भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೊರಚಾಚಿದ

(ಸ) ಆವರಣ ರಚನೆಗೂ ಆಚೆ ಚಾಚಿಕೊಂಡಿರುವುದು. ಉದಾ: ಪುಷ್ಪದಳ ಸಂಪುಟದ ಅಂಚಿಗೂ ಆಚೆ ಕೇಸರಗಳು ಚಾಚಿಕೊಂಡಿರುವುದು

ಹೊರಜಿ ಬಹುಭುಜ

(ಗ) ಎರಡು ಸ್ಥಿರ ಬಿಂದುಗಳ ನಡುವೆ ಬಂಧಿಸಿದ ಹಗುರ ತಂತಿಯಿಂದ ಭಾರಗಳನ್ನು ಅಲ್ಲಲ್ಲಿ ತೂಗುಹಾಕಿದಾಗ ಅದು ತಳೆಯುವ ಆಕೃತಿ

ಹೊರನಾಟಿ

(ಜೀ) ನೋಡಿ: ಎಕ್ಸ್‌ಪ್ಲಾಂಟೇಷನ್

ಹೊರಪದರ

(ಪ್ರಾ) ಪ್ರಾಣಿಯ ಅಂಗ ಅಥವಾ ಅಂಗ ಭಾಗದ ಹೊರಪದರ

ಹೊರಪದರ

(ಸ) ದಪ್ಪ ಕೋಶಭಿತ್ತಿ ಇರುವ ಬೇರುಗಳ ತೊಗಟೆಯ ಹೊರಪದರ

ಹೊರಪೊರೆ

(ವೈ) ಕೋಶರಸ ಸಾಮಾನ್ಯವಾಗಿ ಕುಣಿಗಳಿಂದ ಕೂಡಿರುತ್ತದೆ. ಈ ರಸದ ಅತ್ಯಂತ ಹೊರಗಿರುವ ಭಾಗ ಕುಣಿಗಳಿಂದ ಕೂಡಿರುವುದರ ಬದಲು ಸ್ವಚ್ಛವಾಗಿ ಇರುತ್ತದೆ. ಕೋಶದ ಪೊರೆಯ ಒತ್ತಿಗೆ ಇರುವ ಪ್ರದೇಶ

ಹೊರ ಬಂದಿಳಿಕೆ

(ಸ) ಬಾಹ್ಯ ಪರಾವಲಂಬಿ ಸಸ್ಯ. ಆತಿಥೇಯ ದೇಹದ ಹೊರಭಾಗದಲ್ಲಿರುವ ಪರೋಪಜೀವಿ ಸಸ್ಯ

ಹೊರಬೆಳೆತ

(ವೈ) ನೋಡಿ : ಅಂತ್ರಪುಚ್ಛ

ಹೊರಬೇರು

(ಸ) ಉದಾ : ಆಲದ ಮರದ ಹೊರಗಿನ ಬೇರುಗಳಲ್ಲೊಂದು

ಹೊರರೋಗಿ

(ವೈ) ಆಸ್ಪತ್ರೆಯಲ್ಲಿ ಇರದೆ ಹೊರಗಡೆಯೇ ಚಿಕಿತ್ಸೆ ಪಡೆದು ಹೋಗುವ ರೋಗಿ

ಹೊರಹೊಮ್ಮಿಕೆ

(ವೈ) ೧. ಚರ್ಮದ ಮೇಲೆ

ಹೊರೆ

(ಭೌ) ಉಪಕರಣವೊಂದರ ವಿದ್ಯುತ್ ಪರಿವರ್ತಕದ ಮೇಲೆ ಬೀಳುವ ಭಾರ. ಪರಿವರ್ತಕದ ದ್ವಿತೀಯಕ ತುದಿಗಳನ್ನು ಸಂಬಂಧಿಸುವ ಮಂಡಲ ಸೆಳೆಯುವ ವಿದ್ಯುತ್ ಪ್ರಮಾಣಗಳಲ್ಲಿ / ವೋಲ್ಟ್-ಆಂಪಿಯರ್‌ಗಳಲ್ಲಿ ವ್ಯಕ್ತ

ಹೊಲೊಟೈಪ್

(ಜೀ) ಮೂಲಪ್ರರೂಪದ ಪ್ರಕಟಿತ ಲಕ್ಷಣಗಳಲ್ಲಿ ಅದರ ನಾಮಸೂಚಿ ಎಂದು ಗೊತ್ತುಪಡಿಸಿದ ಒಂದು ಪೂರ್ಣ ಮಾದರಿ

