ಚಕ್ರವರ್ತಿ (ಚಕ್ರಧರನಧರಕಸಲಯದ ಮೇಲೆ ದಂತಕಾಂತಿ ಲತಾಂತಪ್ರಭೆಗಳ್ ಪಸರಿಸೆ: ಆದಿಪು, ೪. ೨೬ ವ)

ಚಕ್ರನೇಮಿ

[ನಾ] ಚಕ್ರದ ಸುತ್ತುಪಟ್ಟೆ (ಚಟುಳಿತ ಚಕ್ರನೇಮಿ ಪರಿವರ್ತನಘಟ್ಟನಘಾತನಿರ್ಭರ ಸ್ಫುಟಿತ ಧರಾತಳಂ: ಪಂಪಭಾ, ೧೧. ೧೪೭)

ಚಕ್ರಪಾಣಿ

[ನಾ] ಕೈಯಲ್ಲಿ ಚಕ್ರವನ್ನುಳ್ಳವನು, ಶ್ರೀ ಕೃಷ್ಣ (ತನ್ನಿಱಿದು ಗೆಲ್ದ ಕೊಳುಗುಳವಂ ನೋಡಲ್ ಚಕ್ರಪಾಣಿಯುಂ ತನ್ನ ಸಹೋತ್ಪನ್ನರುಂ ಒಡವರೆ: ಪಂಪಭಾ, ೧೪. ೨)

ಚಕ್ರರಕ್ಷಕ

[ನಾ] ರಥದ ಚಕ್ರದ ಉಸ್ತುವಾರಿ ಹೊತ್ತವನು (ಮದ್ರರಾಜಂ ಪನ್ನಿರ್ಛಾಸಿರ ಆನೆವೆರಸು ನೃಪನ ಚಕ್ರರಕ್ಷಕಂ ನೀಳಂ ಎಡೆಗೊಂಡು ತಾಗಿದನಾಗಳ್: ಪಂಪಭಾ, ೧೦. ೧೦೮ ವ)

ಚಕ್ರರತ್ನ

[ನಾ] [ಜೈನ] ಚಕ್ರವರ್ತಿಯಾಗುವವನ ಆಯುಧಾಗಾರದಲ್ಲಿ ಹುಟ್ಟುವ ಚಕ್ರಾಯುಧ (ನೆಲನಾಕಾಶಂ ದಿಶಾಮಂಡಲಮೆನಿತನಿತುಂ .. .. ಪರ್ವುವುದನಿದುವೆ ಪೇೞ್ದಪುದೆಂಬಂತೆ .. .. ಬೆಳಗಿದುದು ದಿಶಾಚಕ್ರಮಂ ಚಕ್ರರತ್ನಂ: ಆದಿಪು, ೧೧. ೨)

ಚಕ್ರಲಾಭ

[ನಾ] [ಜೈನ] ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು, ಚಕ್ರರತ್ನವು ದೊರೆಯುವುದು (ಚಕ್ರಲಾಭ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಚಕ್ರವಾಕ

[ನಾ] ಸದಾ ಜೊತೆಯಾಗಿರುವ [ರಾತ್ರಿಯಲ್ಲಿ ಬೇರೆಯಾಗಿ ವಿರಹ ಅನುಭವಿಸುವ] ಕಲ್ಪನೆಯ ಜೋಡಿಹಕ್ಕಿ (ಚೆಲ್ವುವೆತ್ತಿದು ಉದಯಂ ಅಂದು ಪದ್ಮಿನೀಚಕ್ರವಾಳ ಚಕ್ರವಾಕಚಕ್ರ ಚಕ್ರವರ್ತಿಯಾ: ಆದಿಪು, ೧೨. ೫೫)

ಚಕ್ರವಾಕಚಕ್ರವರ್ತಿ

[ನಾ] ಚಕ್ರವಾಕಗಳ ದೊರೆ, ಸೂರ್ಯ (ಚೆಲ್ವುವೆತ್ತುದು ಉದಯಮಂದು ಪದ್ಮಿನೀಚಕ್ರವಾಳ ಚಕ್ರವಾಕಚಕ್ರವರ್ತಿಯಾ: ಆದಿಪು, ೧೨. ೫೫)

