भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೈಡ್ರೊಪ್ಲೇನ್

(ತಂ) ೧. ನೀರಿನ ಮೇಲ್ಮೈಯನ್ನು ತಾಕಿಕೊಂಡು ವೇಗವಾಗಿ ಚಲಿಸುವ ಮೋಟರ್ ದೋಣಿ. ೨. ಜಲಾಂತರ್ಗಾಮಿ ನೌಕೆ ನೀರಿನಲ್ಲಿ ಮುಳುಗುವುದಕ್ಕೂ ಮೇಲೆ ಬರುವುದಕ್ಕೂ ಅನುಕೂಲಿಸಲು ಅದಕ್ಕೆ ಜೋಡಿಸಿರುವ ಈಜುರೆಕ್ಕೆ/ ಚುಕ್ಕಾಣಿಯಂಥ ಉಪಕರಣ. ನೀರು ವಿಮಾನ. ಜಲವಿಮಾನ

ಹೈಡ್ರೊಫಾಯ್ಲ್

(ತಂ) ದೋಣಿಯ ಒಡಲಿನ ಕೆಳಗೆ ಮೂಲೆಪಟ್ಟಿಗಳ ಮೇಲೆ ರೆಕ್ಕೆಯಂಥ ಲೋಹದ ಹಾಳೆಗಳನ್ನು ಜೋಡಿಸಿದ, ವೇಗವಾಗಿ ಹೋಗಬಲ್ಲ ಹಗುರ ನಾವೆ (ಜಲ ವಿಮಾನ). ಗಾಳಿಯಲ್ಲಿ ಅಥವಾ ನೀರಿನಲ್ಲಿ ಸಂಪೂರ್ಣ ವಾಗಿ ಇಲ್ಲವೇ ಭಾಗಶಃ ಮುಳುಗಿದ ಲೋಹದ ಹಾಳೆಗಳು ನೋದಕದಿಂದ ಚೋದಿತವಾಗಿ ನಾವೆಯನ್ನು ನೀರಿನಿಂದ ಮೇಲಕ್ಕೆತ್ತುತ್ತವೆ. ಆಗ ನಾವೆ ನೀರಿನ ಮೇಲ್ಮೈಗೆ ಸೋಂಕದೆಯೇ ಗಾಳಿಯಲ್ಲಿ ವೇಗವಾಗಿ ಮುಂಚಲಿಸುತ್ತದೆ

ಹೈಡ್ರೊಫೋನ್

(ತಂ) ನೀರಿನ ಮೂಲಕ ಸಾಗಿಬರುವ ಶಬ್ದ ತರಂಗಗಳನ್ನು ಗ್ರಹಿಸಿ ಅವನ್ನು ವಿದ್ಯುತ್ ತರಂಗಗಳಾಗಿ ಪರಿವರ್ತಿಸುವ ಸಲಕರಣೆ. ಜಲಧ್ವನಿಗ್ರಾಹಕ. ಜಲಾಂತರ್ಧ್ವನಿಗ್ರಾಹಕ

ಹೈಡ್ರೊಫ್ಲೂರಿಕ್ ಆಮ್ಲ

(ರ) ಹೈಡ್ರೊಜನ್ ಫ್ಲೂರೈಡ್‌ನ ಜಲೀಯ ದ್ರಾವಣ. HF. ಸಂಯುಕ್ತ. ಹೊಗೆ ಯಾಡುವ ನಿರ್ವರ್ಣ ಸಂಕ್ಷಾರಕ ದ್ರವ. ಕುಬಿಂ ೧೯.೫0ಸೆ ಗಾಜಿನ ಮೇಲೆ (ಗಾಜಿನಲ್ಲಿರುವ ಸಿಲಿಕಾದ ಮೇಲೆ) ತೀಕ್ಷ್ಣ ಕ್ರಿಯೆ ಜರಗಿಸುತ್ತದೆ. ಹಾಗಾಗಿ ಇದನ್ನು ಪಾಲಿಥೀನ್ ಅಥವಾ ಗಟ್ಟಾಪರ್ಚ ಪಾತ್ರೆಗಳಲ್ಲಿ ಶೇಖರಿಸಿಡಲಾಗುತ್ತದೆ. ಗಾಜಿನ ಮೇಲೆ ಆಕೃತಿಗಳನ್ನು ಕೊರೆಯಲು ಬಳಕೆ

ಹೈಡ್ರೊಸಾಲ್

(ರ) ನೀರಿನಲ್ಲಿ ಒಂದು ಕಲಿಲ ದ್ರಾವಣ

ಹೈಡ್ರೊಸಿಸ್ಟ್

(ವೈ) ನೀರು ತುಂಬಿದ ಟೊಳ್ಳಾದ ಅಂಗ. ಕೋಶ ಇತ್ಯಾದಿ

ಹೈಡ್ರೊಸ್ಟಾಟ್

(ತಂ) ತುಂಬಿ ಹರಿಯುವುದರಿಂದ ಅಥವಾ ಸೋರಿಕೆಯಿಂದ ಹೊರಬರುವ ನೀರನ್ನು ತಕ್ಷಣವೇ ಗುರುತಿಸಬಲ್ಲುದಾದುದರಿಂದ ಬಾಯ್ಲರ್‌ನಲ್ಲಿ ಅಥವಾ ಇತರ ಯಾವುದೇ ಸಾಧನದಲ್ಲಿ ನೀರನ್ನು ಸ್ವಯಂಚಾಲಿತವಾಗಿ ಒಂದು ನಿಶ್ಚಿತ ಮಟ್ಟದಲ್ಲೇ ಇರಿಸಲು ನೆರವಾಗುವ ಸಲಕರಣೆ

