भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕಟಿಸೂತ್ರ

[ನಾ] ಕಟಿಬಂಧ, ಉಡಿದಾರ (ಪೋ ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಂ ಎಂತು ಉಡಿಸುವುದಕ್ಕ ನೂಪುರಮಂ: ಪಂಪಭಾ, ೩. ೪೬)

ಕಟೀಸೂತ್ರ

[ನಾ] ಕಟಿಸೂತ್ರ (ಕರೆವೆರಸಿದ ಪೊಸದುಗುಲದ ತೆರಳ್ಕೆವೆತ್ತುಡೆ ಹಟತ್ಕಟೀಸೂತ್ರ ಪರಿಸ್ಫುರಿತದೊಳಂ ಕಟ್ಟಿದ ಪೊಂಜುರಿಗೆಯೊಳಂ: ಆದಿಪು, ೪. ೩೬)

ಕಟು

[ನಾ] ಹೆಂಡದ ಒಂದು ಪ್ರಭೇದ, ಕಾರವಾದುದು (ಮಧು ಸೀತುಂ ಕಟು ಸೀಧು ಪೋ ಪುಳಿತ ಕಳ್ಳಲ್ತುಂ ಕರಂ ಕಯ್ತುಬರ್ಪುದು: ಪಂಪಭಾ, ೪. ೮೮) [ಡಿಎಲ್‌ಎನ್ ‘ಸೀತುಂ ಕಟು ಸೀಧು’ ಎಂಬುದರ ಬದಲಾಗಿ ‘ಸೀಧು ಕಟುಸೀಧು’ ಎಂಬ ಪಾಠವನ್ನು ಅಂಗೀಕರಿಸುತ್ತಾರೆ]

ಕಟುಕಫಲ

[ನಾ] ಕಹಿಫಲ (ನಿನ್ನಂ ಘಾತಿಸಿ ಬಿಡದಲೆದು ಪಿೞಿದು ಪಿಂಡಿದ ದುಃಖವ್ರಾತಮಿದು ಮಗಳೆ ನಿನ್ನ ಪುರಾತನ ದುಷ್ಕರ್ಮ ವಿಟಪಿ ಕಟುಕಫಲಂಗಳ್: ಆದಿಪು, ೩. ೩೮)

ಕಟ್ಟಳೆ

[ನಾ] ಚಿನ್ನರತ್ನಗಳನ್ನು ತೂಗುವ ಒಂದು ಅಳತೆ (ಒಟ್ಟಿದ ಪೊನ್ನ ಬೆಟ್ಟುಗಳನೀವೆಡೆಗೇವುದೊ ತೂಕಮೆನ್ನ ಕೆಯ್ಗಟ್ಟಳೆ ಕೊಳ್ಳಿಂ: ಪಂಪಭಾ, ೬. ೩೯)

ಕಟ್ಟಾಯ

[ನಾ] ಮಹಾ ಪರಾಕ್ರಮ (ಇನ್ನಿಲ್ಲಿ ಪೆಂಪು ಎಱಕಂಬೆತ್ತಿರೆ ಕಾವೆನೆನ್ನ ನುಡಿಯಂ ಕೆಯ್ಕೊಂಡ ಕಟ್ಟಾಯಮಂ: ಪಂಪಭಾ, ೧೨. ೧೯೮)

ಕಟ್ಟಾಳ್

[ನಾ] ಮಹಾ ಶೂರ (ಒಂದಕ್ಷೋಹಿಣಿಬಲಂ ಎರಡುಂ ದೆಸೆಯೊಳಂ ಉೞಿದುವು ಅಂತೆ ಭಾರತಂ ಎಮಗೆ ಇಂದು ಉಜ್ಜವಣೆ ದಲ್ ಎಂದು ಅದಟೊಂದುತ್ತರಮಾಗೆ ಕಾದಿದರ್ ಕಟ್ಟಾಳ್ಗಳ್: ಪಂಪಭಾ, ೧೩. ೩೬)

