भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೈಡ್ರಾಕ್ಸಿಲ್

(ರ) ತಲಾ ಒಂದು ಆಕ್ಸಿಜನ್ ಮತ್ತು ಒಂದು ಹೈಡ್ರೊಜನ್ ಪರಮಾಣು ಇರುವ ಅಯಾನ್. -OH

ಹೈಡ್ರಾಕ್ಸೈಡ್

(ರ) ಹೈಡ್ರೇಟೆಡ್ ಆಕ್ಸೈಡ್ ಎಂಬುದರ ಸಂಕ್ಷಿಪ್ತ ರೂಪ. ಪ್ರತ್ಯಾಮ್ಲೀಯ ಆಕ್ಸೈಡ್ ನೀರಿನೊಂದಿಗೆ ಕ್ರಿಯೆ ಜರಗಿಸಿ ರೂಪುಗೊಂಡ ಹಾಗೂ ತನ್ನಲ್ಲಿ ಹೈಡ್ರಾಕ್ಸಿಲ್ (-OH) ಪರಮಾಣುಗುಚ್ಛವುಳ್ಳ ಯಾವುದೇ ಪದಾರ್ಥ. ಉದಾ: NaOH

ಹೈಡ್ರೀಮಿಯ

(ವೈ) ರಕ್ತ ತೀರ ನೀರುನೀರಾಗಿರುವ ಒಂದು ರಕ್ತವ್ಯಾಧಿ. ತಿಳಿ ರಕ್ತರೋಗ. ನೀರು ನೆತ್ತರುರೋಗ

ಹೈಡ್ರೇಟ್

(ರ) ನೀರಿನ ಅಣುಗಳೊಂದಿಗೆ ರಾಸಾಯನಿಕ ವಾಗಿ ಸಂಯೋಗಗೊಂಡಿರುವ ಯಾವುದೇ ಸಂಯುಕ್ತ. ವಿಶೇಷವಾಗಿ ಸ್ಫಟಿಕೀಕರಣ ಜಲವನ್ನು ಒಳಗೊಂಡಿರುವ ಲವಣ. ಉದಾ: ತಾಮ್ರದ ಸಲ್ಫೇಟ್ ಪೆಂಟಹೈಡ್ರೇಟ್. CuSO4.5H2O

ಹೈಡ್ರೇಷನ್

(ರ) ಯಾವುದೇ ಪದಾರ್ಥ ನೀರಿನ ರಾಸಾಯನಿಕ ಸಂಯೋಜನೆಗೆ ಒಳಗಾಗಿ ಹೈಡ್ರೇಟಾಗುವಿಕೆ. ಜಲೀಕರಣ

ಹೈಡ್ರೇಷನ್ ಜಲ

(ರ) ಜಲಯೋಜಿತ ಸಂಯುಕ್ತಗಳಲ್ಲಿಯ ಜಲ. ಈ ಸಂಯುಕ್ತಗಳು ನೀರಿನ ದ್ರಾವಣ ದಿಂದ ಸ್ಫಟಿಕೀಕರಿಸಿದಾಗ ನಿರ್ದಿಷ್ಟ ಪ್ರಮಾಣದ ನೀರನ್ನು ತಮ್ಮಲ್ಲಿ ಉಳಿಸಿಕೊಂಡಿರುತ್ತವೆ. ಉದಾ: ತಾಮ್ರದ ಸಲ್ಫೇಟ್ CuSO4.5H2O. ಸ್ಫಟಿಕೀಕರಣ ಜಲ. ಸಂಯೋಗ ಜಲ

ಹೈಡ್ರೈಡ್

(ರ) ಹೈಡ್ರೊಜನ್ ಮತ್ತು ಇನ್ನೊಂದು ಧಾತುವನ್ನು ಒಳಗೊಂಡ ಸಂಯುಕ್ತ. ಉದಾ: H2S (ಹೈಡ್ರೊಜನ್ ಸಲ್ಫೈಡ್ ಎಂದು ಕರೆದರೂ ಇದೊಂದು ಹೈಡ್ರೈಡ್) ಹಾಗೂ ಲೀಥಿಯಮ್ ಹೈಡ್ರೈಡ್ LiH

