भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕಡಿತಲೆ

[ನಾ] ಕತ್ತಿ (ಎರಡುಂ ಬಲದ ಕಡಿತಲೆಯ ನಾಯಕರ್ ಕೆಯ್ಕೊಂಡು ಬಳ್ಳುಗೆಡೆದು ಎಕ್ಕೆವಾಱುವಾಱಿ ಪಲಗೆವಾಱಿ ಗೂಳಿಸೊರ್ಕಿ ಮಾರ್ಕೊಂಡು ಕಾದೆ: ಪಂಪಭಾ, ೧೦. ೮೦ ವ)

ಕಡಿದೀ

[ಕ್ರಿ] ಕತ್ತರಿಸಿ [ದಾನ] ಕೊಡು (ಸಿಡಿಲ್ವೊಡೆದವೊಲಟ್ಟಿ ಮುಟ್ಟಿ ಕಡಿದಿಕ್ಕಿದುದಾದುದೆಡಱಂ ನಿರಂತರಂ ಕಡಿಕಡಿದಿತ್ತ ಪೊನ್ನೆ ಬುಧಮಾಗಧವಂದಿಜನಕ್ಕೆ: ಪಂಪಭಾ, ೧. ೯೯)

ಕಡಿದೊಟ್ಟು

[ಕ್ರಿ] [ಕಡಿದು+ಒಟ್ಟು] ಕತ್ತರಿಸಿ ರಾಶಿಹಾಕು (ಈ ಪದದೊಳ್ ಕಡಿದೊಟ್ಟಿದಾಗಳ್ ಗೆಲಲಾಱೆ ಎಂದು ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ: ಪಂಪಭಾ, ೧೨. ೨೦೬ ವ)

ಕಡು

[ಗು] ಹೆಚ್ಚು (ಈಗಳ್ ನಿಂದಂ ಮನುಕುಲಲಾಮ ನೆಟ್ಟನೆ ಮನದೊಳ್ ಕಡುಸಾರೆಯಲ್ತೆ ಮುನ್ನಿಂದೀಗಳ್: ಆದಿಪು, ೧೬. ೫೬); [ಗು] ಹೆಚ್ಚಾಗಿ (ಪರೆದ ಉರಿಗೇಸಂ ಅವ್ವಳಿಪ ನಾಲಗೆ ಮಿಂಚುವ ದಾಡೆ ಬಿಟ್ಟ ಕಣ್ ತಿರುಪಿದ ಮೀಸೆ ಕೊಂಕಿದ ಸಟಂ ಕಡು ನೆಕ್ಕ ಕದಂಪು: ಪಂಪಭಾ, ೧೨. ೭)

ಕಡುಕೆಯ್

[ಕ್ರಿ] ಶೌರ್ಯ ತೋರು (ಕಡುಕೆಯ್ದಾನಿರೆ ಚಕ್ರವರ್ತಿವರೆಗಂ ಮೇಘಾಮರರ್ ಬರ್ಪರೆಂದೊಡಿದರ್ಕಂ ಮಿಗಿಲುಂಟೆ: ಆದಿಪು, ೧೩. ೬೬); [ಕ್ರಿ] ರಭಸಗೊಳ್ಳು (ಬಿಡದೆ ಕಡುಕೆಯ್ದ ದಿವ್ಯದ ನುಡಿಗೆ ಕಿವುೞ್ಕೇಳ್ದು ಕುಡಿದು ನೀರಂ ಭೀಮಂ ಗದೆವೆರಸು ಭೋಂಕೆನೆ ಕೆಡದಂ: ಪಂಪಭಾ, ೮. ೪೨); [ಕ್ರಿ] ಬೇಗನೆ (ಜಳಪ್ರವೇಶಂ ಇಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥಂ ಅನಾಥನಾಗಿ ತೊಟ್ಟನೆ ಮುೞುಪಂತೆವೊಲ್ ಮುೞುಗಿದಂ ಕಡುಕೆಯ್ದು ಅಪರಾಂಬುರಾಶಿಯೊಳ್: ಪಂಪಭಾ, ೧೩. ೧೦೬)

