भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕಚ್ಚೆ

[ನಾ] ಪಂಚೆ ಅಥವಾ ಸೀರೆಯ ಚುಂಗು (ಪಿಡಿಕೆಯ್ ತೀವಿದ ಕೂರ್ಗಣೆ ಮಡಕಾಲ್ವರಂ ಅಲೆವ ಕಚ್ಚೆ ನಿಡಿಯಸಿಯ ಒಱೆ ಕರ್ಪಿಡಿದ ಪಣೆಕಟ್ಟು ಕೆಯ್ಪಡೆ ಬೆಡಂಗನೊಳಕೊಳೆ ಧನುರ್ಧರರ್ ಪೆಣೆದೆಚ್ಚರ್: ಪಂಪಭಾ, ೧೦. ೭೧)

ಕಚ್ಚೆಯೊಳಿಡು

[ಕ್ರಿ] ಕಚ್ಚೆಯಲ್ಲಿ ಇಡು, ಅಂಕೆಯಲ್ಲಿಡು (ಆವ ಗಂಡರುಮಂ ಕಚ್ಚೆಯೊಳಿಟ್ಟು ಕಟ್ಟುವೆಂ ಎನುತಿರ್ಪಾಕೆ ಗಂಧೇಭಕಂಧರಬಂಧಪ್ರವಿಭಾಸಿಯಪ್ಪ ಅರಿಗನಂ ಕಾಣುತ್ತೆ: ಪಂಪಭಾ, ೪. ೩೮)

ಕಂಜ

[ನಾ] ಕಮಲ (ತೋಱಿತ್ತು ಕೊಳಂ ಪರಿವಿಕಸಿತ ಕನಕ ಕಂಜ ಪಿಂಜಲ್ಕಪುಂಜಪಿಂಜರಿತಜಳಂ: ಪಂಪಭಾ, ೮. ೩೮)

ಕಂಜಕಿಂಜಲ್ಕ

[ನಾ] ತಾವರೆಯ ಕೇಸರ (ಕಂಜ ಕಿಂಜಲ್ಕ ಪುಂಜಪಿಂಜರಿತಾಚ್ಛೋದಕಪರಿಪೂರ್ಣತಟಾಕ: ಆದಿಪು, ೧. ೫೮)

ಕಂಜಪ್ರಿಯ

[ನಾ] ಸೂರ್ಯ (ಮಂಜಿನ ಮೞೆಯೊಳ್ ಮಸುಳ್ದಿರೆ ಕಂಜಪ್ರಿಯಕುಮುದಬಂಧುಗಳ್: ಆದಿಪು, ೬. ೬೧)

ಕಂಜವಕ್ತ್ರೆ

[ನಾ] ತಾವರೆಯ ಮುಖದವಳು (ಅೞಲ್ದೆರೆದೊಂದಿದ ಲುಂದುಗಳ್ಗೆ ನೀರ್ಗುಡಿದವೊಲಾದುದುಚ್ಚಳಿಸಿ ಸೂಸುವ ಕಣ್ಬನಿ ಕಂಜವಕ್ತ್ರೆಯಾ: ಆದಿಪು, ೧೨. ೨೬)

ಕಂಜೋದರ

[ನಾ] [ಕಂಜ+ಉದರ] ಕೃಷ್ಣ (ಏದೊರೆಯಂ ಯಮನಂದನಂ ಏದೊರೆಯಂ ಭೀಮಸೇನಂ ಏದೊರೆಯಂ ಕಂಜೋದರನ ಮೈದುನಂ ತಾಮೇ ದೊರೆಯರ್ ಅಮಳ್ಗಳ್: ಪಂಪಭಾ, ೭. ೧೭)

