भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕಣಂ ಮಾಡು

[ಕ್ರಿ] ತೆನೆ ತುಂಬಿದ ಪೈರನ್ನು ಕಣದಲ್ಲಿ ಹರವು (ಸ್ತಂಬಕರ್ಯಾದಿ ನಾನಾವಿಧ ಧಾನ್ಯಂಗಳಂ ಪದನಱಿದುಡುಗುವ ಕಣಂ ಮಾಡುವ ಒಕ್ಕುವ ಅಡುಕುವ ಬಯ್ತಿಡುವ ಅಕ್ಕಿ ಮಾಡುವ ವಿವಿಧ ಭಾಜನಂಗಳೊಳ್ ಅಡುವ: ಆದಿಪು, ೬. ೭೭ ವ)

ಕಣಕ್

ಒಂದು ಅನುಕರಣ ಶಬ್ದ (ಪೆಱೆಯ ಮುಱಿಗಂ ಕಣಕೆನೆ ವೋಪಂಬು ಕವಲಂಬುವೆಂಬ ಅಂಕದ ಅಂಬು ಎತ್ತಲುಂ ತುಱುಗಿ: ಪಂಪಭಾ, ೧೩. ೩೯)

ಕಣಯ

[ನಾ] ‘ಮುಷ್ಟಿ’ ಎಂಬ ಆಯುಧ (ಮನೋವೇಗಮೆಂಬ ಕಣಯಮುಂ ಸೌನಂದಕಮೆಂಬ ಬಾಳುಂ: ಆದಿಪು, ೧೫. ೩ ವ)

ಕಣಿ

[ನಾ] [ಖನಿ] ಸಂಪತ್ತು, ಭಾಗ್ಯ (ಇನಿತುಮಿಲ್ಲದೆ ಗುಱುಗುಮ್ಮೆಂದು ಪಸಿದಿರ್ದು ಬೆದಬೆದ ಬೆಂದಿನಿಬರ್ ಕಟ್ಟಿಕೊಳ್ವ ಕಣಿಯೇಂ ಪೇೞಿಂ: ಆದಿಪು, ೯. ೯೦); [ನಾ] ಗಣಿ (ಕಣಿ ರತ್ನತ್ರಯಕ್ಕೆ ಇದೇಂ ಪಿಱಿದು ಎನಲ್ ರತ್ನಾಕರಂ ರತ್ನತೋರಣ ರತ್ನಾಸನರತ್ನವಿಭ್ರಮಣ ಆದಿಪು, ೧೬. ೪)

ಕಣೆ

[ನಾ] ಬಾಣ (ಎಡವಱದೊಳ್ ಎಱಗಿ ಬಱಸಿಡಿಲ್ ಇಡುಮುಡುಕನೆ ಪೊಡೆದುದೆನಿಸಿ ಪಾಂಡ್ಯನ ರಥದ ಅಚ್ಚು ಉಡಿದು ಅೞ್ಗಿತೞ್ಗೆ ಕೊಂಡುವು ಕಡುಗೂರಿದುವೆನಿಪ ಗುರುತನೂಜನ ಕಣೆಗಳ್: ಪಂಪಭಾ, ೧೨. ೮೨)

ಕಣೆಕಾಲ್

[ನಾ] ಕಾಲಿನ ಕೆಳಭಾಗ (ಅಡಿ ತೊಡೆ ಪೊರ್ಕುೞುಂ ತೆಗಲೆ ಕೈ ಕಣೆಕಾಲ್ ಕೊರಲ್ ಎಂಬಿವುಂ ಬೆರಲ್ ನಡುವುರ ಬೆಂ ಬಸಿಱ್ ತೊಳಕು ಕರ್ಜಱೆ ಮುಯ್ಪು .. .. ಎಂಬೆಡೆಯನೆ ನಟ್ಟುರ್ಚಿದುವು: ಪಂಪಭಾ, ೧೧. ೧೩೬)