ಹೈಡ್ರೊಕಾರ್ಬನ್‌ಗಳು

(ರ) ಕಾರ್ಬನ್ ಮತ್ತು ಹೈಡ್ರೊಜನ್‌ಗಳನ್ನಷ್ಟೆ ಒಳಗೊಂಡ ದ್ವಿಧಾತು ಆರ್ಗ್ಯಾನಿಕ್ ಸಂಯುಕ್ತಗಳು. ಪೆಟ್ರೋಲಿಯಮ್ ಕಚ್ಚಾತೈಲವು ಇವುಗಳ ಅತಿ ದೊಡ್ಡ ಆಕರ. ಇವನ್ನು ಪರ್ಯಾಪ್ತ ಹಾಗೂ ಅಪರ್ಯಾಪ್ತ ಎಂದೂ, ಆಲಿಫ್ಯಾಟಿಕ್ (ಆಲ್ಕೇನ್ ಅಥವಾ ಮೇದೋಯುಕ್ತ) ಹಾಗೂ ಪರಿಮಳಯುಕ್ತ (ಬೆನ್ಝೀನ್) ಮತ್ತು ಆಲಿಸೈಕ್ಲಿಕ್ ಎಂದೂ ವರ್ಗೀಕರಿಸಲಾಗುತ್ತದೆ

ಹೈಡ್ರೊಕ್ಲೋರಿಕ್ ಆಮ್ಲ

(ರ) ಹೈಡ್ರೊಜನ್ ಕ್ಲೋರೈಡ್ ಅನಿಲದ ಸಜಲ ದ್ರಾವಣ HCl. ಅನೇಕ ಲೋಹಗಳನ್ನು ಕರಗಿಸಿ ಕ್ಲೋರೈಡ್‌ಗಳನ್ನು ರೂಪಿಸುತ್ತದೆ ಮತ್ತು ಹೈಡ್ರೊಜನ್‌ಅನ್ನು ಬಿಡುಗಡೆ ಮಾಡುತ್ತದೆ. ಕೈಗಾರಿಕೆಯಲ್ಲಿ, ಉದಾ : ಕ್ಲೋರೀನ್ ತಯಾರಿಕೆ, ಊರಿಡುವಿಕೆ, ಬೆಸುಗೆ, ಇತ್ಯಾದಿ ಕಾರ್ಯಗಳಲ್ಲಿ ವಿಸ್ತೃತವಾಗಿ ಬಳಕೆ

