भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏದೊರೆಯಂ

[ನಾ] ಯಾರು ಸಮರ್ಥ (ಪೆಱರಾತಿತೀರ್ಥಕರನಂ ನಿಱಿಸಲ್ಕೆ ಏದೊರೆಯರ್: ಆದಿಪು, ೧೦. ೧); ಎಂಥವನು (ಏದೊರೆಯಂ ಯಮನಂದನಂ ಏದೊರೆಯಂ ಭೀಮಸೇನಂ ಏದೊರೆಯಂ ಕಂಜೋದರನ ಮೈದುನಂ ತಾಮೇ ದೊರೆಯರ್ ಅಮಳ್ಗಳ್: ಪಂಪಭಾ, ೭. ೧೭)

ಏದೊರೆಯದು

[ನಾ] ಎಂಥದ್ದು (ಬರಿಸಿದ ಕಾರಣಮಾವುದೊ ತರುಣಿ ಮುನೀಶ್ವರನ ಮಂತ್ರಮೇದೊರೆಯೆಂದಾಂ ಮರುಳಿಯೆನೆ ಅಱಿದುಮಱಿಯದೆ ಬರಿಸಿದೆನಿನ್ನೇೞಿಂ ಎಂದೊಡಾಗದು ಪೋಗಲ್: ಪಂಪಭಾ, ೧. ೯೩)

ಏನಂ ತೀರ್ಚುವುದು

[ಕ್ರಿ] ಏನನ್ನು ಬಗೆಹರಿಸಬೇಕು (ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್: ಪಂಪಭಾ, ೧.

ಏನಾನುಮಂ

[ಅ] ಏನಾದರೂ ಅದನ್ನು (ನನೆಯಂಬಂ ತೆಗೆದೆಚ್ಚಂ ಅಂಗಜನ ತಪ್ಪು ಏನಾನುಮಂ ತೋಱೆ ಕಾಣ್ಬನಿತಂ ಮಾಡದೆ ಪದ್ಮಜಂ ಮದನನಂ ಬೈದಂತುಟೇ: ಪಂಪಭಾ, ೪. ೬೯)

ಏನುಂ ಮಾಣದೆ

[ಅ] ಸ್ವಲ್ವವೂ ತಡಮಾಡದೆ (ಅಂತು ತನ್ನ ಬಲಮೆಲ್ಲಮಂ ಜವನಂತೆ ಒಕ್ಕಲಿಕ್ಕಿ ಕೊಲ್ವ ಕಳಶಕೇತನನಂ ಯಜ್ಞಸೇನಂ ಏನುಂ ಮಾಣದೆ ಆತನ ಮೇಲೆ ಬಟ್ಟಿನಂಬಿನ ಬೆಳ್ಸರಿಯುಮಂ ಕೆಲ್ಲಂಬಿನ ತಂದಲುಮಂ ಪಾರೆಯಂಬಿನ ಸೋನೆಯುಮಂ ಸುರಿಯೆ: ಪಂಪಭಾ, ೧೨. ೨೧ ವ)

ಏನೋದಾವ

[ನಾ] ಪಾಪವೆಂಬ ಕಾಳ್ಗಿಚ್ಚು (ಆಚಾರ್ಯರ್ ಇನ್ನೆಮ್ಮಂ ಏನೋದಾವಂ ತಳ್ತೞ್ವದಂತೆ ಓಸರಿಸಿ ಕಳೆಗೆ ಸಮಸಾರಕಾಂತಾರದಿಂದಂ: ಆದಿಪು, ೧. ೩)

ಏಬಂಡಂ

[ನಾ] ಏನು ಪ್ರಯೋಜನ (ಬಿಸುಡು ನೀಂ ಬಲಗರ್ವಮಂ ಆ ಸಮುದ್ರಂ ಏಬಂಡಮೊ ಪಾಯ್ವೊಡೆ ಎಂದು ನಿಜಸಾಯಕದೊಳ್ ಬರೆದು: ಪಂಪಭಾ, ೬. ೩೩)