ಕಣೆಯ

[ನಾ] ಬಾಣ (ಕಣೆಯ ಕಂಪಣ ಮುಸಲ ಮುಸುಂಡಿ ಭಿಂಡಿವಾಳ ತೋಮರ ಮುದ್ಗರ ಮಹಾ ವಿವಿಧಾಯುಧಂಗಳೊಳಿಟ್ಟುಂ ಇಱಿದುಂ ಅಗುರ್ವು ಅದ್ಭುತಮಾಗೆ ಕಾದುವಾಗಳ್: ಪಂಪಭಾ, ೧೨. ೧೧೮ ವ)

ಕಣ್ಕೆತ್ತು

[ಕ್ರಿ] ಕಣ್ಣು ಸನ್ನೆ ಮಾಡು (ಉಮ್ಮನೆ ಬೆಮರುತ್ತುಂ ಇರ್ದ ದುಶ್ಶಾಸನನುಮಂ ಕಣ್ಕೆತ್ತಿ ಕಿಱುನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು: ಪಂಪಭಾ, ೭. ೫ ವ)

ಕಣ್ಗಳ ಬಳಗಂ

[ನಾ] ಕಣ್ಣುಗಳ ಗುಂಪು, [ಇಂದ್ರನ] ಸಾವಿರ ಕಣ್ಣುಗಳು (ನೆನೆವ ಮನಂ ಪೆಱಗುೞಿದತ್ತೆನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದತ್ತೆನೆ ನೆಯ್ದಿಲ್ಗೊಳನಲರ್ದತ್ತೆನೆ ಕಣ್ಗಳ ಬಳಗಂ ಆಗಳ್ ಇಂದ್ರಂ ಬಂದಂ: ಪಂಪಭಾ, ೧೩೮)

ಕಣ್ಗಾಣು

[ಕ್ರಿ] ನೋಡು, ವಿವೇಕ ತೋರಿಸು (ಇಂತಪ್ಪ ಏಕಗ್ರಾಹಿಗಂ ಒಱಂಟಂಗಂ ರಥಮಂ ಎಸಗೆಂ ಎಂದು ವರೂಥದಿಂದ ಇೞಿದು ಪೋಗೆ: ಪಂಪಭಾ, ೧೨. ೨೦೫ ವ)

ಕಣ್ಗಾಪು

[ನಾ] ಕಣ್ಣರಕೆ, ಕಣ್ಣಿನ ಕಾವಲು (ಪುರೋಚನಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ: ಪಂಪಭಾ, ೩. ೪ ವ)

ಕಣ್ಗಿಡು

[ಕ್ರಿ] ಕಂಗೆಡು, ಗಾಬರಿಯಾಗು (ರಜಸ್ವಲೆಯಾಗಿರ್ದೆಂ ಮುಟ್ಟಲಾಗದು ಎನೆಯುಂ ಒತ್ತಂಬದಿಂದ ಒಳಗಂ ಪೊಕ್ಕು ಪಾಂಚಾಳಿಯಂ ಕಣ್ಗಿಡೆ ಜಡಿದು: ಪಂಪಭಾ, ೭. ೪ ವ)

ಕಣ್ಗಿಳಿದಾಗು

[ಕ್ರಿ] ಕಣ್ಣಿಗೆ ಅಹಿತವಾಗು (ಅಂಗರುಚಿ ಕಣ್ಗಿಳಿದಾಯ್ತು ವಿಭೂಷಣಂಗಳೊಳ್ ತೀಡುವ ರಶ್ಮಿಗಳ್ ಮಸುಳ್ದುವು: ಆದಿಪು, ೩. ೩)

ಕಣ್ಗೆಡಱು

[ಕ್ರಿ] ಕಣ್ಣ ನೋಟಕ್ಕೆ ಸಿಕ್ಕು (ನಸು ಮಾಸಿ ಪಾಡೞಿದ ರೂಪಿನೊಳ್ ಉಣ್ಮುವ ಗಾಡಿ ನಾಡೆ ಕಣ್ಗೆಡಱೆ: ಪಂಪಭಾ, ೧೩. ೯೯)