ಕಟ್ಟಿದಿರು

[ನಾ] ಕಣ್ಣಿನ ಮುಂದೆಯೇ (ತನ್ನ ಕಟ್ಟಿದಿರೊಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯದೃಷ್ಟಿಮಂತ್ರದೊಳೆ ಪೊದಳ್ದುದಾ ಸತಿಯರಿರ್ವರೊಳಂ ನವಗರ್ಭವಿಭ್ರಮಂ: ಪಂಪಭಾ, ೧. ೮೫)

ಕಟ್ಟಿದುದು

[ನಾ] ವಿಧಿಯ ಕಟ್ಟುವಿಕೆ (ಕಟ್ಟಿಸಿಕೊಂಡಂ ಶಲ್ಯಂ ಕಟ್ಟಿದುದಂ ಕಳೆಯಲಾರ್ಗಮೇಂ ತೀರ್ದಪುದೇ: ಪಂಪಭಾ, ೧೩. ೩೦)

ಕಟ್ಟಿದುದೆ ಸುರಿಗೆ ಮುಟ್ಟಿದುದೆ ಕಳಂ

ಕಟ್ಟಿಕೊಂಡದ್ದೇ ಕತ್ತಿ, ಮೆಟ್ಟಿದ್ದೇ ಯುದ್ಧರಂಗ, ಯುದ್ಧಕ್ಕೆ ಸದಾ ಸಿದ್ಧ ಎಂಬ ಅಭಿಪ್ರಾಯ (ನೀಮಿನಿತಂ ನುಡಿದಿರ್ ಮೂದಲಿಸಿದಿರಿ ಇಂ ತಡೆವೆನೆ ಕಟ್ಟಿದುದೆ ಸುರಿಗೆ ಮೆಟ್ಟಿದುದೆ ಕಳಂ: ಆದಿಪು, ೩. ೭೨)

ಕಟ್ಟಿಱುಂಪೆ

[ನಾ] ಕಟ್ಟಿರುವೆ, ಗೊದ್ದ (ಸುಡುವ ಉದರಾಗ್ನಿಯುಂ ಒಡಲಂ ಮಿಡುಕುವಿನಂ ಕಡಿವ ಕಟ್ಟಿಱುಂಪೆಗಳುಂ: ಆದಿಪು, ೫. ೧೩)

ಕಟ್ಟಿಸಿಕೊ

[ಕ್ರಿ] ಬಂಧನಕ್ಕೊಳಗಾಗು (ಕಟ್ಟಿಸಿಕೊಂಡಂ ಶಲ್ಯಂ ಕಟ್ಟಿದುದಂ ಕಳೆಯಲಾರ್ಗಮೇಂ ತೀರ್ದಪುದೇ: ಪಂಪಭಾ, ೧೩. ೩೦)

ಕಟ್ಟು

[ಕ್ರಿ] ಧರಿಸು (ಕಟ್ಟಿದುದೆ ಸುರಿಗೆ ಮೆಟ್ಟಿದುದೆ ಕಳಂ: ಆದಿಪು, ೩. ೭೨); [ಕ್ರಿ] ರಸವಾದಿಯು ಪಾದರಸವನ್ನು ಉಂಡೆ ಮಾಡುವುದು (ವ್ರಣವೈದ್ಯನಂತೆ ಕೊಡಸಾರಿಯಂ ಪಿಡಿದುಂ ಸೂಳೆಯಂತೆ ಕೞಿವು ಉೞಿವನಱಿದುಂ ರಸವಾದಿಯಂತೆ ಕಟ್ಟಿಯುಂ ಪೆರ್ಜೋಡೆಯಂತೆ ನುಣ್ಣಿತಂ ವೇೞ್ದು: ಪಂಪಭಾ, ೬. ೭೨ ವ); [ಕ್ರಿ] ಸೆರೆಹಿಡಿ (ನಾಳೆ ವಿಜಯಂ ಮಾರ್ಕೊಳ್ಳದಂದು ಉರ್ಕಿ ಪೊಕ್ಕನ ಆಂತು ಒರ್ವನಂ ಇಕ್ಕುವೆಂ ಕದನದೊಳ್ ಮೇಣ್ ಕಟ್ಟುವೆಂ ಧರ್ಮನಂದನನಂ: ಪಂಪಭಾ, ೧೧. ೮೪)