ಏಬಾರ್ತೆ

[ನಾ] ಏನು ಗತಿ (ಈತನಿಲ್ಲದೆ ಪೇೞ್ ಮಾನಸವಾೞ ಮೋಹಮೆನಗಿನ್ನು ಏಬಾರ್ತೆ ಎಂದುಗ್ರಶೋಕದಿಂ ಆಕ್ರಂದಿಸಿದೆಂ: ಆದಿಪು, ೩. ೫೨)

ಏರ್ವೆಸ

[ನಾ] ಯುದ್ಧ ಪ್ರಯತ್ನ (ಪೂರ್ವಾಪರ ಜಳನಿಧಿಗಳ್ ಅಗುರ್ವಿಸುವಿನಂ ಒಂದನೊಂದು ತಾಗುವವೊಲ್ .. .. ಏರ್ವೆಸದಿಂದಂದು ಬಂದು ತಾಗಿತ್ತಾಗಳ್: ಪಂಪಭಾ, ೧೦. ೬೫)

ಏರ್ವೆಸನ

[ನಾ] ಯುದ್ಧದ ಆವೇಶ (ಎಸೆವುಗ್ರರಣಾನಕ ರೌದ್ರಘೋಷಂ ಏರ್ವೆಸನಮಂ ಉಂಟುಮಾಡಿದುದು ಪಂದೆಗಮಂದಿನ ವೀರಗೋಷ್ಠಿಯೊಳ್: ಆದಿಪು, ೧೪. ೯೦); ಯುದ್ಧಕಾರ್ಯ (ಕೊಳ್ಗುಳನಂ ನಡೆ ನೋೞ್ಪ ಅಹೀಂದ್ರರೊಳ್ ಸೆಣೆಸಿದುವೆಂದೊಡೆ ಏವೊಗೞ್ವುದು ಏರ್ವೆಸನಂ ಸುರಸಿಂಧುಪುತ್ರನಾ: ಪಂಪಭಾ, ೧೧. ೪೧)

ಏಱಲ್ ತರಿಸು

[ಕ್ರಿ] [ಏರಲು] ಕುಳಿತುಕೊಳ್ಳಲು ಪೀಠ ತರಿಸು (ತಾಪಸಾಶ್ರಮದೊಳ್ ಸತ್ಯಂತಪರೆಂಬ ದಿವ್ಯಜ್ಞಾನಿಗಳಂ ಕಂಡು ಪೊಡೆವಟ್ಟ ಇರ್ವರುಮಂ ಪರಸಿ ನಿನಗೆ ಮುನ್ನಂ ಏಱಲ್ ತರಿಸಿದೊಡೆ: ಪಂಪಭಾ, ೯. ೬೬ ವ)

ಏಱು

[ನಾ] ಗಾಯ (ತಮೋಗಜದ ಕೋಡೇಱಿಂದಮೇಂ ನೊಂದುದೊ ಹರಿಣಂ; ಪಂಪಭಾ, ೪. ೫೦); [ನಾ] ಯುದ್ಧ (ವಿದ್ವಿಷ್ಟವಿದ್ರಾವಣನ ಮೊನೆಯಂಬಿನ ಏಱಿಂಗೆ ಅಳ್ಕಿ ಹತವಿಹತ ಕೋಳಾಹಳರಾಗಿ: ಪಂಪಭಾ, ೫. ೮೮ ವ); [ನಾ] ಹೊಡೆತ (ಸುಪ್ರತೀಕಂ ಕೆಯ್ಯ ಕಾಲ ಕೋಡ ಏಱಿನೊಳ್ ಬಲಮನೆಲ್ಲಂ ಜವನೆ ಚಿವುಳಿದುೞಿವಂತೆ ತೊೞ್ತುೞಿದುೞಿದು: ಪಂಪಭಾ, ೧೧. ೭೨ ವ); [ಕ್ರಿ] ದೊಡ್ಡದಾಗು, ಮಹತ್ವದ್ದಾಗು (ನೀಂ ಪುರುಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಱುಗುಮೇ: ಪಂಪಭಾ, ೧೨. ೧೮೦)