ಹೈಡ್ರೊಜನ್

(ರ) ಆವರ್ತಕೋಷ್ಟಕದ 1A ಗುಂಪಿಗೆ ಸೇರಿದ ಅತ್ಯಂತ ಹಗುರ ಅನಿಲ ಧಾತು. ಪ್ರತೀಕ h. ಪಸಂ. ೧, ಪತೂ ೧.೦೦೭೯೭, ಸಂಯೋಗ ಶಕ್ತಿ ೧. ಬಣ್ಣವಿಲ್ಲದ, ವಾಸನೆ ಇಲ್ಲದ ದ್ವಿಪರಮಾಣವಿಕ ಅನಿಲ. ಗಾಳಿಯಲ್ಲಿ ಉರಿದಾಗ ನೀರು ಉಂಟಾಗುತ್ತದೆ. ನೀರಿನಲ್ಲೂ ಪೆಟ್ರೋಲಿಯಮ್‌ನಲ್ಲೂ ಜೀವದ್ರವ್ಯ ಗಳಲ್ಲೂ ಲಭ್ಯ. ಎರಡು ಸಮಸ್ಥಾನಿಗಳಿವೆ: ಡ್ಯೂಟೀರಿಯಮ್ (ಪತೂ ೨.೦೧೪೧, ೧ ಎಲೆಕ್ಟ್ರಾನ್, ೧ ಪ್ರೋಟಾನ್ ೧ ನ್ಯೂಟ್ರಾನ್ ಗಳಿಂದ ಕೂಡಿದೆ) ಮತ್ತು ಟ್ರೀಟಿಯಮ್ (ಪತೂ ೩.೦೨೨೧, ೧ ಎಲೆಕ್ಟ್ರಾನ್, ೧ ಪ್ರೋಟಾನ್ ೨ ನ್ಯೂಟ್ರಾನ್‌ಗಳಿಂದ ಕೂಡಿದೆ). ನೈಟ್ರೋಜನ್ ಸ್ಥಿರೀಕರಣ, ಕೊಬ್ಬಿನ ದೃಢೀಕರಣ (ಉದಾ : ಮಾರ್ಗರೀನ್ ತಯಾರಿಕೆ), ಹೈಡ್ರೊಕ್ಲೋರಿಕ್ ಆಮ್ಲ ತಯಾರಿಕೆ, ಲೋಹ ವಿಜ್ಞಾನ, ಎಣ್ಣೆಗಳ ಹೈಡ್ರೊಜನೀಕರಣ, ಆಕ್ಸಿ-ಹೈಡ್ರೊಜನ್ ಹಾಗೂ ಪರಮಾಣು-ಹೈಡ್ರೊಜನ್ ಬೆಸುಗೆ ಜ್ವಾಲೆ, ಇತ್ಯಾದಿಗಳಲ್ಲಿ ಬಳಕೆ. ‘ಹೈಡ್ರೊಜನ್ ಇಂಧನ ಆರ್ಥಿಕತೆ’ಯಲ್ಲೂ ಇದರ ಸಂಭಾವ್ಯ ಬಳಕೆ ಉಂಟು. ಇದರಲ್ಲಿ ಫಾಸಿಲ್ ಇಂಧನಗಳನ್ನು ಆಧರಿಸದಿರುವ ಪ್ರಮುಖ ಶಕ್ತಿ ಆಕರಗಳನ್ನು (ಉದಾ: ನ್ಯೂಕ್ಲಿಯರ್, ಸೌರ, ಭೂ ಉಷ್ಣಶಕ್ತಿ) ಬಳಸಿಕೊಂಡು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಾಗುತ್ತದೆ. ಈ ವಿದ್ಯುಚ್ಛಕ್ತಿಯಿಂದ ಜಲವಿದ್ಯುದ್ವಿಭಜನೆಗೊಳಿಸಿ ರೂಪುಗೊಂಡ ಹೈಡ್ರೊಜನ್‌ಅನ್ನು ದ್ರವ-ಹೈಡ್ರೊಜನ್ ಆಗಿ ಸಂಗ್ರಹಿಸಲಾಗುತ್ತದೆ. ರಾಸಾಯನಿಕವಾಗಿ ಹೈಡ್ರೊಜನ್ ಹೆಚ್ಚಿನ ಧಾತುಗಳೊಂದಿಗೆ ಪ್ರತಿಕ್ರಿಯಿಸುತ್ತದೆ.

ಹೈಡ್ರೊಜನ್ ಎಲೆಕ್ಟ್ರೋಡ್

(ರ) ಸೂಕ್ಷ್ಮ ಕಣ ಸ್ಥಿತಿಯ ಪ್ಲ್ಯಾಟಿನಮ್ ಕಪ್ಪು ಲೇಪಿಸಿರುವ ಪ್ಯಾಟಿನಮ್ ಎಲೆಕ್ಟ್ರೋಡನ್ನು ೧.೦ ಮೋಲಾರ್ ಸಾರತೆಯ ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಭಾಗಶಃ ಅದ್ದಿ ಅದರ ಮೇಲೆ ಪರಿಶುದ್ಧ ಹೈಡ್ರೊಜನ್ ಅಧಿಶೋಷಿಸಿ ರಚಿಸಿದ ಅನಿಲ ಎಲೆಕ್ಟ್ರೋಡ್. ಹೈಡ್ರೊಜನ್ ಅನಿಲವನ್ನು ನಿರಂತರವಾಗಿ ಹಾಯಿಸುತ್ತಿರಬೇಕು

