भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೋರಿ

(ಪ್ರಾ) ಹಸು, ಆನೆ, ತಿಮಿಂಗಲ ಮುಂತಾದ ಕೆಲವು ದೊಡ್ಡ ಪ್ರಾಣಿಗಳ ಸಂದರ್ಭದಲ್ಲಿ ಗಂಡನ್ನು ಸೂಚಿಸಲು ವ್ಯಾಪಕವಾಗಿ ಬಳಸುವ ಪದ

ಹೋಲ್ಮಿಯಮ್

(ರ) ಆವರ್ತಕೋಷ್ಟಕದ ೩ನೇ ‘ಬಿ’ ಗುಂಪಿನ, ಲ್ಯಾಂಥನಮ್ ಸರಣಿ ಹಾಗೂ ಯಿಟ್ರಿಯಮ್ ಉಪ ಗುಂಪಿಗೆ ಸೇರಿದ ಬೆಳ್ಳಿಯಂತೆ ಹೊಳೆಯುವ ತ್ರಿವೇಲೆನ್ಸೀಯ ವಿರಳಭಸ್ಮ ಧಾತು Ho. ಪಸಂ ೬೭, ಪತೂ ೧೬೪.೯೩, ಸಾಸಾಂ ೮.೮೦೩, ದ್ರಬಿಂ ೧೪೬೧ಂ ಸೆ, ಕುಬಿಂ ೨೭೦೦0ಸೆ ಯೂಕ್ಸೆನೈಟ್, ಸಮರ್‌ಸ್ಕೈಟ್, ಗ್ಯಾಡೊಲಿನೈಟ್, ಕ್ಸೆನೊಟೈಮ್‌ಗಳಂಥ ವಿರಳ ಭಸ್ಮ ಖನಿಜಗಳಲ್ಲಿ ಲಭ್ಯ. ಅಧಿವಾಹಕ, ಕಂಪ್ಯೂಟರ್‌ಗಳಲ್ಲಿ ಬಳಕೆ

ಹೌಸಿಂಗ್

(ತಂ) ಕಟ್ಟಣೆಯನ್ನು / ಯಾಂತ್ರಿಕ ಸಾಧನವನ್ನು ಹಾನಿಗೊಳಗಾಗದಂತೆ ರಕ್ಷಿಸಲು ಹಾಗೂ ಅದಕ್ಕೆ ಆಚ್ಛಾದನವಾಗಿ ನೆರವಾಗಲು ನಿರ್ಮಿಸಿದ ಪೆಟ್ಟಿಗೆ ಅಥವಾ ಆವರಣ. ಸಂಪುಟ

ಹೌಸ್ಟೆಲಮ್

(ಪ್ರಾ) ನೊಣ, ಸೊಳ್ಳೆ ಮೊದಲಾದ ಎರಡು ರೆಕ್ಕೆಗಳ ಹಾರುಹುಳುಗಳಲ್ಲಿ ಉದ್ದ ಮೂತಿಯ/ಹೀರು ಕೊಳವೆಯ ತುದಿ, ವಿಸ್ತೃತ ಭಾಗ. ಶರೀರದಿಂದ ರಕ್ತ, ಹೂವಿನಿಂದ ರಸ, ಹೀರಲು ಕೀಟಕ್ಕೆ ನೆರವಾಗುತ್ತದೆ

ಹ್ಯಾಂಗರ್

(ಎಂ) ವಿಮಾನಗಳ ದುರಸ್ತಿಗಾಗಿ ಅವು ಪೂರ್ಣವಾಗಿ ಒಳದೂರುವಂತಿರುವ ಕಂಬಗಳಿಲ್ಲದ ವಿಶಾಲ ವಾದ ಹಜಾರಗಳನ್ನುಳ್ಳ ಕಟ್ಟಡ. ವಿಮಾನ ನಿಲ್ದಾಣಗಳಲ್ಲಿರುತ್ತವೆ

