भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಳರ್

ಇದ್ದಾರೆ, ಇದ್ದ ಹಾಗೆಯೇ (ನೀನುಳ್ಳೊಡೆ ಎಲ್ಲರುಂ ಒಳರ್ ಎಮಗೆ ಏನುಂ ಅೞಲ್ ಮನದೊಳಿಲ್ಲ ಅದೆಂತೆನೆ ಮಗನೇ ಭಾನುವೇ ಸಾಲದೆ ಪಗಲೆನಿತಾನುಂ ದೀವಿಗೆಗಳ್ ಉರಿದೊಡೆಂ ನಂದಿದೊಡೇಂ: ===, ೧೩. ೧೧)

ಒಳಱು

[ಕ್ರಿ] ಊಳಿಡು (ಪ್ರತಿಮೆಗಳೞ್ತು ಮೊೞಗಿದುದತಿರಭಸದೆ ಧಾತ್ರಿ ದೆಸೆಗಳುದುರಿದುವು ಭೂತಪ್ರತತಿಗಳಾಡಿದುವು ಒಳಱಿದವು ಅತಿ ರಮ್ಯಸ್ಥಾನದೊಳ್ ಶಿವಾನಿವಹಂಗಳ್: ಪಂಪಭಾ, ೧. ೧೩೩); [ಕ್ರಿ] ಕಿರಿಚು, ಅರಚು (ಉರಿ ಕೊಳೆ ದೆಸೆಗಾಣದೆ ದೆಸೆವರಿವರಿದು ಕುಜಂಗಳಂ ಪಡಲ್ವಡಿಸಿ ಭಯಂಬೆರಸು ಒಳಱೆ ನೆಗೆದುದಾ ವನ ಕರಿ ಶರಭ ಕಿಶೋರಕಂಠಗರ್ಜನೆ ಬನದೊಳ್: ಪಂಪಭಾ, ೫. ೯೧)

ಒಳವು

ಇವೆ, ಉಂಟು (ಸಕಳೋರ್ವಿಯೊಳ್ ಉರ್ವೀಧರಂಗಳ್ ಇನ್ನವುಂ ಒಳವೇ: ಆದಿಪು, ೯. ೧೨೧)

ಒಳವೊಗು

[ಕ್ರಿ] ಒಳಪೊಗು, ಸೇರಿಕೊಳ್ಳು (ಸುಯೋಧನಂ ಎನಗೆ ಒಳ್ಳಿಕೆಯ್ದ ಕೃತಮಂ ಪೆಱಗಿಕ್ಕಿ ನೆಗೞ್ತೆ ಮಾಸೆ ನಣ್ಪಿನ ನೆವದಿಂದೆ ಪಾಂಡವರಂ ಆಂ ಒಳವೊಕ್ಕಡೆ ನೀಮೆ ಪೇಸಿರೇ: ಪಂಪಭಾ, ೯. ೬೮)

ಒಳಸಾರ್

[ಕ್ರಿ] ನುಸುಳಿಕೊಂಡು ಹೋಗು (ಆಕುಳವ್ಯಾಕುಳರಾಗಿ ನಾಣ್ಚಿ ಜಗುೞ್ದಿರ್ವರುಂ ಅಂದು ಒಳಸಾರ್ದು ಪೋಪುದುಂ: ಆದಿಪು, ೩. ೮೯)

ಒಳಸೋರ್

[ಕ್ರಿ] ಎದೆಗುಂದು (ಎಂತು ಇದಿರಾಂತೆ ಅಂತೆ ಕಲಿಯಾಗು ಒಳಸೋರದಿರ್ ಎಂದು ಭೀಮಂ ಓರಂತೆ ಕನಲ್ದು ತಿಣ್ಣಂ ಇಸೆ: ಪಂಪಭಾ, ೧೦. ೯೮)

