भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏಕಾದಶರುದ್ರ

[ನಾ] ಮೃಗವ್ಯಾಧ, ಸರ್ಪ, ನಿರ್‌ಋತಿ, ಅಜೈಕಪಾತ್, ಅಹಿರ್ಬುದ್ಧ, ಪಿನಾಕಿ, ದಹನ, ಈಶ್ವರ, ಕಪಾಲಿ, ಸ್ಥಾಣು ಮತ್ತು ಭವ ಎಂಬ ಹನ್ನೊಂದು ಮಂದಿ ರುದ್ರರು (ಏಕಾದಶರುದ್ರರೊಳಗೆ ತುತ್ತತುದಿಯ ರುದ್ರನುಂ ರೌದ್ರನುಂ ಅಪ್ಪ ಅಶ್ವತ್ಥಾಮಂ ಏವದೊಳ್ ಕಣ್ಗಾಣದೆ ಮಾರ್ಕೊಂಡು ವಿಕ್ರಮಾರ್ಜುನನಂ: ಪಂಪಭಾ, ೧೩. ೩೯ ವ)

ಏಕಾದ್ಯೇಕೋತ್ತರದಶಾಂತಂಬರಂ

[ನಾ] ಒಂದರಿಂದ ಹನ್ನೊಂದರವರೆಗೆ (ಪದ್ಮನಿಧಿಯೆಂಬ ನಿಧಿಯಂ ತರಿಸಿ ತಪನೀಯಸೂತ್ರದೊಳ್ ಏಕಾದ್ಯೇಕೋತ್ತರದಶಾಂತಂಬರಂ .. .. ಯಜ್ಞೋಪವೀತದಿಂ ಪವಿತ್ರಗಾತ್ರರ್ಮಾಡಿ: ಆದಿಪು, ೧೫. ೧೧ ವ)

ಏಕಾರ್ಣವ

[ನಾ] ನೀರಿನಿಂದ ತುಂಬು (ಸೋನೆಯಿಂ ಸರಿಗಳಿಂ ತಂದಲ್ಗಳಿಂದಂದು ಭೂತಳಂ ಏಕಾರ್ಣವಮಾಗೆ ಚಕ್ರಿಯ ಬಲಕ್ಕಾತಂಕಮಂ ಮಾಡಿದರ್: ಆದಿಪು, ೧೩. ೫೯)

ಏಕೆಗೆ

[ಸ] ಏಕೆಲೆ, ಏಕೆಯೋ (ಮೃಗಪದಪತ್ರಲೇಖೆಗಳಂ ಏಕೆಗೆ ತಾಳ್ದಿರದಾದುವು ಈ ಕದಂಪುಗಳ್ ಉರಮೇಕೆ ಹಾರಮಣಿಮಂಜರಿಯಿಲ್ಲದೆ ಬಿನ್ನಗಿರ್ದುದು: ಪಂಪಭಾ, ೪. ೬೨)

ಏಕೈಕಕಾರಣಪರರ್

[ನಾ] ಏಕೈಕ [ಒಂದೇ] ಕಾರಣವಾದವರು (ಅನಿತೊಂದುರ್ಕಿನೊಳ್ ಉರ್ಕಿ ಕೌರವಖಳರ್ ಪಾಂಚಾಳರಾಜಾತ್ಮಜಾ ಆನನಪದ್ಮ ಗ್ಲಪನೈಕಕಾರಣಪರರ್ ತಾಮಾಗೆಯುಂ: ಪಂಪಭಾ, ೭. ೯)

ಏಕೋತ್ತರದಶ

[ನಾ] ಹನ್ನೊಂದು (ತಪನೀಯಸೂತ್ರದೊಳ್ ಏಕಾದ್ಯೇಕೋತ್ತರದಶಾಂತಂಬರಂ ಅವರವರ ನೆಲೆಗಳೊಳ್ ಬ್ರಹ್ಮಸೂತ್ರಾಭಿಧಾನ ಯಜ್ಞೋಪವೀತದಿಂ ಪವಿತ್ರಗಾತ್ರರ್ಮಾಡಿ: ಆದಿಪು, ೧೫. ೧೧ ವ)

ಏಕೋನಪಂಚಾಶತ್

[ನಾ] ನಲವತ್ತೊಂಬತ್ತು (ಜಗತ್ತ್ರಯಾಂತಸ್ಥಿತ ಏಕೋನಪಂಚಾಶನ್ನರಕಪ್ರಸ್ತರ ಭವನವ್ಯಂತರಾವಾಸ ಅಸಂಖ್ಯಾತದ್ವೀಪ: ಆದಿಪು, ೧೦. ೬೩ ವ)

ಏಗೆಡು

[ಕ್ರಿ] ಏನು ಕೆಡು, ಹಾಳೇನಾಗು (ಎನಗರಸಿಯಾಣೆ ನಿನ್ನೊಡನೆನಗೆ ಏಗೆಟ್ಟಪುದೆಂದು ಱೋಡಾಡಲ್: ಪಂಪಭಾ, ೮. ೬೮)

ಏಗೆಯ್ದುಂ

[ಅ] ಏನುಮಾಡಿದರೂ (ತನ್ನ ನುಡಿದ ಪ್ರತಿಜ್ಞೆಯಂ ಏಗೆಯ್ದುಂ ತಪ್ಪಿದನಿಲ್ಲ: ಪಂಪಭಾ, ೧, ೮೩ ವ)

ಏಗೆಯ್ವುದು

[ಕ್ರಿ] ಏನು ಮಾಡಬೇಕು (ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್: ಪಂಪಭಾ, ೧. ೮೪ ವ)

