भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಯ್ಕನೆ

[ಅ] ನೇರವಾಗಿ (ನೆಱೆಯೆ ಧನುರ್ವಿದ್ಯೆಯ ಕಣ್ದೆಱೆವಿನೆಗಂ ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್ ಮೆಱೆದಪ್ಪೆಂ ಎನ್ನ ವಿದ್ದೆಯಂ ನೆರೆದು ನೋೞ್ಪುದನಿಬರುಮೀಗಳ್: ಪಂಪಭಾ, ೨. ೬೫)

ಒಯ್ಯನಾಗು

[ಕ್ರಿ] ಕ್ಷೀಣವಾಗು, ಕಾಂತಿಹೀನವಾಗು (ಸೊಡರ್ಗುಡಿ ಒಯ್ಯನಾಗೆ ಪೊಸಮಲ್ಲಿಗೆ ಕಂಪುನಾಱೆ ತಣ್ಪಿಡಿದ ಎಲರ್ ಊದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಂಗಳ ಗೆಡೆಗೊಳೆ: ಪಂಪಭಾ, ೪. ೧೧೦)

ಒಯ್ಯನೆ

[ಅ] ಮೆಲ್ಲನೆ, ಮೃದುವಾಗಿ (ಎಂದು ಒಯ್ಯನೆ ಇೞಿಪೆ ನೆಲದೊಳ್ ದುಂದುಭಿರವದೊಡನೆ ವಿಜಯಘೋಷಣೆ ನೆಗೞ್ದತ್ತು: ಆದಿಪು, ೧೪. ೧೧೩); [ಅ] ಗಮನವಿಟ್ಟು (ಭೇದಿಸಲೆಂದೆ ದಲ್ ನುಡಿದರೆನ್ನದಿರು ಒಯ್ಯನೆ ಕೇಳ ಕರ್ಣ ನಿನ್ನಾದಿಯೊಳ್ ಅಬ್ಬೆ ಕೊಂತಿ ನಿಗಮ್ಮನಹರ್ಪತಿ: ಪಂಪಭಾ, ೯. ೬೪) [ಈ ಪದ್ಯ ವೆಂಕಟಾಚಲಶಾಸ್ತ್ರಿಯವರ ಆವೃತ್ತಿಯಲ್ಲಿ ಬಿಟ್ಟುಹೋಗಿದೆ]

ಒಯ್ಯನೊಯ್ಯನೆ

[ಅ] ನಿದನಿದಾನವಾಗಿ (ಅಮರ್ದ ಲೀಲೆಯಿಂ ಪೆಂಡವಾಸದೊಳ್ ಪೆಂಡಿರೊಯ್ಯನೊಯ್ಯನೆ ನಡೆದರ್: ಆದಿಪು, ೧೧. ೪೧)

ಒರಸು

[ಕ್ರಿ] ಉಜ್ಜು, ಘರ್ಷಿಸು (ಬೆರಲೊಳ್ ಬೀಣೆಯ ತಂತಿಗಳ್ ಒರಸಿದ ಕೆಂಗಲೆಗಳ್ ಅಕ್ಷಮಾಲೆ: ಪಂಪಭಾ, ೬. ೧೦)

ಒರೆ

[ನಾ] ಪರೀಕ್ಷೆ (ಶರ ಚಾಪ ಚಕ್ರ ಭೀಕರಕರವಾಳಾಯುಧ ವಿರಾಜಿ ಮತ್ಕರಯುಗಂ ಇಂದು ಒರೆಗೆ ಇಡೆ ಪೆಱಂಗೆ ಮುಗಿವುದೆ: ಆದಿಪು, ೧೨. ೧೦೦); [ನಾ] ಸಮಾನ (ಸಮಕಟ್ಟಿಂಗೆ ಒರೆಗೆ ಆರುಂ ಇಲ್ಲ ಅರಿಗ ಕೇಳ್ ನಿನ್ನೊಳ್: ಪಂಪಭಾ, ೫. ೭೬)