ಕಂಡುಗ

[ನಾ] ಖಂಡುಗ, ಒಂದು ದೊಡ್ಡ ಅಳತೆ [‘ವ್ಯವಹಾರ ಗಣಿತ’ದ ಪ್ರಕಾರ ಇಪ್ಪತ್ತು ಕೊಳಗ] (ಎರಡೆಮ್ಮೆವೋಱಿಯೊಳ್ ಪೂಡಿದ ಪನ್ನಿರ್ಕಂಡುಗದಕ್ಕಿಯ ಕೂೞುಮಂ ಅದರ್ಕೆ ತಕ್ಕ ಪರಿಕರಮುಮಂ ಒರ್ವ ಮಾನಸಂ ಕೊಂಡು ಪೋಪಂ: ಪಂಪಭಾ, ೩. ೨೫ ವ)

ಕಡುಗಟ್ಟ

[ನಾ] ಕಡು ಕಷ್ಟ, ದೊಡ್ಡ ತೊಂದರೆ (ಪುಟ್ಟೆ ಮುಳಿಸು ಒಸಗೆಗಳೆ ಕಡುಗಟ್ಟಂ ಮುಳಿಸು ಒಸಗೆಯೆಂಬ ನೃಪತನಯನವಂ ಮುಟ್ಟುಗಿಡೆ ಪಾರದರದೊಳ್ ಪುಟ್ಟಿದಂ: ಪಂಪಭಾ, ೧೨. ೧೩೩)

ಕಡುಗುದುರೆ

[ನಾ] ಬಿರುಗುದುರೆ (ಘೋಳಾಯ್ಲರ್ ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ ಪೊಳೆವ ಕಡುಗುದುರೆಗಳುಮಂ .. .. ಒಡ್ಡಿ ನಿಂದಾಗಳ್: ಪಂಪಭಾ, ೧೦. ೫೧ ವ)

ಕಡುಗೂರ್ಮೆ

[ನಾ] [ಕಡು+ಕೂರ್ಮೆ] ಆಳವಾದ ಪ್ರೀತಿ (ಇನ್ನುಂ ಈ ಒಡಲೊಳಿರ್ದುದು ನಾಣಿಲಿಜೀವಂ ಎಂದೊಡೆ ಆವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯುಂ ಅೞ್ಕಱುಂ ಅಂಗವಲ್ಲಭಾ: ಪಂಪಭಾ, ೧೩. ೪)

ಕಡುನನ್ನಿ

[ನಾ] ತೀರ ಸತ್ಯ (ಮುಂದೆ ಭಾರತದೊಳೊಡ್ಡುವುದಂ ಕಡುನನ್ನಿ ಮಾೞ್ಪವೋಲ್: ಪಂಪಭಾ, ೬. ೭೨); [ನಾ] ಸತ್ಯಕಠೋರತೆ (ಕರ್ಣನೊಳಾರ್ ದೊರೆ ಕರ್ಣನೇಱು ಕರ್ಣನ ಕಡುನನ್ನಿ ಕರ್ಣನ ಅಳವು ಅಂಕದ ಕರ್ಣನ ಚಾಗಂ: ಪಂಪಭಾ, ೧೨. ೨೧೭)

ಕಡುನಲ್ಲ

[ನಾ] ಗಾಢ ಪ್ರಣಯಿ (ಮತ್ತಮೊಂದೆಡೆಯೊಳ್ ಅಂದೆ ಪೊಸವೇಟಕಾಱರಪ್ಪ ಕಡುನಲ್ಲರುಮಿರ್ವರುಮಿರೆ: ಆದಿಪು, ೧೨. ೨೮)

ಕಡುನಳಿದಾಗು

[ಕ್ರಿ] ಅತಿಯಾಗಿ ಬಾಗು (ಅಭ್ರಮಂಡಲಂ ಕಡುನಳಿದಾದುದು ಈ ಬಲದ ಧೂಳಿಯೊಳೆಂಬಿನಂ: ಆದಿಪು, ೧೨. ೬೨)

ಕಡುನಾಣ ಪುತ್ತು

[ನಾ] ಹೆಚ್ಚಿನ ನಾಚಿಕೆಗೇಡಿನದು, ಲಜ್ಜಾಸ್ಪದ (ಇದು ಕಡುನಾಣ ಪುತ್ತು ವಲಂ ಇಂ ನೆನೆಯುತ್ತಿರಿಂ ಎಮ್ಮನೆಂಬುದು ಆವುದು ಗುಣಂ ಎಮ್ಮೊಳಾಗೆ ನೆನೆದಪ್ಪಿರಿ: ಆದಿಪು, ೧೧. ೧೩೧)