ಕಜ್ಜ

[ನಾ] ಕಾರ್ಯ (ಅವಸ್ತುಭೂತನೆಂದಾದಮೆ ಭೂತಳಂ ಪೞಿಯೆ ತೇಜಮೆ ಕೆಟ್ಟಪುದು ಇಂತಿದಕೆ ಪದ್ಮೋದರ ನೀನೆ ಪೇೞ್ ಬಗೆದು ಕಜ್ಜಮನೀಗಳೆ ದಿವ್ಯಚಿತ್ತದಿಂ: ಪಂಪಭಾ, ೯. ೧೮); [ನಾ] ಉಪಾಯ, ಪರಿಹಾರ (ಬಿದಿರ ಗಂಟುಗಳಂ ಕಳೆವಂತೆ ಮನ್ಮನಃಸ್ಖಲನೆಯಂ ಉಂಟುಮಾಡಿದಪುದು ಇಲ್ಲಿಗೆ ಕಜ್ಜಮದಾವುದು ಅಚ್ಯುತಾ: ಪಂಪಭಾ, ೧೨. ೧೦೩)

ಕಟ

[ನಾ] ಆನೆಯ ಗಂಡಸ್ಥಳ, ದವಡೆ (ಅಲ್ಪಘಾಟನುಂ ಉನ್ನತಶಿಖನುಂ ಪೀನಮಾಂಸಕಟಶ್ಲಿಷ್ಟನುಂ: ಆದಿಪು, ೧೨. ೫೬ ವ)

ಕಂಟಕ

[ನಾ] ತೊಂದರೆ ಮಾಡುವವನು (ದಶಕಂಠನಂ ತ್ರಿದಶಕಂಟಕನಂ ಕೊಲಲೆಂದು ರಾಮನಾದಂದಿನ ಸಾಹಸಂ ಮನದೊಳ್ ಆವರಿಸಿತ್ತು ಅಕಳಂಕರಾಮನಾ: ಪಂಪಭಾ, ೪. ೧೯); [ನಾ] ಮುಳ್ಳು (ತತ್ಕಮಳಕಾನನಕಂಟಕಲಗ್ನಪಾದನಾದವೊಲ್ ಉಡುಗುತ್ತುಂ ಆತ್ಮಕರಮಂ ರವಿ ಪೊರ್ದಿದಂ ಅಸ್ತಶೈಲಮಂ: ಪಂಪಭಾ, ೪. ೪೭)

ಕಟಕ

[ನಾ] ಕಡಗ, ಕೈಬಳೆ (ವಿಜಯಶ್ರೀನಿವಾಸ ಬಾಹು ಬಾಹುಯುಗಳಕ್ಕೆ ಕೇಯೂರ ಹಾರ ಅಂಗದಕಟಕಾಳಂಕಾರಂ ಮಾಡಿ: ಆದಿಪು, ೭. ೧೦೬ ವ); [ನಾ] ಸೈನ್ಯ (ಇಭಖಡ್ಗಿ ವ್ರಾತಾನಾನಾಹರಿಮಯ ಕಟಕಭ್ರಾಜಿತಂ: ಆದಿಪು, ೧೩. ೪೬); [ನಾ] ತಪ್ಪಲು (ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜಹರಿಣ ರುಧಿರನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ: ಪಂಪಭಾ, ೪. ೪೯ ವ)

ಕಂಟಕಗುಲ್ಮ

[ನಾ] ಮುಳ್ಳುಪೊದೆ (ಕಂಟಕಗುಲ್ಮ ವಿಷವಲ್ಲೀಸಂಘಾತ ಭೀಷಣಂಗಳುಂ ಜಾನುಭಂಜಿನಿಶೂಲಪ್ರಕರ ಪರಿವೃತಂಗಳುಂ: ಆದಿಪು, ೧೩, ೫೭ ವ)

ಕಟಕಟಘಾತ

[ನಾ] ಕಟಕಟವೆಂಬ ಹೊಡೆತ (ರುಧಿರಪ್ಲವಲಂಪಟಸಂಕಟೋತ್ಕಟಂ ಕಟಕಟಘಾತ ನಾಕತಟಸಂಕಟ ಸಂಗರರಂಗಭೂಮಿಯೊಳ್: ಪಂಪಭಾ, ೧೧. ೧೪೬)