ಹೈಡ್ರೊಜನ್ ಕ್ಲೋರೈಡ್

(ರ) ನಿರ್ವರ್ಣ ಅನಿಲ. hCl ದ್ರ.ಬಿಂ. -೧೧೪0 ಸೆ., ಕುಬಿಂ -೮೫ಂ ಸೆ. ನೀರಿನಲ್ಲಿ ವಿಲೀನಿಸಿ ಹೈಡ್ರೊಕ್ಲೋರಿಕ್ ಆಮ್ಲವನ್ನು ಉಂಟುಮಾಡುತ್ತದೆ. ಸಾರೀಕೃತ ಸಲ್ಫ್ಯೂರಿಕ್ ಆಮ್ಲವು ಕ್ಲೋರೈಡ್‌ಗಳ ಮೇಲೆ ವರ್ತಿಸಿದಾಗ hCl ರೂಪುಗೊಳ್ಳುತ್ತದೆ. ಕೈಗಾರಿಕಾ ಪ್ರಮಾಣ ದಲ್ಲಿ, ಹೈಡ್ರೋಕಾರ್ಬನ್‌ಗಳ ಕ್ಲೋರಿನೀಕರಣದ ಉಪ-ಉತ್ಪನ್ನ ವಾಗಿಯೂ, ಹೈಡ್ರೊಜನ್ (H2) ಹಾಗೂ ಕ್ಲೋರೀನ್ (Cl2) ಧಾತುಗಳನ್ನು ಉನ್ನತ ಉಷ್ಣತೆಗಳಿಗೆ ಕಾಸಿ ನೇರವಾಗಿಯೂ ತಯಾರಿಸಲಾಗುತ್ತದೆ. ಹೈಡ್ರೊಕ್ಲೋರಿಕ್ ಆಮ್ಲ ತಯಾರಿಕೆಯಲ್ಲಿ, ಅಪರ್ಯಾಪ್ತ ಸಾವಯವ ಸಂಯುಕ್ತಗಳ ಕ್ಲೋರಿನೀಕರಣದಲ್ಲಿ, ಪಾಲಿಮರೀಕರಣ, ಐಸೋಮರೀಕರಣ ಹಾಗೂ ಆಲ್ಕೈಲೇಷನ್ ಗಳಲ್ಲಿ ಕ್ರಿಯಾವರ್ಧಕವಾಗಿ ಬಳಕೆ

ಹೈಡ್ರೊಜನ್ ನಕ್ಷತ್ರ

(ಖ) A ರೋಹಿತವರ್ಗದ ನಕ್ಷತ್ರ. ಬಿಳಿ ಬಣ್ಣ. ಮೇಲ್ಮೈ ಉಷ್ಣತೆ ೮೦೦೦-೧೧೦೦೦ K.