ಏಱುವೇೞ್

[ಕ್ರಿ] ಯುದ್ಧಗಳನ್ನು ಹೇಳುವ (ಭಗವತಿಯ ಏಱುವೇೞ್ವ ತೆರದಿಂ ಕಥೆಯಾಯ್ತು ಇವರೇಱು: ಪಂಪಭಾ: ೧೦. ೧೬)

ಏಱ್

[ನಾ] ಯುದ್ಧ (ತಱಿಸಂದು ಲಾೞದೊಳ್ ತಳ್ತಿಱಿದ ಏಱಂ ಪೇೞೆ ಕೇಳ್ದು: ಪಂಪಭಾ, ೧. ೩೩); [ನಾ] ಏಟು, ಹೊಡೆತ (ಒಡವಂದಂಕದ ಕೌರವರ್ ದ್ರುಪದನ ಅಂಬ ಏಱಿಂಗೆ ಮೆಯ್ಯೊಡ್ಡದೆ ಒಡ್ಡುತಿರೆ ಸೂಸೆ ಬೀೞ್ವ ತಲೆಗಳ್ ಸೂೞ್ಪಟ್ಟಂ: ಪಂಪಭಾ, ೨. ೬೨); [ಕ್ರಿ] ಅಡರು, ಹತ್ತು (ಏಱನೆ ಸೂಱೆಗೊಂಡು ನುಡಿವೀ ನುಡಿಯಲ್ಲದೆ ಮತ್ತಮಾಸನಂದೋಱುವ ಬಲ್ಪುದೋಱುವೆರ್ದೆದೋಱುವ ಕಯ್ಪೆಸರಂಗಳೆಮ್ಮ ಉಂತು ಏಱವು: ಪಂಪಭಾ, ೮. ೨೦); [ಕ್ರಿ] ಸವಾರಿ ಮಾಡು (ಎಂತಪ್ಪ ದುಷ್ಟಾಶ್ವಂಗಳುಮಂ ಏಱಲುಂ ತಿರ್ದಲುಂ ಬಲ್ಲೆನೆಂದು ಪೇೞ್ದು ಆಳಾಗಿ ತಂತ್ರಪಾಳವೆಸರೊಳ್ ಮಾಸಾದಿಯಾಗಿರ್ದಂ: ಪಂಪಭಾ, ೮. ೫೪ ವ)

ಏವ

[ನಾ] ಅಸೂಯೆ (ನೀಳ್ದ ನಗೆಗಣ್ಗಂ ತಾಂ ಗಡಂ ತನ್ನ ನೀಳ್ದ ದಳಂಗಳ್ ಗಡ ಪೋಲ್ವೆಯೆಂಬ ಸೆಣಸಿಂ ಮಿಕ್ಕೇವದಿಂದಿಕ್ಕಿ ಮೆಟ್ಟಿದರ್ ಈ ಕಾಂತೆಯರ್: ಆದಿಪು, ೭. ೫೫); [ನಾ] ಅಸಮಾಧಾನ (ಅರಿಗನ ಬಿಲ್ಬಲ್ಮೆಯೊಳ್ ಅಂದೆರಡಿಲ್ಲದೆ ಬಗೆದ ಮುಳಿಸುಂ ಏವಮುಂ ಎರ್ದೆಯೊಳ್ ಬರೆದಿರೆ ತೋಱಿದನಾಯತ ಕರಪರಿಘಂ ಕರ್ಣಂ ಆತ್ಮಶರಪರಿಣತಿಯಂ: ಪಂಪಭಾ, ೨. ೭೯); [ನಾ] ಬೇಸರ, ವ್ಯಥೆ (ಏವದ ಮುಳಿಸಿನ ಕಾರಣಮಾವುದೊ; ಪಂಪಭಾ, ೨. ೮೨); [ನಾ] ನಾಚಿಕೆ (ಯುಧಿಷ್ಠಿರಂ ತಲೆಗವಿವನಲ್ಲದೆಯುಂ ಏವದೊಳ್ ತಲೆಗವಿದು ಸಿಗ್ಗಂ ಕೊಂಡಾಡಿ ನೆತ್ತಮನಾಡಿ: ಪಂಪಭಾ, ೭. ೨ ವ); [ನಾ] ದ್ವೇಷ, ಮುಳಿಸು (ಏಕಾದಶರುದ್ರರೊಳಗೆ ತುತ್ತತುದಿಯ ರುದ್ರನುಂ ರೌದ್ರನುಂ ಅಪ್ಪ ಅಶ್ವತ್ಥಾಮಂ ಏವದೊಳ್ ಕಣ್ಗಾಣದೆ ಮಾರ್ಕೊಂಡು ವಿಕ್ರಮಾರ್ಜುನನಂ: ಪಂಪಭಾ, ೧೩. ೩೯ ವ)