ಕಟತಟ

[ನಾ] [ಆನೆಯ] ಕುಂಭಸ್ಥಲ, ಕಪೋಲ (ದಿಕ್ಕರಿ ಕಟತಟಕ್ಕೆ ಮದಲೇಖೆಯಿರ್ಪಂತೆ ಕೈಟಭಾರಾತಿಯ ವಿಶಾಲೋರುಸ್ಥಳಕ್ಕೆ ಕೌಸ್ತುಭಮಿರ್ಪಂತೆ ಸೊಗಯಿಸುತಿರ್ದುದು: ಪಂಪಭಾ, ೧. ೫೭ ವ)

ಕಟಾಕ್ಷ

ಕುಡಿನೋಟ (ಕಡುವೆಂಕೆಯಿಂ ಕಟಾಕ್ಷಂಬಿಡಿದಿೞಿವ ಲಲಾಟಕುಂಕುಮಸ್ವೇದಜಳಂ: ಆದಿಪು, ೧೧. ೫೪)

ಕಟಾಕ್ಷಮಾಲಾ

[ನಾ] ಕುಡಿನೋಟದ ಸಾಲು (ಏನೆಸೆದುದೊ ಕಟಾಕ್ಷಮಾಲಾಪ್ರಸರಂ ಭ್ರೂಲಾಸ್ಯಸೌಂದರಂ ನರ್ತಕಿಯಾ: ಆದಿಪು, ೯. ೩೪)

ಕಟಾಕ್ಷವಿಕ್ಷೇಪ

[ನಾ] ಕುಡಿನೋಟ, ಕಣ್ಣ ಸಂಜ್ಞೆ (ಕರಂ ಚೆಲ್ವೆನೆ ಮೆಱೆವ ಕುಮುದಕುವಳಯವನಂಗಳ್ ಆಕೆಯ ಕಟಾಕ್ಷವಿಕ್ಷೇಪಂಗಳ್: ಆದಿಪು, ೬. ೮೩)

ಕಟಾಕ್ಷೇಕ್ಷಣ

[ನಾ] [ಕಟಾಕ್ಷ+ಈಕ್ಷಣ] ಕಡೆಗಣ್ಣಿನ ನೋಟ (ಇದೆ ಮದನಭವನಂ ಇಂತಿದೆ ಮದನಾಮೃತಂ ಇದುವೆ ಮದನಸಾಯಕಂ ಪೋ ಮದನಮಹೋತ್ಸವಪದಂ ಎನಿಸಿದುದು ಕಟಾಕ್ಷೇಕ್ಷಣಂ ವಿಲೋಲೇಕ್ಷಣೆಯಾ: ಪಂಪಭಾ, ೮. ೬೧)

ಕಟಾಹ

[ನಾ] ಕಡಾಯಿ, ಕೊಪ್ಪರಿಗೆ (ಮುನ್ನೆ ಪೂೞ್ದ ಸುವರ್ಣಪೂರ್ಣ ಕಟಾಹಂಗಳಂ ತೋಱಿದಾಗಳ್: ಆದಿಪು, ೫. ೧೧ ವ)

ಕಟಿತಟ

[ನಾ] ಸೊಂಟ ಪ್ರದೇಶ (ಒರ್ವ ಪಾರ್ವಂ ವಿಸ್ತೀರ್ಣ ಜೀರ್ಣ ಕರ್ಪಟಾವೃತ ಕಟಿತಟನುಂ ಆಗಿ ಬಂದು ಕಣ್ಮುಚ್ಚಲ್ ಎಡೆವೇಡೆ ತನಗವರ್ ಪಾಸಲ್ಕೊಟ್ಟ ಕೃಷ್ಣಾಜಿನಮಂ ಪಾಸಿ ಪಟ್ಟಿರ್ದನಂ: ಪಂಪಭಾ, ೩. ೩೧ ವ)

Search Dictionaries

Loading Results

Follow Us :   
  Download Bharatavani App
  Bharatavani Windows App