भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕಣ್ಣಾರ್

[ಕ್ರಿ] ಕಣ್ಣಿಗೆ ತೃಪ್ತಿಯಾಗು (ಉಸಿರೊತ್ತಿಂ ತಿದಿಯಂತಿರೊತ್ತಿರೆ ಬಸಿಱ್ ಪೋತಂದ ಕಣ್ ಬಿಟ್ಟ ಬಾಯ್ .. .. ಪುಡಿಯೊಳ್ ಪೊರಳ್ವ ಪಗೆಯಂ ಕಣ್ಣಾರ್ವಿನಂ ನೋಡಿದಳ್: ಪಂಪಭಾ, ೧೨. ೧೫)

ಕಣ್ಣೀರ್ಗಳನಿಕ್ಕು

[ಕ್ರಿ] ಕಣ್ಣೀರು ಸುರಿಸು (ನಿಷ್ಕಾರಣಂ ಕೆಯ್ದುವಿಕ್ಕುವ ಕಣ್ಣೀರ್ಗಳನಿಕ್ಕುವ ಈ ಎರಡುಮಂ ನಿಮ್ಮಯ್ಯನೊಳ್ ಕಲ್ತಿರೇ: ಪಂಪಭಾ, ೧೨. ೪೪)

ಕಣ್ಣುಳ್ಕು

[ಕ್ರಿ] ಕೋರೈಸು (ನೆರೆದುದಿರು ಕ್ಷಾತ್ರಂ ತೇಜಂ ಧರಾಧಿಪರೂಪದಿಂ ಧರೆಗೆನುತುಂ ಆ ದೂತಂ ಕಣ್ಣುಳ್ಕೆ ನೋಡಿ ಕುಮಾರನಂ: ಆದಿಪು, ೧೪. ೪೪)

ಕಣ್ಣೂಱು

[ಕ್ರಿ] ಗಮನ ನೀಡು (ಭವ್ಯಜನಮಂ ಕಣ್ಣೂಱಿ ಕಲ್ಪಿಪ್ಪ ಉಪಾಧ್ಯಾಯರ್ ಜ್ಯೋತಿಸುಗೆ ಎಮ್ಮ ಚಿತ್ತಗೃಹದೊಳ್ ರತ್ನತ್ರಯಜ್ಯೋತಿಯಂ: ಆದಿಪು, ೧. ೪)

ಕಣ್ಣೆಮೆ

[ನಾ] ಕಣ್ಣ ರೆಪ್ಪೆ (ಮನೆಯಾಣ್ಮನ ಕಣ್ಣೆಮೆಯ ಕಾಂಡಪಟಮಾಗೆಯುಂ ಬಗೆಯಾಣ್ಮನ ಕಣ್ಣೆಮೆಯ ದೂದವಿಯಾಗೆಯುಂ: ಪಂಪಭಾ, ೪. ೮೧ ವ)

ಕಣ್ದೆಱೆ

[ಕ್ರಿ] ಪ್ರಕಟವಾಗು (ಈ ದಂಪತಿಯ ಬಯಕೆ ಸಂಪೂರ್ಣಮಾಯ್ತು ಉತ್ಸವಂ ಕಣ್ದೆಱೆದಂತಾಯ್ತೆನ್ನ ಸಾಮ್ರಾಜ್ಯದ ಫಲಂ: ಆದಿಪು, ೪. ೪೮); [ಕ್ರಿ] ಜೀವ ಬರು (ಧನುರ್ವಿದ್ಯೆಯ ಕಣ್ದೆಱೆವಿನೆಗಂ ಕಲ್ಪ ನಿಮ್ಮ ಮಕ್ಕಳ ಮೆಯ್ಯೊಳ್ ಮೆಱೆದಪ್ಪೆಂ: ಪಂಪಭಾ, ೨. ೬೫); [ಕ್ರಿ] ಕಣ್ಣು ತೆರೆ (ಕೆಂಗಱಿಯ ಮೊನೆಯಂಬುಗಳ್ ಕಣ್ದೆಱೆಯಿಸಿದುವು ಪೊಣರ್ವ ಬಿಲ್ಲ ಕಡುವಿತ್ತೆಗರಂ: ಪಂಪಭಾ, ೧೦. ೭೩)