ಹೈಡ್ರೋನಿಯಮ್ ಅಯಾನ್

(ರ) ಹೈಡ್ರೇಟೆಡ್ (ನೀರಿನ ಅಣುಗಳೊಂದಿಗೆ ಸಂಯೋಗಗೊಂಡು ಹೈಡ್ರೇಟ್ ಆಗುವಂತೆ ಮಾಡಿದ) ರೂಪದಲ್ಲಿ H3O+ ಆಗಿ ಅಸ್ತಿತ್ವದಲ್ಲಿರುವ ಹೈಡ್ರೊಜನ್ ಅಯಾನ್. ಹೈಡ್ರಾಕ್ಸೋನಿಯಮ್ ಅಯಾನ್

ಹೈಪಬಿಸ್ಸಲ್

(ಭೂವಿ) ಭೂಗರ್ಭದ ಅತ್ಯಂತ ಆಳದಿಂದ ಶಿಲಾಪಾಕಗಳಾಗಿ ಹೊರಟು ಭೂಮಿಯ ಮೇಲ್ಮೈ ತಲಪುವುದಕ್ಕೆ ಮುನ್ನ ಸಣ್ಣಪುಟ್ಟ ಪ್ರಮಾಣಗಳಲ್ಲಿ ಅಂತಃಸರಣ ಗಳಾಗಿ ಘನೀಭವಿಸಿದ ಅಗ್ನಿಶಿಲೆಗಳು

ಹೈಪರ್‌ತೈರಾಯ್ಡಿಸಮ್

(ವೈ) ತೈರಾಯ್ಡ್ ಗ್ರಂಥಿಯಲ್ಲಿ ತೈರಾಯ್ಡ್ ಹಾರ್ಮೋನ್‌ನ ಸ್ರಾವ ಅಪಸಾಮಾನ್ಯ ವಾಗಿ ಹೆಚ್ಚಿ, ಮೂಲ ಉಪಾಪಚಯ ಕ್ರಿಯೆ ಅಧಿಕಗೊಂಡು, ಬೇಗ ಸುಸ್ತು, ಕಾತರ, ಉಷ್ಣ ಅಸಹಿಷ್ಣುತೆ, ಹೃದಯಾತಿಸ್ಪಂದನ ಹಾಗೂ ತೂಕ ಕಡಿಮೆಯಾಗುವ ಲಕ್ಷಣಗಳು ತಲೆದೋರುವುದು

ಹೈಪರ್‌ಬಾಲಿಕ್ ಫಲನಗಳು

(ಗ) ತ್ರಿಕೋಣಮಿತೀಯ ಫಲನಗಳು ವೃತ್ತಕ್ಕೆ ಹೇಗೆ ಸಂಬಂಧಿಸಿವೆಯೋ ಹಾಗೆ ಅತಿಪರವಲಯಕ್ಕೆ ಸಂಬಂಧಿಸಿರುವ ಆರು ಫಲನಗಳು

ಹೈಪರ್‌ಸೋನಿಕ್ ವೇಗ

(ಭೌ) ತರಲದಲ್ಲಿ ಶಬ್ದವೇಗಕ್ಕಿಂತಲೂ ಐದು ಪಟ್ಟು ಹೆಚ್ಚು ವೇಗವುಳ್ಳ ವಸ್ತುವಿನ ವೇಗ

ಹೈಪರಾನ್‌ಗಳು

(ಭೌ) ಬಾರ್ಯಾನ್ ವರ್ಗಕ್ಕೆ ಸೇರಿದ ಮೂಲಕಣಗಳ ಗುಂಪು. ಇವು ನ್ಯೂಟ್ರಾನ್‌ಗಿಂತ ಹೆಚ್ಚಿನ ಹಾಗೂ ಡ್ಯೂಟೆರಾನ್‌ಗಿಂತ ಕಡಿಮೆ ರಾಶಿಯುಳ್ಳವು, ಆದರೆ ಅತ್ಯಂತ ಹ್ರಸ್ವಾಯುಗಳು (೧೦-೧೦ಸೆಕೆಂಡ್‌ಗಳು). ನ್ಯೂಕ್ಲಿಯಾನ್‌ಗಳಲ್ಲದ ಎಲ್ಲ ಬಾರ್ಯಾನ್‌ಗಳೂ ಹೈಪರಾನ್‌ಗಳೇ. ಆದರೆ ಎಲ್ಲ ಹೈಪರಾನ್‌ಗಳೂ ನ್ಯೂಕ್ಲಿಯಾನ್‌ಗಳಾಗಿ ಕ್ಷಯಿಸುವುದರಿಂದ ಅವನ್ನು ಉದ್ರಿಕ್ತ ನ್ಯೂಕ್ಲಿಯಾನ್‌ಗಳೆನ್ನಬಹುದು. ಪ್ರತಿ ಹೈಪರಾನ್‌ಗೂ ಅನುಗುಣವಾದ ಪ್ರತಿಕಣವಿದೆ