ಒರ್ಗುಡಿಸು

[ಕ್ರಿ] ಓಲು, ಓರೆಯಾಗು (ಇಡಿದಿರೆ ರೋಮಕೂಪದೊಳಗೆ ಉರ್ಚಿದ ಸಾಲಸರಲ್ಗಳುಂ ತೆಱಂಬಿಡಿದಿರೆ ಬೆಟ್ಟು ಒರ್ಗುಡಿಸಿದಂತೆ ನೆಱಲ್ದಿರೆ .. .. ಬಿೞ್ದಂ ಏನೆಸೆದನೋ ಶರಶಯ್ಯೆಯೊಳ್ ಅಂದು ಸಿಂಧುಜಂ: ಪಂಪಭಾ, ೧೩, ೬೨)

ಒರ್ಬಳಸು

[ನಾ] ಒಂದು ಸುತ್ತು (ವನದಹನಂ ವನಾಂತರಮಂ ಒರ್ಬಳಸಾಗಿರೆ ಮುತ್ತಿ ಸುತ್ತಿ ನಡುವಿರ್ದುಂ ಆ ಮರನನೞ್ವಿದುದು: ಆದಿಪು, ೯. ೫೯)

ಒರ್ಮೆ

[ನಾ] ಒಂದು ಬಾರಿ (ಎಱಗಿಯುಂ ಒರ್ಮೆ ದಿವ್ಯಮುನಿಗಾರ್ತು ಉಪವಾಸಮನಿರ್ದು ಒರ್ಮೆ: ಪಂಪಭಾ, ೧. ೧೩೫)

ಒರ್ಮೆ ನುಡಿ

[ಕ್ರಿ] ಒಂದು ಬಾರಿ ಹೇಳು (ರಂಗತ್ತರಂಗ ವಾರ್ಧಿಚಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ ಗಾಂಗೇಯನುಂ ಪ್ರತಿಜ್ಞಾಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ: ಪಂಪಭಾ, ೧. ೮೪)

ಒರ್ಮೆಗೆ

[ಅ] ಒಂದು ಸಲಕ್ಕೆ (ಅಸದಾಗ್ರಹಮಂ ಬಿಸುಡುವುದು ಒರ್ಮೆಗೆ ಮಱೆವುದೆನ್ನ ದುರ್ವಿಳಸನಮಂ: ಆದಿಪು, ೧೪. ೧೩೧)

ಒರ್ಮೆಯೆ

[ಅ] ಒಮ್ಮೆಗೇ, ಇದ್ದಕ್ಕಿದ್ದಂತೆ (ಭೀಕರರಥಚಕ್ರಮಂ ಪಿಡಿದು ನುಂಗಿದಳ್ ಒರ್ಮೆಯೆ ಧಾತ್ರಿ ಕೋಪದಿಂ: ಪಂಪಭಾ, ೧೨. ೨೦೬); ಒಟ್ಟಿಗೆ, ಒಂದೇ ಬಾರಿಗೆ (ಆ ಸತಿಯಿಕ್ಕಿದ ಕಣ್ಣ ನೀರ ಧಾರೆಗಳೊಳೆ ನಾಂದು ಎಲರ್ಚಿ ಪೊದಳ್ದು ಒರ್ಮೆಯೆ ಪಾಱಿದುವು ಉನ್ಮದಾಳಿಗಳ್: ಪಂಪಭಾ, ೫. ೧೦)

