भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೊಗೆಸೊಪ್ಪು

(ಸ) ನೋಡಿ : ತಂಬಾಕು

ಹೊಟ್ಟು

(ಸ) ಧಾನ್ಯದಲ್ಲಿ ಕಾಳಿನ ಅಥವಾ ತಿರುಳಿನ ಹೊರತಾದ ಪದಾರ್ಥ. ಅನುಪಯುಕ್ತ ವಸ್ತು

ಹೊಟ್ಟು

(ಸ) ಕಾಯಿಗಳ ಅಥವಾ ಬೀಜಗಳ ಒಣ ಹೊರಹೊದಿಕೆ. ಉಮಿ, ತೊಗಟೆ, ಸಿಪ್ಪೆ

ಹೊಟ್ಟೆ

(ಪ್ರಾ) ಉನ್ನತ ವರ್ಗದ ಪ್ರಾಣಿಗಳಲ್ಲಿ ಉದರದ ಆಂತರಿಕ ಕುಹರ. ಜಠರ, ಕರುಳು, ಯಕೃತ್ ಮೊದಲಾದ ಅಂಗಗಳುಳ್ಳದ್ದಾಗಿ, ವಪೆಯ ಕೆಳಗಿರುವ ಮುಂಡದ ಭಾಗ. ಸ್ನಾಯುವಿನ ಉಬ್ಬು ಭಾಗ. ನೋಡಿ : ಉದರ

ಹೊಟ್ಟೆ ಉರಿತ

(ವೈ) ಅಜೀರ್ಣದ ಕಾರಣ ಹುಳಿತೇಗಿನಿಂದ ಕೂಡಿದ ಹೊಟ್ಟೆಯಲ್ಲಿಯ ಉರಿತ

ಹೊಟ್ಟೆ ತೊಳಸಿಕೆ

(ವೈ) ಉದರದಲ್ಲಿ ಅಹಿತದ ಕಾರಣ ಆಹಾರದ ಬಗೆಗೆ ಅಸಹ್ಯ, ಓಕರಿಕೆ ಭಾವನೆ. ಪಿತ್ತೋದ್ರೇಕ

ಹೊಡೆ ರೋಗ

(ಸ) ಗಂಧದ ಮರ ಮೊದಲಾದ ಮರಗಳಿಗೆ ಬರುವ ರೋಗ

ಹೊದರು

(ಸ) ಉಷ್ಣ ಪ್ರದೇಶಗಳಲ್ಲಿ ಬೆಳೆಯುವ ಗಿಡ್ಡ ಗಿಡಗಳ ಹರವು. ಉಷ್ಣವಲಯ ಕುರುಚಲು

ಹೊಪ್ಪಳೆ

(ವೈ) ಬಿಸಿ ದ್ರವ, ಆವಿಗಳಿಂದ ಚರ್ಮ ಬೆಂದು ಬೊಬ್ಬೆ ಎದ್ದು ಉಂಟಾದ ಗಾಯ. ಬೆಂದ ಗಾಯ. ಬೊಬ್ಬೆ

ಹೊಮೊಅಸ್ಟಾಸಿಸ್

(ಪ್ರಾ) ದೇಹ ಕ್ರಿಯೆಗಳಲ್ಲಿ ಪರಸ್ಪರಾವಲಂಬಿಯಾದ ಅಂಶಗಳ ನಡುವೆ ಸಮತೋಲವನ್ನು ಪಡೆಯುವ ಪ್ರವೃತ್ತಿ

ಹೊಮೊಗನಿ

(ಸ) ಪುಂಕೇಸರ, ಶಲಾಕೆಗಳ ಗಾತ್ರದಲ್ಲಿ ವ್ಯತ್ಯಯ ಇರದಂತೆ ಒಂದೇ ಬಗೆಯ ಹೂವುಗಳು ಬೆಳೆದಿರುವ ಪರಿಸ್ಥಿತಿ

ಹೊಮೊಗಮಿ

(ಸ) ಹೂಗೊಂಚಲಿನಲ್ಲಿಯ ಎಲ್ಲ ಹೂಗಳು ಒಂದು ಲಿಂಗ ಮತ್ತು ರೂಪದವಾಗಿರುವ ಸನ್ನಿವೇಶ. ಪುಂಅಂಗಗಳೂ ಜಾಯಾಂಗಗಳೂ ಒಂದೇ ವೇಳೆ ಪರಿಪಕ್ವ ಗೊಂಡು ಸ್ವಫಲೀಕರಣಕ್ಕೆ ದಾರಿ ಮಾಡಿಕೊಡುವುದು

ಹೊಮೊಜೆನಿಸಿಸ್

(ಜೀ) ಪ್ರತಿಯೊಂದು ಪೀಳಿಗೆಯೂ ಅದಕ್ಕೆ ಮುನ್ನಿನ ಪೀಳಿಗೆಯನ್ನು ಹೋಲುವಂತೆಯೇ ಇರುವ ಸಂತಾನವೃದ್ಧಿ. ಪುನರುತ್ಪಾದನೆ