ಏವಂ

[ಕ್ರಿ] ಏನು ಮಾಡುತ್ತಾನೆ (ಏವನೆಮಗೆಂಬ ಶೌರ್ಯಮದಾವಷ್ಟಂಭದೊಳ್ ಅವಂದಿರಿಂತುಱದಿರೆ ಪೇೞಾವುದೊ ಬಾಯ್ಕೇೞಿಸಿಯುಂ ಇದೇವುದೊ ಷಟ್ಖಂಡಮಂಡಿತಂ ಭೂವಳಯಂ: ಆದಿಪು, ೧೪. ೨೯)

ಏವಂಬಡೆ

[ಕ್ರಿ] ಮಾತ್ಸರ್ಯಹೊಂದು (ಧರಣೀನಾರಿಗೆ ಪಾಂಡುವಿಂ ಬೞಿಯಂ ಇಲ್ಲಾರುಂ ಪೆಱರ್ ಗಂಡರ್ ಅಂತಿರಲ್ ಏವಂಬಡೆದಿರ್ದೊಡೆ ಅೞ್ದು ಕಿಡುಗುಂ: ಪಂಪಭಾ, ೪. ೮)

ಏವಮಂ ಮಾಡು

[ಕ್ರಿ] ಅಸಮಾಧಾನವನ್ನುಂಟುಮಾಡು (ಮತ್ತೊರ್ವಂ ತನಗೆರಡಱಿಯದೆ ಒಲ್ದ ನಲ್ಲಳನೇತಱೊಳಪ್ಪೊಡಂ ಏವಮಂ ಮಾಡದೆ ಬೇಟಮಂ ಸಲಿಸುವುದರ್ಕೆ ಸಂತಸಂಬಟ್ಟು ಮುಂತಣ್ಗೆ ಕಾಪನಿಟ್ಟು: ಪಂಪಭಾ, ೪. ೯೨ ವ)

ಏವಯಿಸು

[ಕ್ರಿ] ಹೇಸಿಕೆಪಡು (ಎಂದಾ ಮಹಾನುಭಾವನಾ ಜವಂಜವವಿಭಾವಕ್ಕೆ ಏವಯಿಸಿ ವಜ್ರಜಂಘನೊಳ್ ಆತ್ಮೀಯ ಧರಾಭಾರಮಂ ನಿಱಿಸಿ: ಆದಿಪು, ೪. ೬೭ ವ); [ಕ್ರಿ] ಕ್ರೋಧಗೊಳ್ಳು, ಅಸಮಾಧಾನ ಹೊಂದು (ಪೊಡೆವಟ್ಟ ಇರ್ವರುಮಂ ಪರಸಿ ನಿನಗೆ ಮುನ್ನಂ ಏಱಲ್ ತರಿಸಿದೊಡೆ ಸುಯೋಧನನಂ ಏವಯಿಸಿ ನಿನ್ನಂ ಪೋಗಲ್ವೇೞ್ದು: ಪಂಪಭಾ, ೯. ೬೬ ವ)

ಏವರ್

[ಕ್ರಿ] ಏನು ಬರು, ಏನು ಮಾಡುವರು? (ಎಚ್ಚು ಏವರ್ ಎಂದು ಉಱದಿಂ ಒರ್ವಂ ಅಗುರ್ವು ಪರ್ವಿರೆ ದೇವರಂ: ಪಂಪಭಾ, ೫. ೯೪)

Search Dictionaries

Loading Results

Follow Us :   
  Download Bharatavani App
  Bharatavani Windows App