भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏವಾೞ್ತೆ

[ನಾ] ಏನು ಬದುಕು, ಏವಾರ್ತೆ (ಬೆಸನಾವುದು ಎಮಗೆ ಬೆಸನಂ ಬೆಸಸು ಏವಾೞ್ತೆಯೆಂದು ಮುಂದಿಟ್ಟರ್ ಸ್ರಗ್ವಸನವಿಲೇಪನ ಭೂಷಾಪ್ರಸರಂಗಳಂ: ಆದಿಪು, ೯. ೧೨೫)

ಏವಾೞ್ತೆ

[ನಾ] [ಏ+ಬಾೞ್ತೆ] ಏನು ಪ್ರಯೋಜನ (ಕಿಡುಗುಮೆ ರಾಜ್ಯಂ ರಾಜ್ಯದ ತೊಡರ್ಪು ಅದೇವಾೞ್ತೆ ನನ್ನಿಯ ನುಡಿಯಂ ಕಿಡೆ ನೆಗೞೆ ನಾನುಂ ಎರಡಂ ನುಡಿದೊಡೆ ಹರಿಹರಹಿರಣ್ಯಗರ್ಭರ್ ನಗರೇ: ಪಂಪಭಾ, ೧. ೮೨)

ಏವಿರಿದು

[ನಾ] [ಏ+ಪಿರಿದು] ಏನು ದೊಡ್ಡದು, ಯಾವ ಮಹತ್ವದ್ದು (ಅವರಿರ್ಪೆಡೆಯುಂ ವಿರಾಟನಿರ್ಪ ಅಱಿಕೆಯ ಪಟ್ಟಣಂ ನಮಗೇವಿರಿದಪ್ಪುದು: ಪಂಪಭಾ, ೮. ೮೯)

ಏವಿರಿಯ

[ನಾ] ಏನು ದೊಡ್ಡವನು, ಏನು ಮಹಾ ಆದವನು (ಕೊಂದೆವಿಲ್ಲವಿನ್ನುಂ ಬಳವತ್ ಕ್ರೂರಾರಾತಿಯಂ ಉಪಸಂಹಾರಿಪೆವು ಏವಿರಿನಾದಂ ಎಂಬುದುಂ: ಪಂಪಭಾ, ೧೨. ೧೨೮)

ಏವುದು

[ಸ] ಏನು ಮಾಡುವುದು (ಪೋ ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಂ ಎಂತು ಉಡಿಸುವುದಕ್ಕ ನೂಪುರಮಂ ಈ ತೊಡವು ಏವುದೋ ರೂಪ ಸಾಲದೇ: ಪಂಪಭಾ, ೩. ೪೬); [ಸ] ಏನು ಪ್ರಯೋಜನ (ಭೂವಲಯಮನಯ್ಯನಿತ್ತುದುಮಂ ಆಂ ನಿನಗಿತ್ತೆಂ ಇದೇವುದಣ್ಣ ನೀನೊಲಿದ ಲತಾಂಗಿಗಂ ಧರೆಗಂ ಆಟಿಸಿದಂದು ನೆಗೞ್ತೆ ಮಾಸದೇ: ಆದಿಪು, ೧೪. ೧೩೦); [ಸ] ಯಾವುದು, ಏತಕ್ಕೆ (ಮಾರೀಚಿ ತೊಡರ್ಪುಳಿಂದೆ ಸರದಿಂ ಕಂಪಿಲ್ಲ ಚಿಂತಾಮಣಿಗೇವುದಕ್ಕ ದಳಮಿಲ್ಲ ಈ ಕಕ್ಕರಕ್ಕಿಂತುಟಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್: ಪಂಪಭಾ, ೪. ೮೮)

ಏವೆಸಗೊಳ್

[ಕ್ರಿ] [ಏ+ಬೆಸಗೊಳ್] ಏನೆಂದು ಕೇಳುವುದು (ಇನ್ನು ಏವೆಸಗೊಳ್ವುದೊ ಕಡುವೇಗದಿಂ ಅಸಕೞಿದುದು ಮನಮುಮಂ ತುರಂಗಮರತ್ನಂ: ಆದಿಪು, ೧೩. ೩೯)