ಹೈಡ್ರೊಜನ್ ಪರಾಕ್ಸೈಡ್

(ರ) H2O2. ಪ್ರಬಲ ಆಕ್ಸಿಡೀಕರಣ ಗುಣವುಳ್ಳ ಸ್ನಿಗ್ಧ ದ್ರವ. ನೀರಿನಲ್ಲಿ ಹೈಡ್ರೊಜನ್ ನೊಂದಿಗೆ ಎಷ್ಟು ಆಕ್ಸಿಜನ್ ಸಂಯೋಜಿತವಾಗಿದೆಯೋ ಅದರ ಎರಡರಷ್ಟು ಆಕ್ಸಿಜನ್ ಉಳ್ಳದ್ದು. ಸಾಸಾ ೧.೪೪, ದ್ರಬಿಂ -೦.೮೯0 ಸೆ, ಕುಬಿಂ ೧೫೧.೪ಂ ಸೆ. ಸುಲಭವಾಗಿ ವಿಭಜನೆಗೊಂಡು ನೀರು ಹಾಗೂ ಆಕ್ಸಿಜನ್ನನ್ನು ನೀಡುತ್ತದೆ. ಚೆಲುವೆಕಾರಿಯಾಗಿ, ರಾಸಾಯನಿಕ ಮಧ್ಯವರ್ತಿಯಾಗಿ, ರಾಕೆಟ್ ಇಂಧನವಾಗಿ ಹಾಗೂ ಪೂತಿನಾಶಕವಾಗಿ ಬಳಕೆ

ಹೈಡ್ರೊಜನ್ ಬಾಂಬ್

(ತಂ) ಬೈಜಿಕ ಸಂಲಯನ ಪ್ರಕ್ರಿಯೆಯನ್ನು ಬಳಸಿಕೊಂಡು ಅತ್ಯಧಿಕ ಪ್ರಮಾಣಗಳ ಶಕ್ತಿ ಬಿಡುಗಡೆ ಮಾಡುವ ಬಾಂಬ್. (ಪರಮಾಣು ಬಾಂಬ್ ಆದರೋ ಬೈಜಿಕ ವಿದಲನ ಪ್ರಕ್ರಿಯೆಯನ್ನು ಬಳಸಿಕೊಳ್ಳುತ್ತದೆ). ಈ ಸಂಲಯನ ಪ್ರಕ್ರಿಯೆ ಉಂಟಾಗಲು ಅತ್ಯುಚ್ಚ ಉಷ್ಣತೆ ಅವಶ್ಯ. ಪರಮಾಣು ಬಾಂಬೊಂದರ ಸುತ್ತ ಸಂಲಯನ ಸಾಮಗ್ರಿಯನ್ನು ಆಳವಡಿಸಿ ಇಂಥ ಉಷ್ಣತೆ ಪಡೆಯಲಾಗುತ್ತದೆ. ಲೀಥಿಯಮ್ ಡ್ಯೂಟರೈಡ್ ಪದಾರ್ಥವು ಹೈಡ್ರೊಜನ್ ಸಮಸ್ಥಾನಿಗಳಾದ ಡ್ಯುಟೀರಿಯಮ್ ಹಾಗೂ ಟ್ರೀಟಿಯಮ್‌ಗಳೊಂದಿಗೆ ಕೂಡಿಕೊಂಡು ಇಂಥ ಅನೇಕ ಸಂಲಯನ ಪ್ರಕ್ರಿಯೆಗಳನ್ನು ಆರಂಭಿಸಬಲ್ಲದು. ಈ ಕ್ರಿಯೆಗಳು ಅಧಿಕ-ಶಕ್ತಿಯ ನ್ಯೂಟ್ರಾನ್‌ಗಳನ್ನೂ ಉಂಟುಮಾಡುತ್ತವೆ. ಈ ನ್ಯೂಟ್ರಾನ್‌ಗಳು ಯುರೇನಿಯಮ್‌ನ ಅತ್ಯಂತ ಸಮೃದ್ಧ ಸಮಸ್ಥಾನಿಯಾದ ೨೩೮Uನ ಸುತ್ತಲಿನ ಸ್ತರದಲ್ಲಿ ವಿದಲನವನ್ನು ಉಂಟು ಮಾಡಬಲ್ಲವು. ಹಾಗಾಗಿ ಇನ್ನಷ್ಟು ಶಕ್ತಿ ಬಿಡುಗಡೆಯಾಗುತ್ತದೆ. ಇಂತಹ ಉಷ್ಣ ಬೈಜಿಕ ಕ್ರಿಯೆ ಉಂಟುಮಾಡುವ ಅನೇಕ ಮೆಗಾಟನ್ ಸ್ಫೋಟನವನ್ನು ಇನ್ನೂ ಯುದ್ಧದಲ್ಲಿ ಬಳಸಲಾಗಿಲ್ಲ. ೧೯೬೧ರಲ್ಲಿ ಆಗಿನ ಸೋವಿಯತ್ ಒಕ್ಕೂಟವು ೫೮ ಮೆಗಾಟನ್ ಶಕ್ತಿಯ ಅಸ್ತ್ರವನ್ನು ಆರ್ಕ್ಟಿಕ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಸಿಡಿಸಿದ್ದಿತು. ನೋಡಿ : ಬೈಜಿಕ ಬಾಂಬ್

