भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅಂತರ್ವೃತ್ತ

(ಗ) ನೋಡಿ: ಅಂತಃಸ್ಪರ್ಶಕ ವೃತ್ತ

ಅಂತರ್ವೇಶ

(ಸಾ) ಅನ್ಯಾವೃತ ಭಾಗ. ಪರಾವೃತ ಪ್ರದೇಶ. (ವೈ) ಬೇರ್ಪಟ್ಟ ಒಂದು ಬಗೆಯ ಊತಕ ಮತ್ತೊಂದು ಊತಕದಲ್ಲಿ ಹುದುಗಿರುವುದು. ಉದಾ: ಮುಖ್ಯ ಗ್ರಂಥಿಯಿಂದ ಬೇರ್ಪಟ್ಟು ಮತ್ತೆಲ್ಲೋ ಹುದುಗಿರುವ ಗ್ರಂಥಿ ತುಣುಕು. ಪರಾವರಣ

ಅಂತರ್ವೇಶನ

(ಗ) ಫಲನದ ಎರಡು eತ ಬೆಲೆಗಳ ನಡುವಿನ ಒಂದು ಬೆಲೆಯನ್ನು ಆ ಫಲನವೇ ಸೂಚಿಸುವ ನಿಯಮದ ಹೊರತಾಗಿ ಬೇರಾವುದೇ ನಿಯಮ ವಿಧಾನದಿಂದ ಶೋಧಿಸುವ ಪ್ರಕ್ರಿಯೆ. ಉದಾ: ರೇಖೀಯ ಅಂತರ್ವೇಶನ

ಅಂತರ್ವೇಶನ

(ತಂ) ಬಿಟುಮೆನ್ ಸಾಮಗ್ರಿಯ ತಪಾಸಣೆಯಲ್ಲಿ ಬಳಸುವ ಪದ. ನಿರ್ದಿಷ್ಟ ಹೇರಿಕೆ, ಕಾಲ ಹಾಗೂ ಉಷ್ಣತೆ ಇರುವ ಪರಿಸ್ಥಿತಿಗಳಲ್ಲಿ ಸಾಮಗ್ರಿಯೊಳಕ್ಕೆ ಸೂಜಿಯೊಂದು ಲಂಬವಾಗಿ ಎಷ್ಟು ಒಳಕ್ಕೆ ತೂರಬಲ್ಲದು ಎಂಬುದರ ಮೂಲಕ ಆ ಸಾಮಗ್ರಿಯ ಅಂತರ್ವೇಶನ ಪ್ರಮಾಣವನ್ನು ವ್ಯಕ್ತಪಡಿಸಲಾಗುತ್ತದೆ

ಅಂತರ್ವ್ಯಾಪನ

(ವೈ) ೧. ಒಳಚಲಿಸುವ ಕ್ರಿಯೆ. ಜೀವಕೋಶ ಅಥವಾ ಊತಕದೊಳಕ್ಕೆ ಅನಿಲ, ದ್ರವ ಅಥವಾ ಕರಗಿರುವ ವಸ್ತುವಿನ ಒಳತೂರಿಕೆ. ೨. ಶರೀರದ ಅಂಗಗಳಲ್ಲಿ ಸೋಂಕು ಕ್ರಮೇಣ ಹರಡುವುದು. ಉದಾ: ಶ್ವಾಸಕೋಶ ಗಳಲ್ಲಿರುವ ಕ್ಷಯ ಸೋಂಕು. ೩. ಮೂಲಸ್ಥಾನದಿಂದ ಜೀವ ಕೋಶಗಳ ಹರಡುವಿಕೆ. ಹರಡಿದ ಜೀವಕೋಶಗಳು ನಿರ್ದಿಷ್ಟ ಸ್ಥಳದಲ್ಲಿ ಕೇಂದ್ರೀಕೃತವಾಗಬಹುದು, ಅನಿಯತವಾಗಿ ಸಂಗ್ರಹ ವಾಗಬಹುದು ಇಲ್ಲವೇ ವಿಸ್ತೃತ ಪ್ರದೇಶದಾದ್ಯಂತ ಹರಡ ಬಹುದು. ಈ ಕ್ರಿಯೆಯು ಸಾಮಾನ್ಯವಾಗಿ ಉರಿಯೂತದಲ್ಲಿ ಹಾಗೂ ಕೆಲವು ರೀತಿಯ ಕ್ಯಾನ್ಸರ್‌ಗಳಲ್ಲಿ ಕಂಡುಬರುತ್ತದೆ