ಏಗೆಯ್ವುದೊ

[ಕ್ರಿ] ಏನನ್ನು ಮಾಡಬೇಕಾಗಿದೆ (ಬೆಸನೇಂ ಏಗೆಯ್ವುದೊ ನಿನಗೊಸೆದೇನಂ ಕುಡುವುದು ಎಂದೊಡೆ ಅವಳ್ ಮಕ್ಕಳ ಒಸಗೆಯನೆನಗೀವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ: ಪಂಪಭಾ, ೧. ೧೩೯)

ಏಗೊಳ್

[ಕ್ರಿ] ಒಪ್ಪು, ಅಂಗೀಕರಿಸು (ಎಂಬುದುಂ ಅದನೆ ಮನದೆ ಏಗೊಂಡು: ಆದಿಪು, ೩. ೧೬ ವ)

ಏಡ

[ನಾ] ಕಿವುಡ (ಕವಿತಾರಹಸ್ಯಮಂ ಸತ್ಕವಿಯಱಿಗುಮ್ ಅನೇಡಮೂಕಂ ಏಡಂ ಜಡಂನೆಂಬವನಱಿಗುಮೆ: ಆದಿಪು, ೧. ೨೦)

ಏಡಿಸು

[ಕ್ರಿ] ಹೀಯಾಳಿಸು, ಗೇಲಿಮಾಡು (ನಿನಗೆ ಅದೇವಿರಿದು ಈ ಎಡಱ್ ಎಂದು ಮುಂದೆ ಬಂದು ಏಡಿಸುವಂತಿರೆ ಆಡಿದುದೊಂದು ಮರುಳ್ ಫಣಿರಾಜಕೇತುವಂ: ಪಂಪಭಾ, ೧೩. ೫೪)

ಏಣಗೋಣ

[ನಾ] ಗರ್ವ, ವಕ್ರತೆ (ಮುಗುಳ್ನಗೆ ನಕ್ಕು ವಿಕ್ರಮಾರ್ಜುನಂ ಇಳಿಸಿ ನುಡಿವ ನಿನ್ನ ಏಣಗೋಣಂಗಳುಂ ಎಕ್ಕಸಕ್ಕತನಂಗಳುಂ ಎತ್ತವೋದುವು: ಪಂಪಭಾ, ೧೧. ೧೩೮ ವ)

ಏಣಗೋಣಸಾವು

[ನಾ] ದುರ್ಮರಣ (ಅಂತು ದ್ರೋಣಂ ಏಣಗೋಣಸಾವಂ ಸಾವುದುಂ: ಪಂಪಭಾ, ೧೨. ೩೦ ವ) [‘ಏಣಗೋಣ’ ಎಂಬುದರ ಬದಲು ಡಿಎಲ್‌ಎನ್ ‘ಎೞೆಗೋಣ’ ಎಂದು ಪಾಠವನ್ನು ಪರಿಷ್ಕರಿಸಿ “{ಬಲಿಯಾಗಿ} ಎಳೆದು ತಂದ ಕೋಣನ ಸಾವು” ಎಂದು ಅರ್ಥ ನೀಡುತ್ತಾರೆ ‘ದೀಪಿಕೆ’, ಪು, ೪೪೬]

ಏತರ್ಕೆ ಬಾರ್ತೆ

[ನಾ] ಯಾವ ಪ್ರಯೋಜನಕ್ಕೆ [ಬರುವವನು] (ಅದಟಂ ಕೊಂಡಾಡದೆ ಬೇಡಿದರ್ಗೀಯದೆ ಮಱೆಗೆ ವಂದರಂ ಕಾಯದೆ ನೀಳ್ದೊದವಿದ ಜಸಮನುಪಾರ್ಜಿಸದ ಅಧಮಂ ಅದೇತರ್ಕೆ ಬಾರ್ತೆ ಜೀವನ್ಮೃತಕಂ: ಆದಿಪು, ೧೨. ೯೭)

ಏತಱೊಳಂ

[ಅ] ಯಾವುದರಲ್ಲಿಯೂ (ಈಶ್ವರಂ ನೀನುದಾರ ಮಹೇಶ್ವರನಪ್ಪುದಱಿಂ ನಿನಗಂ ಎನಗಂ ಏತಱೊಳಂ ವಿಕಲ್ಪಮುಂ ವಿಚ್ಛಿನ್ನಮುಂ ಇಲ್ಲ ಎಂದಂ: ಪಂಪಭಾ, ೫. ೧೦೩ ವ

ಏತೊದಳ್

[ನಾ] ಏನು ಅಡ್ಡಿ, ಏನು ತೊಂದರೆ (ನೀಂ ಇನಿಸು ಕಾಲ ಇರ್ದೆಯಪ್ಪೊಡೆ ಏ ತೊದಳೊ ಸರೋವರಾಂಬುವನಿತಂ ತವೆ ತುಳ್ಕಿ ರಸಾತಳಂಬರಂ ಬೆದಕಿಯುಂ ಎಂತುಂ ಅಪ್ಪಳಿಸಿ ಕೊಂದಪೆಂ: ಪಂಪಭಾ, ೧೩. ೮೦)

ಏದೊರೆತು

[ನಾ] ಯಾವ ಬಗೆಯದು, ಎಂತಹುದು (ಎಮ್ಮನ್ವಯಕ್ಷ್ಮಾಪರ್ ಆವ ವಿಳಾಸಂಗಳೊಳ್ ಇರ್ಪರ್ ಏದೊರೆತು ತಾಂ ಎಮ್ಮಯ್ಯನೈಶ್ವರ್ಯಂ ಇಂತು ಇವನೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ: ಪಂಪಭಾ, ೬. ೧೫)

Search Dictionaries

Loading Results

Follow Us :   
  Download Bharatavani App
  Bharatavani Windows App