ಚಕ್ರವಾಕವಧು

[ನಾ] ಹೆಣ್ಣು ಚಕ್ರವಾಕ (ಕೊಡೆಯೆಲೆಗಳ ತಿಂತಿಣಿಯಿಟ್ಟೆಡೆಗಳ ಕೞ್ತಲೆಯನಿರುಳೆ ಗೆತ್ತು ಆತ್ಮೇಶಂ ತಡೆದೊಡೆ ನರೇಂದ್ರ ನೋಡೀ ನಡುವಗಲೊಳ್ ಚಕ್ರವಾಕವಧು ವಿರಹಿಸುವಳ್: ಆದಿಪು, ೧೧. ೬೩)

ಚಕ್ರವಾಳ

[ನಾ] ಮಂಡಲ, ಸುತ್ತುವಲಯ (ಚೆಲ್ವುವೆತ್ತುದು ಉದಯಮಂದು ಪದ್ಮಿನೀಚಕ್ರವಾಳ ಚಕ್ರವಾಕಚಕ್ರವರ್ತಿಯಾ: ಆದಿಪು, ೧೨. ೫೫;

ಚಕ್ರವಾಳರುಚಿ

[ನಾ] ಸಮೂಹ ಕಾಂತಿ (ಸಂಚಾರಿತಮೇಚಕಾಚಳ ಚಕ್ರವಾಳರುಚಿ ಹರಿಕರಟಿಘಟಾಪ್ರಪಂಚರಾಗಕೇತನ ಚಂಚಳಾಂಚಳನಿಚಯದಿಂದಂ: ಆದಿಪು, ೧೩. ೭೭ ವ)

ಚಕ್ರವ್ಯೂಹ

[ನಾ] ಒಂದು ಬಗೆಯ ಸೇನಾವ್ಯೂಹ (ಇದು ಚಕ್ರವ್ಯೂಹಂ ಈ ವ್ಯೂಹಮಂ ಒಡೆವ ಅದಟಂ ಪಾರ್ಥನಂತೆ ಆತನುಂ ಗೆಂಟಿದಂ ಎಮ್ಮೀ ನಾಲ್ವರುಂ ಭೇದಿಸಲಱಿಯೆವು ಇದಂ: ಪಂಪಭಾ, ೧೧. ೮೭)

ಚಕ್ರಾಭಿಷೇಕ

[ನಾ] [ಜೈನ] ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು, ಎಲ್ಲ ರಾಜರಿಂದ ಪೂಜಿತನಾಗಿ ಪುನಃ ಚಕ್ರದ ಅಭಿಷೇಕ ಮಾಡುವುದು (ಚಕ್ರಾಭಿಷೇಕ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಚಕ್ರಾಹ್ವ

[ನಾ] ಚಕ್ರವಾಕಗಳ ಜೋಡಿ (ಇಂದ್ರಿಯಸುಖಾರ್ಥಿ ಸಂಸಾರಗುಹಾಗಹ್ವರದೊಳಗೆ ಇರುಳಿನ ಚಕ್ರಾಹ್ವದವೊಲ್ ಮಱಗದೇಂ ಸುಖಂಬಡೆದಪನೇ: ಆದಿಪು, ೩. ೬೮)

ಚಕ್ರಿ

[ನಾ] ಚಕ್ರವರ್ತಿ (ಜಗದ ಬಡತನಮನೊರ್ಮೆಯೆ ಬಗೆದಂತಿರೆ ಕಿಡಿಪ ಚಕ್ರಿ ತನ್ನಿರ್ದೆಡೆಯೊಳ್ ನೆಗೞ್ದ ಬಡತನಮನದೇಕೆ ಗಡಂ ಸೈರಿಸುವನೆನೆ ಪೊದಳ್ದುದು ಮಧ್ಯಂ: ಆದಿಪು, ೮. ೩೧); [ನಾ] ಕೃಷ್ಣ (ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು: ಪಂಪಭಾ, ೫. ೧೯ ವ);

ಚಕ್ರಿಕಾವರ್ತಿ

[ನಾ] ಚಕ್ರದಂತೆ ಸುತ್ತುವ ಶೀಲವುಳ್ಳವನು, ಕೃತ್ರಿಮೋಪಾಯವುಳ್ಳವನು (ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದ ಆ ವನಾಂತರಾಳಕ್ಕೆ ಒರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮಂ ಪತ್ತುವಿಟ್ಟು ನುಡಿದು: ಪಂಪಭಾ, ೫. ೧೯ ವ)
< previous1234567891314Next >

Search Dictionaries

Loading Results

Follow Us :   
  Download Bharatavani App
  Bharatavani Windows App