ಹೊಲೊಸೆಫಾಲಿ

(ಪ್ರಾ) ಕಾಂಡ್ರಿಕ್‌ಥೀಸ್ ವರ್ಗದ ಒಂದು ಉಪವರ್ಗ. ಈ ಉಪವರ್ಗದ ಹೆಚ್ಚಿನ ಪ್ರಾಣಿಗಳು ನಶಿಸಿವೆ. ಇವುಗಳಿಗೆ ಭಾರಿ ಚಪ್ಪಟೆ ದವಡೆಹಲ್ಲುಗಳೂ ಕೇವಲ ನಾಲ್ಕು ಆವರಣಯುಕ್ತ ಕಿವಿರುಸೀಳುಗಳೂ ಇದ್ದು ಪ್ರಧಾನವಾಗಿ ಮೃದ್ವಂಗಿಗಳನ್ನು ತಿಂದು ಜೀವಿಸುತ್ತಿದ್ದುವು

ಹೊಸ್ತಿಲು, ಹೊಸಿಲು

(ತಂ) ಬಾಗಿಲು, ಕಿಟಕಿಗಳ ತಳದಲ್ಲಿ ಹಾಕಿರುವ ಮರದ/ಲೋಹದ ಹಲಗೆ

ಹೊಸ್ತಿಲು ಮೌಲ್ಯ

(ಭೌ) ನಿರ್ದಿಷ್ಟ ಪರಿಣಾಮವನ್ನು ಉಂಟುಮಾಡುವ ಯಾವುದೇ ಉದ್ದೀಪನೆ, ಸಂಜ್ಞೆ ಅಥವಾ ಕಾರಕದ ಕನಿಷ್ಠ ಬೆಲೆ. ಇದಕ್ಕಿಂತ ಕಡಿಮೆ ಇರುವಾಗ ಉದ್ದಿಷ್ಟ ಪರಿಣಾಮ ಈಡೇರದು. ಪ್ರತಿಕ್ರಿಯಾರಂಭ ಮಿತಿ. ದೇಹಲಿ ಮೌಲ್ಯ

ಹೊಳಪು ಮೈ

(ತಂ) ೧. ಕಟ್ಟಡ ನಿರ್ಮಾಣದಲ್ಲಿ ಹಾಸು ಹಂಚುಗಳಿಗೂ ಇಟ್ಟಿಗೆಗಳಿಗೂ ನೀಡಿದ ನುಣುಪಾದ ಗಾಜಿನಂತೆ ಹೊಳೆಯುವ ಹೊರಮೈ. ೨. ನೆಲಹಾಸುಗಳನ್ನು ಉಜ್ಜಿ ನುಣುಪು ಗೊಳಿಸುವಾಗ ಬಳಸುವ ಪಾರಕ/ಅಪಾರಕ ಲೇಪ. ವಾರ್ನಿಷ್

ಹೊಳ್ಳು

(ಪ್ರಾ) ದೇಹದಲ್ಲಿ ಕೆಲವೆಡೆ ಕಂಡುಬರುವ, ದೇಹಕ್ಕೆ ಅಗತ್ಯವಾದ ರಸವನ್ನು ಉತ್ಪತ್ತಿ ಮಾಡಿ ಸ್ರವಿಸುವ ಸಣ್ಣ ಕುಳಿ. ನಾಳ ರೂಪದ ಗ್ರಂಥಿ. ಕುಹರ

ಹೋಮಿಯೊ ಬಾಕ್ಸ್

(ಜೀ) ಭ್ರೂಣ ಬೆಳವಣಿಗೆಯ ಹಂತದಲ್ಲಿ ವಿವಿಧ ಅಂಗ, ಅಂಗಾಂಶಗಳ ಬೆಳವಣಿಗೆಯನ್ನು ನಿಯಂತ್ರಿಸುವ ನಿರ್ದಿಷ್ಟ ಡಿಎನ್‌ಎ ಸರಪಳಿ

ಹೋರಾಶಾಸ್ತ್ರ

(ಮ) ನೋಡಿ: ಫಲಜ್ಯೋತಿಷ

Search Dictionaries

Loading Results

Follow Us :   
  Download Bharatavani App
  Bharatavani Windows App