ಕಟ್ಟುಕಡೆ

[ಕ್ರಿ] ಸಹನೆ ಕಳೆದುಕೊ (ಅರಸನೊಂದೆ ಮೆಯ್ಯೊಳೆ ಪೋಗಿ ಬಾರದುದರ್ಕೆ ಕಟ್ಟುಕಡೆದು: ಆದಿಪು, ೧೨. ೧೨೪ ವ)

ಕಟ್ಟುವಡು

ಕಟ್ಟನಿಂದ ಬಿಗಿ (ಪಾಂಚಾಲರಾಜತನೂಜೆ ಪಗೆವರ ಕಟುವಟ್ಟಿರ್ದ ಏಳಿದಿಕ್ಕೆಗೆ ಸಂತಸಂಬಟ್ಟು ಸೈರಿಸಲಾಱದೆ ಇಂತೆಂದಳ್: ಪಂಪಭಾ, ೭. ೩೮ ವ)

ಕಟ್ಟುವರ್

[ಕ್ರಿ] ಕಠಿಣವಾಗು (ಮುಳಿಸಂ ನೀನೆಂದಿಂಗಂ ಬಿಸುಡು ಈ ತಮ್ಮಂದಿರೊಡನೆ ಕಟ್ಟುವರ್ಪುದು ಪೆಂಪೇಂ: ಆದಿಪು ನರಸಿಂ, ೧೪. ೧೨೮)

ಕಟ್ಟೇಕಾಂತ

[ನಾ] [ಕಡಿದು ಏಕಾಂತ] ತುಂಬ ರಹಸ್ಯ (ಕರ್ಣನಂ ಕರೆದಾಳೋಚಿಸಿ ತಮ್ಮಯ್ಯನಲ್ಲಿಗೆ ಪೋಗಿ ಪೊಡೆಮಟ್ಟು ಕಟ್ಟೇಕಾಂತದೊಳ್ ಇಂತೆಂದಂ: ಪಂಪಭಾ, ೨. ೮೮ ವ)

ಕಂಠಗ್ರಹಂಗೆಯ್

[ಕ್ರಿ] ಕತ್ತು ಹಿಸುಕು (ಅಂತಕಂ ಕಡುಪಿಂ ಕಂಠಗ್ರಹಂಗೆಯ್ಯದೆ ಇಂ ತಡೆಯಂ: ಆದಿಪು, ೧. ೭೯)

ಕಂಠದಘ್ನ

[ನಾ] ಕಂಠ ಮುಳುಗುವುದು (ಆದಲೆ ನೀರ್ ಗುಂಡಿತ್ತು ಎಂದು ಈದಲೆಯೊಳೆ ನಿಂದು ಸತಿಗೆ ಹರಿಗಂ ತೋಱುತ್ತ ಆದರದೆ ಜಾನುದಘ್ನಂ ಉರೋದಘ್ನಂ ಕಂಠದಘ್ನಮೆಂಬ ಅಳುವಿಗಳಂ: ಪಂಪಭಾ, ೫. ೫೩)

ಕಂಠರವ

[ನಾ] ಧ್ವನಿ (ವಿಭ್ರಮಮಂ ಕಂಠರವಕ್ಕೆ ತಾಡನರವಂ ತಂದೀಯೆ ತತ್ಸೌಧದೊಳ್ ಸಮಸತ್ವಂಬಡೆವಂತಿರೆ ಆಯ್ತು ಸುರತಪ್ರಾರಂಭಕೋಳಾಹಳಂ: ಪಂಪಭಾ, ೪. ೧೦೯)

Search Dictionaries

Loading Results

Follow Us :   
  Download Bharatavani App
  Bharatavani Windows App