ಅಂತಸ್ಥಶಿಲೆ

(ಭೂವಿ) ಕಿರು ಪ್ರಾಯದ ಶಿಲಾಸ್ತರಗಳಿಂದ ಸುತ್ತುವರಿದ ಅಥವಾ ಆವೃತವಾದ ಯಾವುದೇ ಹಳೆಯ ಶಿಲಾಸ್ತರ

ಅಂತಸ್ಥ ಸಮೀಕರಣ

(ಗ) ವಕ್ರರೇಖೆಯ ಮೇಲಿನ ಯಾವುದೇ ಬಿಂದುವಿನ ಕಂಸದೂರ sನ್ನು ಅಲ್ಲಿಯ ಪ್ರವಣತೆಯ ಕೋನ ಜೊತೆ ಸಂಬಂಧಿಸುವ ಸಮೀಕರಣ: s=f((). ಇದು ಯಾವ ನಿರ್ದೇಶಕ ವ್ಯವಸ್ಥೆಯನ್ನೂ ಅವಲಂಬಿಸಿಲ್ಲ. ವಕ್ರರೇಖೆಯ ಅಂತರ್ಗತ ಗುಣ ನಿರೂಪಿಸುತ್ತದೆ

ಅಂತಸ್ಸರಣ

(ಭೂವಿ) ಒಂದು ಶಿಲೆಯನ್ನು ಛೇದಿಸಿದಂತೆ ಅಗ್ನಿಜನ್ಯ ಶಿಲೆಯೊಂದು ತೂರಿರುವುದು. ಉದಾ: ಗ್ರಾನೈಟ್ ಶಿಲೆಯೊಳಕ್ಕೆ ಡಾಲೆರೈಟ್ ಶಿಲೆ ನುಗ್ಗಿರುವುದು