ಕಣ್ಪಿಂತೆಸಲ್

[ಕ್ರಿ] ನೋಟ ಹಿಂದಕ್ಕೆ ಹೋಗು, ಸರಿಯಾಗಿ ನೋಡದಿರು (ಇನಿಯಂ ನೊಯ್ಗುಂ ಎಡಂಬಡಂ ನುಡಿದೊಡೆ ಎಂದಪ್ಪೊಡಂ ನಿನ್ನೊಳೆಳ್ಳನಿತುಂ ದೋಷಮನುಂಟುಮಾಡದಿರೆಯುಂ ಕಣ್ಪಿಂತೆ ಸಂದಪ್ಪುದು: ಪಂಪಭಾ, ೪. ೯೩)

ಕಣ್ಬಡಿಗ

[ನಾ] ಮೋಸಗಾರ (ಈ ಮೊಗಂಗುಡದ ಇರವು ಇಂತು ಕಣ್ಬಡಿಗರಪ್ಪರೆ ಮಾನಸರಪ್ಪರ್: ಪಂಪಭಾ, ೮. ೭೬); [ನಾ] ಕಣ್ತಪ್ಪಿಸಿ ತಿರುಗುವವನು (ಅರಣ್ಯದೊಳ್ ತಿರಿತರುತಿರ್ದ ಕಣ್ಬಡಿಗರಂ ಮಗುೞ್ದುಂ ಬಿಱುತು ಓಡಿ ಬೇಡರೊಳ್ ನೆರೆದಿರಲ್ ಅಲ್ಲದೆ: ಪಂಪಭಾ, ೮. ೮೫)

ಕಣ್ಬೇಟ

[ನಾ] ಕಣ್ಣೊಲುಮೆ, ಮೊದಲ ನೋಟದ ಪ್ರೇಮ (ಪಸುರ್ವಂದರ್ ಪಸೆ ವೇದಪಾರಗರವಂ ಕಣ್ಬೇಟದ ಉದ್ದಾನಿಯಂ ಪಸರಂಗೆಯ್ದವೊಲಪ್ಪ: ಪಂಪಭಾ, ೫. ೨೫)

ಕಣ್ಬೊಲ

[ನಾ] ಕಣ್ಣಿಗೆ ಕಾಣುವಷ್ಟು ದೂರ, ದೃಷ್ಟಿಪಥ (ಗಗನತಳಗಮನದೊಳಂದಾದ ಬೆಡಂಗಂ ನೋಡಿದರ್ ಆದರದಿಂ ತಮ್ಮ ಕಣ್ಬೊಲಂಗೞಿವಿನೆಗಂ: ಆದಿಪು, ೫. ೬೫)

ಕಣ್ಬೊಳೆಪು

[ನಾ] [ಕಣ್+ಪೊಳೆಪು] ಕಣ್ಣ ಕಾಂತಿ (ತನ್ನನೆ ನಿಳ್ಕಿ ನೋೞ್ಪರ ಕಣ್ಗೆ ಕಣ್ಬೊಳೆಪು ತನ್ನಯ ಮೆಯ್ಯ ಬೆಳ್ಪಿನೊಳ್ ಅೞ್ದು ನಿಂದೊಡೆ: ಪಂಪಭಾ, ೬. ೭)

ಕಣ್ಮಲರ್

[ನಾ] ಕಣ್ಣು ಎಂಬ ಹೂ (ಉಡಮೊಗಮೆಂಬ ತಾವರೆಯ ನೀಳ್ದೆಸಳೊಳ್ ಮಱಿದುಂಬಿ ಪಾಯ್ದು ಒಡಂಬಡನೊಳಕೊಂಡು ಕಣ್ಮಲರ ಬೆಳ್ಪುಗಳ್ ಆಲಿಯ ಕರ್ಪಿನೊಳ್ ಪೊದಳ್ದು; ಪಂಪಭಾ, ೫. ೭೮)

ಕಣ್ಮಲೆ

[ಕ್ರಿ] ಮನಸ್ಸಿಗೆ ಹೊಳೆ, ವೇದ್ಯವಾಗು (ನಂದನಂಗಳೊಳ್ ಸುೞಿವ ಬಿರಯಿಯಿಂ ಕಂಪು ಕಣ್ಮೆಲೆಯೆ ಪೂತ ಸುರಯಿಯಿಂ: ಪಂಪಭಾ, ೩. ೨೨); ಕಣ್ಣು ಕೆರಳಿಸು (ಬನ್ನಮುಂ ಮುನ್ನಮೆ ಸೋಂಕಿ ಕಣ್ಮಲೆವ ಮಾತುಗಳ್ ಎಲ್ಲರ ಪೇೞ್ವ ಮಾತುಗಳ್: ಪಂಪಭಾ, ೭. ೫೫)