ಹೈಪೊ

(ರ) ಧಾತುವಿನ ವೇಲೆನ್ಸಿ ಸಾಮಾನ್ಯಕ್ಕಿಂತ ಕಡಿಮೆ ಇದೆ ಎಂಬರ್ಥದಲ್ಲಿ ಬಳಸುವ ಪೂರ್ವಪದ. ಹಿಂದೆ ಇದನ್ನು ಸೋಡಿಯಮ್ ಹೈಪೊಸಲ್ಫೈಟ್ ಎಂದು ತಪ್ಪಾಗಿ ಕರೆಯ ಲಾಗುತ್ತಿತ್ತು. ಛಾಯಾಚಿತ್ರೀಕರಣದಲ್ಲಿ ಬಳಕೆ. ಸೋಡಿಯಮ್ ಥಯೊಸಲ್ಫೇಟ್‌ನ ವ್ಯಾಪಾರ ನಾಮ.

ಹೈಪೊಕಾಂಡ್ರಿಯ

(ವೈ) ರೋಗಿಯು ತನಗೆ ಯಾವುದೋ ಪ್ರಬಲ ದೇಹವ್ಯಾದಿ ಇದೆಯೆಂಬ ನಿಷ್ಕಾರಣ ಭ್ರಾಂತಿಯಿಂದ ಕೊರಗುವ ಸ್ಥಿತಿ. ವ್ಯಾಧಿಭ್ರಾಂತಿ ವಿಷಣ್ಣತೆ

ಹೈಪೊಕ್ಲೋರೈಟ್

(ರ) HClO3. ಹೈಪೊಕ್ಲೋರಸ್ ಆಮ್ಲದ (HClO) ಒಂದು ರ‍್ಯಾಡಿಕಲ್. ಸೋಡಿಯಮ್, ಪೊಟ್ಯಾಸಿಯಮ್ ಹಾಗೂ ಕ್ಯಾಲ್ಸಿಯಮ್ ಹೈಪೊಕ್ಲೋರೈಟ್‌ಗಳಿಗೆ ಆಕ್ಸಿಡೀಕರಣ ಗುಣವಿರುವುದರಿಂದ ಪೂತಿನಾಶಕಗಳಾಗಿ ಹಾಗೂ ಚೆಲುವೆಕಾರಿಯಾಗಿ ಬಳಕೆ

ಹೈಪೊಗೈನಸ್

(ಸ) (ಹೂವಿನ ವಿಷಯದಲ್ಲಿ) ಬಲ್ಬ್‌ನಂಥ ಪುಷ್ಪಪಾತ್ರೆಯ ಮೇಲುಗಡೆ ಶಲಾಕೆಯೂ ಶಲಾಕೆಯ ಸುತ್ತ ಮತ್ತು ಅದರಿಂದ ಸ್ವತಂತ್ರವಾಗಿ ಕೆಳಮಟ್ಟ ಗಳಲ್ಲಿ ಪುಂಕೇಸರ, ಹೂದಳ, ಪತ್ರದಳಗಳೂ ಇರುವ. ಉದಾ: ಕಾಕಪಾದ (ಬಟರ್‌ಕಪ್). ಅಧೋಜಾಯ

ಹೈಪೊಗೊನಾಡಿಸಮ್

(ವೈ) “ಅಪಕ್ವ ಜನನಾಂಗ”. ಲೈಂಗಿಕ ಹಾರ್ಮೋನುಗಳ ಕೊರತೆಯಿಂದ ಜನನಾಂಗಗಳು ಪೂರ್ಣ ಬೆಳೆಯದಿರುವಿಕೆ

ಹೈಪೊಗ್ನಾತಸ್

(ಪ್ರಾ) ಕೆಳದವಡೆ ಮೇಲ್ದವಡೆಗಿಂತ ಮುಂದಕ್ಕೆ ಚಾಚಿಕೊಂಡಿರುವುದು. ಬಾಯಿಯ ಭಾಗಗಳು ಅಧೋಮುಖವಾಗಿರುವುದು

ಹೈಪೊಗ್ಲಾಟಿಸ್

(ಪ್ರಾ) ಕಶೇರುಕಗಳಲ್ಲಿ ನಾಲಿಗೆಯ ಕೆಳಭಾಗ. ಕೊಲಿಯಾಪ್ಟೆರಾ (ಜೀರುಂಡೆಯಂಥ ಕೀಟ)ಗಳಲ್ಲಿ ಕೆಳ ‘ತುಟಿ’ಯ ಭಾಗ

Search Dictionaries

Loading Results

Follow Us :   
  Download Bharatavani App
  Bharatavani Windows App