ಒಳೆಂ

ಇದ್ದೇವೆ (ಇಱಿವೊಡೆ ನೆರವು ಒಳೆಂ ಇನಿಬರುಂ ಇಱಿ ಕಲಹಮಪಾಯಬಹುಳಂ ನಯದತ್ತೆಱಗುವೊಡೆ ಸಂಧಿ ಹರಿಗನೆಳುಱುಗುಂ: ಪಂಪಭಾ, ೧೩. ೨೩)

ಒಳ್ಗಲಿ

[ನಾ] [ಒಳ್+ಕಲಿ] ಒಳ್ಳೆಯ ಶೂರ (ಕಲಿಯನೆ ಪಂದೆ ಮಾೞ್ಪ ಒಳ್ಗಲಿಯಂ ಕಡುವಂದೆ ಮಾೞ್ಪ ತಕ್ಕನಂ ಪೊಲೆಯನೆ ಮಾೞ್ಪ ಮುಂ ಪೊಲೆಯನಂ ನೆಱೆ ತಕ್ಕನೆ ಮಾೞ್ಪ: ಪಂಪಭಾ, ೧೨. ೯೨)

ಒಳ್ಗುಡಿ

[ನಾ] ಒಳ್ಳೆಯ ಬಾವುಟ (ಓಳಿದೋರಣಮಾಯ್ತು ಹಾರದ ಪಚ್ಚೆಸಾರದ ಮಾಲೆ ಸೌಧಾಳಿಯ ಒಳ್ಗುಡಿಯಾಯ್ತು ಚೀನದ ಸೂಯಿಯಾಣದ ಬಟ್ಟೆ: ಪಂಪಭಾ, ೧೪. ೧೫)

ಒಳ್ಗುಲ

[ನಾ] [ಒಳ್+ಕುಲ] ಸತ್ಕುಲ, ಒಳ್ಳೆಯ ವಂಶದಲ್ಲಿ ಹುಟ್ಟಿದ (ಶಂಖದೊಳ್ ಪಾಲೆಱೆದಂತಿರೆ ಮಲಿನಮಿಲ್ಲದ ಒಳ್ಗುಲದ ಅರಸುಗಳಿರೆ ನೀನುಂ ಅಗ್ರಪೂಜೆಯಂ ಆಂಪಾ: ಪಂಪಭಾ, ೬. ೫೦)

ಒಳ್ದೊಡೆ

[ನಾ] ಒಳ ತೊಡೆ (ಒಡ್ಡಿದ ಪೆರ್ಮೊಲೆ ತೆಳ್ವಸಿಱ್ ಕರಂ ನೆಱೆದ ನಿತಂಬ ಇಂಬುವಡೆದ ಒಳ್ದೊಡೆ ನೆಕ್ಕರವದ್ದೆ ತಾನೆ ಪೋ ಕಿಱುದೊಡೆ ಎಂದು ಧಾತ್ರಿ ಪೊಗೞ್ಗುಂ: ಪಂಪಭಾ, ೧. ೧೦೮)

ಒಳ್ನುಡಿ

[ನಾ] ಒಳ್ಳೆಯ ಮಾತು (ಒಳ್ನುಡಿಗೇಳ್ದೊಡಂ ಇಂಪನಾಳ್ದ ಗೇಯಂ ಕಿವಿವೊಕ್ಕೊಡಂ .. .. ನೆನೆವುದೆನ್ನ ಮನಂ ಬನವಾಸಿ ದೇಶಮಂ: ಪಂಪಭಾ, ೪. ೩೦)

ಒಳ್ಪನಾಳ್

[ಕ್ರಿ] ಒಳ್ಳೆಯತನ ಅಥವಾ ಸೊಗಸನ್ನು ಹೊಂದು (ಅಪೂರ್ವ ಶುಭಲಕ್ಷಣ ದೇಹದೊಳ್ಪನಾಳ್ದು ಸಂದ ಅಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ: ಪಂಪಭಾ, ೧. ೪)