ಅಂತಸ್ಸ್ನಾಯು

(ವೈ) ಸ್ನಾಯುವಿನ ಒಳಗಿರುವ ಅಥವಾ ಒಳಕ್ಕೆ ಹೋಗುವ

ಅಂತಸ್ಸ್ರಾವಕ ಗ್ರಂಥಿಗಳು

(ವೈ) ಪ್ರಾಣಿ ಗಳಲ್ಲಿರುವ ಎರಡು ಸಂಪರ್ಕ ವ್ಯವಸ್ಥೆಗಳಲ್ಲಿ ಮೊದಲನೆಯದು ನರಮಂಡಲ. ಎರಡನೆಯದು ಅಂತಸ್ಸ್ರಾವಕ ಗ್ರಂಥಿಗಳ ವ್ಯವಸ್ಥೆ. ಈ ಗ್ರಂಥಿಗಳು ಪ್ರೊಟೀನ್ ರೂಪದ ತಮ್ಮ ಸ್ರಾವಗಳನ್ನು ಯಾವುದೇ ನಾಳಗಳ ನೆರವಿಲ್ಲದೆ ನೇರವಾಗಿ ರಕ್ತ ಪ್ರವಾಹದೊಳಕ್ಕೆ ಬಿಡುಗಡೆ ಮಾಡುತ್ತವೆ. ಹಾರ್ಮೋನುಗಳೆಂಬ ಈ ರಾಸಾಯನಿಕಗಳು ಒಂದು ಕಡೆ ಉತ್ಪಾದನೆಯಾಗಿ ಮತ್ತೆಲ್ಲಿಯೋ ಇರುವ ಅಂಗಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಗ್ರಂಥಿ ಸ್ರವಣದಲ್ಲಿ ಒಂದಕ್ಕಿಂತ ಹೆಚ್ಚಿನ ಹಾರ್ಮೋನುಗಳಿರಬಹುದು. ಉದಾ: ಅಪಾಯಕರ ಸನ್ನಿವೇಶಗಳಲ್ಲಿ ಅಡ್ರಿನಲ್ ಗ್ರಂಥಿಯು ಅಡ್ರಿನಾಲಿನ್ ಎಂಬ ಹಾರ್ಮೋನನ್ನು ಉತ್ಪಾದಿಸುತ್ತದೆ. ಇದು ಅಪಾಯವನ್ನು ಎದುರಿಸಲು ಅಥವಾ ಅಪಾಯದಿಂದ ಪಾರಾಗಲು ಅಗತ್ಯವಾದ ಸಿದ್ಧತೆಗಳನ್ನು ದೇಹದಲ್ಲಿ ಉಂಟುಮಾಡುತ್ತದೆ. ಅಂತಸ್ಸ್ರಾವಕ ಗ್ರಂಥಿಗಳು ಹೃದಯ, ಜಠರ ಮುಂತಾದವುಗಳ ಸ್ನಾಯುಗಳಂತೆ ಅನೈಚ್ಛಿಕವಾಗಿ ಕಾರ್ಯ ನಿರ್ವಹಿಸುತ್ತವೆ

ಅಂತಿಮ

(ತಂ) ಪ್ರವಾಹವು ವಿದ್ಯುತ್ ಸಲಕರಣೆಯನ್ನು ಪ್ರವೇಶಿಸುವ ಅಥವಾ ಅದರಿಂದ ನಿರ್ಗಮಿಸುವ ತುದಿ

ಅಂತಿಮ ಪೀಡನ

(ತಂ) ವಸ್ತುವನ್ನು ಮುರಿಯಲು ಅದರ ಮೇಲೆ ಏಕಮಾನ ವಿಸ್ತಾರದಲ್ಲಿ ಹೇರ ಬೇಕಾದ ಕನಿಷ್ಠ ಬಲ ಮತ್ತು ಬಿರಿತ ಬಿಂದುವಿನಲ್ಲಿ ವಸ್ತುವಿನ ಅಡ್ಡಕೊಯ್ತದ ಮೂಲ ವಿಸ್ತೀರ್ಣ ಇವುಗಳ ದಾಮಾಷಾ. ಬಿಗಿತ

ಅಂತಿಮ ಭಾರ

(ತಂ) ಪ್ರೇಷಣಮಾರ್ಗಕ್ಕೆ ಅಥವಾ ಇತರ ಸಲಕರಣೆಗೆ ತರಂಗ ಪ್ರತಿಫಲನಗಳನ್ನು ನಿವಾರಿಸುವ ಸಲುವಾಗಿ ಸಂಯೋಜಿಸಿದ ಹೊರೆ. ಇದು ಆ ಮಾರ್ಗದ ಅಥವಾ ಸಲಕರಣೆಯ ವೈಲಕ್ಷಣ್ಯಕ್ಕೆ ಹೊಂದುವಂತಿರಬೇಕು

ಅಂತಿಮ ವೇಗ

(ಭೌ) ೧. ವಿಮಾನ ಗಳಿಸ ಬಹುದಾದ ಗರಿಷ್ಠ ವೇಗ. ಇದನ್ನು ನಿರ್ಧರಿಸುವುದು ವಿಮಾನದ ಮೇಲೆ ವರ್ತಿಸುವ ಜಗ್ಗು ಬಲ ಮತ್ತು ನೂಕು ಬಲ. ೨. ಯಾವುದೇ ಮಾಧ್ಯಮದಲ್ಲಿ ಮುಕ್ತವಾಗಿ ಬೀಳುತ್ತಿರುವ ವಸ್ತು ತಳೆಯುವ ಗರಿಷ್ಠ ಸ್ಥಿರ ವೇಗ