ಏವೇಡು

[ಗು] ಬಯಸಿದ್ದು (ಅಕ್ಕರಗೊಟ್ಟಿಯುಂ ಚದುರರ ಒಳ್ವಾತುಂ ಕುಳಿರ್ ಕೋೞ್ಪ ಜೊಂಪಮುಂ ಏವೇೞ್ಪುದನುಳ್ಳ ಮೆಯ್ಸುಕಮುಂ: ಪಂಪಭಾ, ೪. ೩೧)

ಏವೈಸು

[ಕ್ರಿ] ದುಃಖಪಡು (ಕೌರಬಲಪ್ರಧಾನನಾಯಕನಪ್ಪ ಚಿತ್ರಸೇನಂ ಕೃತವರ್ಮನ ಕೆಯ್ಯೊಳ್ ಅತೀತನಾದುದರ್ಕೆ ಏವೈಸಿ: ಪಂಪಭಾ, ೧೨. ೬೧ ವ)

ಏಸಾಡು

[ಕ್ರಿ] ಬಾಣ ಬಿಡು, ಯುದ್ಧ ಮಾಡು (ಉತ್ತರಭರತದೊಳಾದ ಆಪತ್ತಂ ನೀನಱಿಯೆಯಕ್ಕುಂ ಅನಿತುಂ ಬಲಮಂ ಮುತ್ತಿ ಚಿಲಾತಾವರ್ತರ್ ಸುತ್ತಲುಂ ಏಸಾಡಿ ಪಿರಿದು ತಿಣಿಕಂ ತಂದರ್: ಆದಿಪು, ೧೪. ೭೦)

ಏಸಾಡು

[ಕ್ರಿ] (√ಇಸು) ಬಾಣ ಪ್ರಯೋಗಮಾಡು (ಅನಿತುಂ ಬಲಮಂ ಮುತ್ತಿ ಚಿಳಾತಾವರ್ತರ್ ಸುತ್ತಲುಂ ಏಸಾಡಿ ಪಿರಿದು ತಿಣಿಕಂ ತಂದರ್: ಆದಿಪು, ೧೪. ೭೦)

ಏಸು

[ನಾ] ಬಾಣಪ್ರಯೋಗದ ಬಗೆ (ಒಂದೆ ಕೆಲ್ಲಂಬಿನಿಂ ಮೆಲ್ಲಗೆ ಪಾರ್ದು ಆರ್ದು ಎಚ್ಚಂ ಏಸಿಂ ತಲೆ ಪಱಿದು ಸಿಡಿಲ್ದತ್ತ ಬೀೞ್ವನ್ನಮಾಗಳ್: ಪಂಪಭಾ, ೧೨. ೧೮)

ಏಹಿ

[ಕ್ರಿ] ಹೋಗು (ಮನದೊಳ್ ನಿಷ್ಕಾರಣಂ ಕಾಯ್ವರೇಂ ಪರಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳ್ದೆನಿಲ್ಲಾಗದೇ: ಪಂಪಭಾ, ೭. ೩೫)

ಏಳಾ

[ನಾ] ಏಲಕ್ಕಿ (ನೆಗೞ್ದೀ ಕರ್ಪೂರ ಕಾಳಾಗರು ಮಳಯಮಹೀಜಂಗಳ್ ಏಳಾಲತಾಳೀ ಸ್ಥಗಿತಂಗಳ್ ಕಣ್ಗೆವಂದಿರ್ದುವಂ ಇವನೆ ವಲಂ ಕೊಂಬುಗೊಂಡ ಅಂಗಜಂ: ಪಂಪಭಾ, ೪. ೨೩)

ಏಳಾವನ

[ನಾ] ಏಲಕ್ಕಿ ತೋಟ ಚೂತ ಸಪ್ತಚ್ಧದ ಏಳಾವನಸುರಭಿ .. .. ಆಶಾಚಕ್ರಂ ಗಂದೇಭಚಕ್ರಂ: ಆದಿಪು, ೧೧. ೩೦)