ಹ್ಯಾಕರ್

(ಕಂ) ಸಮಾಚಾರ ಜಾಲಬಂಧಗಳ ಮೂಲಕ ಕಂಪ್ಯೂಟರ್ ವ್ಯವಸ್ಥೆಯನ್ನೂ ಅದರಲ್ಲಿನ ಮಾಹಿತಿಯನ್ನೂ ಅಕ್ರಮವಾಗಿ ಪ್ರವೇಶಿಸಿ ದುರುಪಯೋಗಪಡಿಸಿಕೊಳ್ಳುವ/ಹಾಳುಗೆಡಹುವ ವ್ಯಕ್ತಿ. ಇಂಥವರು ವೈರಸ್‌ಗಳನ್ನು ಹರಡ ಬಹುದು. ಅತಿಕ್ರಮಣಕಾರಕ

ಹ್ಯಾಗ್‌ಮೀನು

(ಪ್ರಾ) ಮೈಕ್ಸಿನೋಯ್ಡಿಯ ಗಣಕ್ಕೆ ಸೇರಿದ, ಹಾವುಮೀನನ್ನು ಹೋಲುವ, ದವಡೆ ಇಲ್ಲದ ದುಂಡು ಬಾಯಿಯ, ಸ್ಪರ್ಶತಂತುಗಳುಳ್ಳ ಪರಾವಲಂಬಿ ಮೀನು

ಹ್ಯಾಚರಿ

(ಪ್ರಾ) ಮೀನುಗಳ ಮತ್ತು ಕೋಳಿಜಾತಿಗಳ ಮೊಟ್ಟೆಗಳನ್ನು ಮರಿ ಮಾಡಲು ನಿರ್ಮಿಸಿದ ಸ್ಥಳ

ಹ್ಯಾಪ್‌ಲಾಯ್ಡ್

(ಜೀ) ೧. ಯುಗ್ಮಕಗಳಲ್ಲಿರುವಷ್ಟು (ಗೆಮೀಟು) ಅಥವಾ ಸಾಮಾನ್ಯವಾಗಿ ದೇಹದ ಜೀವಕೋಶದಲ್ಲಿ ಇರುವುದರ ಅರ್ಧದಷ್ಟು ಕ್ರೋಮೊಸೋಮ್‌ಗಳಿರುವ (ಜೀವಕೋಶ ಅಥವಾ ಜೀವಿ). ಜೋಡಿಯಾಗಿರದ ಕ್ರೋಮೊಸೋಮ್‌ಗಳ ಒಂದು ಸೆಟ್ ಉಳ್ಳ ಒಂದು ನೂಕ್ಲಿಯಸ್, ಕೋಶ ಅಥವಾ ಜೀವಿಯನ್ನು ಹ್ಯಾಪ್‌ಲಾಯ್ಡ್ ಎಂದು ವರ್ಣಿಸಲಾಗುತ್ತದೆ. ಹ್ಯಾಪಲಾಯ್ಡ್ ಸಂಖ್ಯೆಯನ್ನು nಎಂದು ಸೂಚಿಸಲಾಗುತ್ತದೆ. ಮಯೊಸಿಸ್‌ನ ಪರಿಣಾಮವಾಗಿ ರೂಪುಗೊಂಡ ಪುನರುತ್ಪಾದಕ ಕೋಶಗಳು ಹ್ಯಾಪ್‌ಲಾಯ್ಡ್ ಗಳಾಗಿರುತ್ತವೆ. ಅಂಥ ಎರಡು ಕೋಶಗಳ ಸಂಲಯನವು ಸಹಜ (ಡಿಪ್ಲಾಯಿಡ್-ದ್ವಿಗುಣಿತ) ಸಂಖ್ಯೆಯನ್ನು ಪುನರ್‌ಸ್ಥಾಪಿಸುತ್ತದೆ. ೨. ಅಗುಣಿತ, ಸರಳಗುಣಿತವಲ್ಲದ