ಕಣ್ಮುಚ್ಚು

[ಕ್ರಿ] ಕಣ್ಣು ಮುಚ್ಚು (ಸುಭದ್ರೆಯ ರೂಪು ಕಣ್ಣಪಾಪೆಯಂತೆ ಕಣ್ಣೊಳೆ ತೊೞಲೆ ಕಣ್ಮುಚ್ಚದೆ .. .. ಚಂದ್ರನಂ ನೋಡಿ: ಪಂಪಭಾ, ೪. ೬೯ ವ); [ಕ್ರಿ] ಮಲಗಿಕೊ, ನಿದ್ರಿಸು (ಒರ್ವ ಪಾರ್ವಂ ವಿಸ್ತೀರ್ಣ ಜೀರ್ಣ ಕರ್ಪಟಾವೃತ ಕಟಿತಟನುಂ ಆಗಿ ಬಂದು ಕಣ್ಮುಚ್ಚಲ್ ಎಡೆವೇಡೆ ತನಗವರ್ ಪಾಸಲ್ಕೊಟ್ಟ ಕೃಷ್ಣಾಜಿನಮಂ ಪಾಸಿ ಪಟ್ಟಿರ್ದನಂ: ಪಂಪಭಾ, ೩. ೩೧ ವ)

ಕಣ್ಸೋಲ

[ನಾ] ಮೋಹ, ಆಕರ್ಷಣೆ (ಮಱುಗುತ್ತಿರ್ಪಳ್ಗೆ ನೋಡಾದೞಲಂ ಎನಗೆ ಕಣ್ಸೋಲದಿಂ ಕೀಚಕಂ ಬಂದುಱದೆನ್ನಂ ಕಾಡಿ: ಪಂಪಭಾ, ೮. ೭೧)

ಕಣ್ಸೋಲ್

[ಕ್ರಿ] ಕಣ್ಣು ಸೋತುಹೋಗು, ಆಕರ್ಷಣೆಗೊಳ್ಳು (ಗಂದೇಭ ಕಂಧರಬಂಧಪ್ರವಿಭಾಸಿಯಪ್ಪ ಅರಿಗನಂ ಕಾಣುತ್ತೆ ಕಣ್ಸೋಲ್ತು ಕಾಮರಸಂ ಭೋಂಕನೆ ಸೂಸೆ: ಪಂಪಭಾ, ೪. ೩೮)

ಕತಿಪಯ

[ಸ] ಕೆಲವು (ಕತಿಪಯತುರಂಗಬಲ ಪರಿವೃತನೊಳಪೊಕ್ಕು: ಆದಿಪು, ೧೩. ೩೫); ಕೆಲವು [ಕಾಲದ] (ದ್ರುಪಜೆಯನೊಡಗೊಂಡು ದ್ರುಪದದನಿರವೇೞ್ದು ಕತಿಪಯ ಪ್ರಯಣಂಗಳಿಂ ಮದಗಜಪುರಮನೆಯ್ದಿ ವಂದು: ಪಂಪಭಾ, ೪. ೪ ವ)

ಕಂತು

[ನಾ] ಮನ್ಮಥ (ಕಂತು ಪುಷ್ಪಾಂಜಳಿಯಂ ಸೂಸಿದ ಪದದೊಳೆ ಸಭೆಗಂ ಸೂಸಿದನೊಡನೊಡನೆ ನನೆಯ ಮೊನೆಯಂಬುಗಳಂ: ಆದಿಪು, ೯. ೨೧)

ಕಂತುಶರ

[ನಾ] ಮನ್ಮಥನ ಬಾಣ (ಅಂತು ಕಂತುಶರ ಪರವಶನಾಗಿ ಧೈರ್ಯಕ್ಷರಣೆಯುಂ ಇಂದ್ರಿಯಕ್ಷರಣೆಯುಂ ಒಡನೊಡನಾಗೆ: ಪಂಪಭಾ, ೨. ೪೨ ವ)

ಕತೆ

[ನಾ] [ಕಥಾ] ನಿರೂಪಿತ ಘಟನೆ (ಕತೆ ಪಿರಿದಾದೊಡಂ ಕತೆಯ ಮೆಯ್ಗೆಡೆಯಲೀಯದೆ .. .. ಪೇೞ್ವೊಡೆ ಪಂಪನೆ ಪೇೞ್ಗುಂ: ಪಂಪಭಾ, ೧. ೧೧)

Search Dictionaries

Loading Results

Follow Us :   
  Download Bharatavani App
  Bharatavani Windows App