भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891718Next >

ಗಗನ

[ನಾ] ಆಕಾಶ (ಗೋಕರ್ಣನಾಥನಂ ಗೌರೀನಾಥನಂ ಅವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರೈಲೋಕ್ಯಸಂಗೀತಕೀರ್ತಿಯಂ ಕಂಡು: ಪಂಪಭಾ, ೪. ೨೬ ವ)

ಗಗನಗಂಗಾ

[ನಾ] ಆಕಾಶಗಂಗೆ, ದೇವನದಿ (ಗಗನಗಂಗಾ ಶೀಕರನಿಕರಂಗಳಿಂದಂ ಆನಂದನಯನಜಲಂಗಳಂ ಸೂಸುವಂತೆ ದಿವ್ಯಾನಿಳಂ ತೀಡೆ: ಆದಿಪು, ೭. ೩೬ ವ)

ಗಗನಗಜ

[ನಾ] ಆಕಾಶದ ಆನೆ, ಐರಾವತ (ಗಗನಗಜಕ್ಕಿಕ್ಕಿದ ಪೊನ್ನ ಗಂಟೆಯೆರಡೆನಲುಂ ಅಂಬರಾಂಭೋನಿಧಿಯೊಳ್ ನೆಗೆದುರಿವೌರ್ವಾನಳನುರ್ಬುಗಳೆನಲುಂ: ಆದಿಪು, ೬. ೫೨)

ಗಗನಗಮನಜನಿತಶ್ರಮ

[ನಾ] ಆಕಾಶಪ್ರಯಾಣದಿಂದಾದ ಆಯಾಸ (ಬಳ್ಳಿಗಾವಣಂಗಳೊಳಂ ನನೆಯ ಜೊಂಪಗಳೊಳಂ ಗಗನಗಮನಜನಿತಶ್ರಮಮಂ ಆಱಿಸಿ: ಪಂಪಭಾ, ೭. ೮೧ ವ)

ಗಗನಗಾಮಿನೀವಿದ್ಯೆ

[ನಾ] ಆಕಾಶದಲ್ಲಿ ಹಾರುವ ವಿದ್ಯೆ (ನೀನೆನ್ನಂ ನಿನ್ನ ಗಗನಗಾಮಿನೀವಿದ್ಯೆಯಿಂ ಉತ್ತರ ಕುರುವನೆಯ್ದಿಸು: ಆದಿಪು, ೨. ೧೪ ವ)

ಗಗನಚಾರಣ

[ನಾ] [ಜೈನ] ಆಕಾಶದಲ್ಲಿ ಸಂಚರಿಸುವ ಋಷಿದ್ವಯ (ಧರ್ಮವರ ಸಾಗರಸೇನರೆಂಬ ಗಗನಚಾರಣರ್ ಕಾಂತಾರಚರ್ಯಾ ಮಾರ್ಗದೊಳ್ ತಮ್ಮ ವಾಸಕ್ಕೆ ಬರ್ಪರಂ ಶ್ರೀಮತಿಯುಂ ತಾನುಂ ಕಂಡು: ಆದಿಪು, ೪. ೯೫ ವ)

ಗಗನತಳ

[ನಾ] ಬಾಂದಳ, ಅಂತರಿಕ್ಷ (ಗಗನತಳಮೆ ಪಱಿದು ಬಿೞ್ದುದೆನಿಪ ಬಹುತಟಾಕದಿಂ ಕುಕಿಲ್ವ ನಲಿವ ಕೋಕದಿಂ: ಪಂಪಭಾ, ೧. ೫೮)

ಗಗನಪ್ರಚಾರ

[ನಾ] [ಜೈನ] ಆಕಾಶ ಸಂಚಾರ (ಅನ್ವಿತಚತುರಾನನತ್ವಂ ಅಖಿಳಾಗಮವಿತ್ತ್ವಂ ಅಪಕ್ಷ್ಮತಾಸಂ ಆಯತಗಗನಪ್ರಚಾರಂ ಅಪಜೀವವಧಂ ಪರಿವೀತ ದೇಹಬಿಂಬತೆ: ಆದಿಪು, ೧೦. ೪೩)

ಗಗನಮಂಡಲ

[ನಾ] ಆಕಾಶ ಪ್ರದೇಶ (ಎರಡುಂ ಬಲದ ಕಡುವಿಲ್ಲರ್ ಭೋರ್ಗರೆದು ಇಸೆ ಕೂರ್ಗಣೆಯೊಳ್ ಪಂದರ್ ಇಕ್ಕಿದಂತಾಯ್ತು ಗಗನಮಂಡಲಮೆಲ್ಲಂ: ಪಂಪಭಾ, ೧. ೭೨)

ಗಗನಾಭೋಗ

[ನಾ] ಆಕಾಶದ ವಿಸ್ತಾರ (ಗಗನಾಭೋಗಮಂ ಎಯ್ದೆ ನೀಳ್ದ ಮಣಿಕೂಟಾಟೋಪಮೆಂಬಂತೆ ದಿಟ್ಟಿಗೆ ಮುನ್ನಂ ಬರೆ: ಆದಿಪು, ೧೩. ೧೦)

ಗಂಗಾಂಗನೆ

[ನಾ] ಗಂಗಾದೇವಿ (ಅಂದು ಭೋಂಕನೆ ಕಂಡಂ ಗಂಗಾಂಗನೆಯಂ ಕಾಣ್ಬವೊಲ್ ಅಂಗನೃಪಂ ಮುಂದೆ ನಿಂದ ಕೊಂತಿಯನಾಗಳ್: ಪಂಪಭಾ, ೯. ೭೩)