ಒರ್ಮೊದಲ್

[ಅ] ಒಂದೇ ಬಾರಿಗೆ (ತ್ರಿದಶೇಂದ್ರಾಮರರ್ ಕಳಕಳಪ್ರಧ್ವಾನದಿಂ ಶಾತಕುಂಭದ ಕುಂಭಂಗಳ ನೀರಂ ಒರ್ಮೊದಲೆ ಭೋರ್ಭೋರೆಂದು ಪೊಯ್ವಾಗಳ್: ಆದಿಪು: ೭. ೯೭); [ಅ] ಮೊದಲಿಗೇ (ಅನಂಗನಿರ್ದೆಡೆವೇೞ್ವವೊಲ್ ಒರ್ಮೊದಲೆ ಗೀತವಾದಿತರವಂ ಏವೇೞ್ವುದೊ ಸಭೆಯಂ ರಸದೊಳ್ ಪೂೞ್ದವೊಲೆಸೆದತ್ತು: ಆದಿಪು, ೯. ೧೪); [ಅ] ಕೂಡಲೇ (ಸಾರೆಯೊಳ್ ಅೞ್ವ ಮಹಾದ್ವಿಜನಾರಿಯ ಮಮತಾವಿಪೂರಿತ ಊರ್ಜಿತರವದಿಂ ಕಾರುಣ್ಯಾಕ್ರಂದನಂ ಅನಿವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್: ಪಂಪಭಾ, ೩. ೨೪)

ಒರ್ಮೊರ್ಮೆ

[ನಾ] ಒಂದೊಂದು ಬಾರಿ (ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ: ಪಂಪಭಾ, ೩. ೯)

ಒರ್ವ

[ನಾ] ಒಬ್ಬ (ಒರ್ವ ಗೋವಳಂ ಅನಿಬರ ಸಾವುಮಂ ಕಂಡು: ಪಂಪಭಾ, ೮. ೯೫ ವ)

ಒರ್ವಾಗ

[ನಾ] ಒಂದು ಭಾಗ, ಪಾಲು (ಏಗೆಯ್ದುಂ ಎನ್ನ ಧರೆಯ ಒರ್ವಾಗಮುಮಂ ನೀಮೆ ಬೆಸಸೆಯುಂ ಕುಡದೆ ಇನಿತಂ ಮೇಗಿಲ್ಲದೆ ನೆಗೞ್ದು ಅೞಿದಂ ನಾಗಧ್ವಜಂ: ಪಂಪಭಾ, ೧೪. ೬)

ಒರ್ವುಳಿ

[ನಾ] ಒಂದು ಕಡೆ, ಗುಂಪಾಗಿ (ತಮ್ಮನಿಬರುಮಂ ಅಂದು ಒರ್ವುಳಿ ನೆರೆದು ಅತಿಲಲಿತದೋರ್ವೀಸುಖಮಂ ಉಣುತುಮಿರೆ ಪಲಕಾಲಂ: ಆದಿಪು, ೬. ೪)

ಒರ್ವೆಸರ್

[ನಾ] ಒಂದೇ ಹೆಸರು, ಅದೇ ಹೆಸರು (ಹತೋಶ್ವತ್ಥಾಮಾ ಎನೆ ನೃಪಂ ಅಶ್ವತ್ಥಾಮನೆ ಗೆತ್ತು ಒಣರ್ದಂ ಒವಜಂ ಒರ್ವೆಸರಿಭಮಂ: ಪಂಪಭಾ, ೧೨. ೨೭)

ಒಱಗು

[ಕ್ರಿ] ಮಲಗು (ಅಗ್ನಿಹೋತ್ರಶಾಲೆಗೆ ವಂದು ದರ್ಭಶಯನದೊಳ್ ಒಱಗಿ ಬೆಳಗಪ್ಪ ಜಾವದೊಳ್: ಪಂಪಭಾ, ೧೩. ೩೨ ವ)

ಒಱಂಟ

[ನಾ] ಒರಟ, ಗಡುಸಾದವನು (ಕಣ್ಗಾಣದ ಇಂತಪ್ಪ ಏಕಗ್ರಾಹಿಗಂ ಒಱಂಟಂಗಂ ರಥಮಂ ಎಸಗೆಂ ಎಂದು ವರೂಥದಿಂದ ಇೞಿದು ಪೋಗೆ: ಪಂಪಭಾ, ೧೨. ೨೦೫ ವ)

Search Dictionaries

Loading Results

Follow Us :   
  Download Bharatavani App
  Bharatavani Windows App