Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಘಾಟ
[ನಾ] [ಆನೆಯ] ಹೆಕ್ಕತ್ತು (ಅಲ್ಪಘಾಟನುಂ ಉನ್ನತಶಿಖನುಂ ಪೀನಮಾಂಸಕಟಶ್ಲಿಷ್ಟನುಂ ಅತಿದೀರ್ಘಸ್ನಿಗ್ಧಕೃಷ್ಣವದನನುಂ: ಆದಿಪು, ೧೨. ೫೬ ವ)
ಘಾತ
[ನಾ] ಹೊಡೆತದ ಪರಿ (ಪಾತಂ ಲಕ್ಷ್ಯಂ ಶೀಘ್ರಂ ಘಾತಂ ಬಹುವೇಗಂ ಎಂಬಿವಯ್ದೇಸಿನೊಳಂ ಅಂತು ಈತನ ದೊರೆಯಲ್ಲ: ಪಂಪಭಾ, ೧೨. ೧೮೫)
ಘಾತಿ
[ನಾ] [ಜೈನ] ಘಾತಿಕರ್ಮ, ಆತ್ಮನ ಗುಣಕ್ಕೆ ಘಾತಕವಾದ ಕರ್ಮ; ಸತ್ಕಾರ್ಯ ಪ್ರವೃತ್ತಿ ಮುಂತಾದ ಉತ್ತಮಗುಣಗಳನ್ನು ಹಾಳುಮಾಡಿ ಆತ್ಮನ ಪರಿಪೂರ್ಣತೆಗೆ ಬಂಧಕವಾದ ಜ್ಞಾನಾವರಣೀಯವೇ ಮೊದಲಾದ ನಾಲ್ಕು ಬಗೆಯ ಕರ್ಮ (ಅಕ್ಷಯಪುಣ್ಯಂ ಉಗ್ರತಪಮೆಂಬುಗ್ರಾಸಿಯಿಂ ಕೂಡೆ ಘಾತಿಗಳಂ ಘಾತಿಸಿ: ಆದಿಪು, ೩. ೮೦)
ಘಾತಿಸು
[ಕ್ರಿ] ನಾಶಮಾಡು (ಅಕ್ಷಯಪುಣ್ಯಂ ಉಗ್ರತಪಮೆಂಬುಗ್ರಾಸಿಯಿಂ ಕೂಡೆ ಘಾತಿಗಳಂ ಘಾತಿಸಿ: ಆದಿಪು, ೩. ೮೦)
ಘುಮ್ಮೆಂಬಡವಿ
[ನಾ] ಘುಮ್ ಎಂಬ ಅಡವಿ, ಬಿಗಿದುಕೊಂಡ ಕಾಡು (ನಿನ್ನಿರವಂ ನೀಂ ಮರುಳೆ ಬಗೆಯದಂತುಂ ಘುಮ್ಮೆಂಬಡವಿಯೊಳಡಂಗಿ ಚಿಂತಿಸುತಿರ್ಪಾ: ಪಂಪಭಾ, ೭. ೫೦)
ಘುಳುಮ್ಮನೆ
[ಅ] [ಅನುಕರಣ ಪದ] ದುಡುಂ ಎಂದು (ಧರ್ಮಕೃತಿದ್ರೋಹನುಂ ಖಳನುಂ ಕಳ್ಳುಣಿಯುಂ ಘುಳುಮ್ಮನಿೞಿವಂ ಶ್ವಭ್ರಾಂತಮಂ ತಾಪಿನಂ: ಆದಿಪು, ೫. ೮೧)
ಘೂರ್ಜರ
[ನಾ] ಗುಜ್ಜರ ದೇಶ (ವಿಜಯಾರಂಭ ಪುರಸ್ಸರ ವಿಜಯ ಗಜಂಗಳನೆ ಪಿಡಿದು ಘೂರ್ಜರ ರಾಜಧ್ವಜಿನಿಯನಿಱಿದೋಡಿಸಿ ಭುಜವಿಜಯದೆ ವಿಜಯಮನಿಳಿಸಿದಂ ನರಸಿಂಹಂ: ಪಂಪಭಾ, ೧. ೩೬
ಘೂರ್ಣಮಾನ