ಗಂಗಾಜಾತ

[ನಾ] ಭೀಷ್ಮ (ಶ್ವೇತನ ಗಂಗಾಜಾತನ ಮಾತನೆ ಪಾರ್ದು ಎರಡು ಒಡ್ಡಣಂ ಕಾದಲ್ಕೆಂದೀ ತೆಱದಿನೊಡ್ಡಿ ನಿಂದುವು ಭೂತಳಮಳ್ಳಾಡೆ ಕೆಸಱ ಕಡಿತದ ತೆಱದಿಂ: ಪಂಪಭಾ, ೧೦. ೫೩)

ಗಂಗಾತ್ಮಜನ್ಮ

[ನಾ] ಗಂಗೆಯ ಮಗ, ಭೀಷ್ಮ (ಭುಜ ವೀರ್ಯ ವಿಕ್ರಮಯುತಂ ಗಂಗಾತ್ಮಜನ್ಮಂ ಜಯಶ್ರೀಲೋಲಂ ಜಮದಗ್ನಿ ರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ: ಪಂಪಭಾ, ೧. ೬೮)

ಗಂಗಾವಾರಿ

[ನಾ] ಗಂಗೆಯ ನೀರು (ಅಂತು ಚಾಗಂಗೆಯ್ದು ಜಗನ್ಮಂಗಳಗಂಗಾವಾರಿಯೊಳ್ ಅನಿವಾರಿತಪರಾಕ್ರಮಂ ಅಘಮರ್ಷಣಪೂರ್ವಕಂ ಮಿಂದು: ಪಂಪಭಾ, ೯. ೭೨ ವ)

ಗಂಗಾಸುತ

[ನಾ] ಗಂಗೆಯ ಮಗ, ಭೀಷ್ಮ (ಆರೂಢ ಸಮರರಸನುಂ ಉಪಾರೂಢಕನಕರಥನುಂ ಆಗಿ ಕೈಲಾಸವಾಸಿಗೆ ಪೊಡೆವಟ್ಟು ಬಿಲ್ಲಂ ಕೊಂಡು ಗಂಗಾಸುತಂಗೆ ಅದಿರದೆ ಇದಿರ್ಚಿ ನಿಂದಾಗಳ್: ಪಂಪಭಾ, ೧೦. ೫೨ ವ)

ಗಂಗೆಗಟ್ಟು

[ಕ್ರಿ] [ಗಂಗೆಗೆ+ಅಟ್ಟು] ವಿಸರ್ಜನೆಮಾಡಲು ಗಂಗಾನದಿಗೆ ಕಳಿಸು (ನಟ್ಟುಡಿದ ಬಾಳ ಕಕ್ಕಕಡೆಯುಡಿಗಳುಮಂ ಅಯಸ್ಕಾಂತಮಂ ತೋಱಿ ತೆಗೆಯಿಸುತ್ತುಂ ವಜ್ರಮುಷ್ಟಿಯ ಪೊಯ್ಲೊಳಂ ಬಾಳ ಕೋಳೊಳಮುಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ: ಪಂಪಭಾ, ೧೧. ೨ ವ)

ಗಂಗೆಯ ಪೆರ್ಮಗ

[ನಾ] ಭೀಷ್ಮ (ಗಂಗೆಯ ಪೆರ್ಮಗಂಗೆ ಘಟಸಂಭೂತಂಗೆ ಕರ್ಣಂಗೆ ಅಸಾಧ್ಯನೊಳ್ ಆ ಗಾಂಡಿವಿಯೊಳ್ ಕಱುತ್ತಿಱಿವರಾರ್: ಪಂಪಭಾ, ೧೩. ೯)

ಗಗ್ಗರಿಕೆ

[ನಾ] ಗದ್ಗದ ಸ್ವರ (ಒದವಿ ತಗುಳ್ದ ಗಗ್ಗರಿಕೆ ಸೂಸುವ ಕಣ್ಬನಿ ಕಣ್ಗಳೊಳ್ ಕಲಂಕಿದ ಬೆಳರ್ಗೆಂಪು ಕಣ್ಗೆ ವರೆ: ಆದಿಪು, ೧೨. ೨೫)

ಗಗ್ಗರಿಕೆಗೊಳ್

[ಕ್ರಿ] ಗದ್ಗದಗೊಳ್ಳು (ಎಂದು ಗಗ್ಗರಿಕೆಗೊಳ್ವ ಸರಮಂ ಕರ್ಣಪರಂಪರೆಯಿಂ ಕೇಳ್ದು ಸಿಂಹಬಲನ ಒಡವುಟ್ಟಿದರ್ ನೂರ್ವರ್ ಕೀಚಕರುಂ ಪರಿತಂದು ಮುಳಿಸಿನೊಳ್: ಪಂಪಭಾ, ೮. ೭೯ ವ)

ಗಜಘಟಾವಿಘಟನ

[ನಾ] ಆನೆಗಳ ಸೈನ್ಯವನ್ನು ಮರ್ದಿಸುವವನು (ಅಂಕಕಾಱನಂ ಒಂದೆ ಮದಾಂಧಗಂಧಸಿಂಧುರದೊಳ್ ಓಡಿಸಿದ ವೈರಿಗಜಘಟಾವಿಘಟನನ ಅದಟುಮಂ: ಪಂಪಭಾ, ೯. ೫೨ ವ)
< previous1234567891718Next >

Search Dictionaries

Loading Results

Follow Us :   
  Download Bharatavani App
  Bharatavani Windows App