ಕಣ್ಗೆಡು

[ಕ್ರಿ] ದೃಷ್ಟಿಶಕ್ತಿ ಕುಂದು (ಕಟ್ಟಿದ ಪಟ್ಟಮೆ ಸರವಿಗೆ ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕಣ್ಗೆಟ್ಟ ಮುದುಪಂಗೆ: ಪಂಪಭಾ, ೧೦. ೧೭)

ಕಣ್ಗೆತ್ತು

[ಕ್ರಿ] ಕಣ್ಣು ಸಂಜ್ಞೆಮಾಡು, ಕಣ್ಣು ಮಿಟುಕಿಸು (ಮೆಲ್ಲಮೆಲ್ಲನೆ ಕೆಲಕ್ಕೆ ವಂದು ಕುಂಚದ ಅಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದು: ಪಂಪಭಾ, ೪. ೬೧ ವ)

ಕಣ್ಗೆವರ್

[ಕ್ರಿ] ಚೆನ್ನಾಗಿ ಕಾಣು, ಆಕರ್ಷಿಸು (ನೆಗೞ್ದೀ ಕರ್ಪೂರ ಕಾಳಾಗರು ಮಳಯಮಹೀಜಂಗಳ್ ಏಳಾಲತಾಳೀ ಸ್ಥಗಿತಂಗಳ್ ಕಣ್ಗೆವಂದಿರ್ದುವಂ: ಪಂಪಭಾ, ೪. ೨೩)

ಕಣ್ಗೊಳ್

[ಕ್ರಿ] ಕಣ್ಣು ಸೆಳೆ, ಸುಂದರವಾಗಿ ಕಾಣು (ಕಣ್ಗೊಂಡು ಮನಂಗೊಂಡುಂ ಇಂದ್ರನೆ ಖೇಚರೇಂದ್ರನೆ ದಲೀ ಭೂಪೇಂದ್ರನೆಂಬನ್ನೆಗಂ: ಆದಿಪು, ೧೧. ೧೫೭); [ಕ್ರಿ] ಕಾಣಿಸು (ಸುರುಳ್ದುರುಳ್ದ ತುರಗಂ ಸುರ್ಕಿರ್ದ ಸೂತಂ ಕಡಲ್ ಕಡಲಂ ಮುಟ್ಟಿ ತೆರಳ್ವ ನೆತ್ತರ ಪೊನಲ್ ಕಣ್ಗೊಂಡುದು ಉಗ್ರಾಜಿಯೊಳ್: ಪಂಪಭಾ, ೧೦. ೯೧)

ಕಣ್ಣ ಪಾಪೆ

[ನಾ] ಕಣ್ಣ ಬೊಂಬೆ, ಕಣ್ಣ ಗುಡ್ಡೆ (ಸುಭದ್ರೆಯ ರೂಪ ಕಣ್ಣ ಪಾಪೆಯಂತೆ ಕಣ್ಣೊಳೆ ತೊೞಲೆ: ಪಂಪಭಾ, ೪. ೬೯ ವ)

ಕಣ್ಣಱಿ

[ಕ್ರಿ] ಕಣ್ಣನ್ನು [ಅಭಿಪ್ರಾಯವನ್ನು] ತಿಳಿ (ಆ ರಮ್ಯನದಿಯ ಚೆಲ್ವಂ ಇಳಾರಮಣಂ ಅೞ್ತಿಯಿಂ ನೋಡುವಿನಂ ಸಾರಥಿ ಕಣ್ಣಱಿದು: ಆದಿಪು, ೧೧. ೫೭)

Search Dictionaries

Loading Results

Follow Us :   
  Download Bharatavani App
  Bharatavani Windows App