ಒಳ್ಪು

[ನಾ] ಒಳ್ಳೆಯತನ, ಸಜ್ಜನಿಕೆ (ಗುಣಾರ್ಣವನೊಳ್ಪು ಮನ್ಮನೋವಾಸಮನೆಯ್ದೆ ಪೇೞ್ದಪೆನಲ್ಲದೆ ಗರ್ವಮೆ ದೋಷಮ್ ಅೞ್ತಿಗಂ ದೋಷಮೆ: ಪಂಪಭಾ, ೧. ೧೩); [ನಾ] ಚೆಲುವು (ಪಿಡಿದೆಡಗಯ್ಯ ಚಾಮರದದಕ್ಷಿಣಹಸ್ತದ ಪದ್ಮದ ಒಳ್ಪು ಒಡಂಬಡೆ: ಪಂಪಭಾ, ೩. ೯೯); [ನಾ] ಒಳಿತು (ಅವನೀನಾಥನ ಗೆಯ್ದ ಪೊಲ್ಲಮೆಗಂ ಎನ್ನ ಒಳ್ಪಿಂಗಂ ಇಂ ಸಕ್ಕಿಯಾಗಿ ಅವಂ ಈವಂತುಟಂ ಅದಂ ಬಲ್ಲಂತು ಕಾಲ್ಗುತ್ತಿ ನೋಡು: ಪಂಪಭಾ, ೯. ೨೬)

ಒಳ್ಪೊಗು

[ಕ್ರಿ] ಒಳಹೊಗು (ಮುಗಿಲ ಬೆಳ್ಪೊಳಪೊಕ್ಕು ತಳ್ಪೊಯ್ಯೆ ಬಳ್ವಳ ನೀಳ್ದಿರ್ದ ದಿಶಾಳಿ: ಪಂಪಭಾ, ೭. ೭೧)

ಒಳ್ಮೊಗ

[ನಾ] ಚೆಲುವಾದ ಮುಖ (ನಲ್ಲರ ಒಳ್ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡೆ: ಪಂಪಭಾ, ೪. ೨೮)

ಒಳ್ವರಕೆ

[ನಾ] [ಒಳ್+ಪರಕೆ] ಒಳ್ಳೆಯ ಆಶೀರ್ವಾದ (ರಜಂಬೊರೆದಳಿಮಾಲೆ ಮಾಲೆಯನೆ ಪೋಲೆ ಪಯೋಜಜ ಪಾರ್ವತೀಶರ ಒಳ್ವರಕೆಯನಾಂತು: ಪಂಪಭಾ, ೧೨. ೨೨೧)

ಒಳ್ವಾತು

[ನಾ] ಒಳ್ಳೆಯ ಮಾತು (ಅಕ್ಕರಗೊಟ್ಟಿಯುಂ ಚದುರರ ಒಳ್ವಾತುಂ ಕುಳಿರ್ ಕೋೞ್ಪ ಜೊಂಪಮುಂ ಏವೇೞ್ಪುದನುಳ್ಳ ಮೆಯ್ಸುಕಮುಂ: ಪಂಪಭಾ, ೪. ೩೧)

ಒಳ್ವೆಂಡಿರ್

[ನಾ] ಸುಂದರ ಹೆಣ್ಣು (ಕುಡುಮಿಂಚಂ ಮಸೆದನ್ನರಪ್ಪ ಪಲರ್ ಒಳ್ವೆಂಡಿರ್ ಮನಂಗೊಂಡು ಬಂದೊಡಮಾ ರಾಜಕುಮಾರನೊಲ್ಲದೆ: ಆದಿಪು, ೩. ೧೨)

ಒಳ್ವೆಸ

[ನಾ] ಚೆನ್ನಾದ ಸೇವೆ (ಪತ್ತಿದಂಗನೆಯರ ಒಳ್ವೆಸಕೆಯ್ವ ಅಮರೇಂದ್ರ ರಾಗಸಂಪತ್ತು ಮನಂಗೊಳುತ್ತುಮಿರೆ: ಆದಿಪು, ೮. ೬೧)

Search Dictionaries

Loading Results

Follow Us :   
  Download Bharatavani App
  Bharatavani Windows App