ಹ್ಯಾಪ್ಲೊಡಾಂಟ್

(ಪ್ರಾ) ಸರಳ ದಂತಾಗ್ರಗಳಿರುವ ದವಡೆ ಹಲ್ಲುಗಳುಳ್ಳ

ಹ್ಯಾಪ್ಲೊಫೇಸ್

(ಜೀ) ಜೀವಿಯ ಜೀವನಚಕ್ರದಲ್ಲಿ ಕೋಶಬೀಜಗಳು ಹ್ಯಾಪ್‌ಲಾಯ್ಡ್ ಆಗಿರುವ (ಅಗುಣಿತವಾಗಿ ಇರುವ) ಘಟ್ಟ

ಹ್ಯಾಬಿಟ್

(ಭೂವಿ) ಯಾವುದೇ ಖನಿಜದ ವಿಶಿಷ್ಟ ಸ್ಫಟಿಕರೂಪ ಅಥವಾ ರೂಪಗಳ ಸಂಯೋಜನೆ

ಹ್ಯಾಮ್

(ಪ್ರಾ) ತೊಡೆಯ ಹಿಂಭಾಗ. ಹಂದಿ ತೊಡೆಯ ಮಾಂಸ. (ತಂ) ಹವ್ಯಾಸಿ ರೇಡಿಯೋ ನಿರ್ವಾಹಕರ ಒಂದು ಸಮುದಾಯದ ಹೆಸರು. ಅವರಿಗೆ ‘ಹ್ಯಾಮ್ಸ್’ ಎಂದು ಕರೆಯು ವುದುಂಟು. ಖಾಸಗಿಯಾಗಿ ರೇಡಿಯೋ ಪ್ರೇಷಕ ಮತ್ತು ಅಭಿಗ್ರಾಹಕಗಳನ್ನು ಉಪಯೋಗಿಸಿ ಅಂತರರಾಷ್ಟ್ರ ಮಟ್ಟದಲ್ಲೂ ಸ್ಥಳೀಯವಾಗಿಯೂ ಪರಸ್ಪರ ವಿಷಯ ವಿನಿಮಯ ಮಾಡಿ ಕೊಳ್ಳುತ್ತಾರೆ. ಪ್ರಪಂಚದಾದ್ಯಂತ ೩೦ ಲಕ್ಷ (ಭಾರತದಲ್ಲಿ ೧೫ ಸಾವಿರ) ಹ್ಯಾಮ್‌ಗಳಿದ್ದಾರೆ. ಭೂಕಂಪನ, ಸುನಾಮಿ, ಪ್ರವಾಹ, ಚಂಡಮಾರುತ ಮುಂತಾದ ನೈಸರ್ಗಿಕ ಘಟನೆಗಳ ಸಮಯದಲ್ಲಿ ತುರ್ತು ಸಂದೇಶ ರವಾನೆಗೆ ಈ ವ್ಯವಸ್ಥೆ ನೆರವಾಗುತ್ತದೆ. ಶ್ರೀಹರಿಕೋಟದಿಂದ ಇಸ್ರೋ ಉಡಾಯಿಸಿದ (೫-೫-೨೦೦೫) ‘ಹ್ಯಾಮ್‌ಸ್ಯಾಟ್’ ಉಪಗ್ರಹವು ಹ್ಯಾಮ್ ವ್ಯವಸ್ಥೆಗೆ ನೆರವಾಗುತ್ತಿದೆ

ಹ್ಯಾಮಟಮ್

(ಪ್ರಾ) ಕೈ ಮತ್ತು ತೋಳುಗಳ ನಡುವಿನ ಅಥವಾ ಇತರ ಪ್ರಾಣಿಗಳಲ್ಲಿ ಅಂಥವೇ ಭಾಗಗಳ ನಡುವಿನ ಎಲುಬುಗಳಲ್ಲೊಂದು