ಅಂತಿಮ ಹಂತ

(ರ) ರಾಸಾಯನಿಕ ಕ್ರಿಯೆ ಸರಪಳಿಯಾಗಿ ಮುಂದುವರಿಯುವಾಗ ಆ ಸರಪಳಿ ಕ್ರಿಯೆ ಮುಕ್ತಾಯಗೊಳ್ಳುವ ಹಂತ

ಅಂತ್ರಛೇದನ

(ವೈ) ಕರುಳಿನ ಒಂದು ಭಾಗವನ್ನು ಶಸ್ತ್ರಕ್ರಿಯೆ ಮಾಡಿ ತೆಗೆದುಹಾಕುವುದು

ಅಂತ್ರಪುಚ್ಛ

(ವೈ) ದೊಡ್ಡ ಕರುಳಿನ ಅಂತ್ಯಭಾಗದಲ್ಲಿ ಜೋತು ಬಿದ್ದಿರುವ ಹುಳುರೂಪದ ಕರುಳಿನ ಭಾಗ. ಹುಳು ಗರುಳು. ಕರುಳು ಬಾಲ. ಹೊರಬೆಳೆತ. ಅನುಬಂಧ. ಅಪೆಂಡಿಕ್ಸ್

ಅಂತ್ರಪುಚ್ಛ ಉರಿಯೂತ

(ವೈ) ಅಪೆಂಡಿಸೈಟಿಸ್. ಕರುಳಬಾಲದ ಉರಿಯೂತ. ಉರಿಯೂತವು ತೀವ್ರವಾಗಿ ತಲೆದೋರಬಹುದು. ತೀವ್ರ ಅಂತ್ರಪುಚ್ಛ ಉರಿಯೂತಕ್ಕೆ (ಕರುಳಬಾಲ ರೋಗಕ್ಕೆ) ಬ್ಯಾಕ್ಟೀರಿಯಾ ಸೋಂಕು ಕಾರಣವಾಗಿದ್ದು, ಅದರ ನಾಳದಲ್ಲಿ ಸಿಕ್ಕಿ ಹಾಕಿಕೊಂಡ ಮಲವು ಕಲ್ಲು ಉರಿಯೂತವನ್ನು ತ್ವರಿತ ಗೊಳಿಸುತ್ತದೆ

ಅಂತ್ರಪುಚ್ಛ ಛೇದನ

(ವೈ) ಶಸ್ತ್ರಕ್ರಿಯೆ ಮೂಲಕ ಅಂತ್ರಪುಚ್ಛವನ್ನು ಕತ್ತರಿಸಿ ತೆಗೆಯುವುದು

ಅಂತ್ರವ್ಯಾಧಿ

(ವೈ) ಗೋಧಿಯಲ್ಲಿರುವ ಗ್ಲೂಟೆನ್ ಎಂಬ ಪ್ರೋಟೀನು ಕೆಲವರ ಕರುಳಿನಲ್ಲಿ ಅಸಹಜ ಬದಲಾವಣೆ ಗಳನ್ನು ಉಂಟುಮಾಡಿ ಪೋಷಕಾಂಶಗಳ ಹೀರುವಿಕೆಗೆ ಅಡ್ಡಿಯನ್ನು ಉಂಟುಮಾಡಿ ಸಾವಿಗೂ ಕಾರಣವಾಗಬಹುದು. ಗ್ಲೂಟೆನ್‌ಮುಕ್ತ ಆಹಾರವನ್ನು ನೀಡುವುದರಿಂದ ಈ ಮಾರಕರೋಗವನ್ನು ತಡೆಗಟ್ಟಬಹುದು. ಸೀಲಿಯಾಕ್ ರೋಗ. ಅರೆಜೀರ್ಣಕ ರೋಗ

Search Dictionaries

Loading Results

Follow Us :   
  Download Bharatavani App
  Bharatavani Windows App