[ಗು] ಮೊರೆಯುವ (ಘೂರ್ಣಮಾನ ಅರ್ಣವಘೋಷಮಂ ಗೆಲ್ದು ಹರ್ಷದಿಂ ಪೆರ್ಚುವಂತೆ ಪೆರ್ಚೆ: ಆದಿಪು, ೧೩. ೪೨ ವ)
ಘೂರ್ಣಿಸು
[ಕ್ರಿ] [ಕ್ಷೋಭೆಯಿಂದ] ಭೋರ್ಗರೆ (ಬಾಹುಮಂದರದಿಂ ವೈರಿಬಲಾಬ್ಧಿ ಘೂರ್ಣಿಸೆ ಬಿಗುರ್ತೀ ಕೌರವರ್ ಕೂಡೆ ನೂರ್ವರುಮಂ ಕೊಲ್ವೆಂ ಇದೆನ್ನ ಪೂಣ್ಕೆ: ಪಂಪಭಾ, ೭. ೧೫); [ಕ್ರಿ] ಶಬ್ದಮಾಡು (ವನಧಿಪ್ರಧ್ವಾನದಿಂ ಮಂಗಳಪಟಹರವಂ ಪೆರ್ಚೆ ಮಾಂಗಲ್ಯಗೇಯಧ್ವನಿಯಿಂದೆ ಆಶಾಂತರಂ ಘೂರ್ಣಿಸಿ ಸೊಗಯಿಸೆ: ಪಂಪಭಾ, ೧೪. ೧೮)
ಘೃತ
[ನಾ] ತುಪ್ಪ (ಅರಗು ಮೊದಲಾಗೆ ಧೃತ ಸಜ್ಜರಸಂ ಬೆಲ್ಲಂ ಸಣಂಬಿವೆಂಬಿವಱಿಂ ವಿಸ್ತರಿಸಿ ಸಮೆದ ಇಂದ್ರಭವನಮೆ ಧರೆಗವತರಿಸಿರ್ದುದೆನಿಸುವ ಅರಗಿನ ಮನೆಯಂ: ಪಂಪಭಾ, ೩. ೩)
ಘೃತಘಟವಿಘಟನ
[ನಾ] ತುಪ್ಪದ ಕೊಡವನ್ನು ಒಡೆದುಕೊಂಡು ಬಂದವನಾಗಿ (ಅಂತು ನೂರ್ವರೊಳ್ ಒರ್ವನ ಅಗುರ್ಬು ಪರ್ಬಿ ಪರಕಲಿಸೆ ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನನುಮಾಗಿ ಪುಟ್ಟುವುದುಂ: ಪಂಪಭಾ, ೧. ೧೩೧ ವ)
ಘೃತಪೂರ
[ನಾ] ತುಪ್ಪದ ಪೂರಿ (ಮೃದುರಸನಾ ಸಮ್ಮರ್ದನಮಾತ್ರ ದ್ರಾವಣಿಯ ಘೃತಪೂರಮುಮಂ: ಆದಿಪು, ೧೧. ೨೬ ವ)
ಘೋಷಾಕರ
[ನಾ] ಕಣಜ (ಘೋಷಾಕರ ಸಂಗ್ರಹಾಕರ ಗೋವ್ರಜಂಗಳುಮಂ: ಅದಿಪು, ೮. ೬೩ ವ)
ಘೋಷಿಸು
[ಕ್ರಿ] ಸಾರಿ ಹೇಳು (ಆನಂದಭೇರಿಯಂ ಪೊಯ್ಸಿ ಘೋಷಿಸಲ್ವೇೞ್ದು: ಆದಿಪು, ೧೪. ೧೦೪ ವ)
ಘೋೞಯಿಲ
[ನಾ] ಕುದುರೆ ಸವಾರ, ರಾವುತ (ಘೋೞಯಿಲರ್ ತಗುಳ್ದು ತತ್ತಱ ತಱಿದಿಕ್ಕಿ ದೇಗುಲಕೆ ಪೆರ್ಮರನಂ ಕಡಿವಂತೆ ಮಾಡಿದರ್: ಪಂಪಭಾ, ೮. ೯೫)
ಘೋೞಾಯ್ಲ