ಏಳಿದಂಬಗೆ

[ಕ್ರಿ] ತಿರಸ್ಕಾರದಿಂದ ಕಾಣು (ಶಲ್ಯನಂ ಅಂದು ಅಖಲ್ಯನಂ ಬಗೆವವೊಲ್ ಏಳಿದಂಬಗೆದು ದಂತಿಯಂ ಆಗಡೆ ತೋಱಿಕೊಟ್ಟು: ಪಂಪಭಾ, ೧೦. ೧೧೧)

ಏಳಿದವಾಗು

[ಕ್ರಿ] ತಿರಸ್ಕಾರಯೋಗ್ಯವಾಗು (ಉತ್ತಮಕುಲಶೈಲಂ ಉನ್ನತಿಯಂ ಏಳಿದವಾಗೆ ಬಿಸೞ್ಪೊಡಂ ಬಿಸುೞ್ಕೆಮ ಬಿಸುಡೆಂ ಮದೀಯ ಪುರುಷವ್ರತಮೊಂದುಮಂ: ಪಂಪಭಾ, ೧. ೮೩)

ಏಳಿದಿಕ್ಕೆ

[ನಾ] ದೀನತನ (ಪಾಂಚಾಲರಾಜತನೂಜೆ ಪಗೆವರ ಕಟ್ಟುವಟ್ಟಿರ್ದ ಏಳಿದಿಕ್ಕೆಗೆ ಸಂತಸಂಬಟ್ಟು ಸೈರಿಸಲಾಱದೆ ಇಂತೆಂದಳ್: ಪಂಪಭಾ, ೭. ೩೮ ವ)

ಏಳಿಸು

[ಕ್ರಿ] ತಿರಸ್ಕಾರಮಾಡು, ಅವಹೇಳನಗೈ (ದಿವಮಂ ಏಳಿಪಂತು ಮಿಳಿರ್ವ ವಿವಿಧಕೇತನಂಗಳಿಂ ಸದಾನಿಕೇತನಂಗಳಿಂ: ಪಂಪಭಾ, ೧. ೫೮)

ಏೞು

[ನಾ] ಸ್ತ್ರೀ, ದ್ಯೂತ, ಬೇಟೆ, ಮದ್ಯಪಾನ, ವಾಕ್ಪಾರುಷ್ಯ, ದಂಡಪಾರುಷ್ಯ, ಅರ್ಥದೂಷಣ ಎಂಬ ಏಳು ವ್ಯಸನಗಳು (ಪರಿಕಿಪುದು ಒಂದಱಿಂದೆ ಎರಡಂ ಓತುಕೊಳ್ವುದು ಮೂಱಱಿಂದೆ ನಾಲ್ಕರಿದಱಿದು ಅಯ್ದಱಿಂದೆ ನೆಱೆ ಕಲ್ವುದು ನಿರ್ಣಯಂ ಆಱಱೊಳ್ ಪರಿಣತನಪ್ಪುದು ಏೞಱೊಳಂ ಒಂದದೆ ನಿಲ್ವುದು: ಪಂಪಭಾ, ೧೩. ೬೬)

ಏೞು ಜನಪದ

[ನಾ] ಏಳು ಜನಸಮುದಾಯ (ಆ ತಿರ್ಯಗ್ಲೋಕದ ನಟ್ಟ ನಡುವೆ ಲವಣಜಲಧಿಪರಿವೃತಮಾಗಿ ಭರತ ಹೈಮವತ ಹರಿವರ್ಷ ವಿದೇಹ ರಮ್ಯಕ ಹೈರಣ್ಯವತ ಐರಾವತಂಗಳೆಂಬ ಏೞು ಜನಪದಂಗಳಿಂದಂ: ಆದಿಪು, ೧. ೪೮ ವ)

Search Dictionaries

Loading Results

Follow Us :   
  Download Bharatavani App
  Bharatavani Windows App