ಹ್ಯಾಮರ್ ಬ್ಲೋ

(ತಂ) ಕೊಳವೆಯಲ್ಲಿ ದ್ರವದ ಪ್ರವಾಹಕ್ಕೆ ಹಠಾತ್ತನೆ ಅಡ್ಡಿ ಉಂಟಾದಾಗ ಅದರೊಂದಿಗೆ ಹರಿಯುತ್ತಿದ್ದ ಒತ್ತಡದ ಅಲೆ ಉಂಟುಮಾಡುವ ಶಬ್ದ

ಹ್ಯಾಮರ್ ಸ್ಕೇಲ್

(ತಂ) ಕಬ್ಬಿಣವನ್ನು ಕುಲುಮೆಯಲ್ಲಿ ಕಾಸಿದಾಗ ರೂಪುಗೊಳ್ಳುವ ಕಬ್ಬಿಣದ ಆಕ್ಸೈಡ್‌ನ ಪದರ ಅಥವಾ ಹುರುಪೆ

ಹ್ಯಾಲಾಯ್ಡ್

(ರ) ಅಡುಗೆ ಉಪ್ಪಿನಂಥ ಸಂಯೋಜನೆಯುಳ್ಳ ಲವಣ. ಹ್ಯಾಲೊಜೆನ್‌ನಂಥ ಅಥವಾ ಹ್ಯಾಲೊಜೆನ್‌ಜನ್ಯ ಸಂಯುಕ್ತ

ಹ್ಯಾಲಾಯ್ಡ್ ಆಮ್ಲಗಳು

(ರ) ಹೈಡ್ರೊಜನ್ ಫ್ಲೂರೈಡ್, ಹೈಡ್ರೊಜನ್ ಕ್ಲೋರೈಡ್, ಹೈಡ್ರೊಜನ್ ಬ್ರೊಮೈಡ್ ಹಾಗೂ ಹೈಡ್ರೊಜನ್ ಅಯೊಡೈಡ್‌ಗಳನ್ನು ಒಳಗೊಂಡಿರುವ ಆಮ್ಲಗಳ ಒಂದು ವೃಂದ

ಹ್ಯಾಲಿಟೋಸಿಸ್

(ವೈ) ಅತಿ ಕೆಟ್ಟನಾತದ ಉಸಿರು. ನಾರುಸಿರು, ದುರ್ಗಂಧ ಶ್ವಾಸ

ಹ್ಯಾಲೈಟ್

(ರ) ಕಲ್ಲುಪ್ಪು. ಸೈಂಧವ ಲವಣ. ನಿಸರ್ಗದಲ್ಲಿ ಸಹಜವಾಗಿ ಲಭ್ಯವಿರುವ ಸೋಡಿಯಮ್ ಕ್ಲೋರೈಡ್ (ಸಾಮಾನ್ಯ ಉಪ್ಪು – NaCl). ಶುದ್ಧವಾಗಿದ್ದಾಗ ವರ್ಣರಹಿತ ಅಥವಾ ಬಿಳಿ (ಕೆಲವು ವೇಳೆ ನೀಲಿ). ಕಲ್ಮಷಗಳು ಅದಕ್ಕೆ ಬೂದು, ಪಾಟಲ, ಕೆಂಪು ಅಥವಾ ಕಂದುಬಣ್ಣ ನೀಡಬಹುದು. ಕಲ್ಲುಪ್ಪು ಸಾಮಾನ್ಯವಾಗಿ ಅನ್‌ಹೈಡ್ರೈಟ್ ಹಾಗೂ ಜಿಪ್ಸಮ್‌ಗಳೊಂದಿಗೆ ದೊರಕುತ್ತದೆ. ನೋಡಿ: ಸೋಡಿಯಮ್ ಕ್ಲೋರೈಡ್

Search Dictionaries

Loading Results

Follow Us :   
  Download Bharatavani App
  Bharatavani Windows App