ಹೊಮೊಟ್ರಾಪಿಕ್

(ರ) ಒಂದೇ ಬಗೆಯ ಸ್ಫಟಿಕ ರಚನೆ ಇರುವ

ಹೊಮೊಡಾನ್ಟ್

(ಪ್ರಾ) ಸಮದಂತಿ. ಒಂದೇ ಮಾದರಿಯ ಹಲ್ಲುಗಳುಳ್ಳ ಪ್ರಾಣಿ. ಸ್ತನಿಗಳನ್ನು ಬಿಟ್ಟು ಹೆಚ್ಚಿನ ಕಶೇರುಕಗಳು ಸಮದಂತಿಗಳು. ಹೋಲಿಸಿ : ಹೆಟೆರಡಾನ್ಟ್

ಹೊಮೊಬ್ಲಾಸ್ಟಿಕ್

(ಪ್ರಾ) ರೂಪಾಂತರವಿಲ್ಲದೆ ಭ್ರೂಣಕೋಶದಿಂದ ನೇರ ಅಭಿವರ್ಧನೆ ಪಡೆದ ಒಂದೇ ರೀತಿಯ ಕೋಶಗಳಿಂದ ಹುಟ್ಟಿಬಂದ (ಪ್ರಾಣಿ) (ಸ) ಬೀಜಾಂಕುರ ಅಥವಾ ಚಿಗುರಿನಲ್ಲಿ ಮೊದಲು ರೂಪುಗೊಂಡ ಎಲೆಗಳು ಅನಂತರ ರೂಪುಗೊಂಡ ಎಲೆಗಳಂತೆಯೇ ಇರುವ ಸಸ್ಯ ಪ್ರಭೇದ

ಹೊಮ್ಮೀನು

(ಪ್ರಾ) ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಹೊಂಬಣ್ಣದ ಅಥವಾ ಕಿತ್ತಳೆ ಬಣ್ಣದ ಸಿಹಿ ನೀರಿನ ಮೀನು. ತವರು ಚೀನಾ. ಕ್ರಾಸಿಯಸ್ ಔರಾಟಸ್ ವೈಜ್ಞಾನಿಕ ನಾಮ. ಕಾರ್ಪ್ ಮೀನಿಗೆ ಹತ್ತಿರ ಸಂಬಂಧಿ. ೪೬ ಸೆಂಮೀ ಉದ್ದ ಬೆಳೆಯುತ್ತದೆ. ಅಲಂಕಾರಕ್ಕಾಗಿ ಗಾಜಿನ ಪಾತ್ರೆಗಳಲ್ಲಿ, ಕೊಳಗಳಲ್ಲಿ ಸಾಕಲಾಗುತ್ತದೆ

ಹೊರ ಎಲ್ಲೆ

(ಸಾ) ಯಾವುದೇ ಕಾಯದ ಹೊರಮೈ ಅಥವಾ ಎಲ್ಲೆ. ಪರಿಧಿ

ಹೊರಗಿವಿ

(ವೈ) ಸ್ತನಿಗಳಲ್ಲಿ, ಹಕ್ಕಿಗಳಲ್ಲಿ ಹಾಗೂ ಕೆಲವು ಸರೀಸೃಪಗಳಲ್ಲಿ ಕಂಡುಬರುವ, ಕಿವಿ ತಮಟೆಯ ಹೊರಗಿರುವ, ಕಿವಿಯ ಭಾಗ. ಇದರಲ್ಲಿರುವ ನಳಿಕೆ (ಬಾಹ್ಯ ಶ್ರವಣ ನಾಳಮಾರ್ಗ) ಶಬ್ದದ ಅಲೆಗಳನ್ನು ಕಿವಿ ತಮಟೆಗೆ ಸಾಗಿಸುತ್ತದೆ. ಸ್ತನಿಗಳ ಹೊರಗಿವಿಯಲ್ಲಿ ತಲೆಬುರುಡೆಯಿಂದ ಹೊರಚಾಚಿದ ಅಗಲವಾದ ಮೇಲ್ಭಾಗ (ಹಾಲೆ) ಕೂಡ ಇರಬಹುದು

ಹೊರಗ್ರಹಗಳು

(ಖ) ಕ್ಷುದ್ರಗ್ರಹಗಳ ಹೊನಲಿನ ಆಚೆಗಿರುವ ಗ್ರಹಗಳು : ಗುರು, ಶನಿ, ಯುರೇನಸ್, ನೆಪ್ಚೂನ್. ಸೌರವ್ಯೂಹದಲ್ಲಿ ಸೂರ್ಯನಿಂದ ಅತಿ ದೂರದ ಕಕ್ಷೆ ಉಳ್ಳವು

Search Dictionaries

Loading Results

Follow Us :   
  Download Bharatavani App
  Bharatavani Windows App