ಕಡುಪಗಲ್

[ನಾ] ಏರಿದ ಹಗಲು (ಕಡುಪಗಲಾದುದು ಬೀಡಂ ಬಿಡಿಸುವುದು ಈ ಪುಣ್ಯನದಿಯ ತಡಿಯೊಳ್ ದೇವರ್ ನಡೆವುದು ವನಜಳಕೇಳಿಗೆ: ಆದಿಪು, ೧೧. ೬೯)

ಕಡುಪು

[ನಾ] ಪರಾಕ್ರಮ (ಕಡುಪಿದಱೊಳಪ್ಪೊಡೆ ಈಗಳೆ ಸುಡುವೆಂ ಬಾಣಾನಳಾರ್ಚಿಯಿಂ ಮಾಗಧನಂ: ಆದಿಪು, ೧೨. ೮೭); [ನಾ] ಉದ್ವೇಗ (ಕೋಪದ ಪೆರ್ಚಿನೊಳ್ ನಡುಗುವೂರುಯುಗಂ ಕಡುಪಿಂದರಲ್ವ ನಾಸಾಪುಟಂ: ಪಂಪಭಾ, ೭. ೬)

ಕಡುರಯ್ಯ

[ನಾ] ತುಂಬ ಸುಂದರ (ಬಂಧುಗಳ್ ಮನಂಬಡೆ ಕಡುರಯ್ಯಮಾಯ್ತು ಅಮಿತತೇಜನೊಳಂದು ವಿವಾಹಮಂಗಳಂ: ಆದಿಪು, ೪. ೫೩)

ಕಡುವಂದೆ

[ನಾ] [ಕಡು+ಪಂದೆ] ದೊಡ್ಡ ಹೇಡಿ (ಕಲಿಯನೆ ಪಂದೆ ಮಾೞ್ಪ ಕಡುವಂದೆಯಂ ಒಳ್ಗಲಿ ಮಾೞ್ಪ ತಕ್ಕನಂ ಪೊಲೆಯನೆ ಮಾೞ್ಪ: ಪಂಪಭಾ, ೧೨. ೯೨)

ಕಡುವಿಣ್ಣಿತ್ತು

[ನಾ] [ಕಡು+ಬಿಣ್ಣಿತ್ತು] ತುಂಬ ಭಾರ (ತುಡುಗೆಗಳೊಳ್ ಸರಿಗೆಯುಮಂ ಕಡುವಿಣ್ಣಿತ್ತೆನಿಸಿ ನಡೆದುಂ ಓರಡಿಯನಣಂ ನಡೆಯಲುಂ ಆಱದೆ ಕೆಮ್ಮನೆ ಬಿಡದಾರಯ್ವನಿತುಮಾಗೆ ಬಳೆದುದು ಗರ್ಭಂ: ಪಂಪಭಾ, ೧. ೧೪೪)

ಕಡುವಿಣ್ಪು

[ನಾ] [ಕಡು+ಬಿಣ್ಪು] ಅತಿಶಯವಾದ ಭಾರ (ಮುಡಿಯ ಕುಚಯುಗದ ಜಘನದ ಕಡುವಿಣ್ಪಿಂ ಮಣಲೊಳ್ ಅೞ್ದುಬರೆ ಮೆಲ್ಲಡಿಗಳ್: ಪಂಪಭಾ, ೭. ೮೫)

ಕಡುವಿತ್ತೆಗ

[ನಾ] ಬಹು ನಿಪುಣ (ಕೆಂಗಱಿಯ ಮೊನೆಯಂಬುಗಳ್ ಕಣ್ದೆಱೆಯಿಸಿದುವು ಪೊಣರ್ವ ಬಿಲ್ಲ ಕಡುವಿತ್ತೆಗರಂ: ಪಂಪಭಾ, ೧೦. ೭೩)

Search Dictionaries

Loading Results

Follow Us :   
  Download Bharatavani App
  Bharatavani Windows App