ಹೈಡ್ರೊಜನ್ ಸಲ್ಫೈಡ್

(ರ) H2S. ಕೊಳೆತ ಮೊಟ್ಟೆ ವಾಸನೆಯುಳ್ಳ ಬಣ್ಣವಿಲ್ಲದ ವಿಷಾನಿಲ. ಗಂಧಕಯುಕ್ತ ಆರ್ಗ್ಯಾನಿಕ್ ಸಂಯುಕ್ತಗಳ ವಿಭಜನೆಯಿಂದ ಉಂಟಾಗುತ್ತದೆ. ಕೆಲವು ನೈಸರ್ಗಿಕ ಖನಿಜ ಜಲಗಳಲ್ಲಿ ಲಭ್ಯ. ಫೆರಸ್ ಸಲ್ಫೈಡ್ ಮೇಲೆ ೧:೪ ಪ್ರಮಾಣದ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದ ವರ್ತನೆಯಿಂದ ತಯಾರಿಸುವುದು ವಾಡಿಕೆ. ಗುಣಾತ್ಮಕ ರಾಸಾಯನಿಕ ವಿಶ್ಲೇಷಣೆಯಲ್ಲಿ ಬಳಕೆ

ಹೈಡ್ರೊಜನೀಕರಣ

(ರ) ಕ್ರಿಯಾವರ್ಧಕದ ಸಮ್ಮುಖದಲ್ಲಿ ಯಾವುದೇ ಪದಾರ್ಥಕ್ಕೆ ಹೈಡ್ರೊಜನ್ ಅನಿಲವನ್ನು ಸೇರಿಸುವ ರಾಸಾಯನಿಕ ಕ್ರಿಯೆ. ಉದಾ: ಕಲ್ಲಿದ್ದಲು, ಕೊಬ್ಬು ಹಾಗೂ ಎಣ್ಣೆಗಳ ಹೈಡ್ರೊಜನೀಕರಣ. (ಹೈಡ್ರೊಜನ್ನಿನೊಂದಿಗೆ ಸಂಯುಕ್ತ/ಧಾತು ನಡೆಸುವ ಸಂಕಲನ ಕ್ರಿಯೆ). ದ್ರವವಾಗಿರುವ ಎಣ್ಣೆಗಳನ್ನು ಹೈಡ್ರೊಜನೀಕರಿಸಿ ತುಪ್ಪದಂಥ ಘನ ಪದಾರ್ಥವನ್ನು ತಯಾರಿಸುವ ಕ್ರಿಯೆ

ಹೈಡ್ರೊಜೆಲ್

(ರ) ನೀರು ದ್ರವ-ಘಟಕವಾಗಿರುವ ಜೆಲ್ (ಲೋಳೆ)

ಹೈಡ್ರೊಟಾಕ್ಸಿಸ್

(ಸ) ತೇವದ ಉದ್ದೀಪನಕ್ಕೆ ಜೀವಿಯ ಸ್ಪಂದನ ಅಥವಾ ಪ್ರತಿಕ್ರಿಯೆ

ಹೈಡ್ರೊಪಾಲಿಪ್

(ಪ್ರಾ) ಬಾಯಿಯ ಸುತ್ತಲೂ ಚಾವಟಿಗಳಂಥ ಸ್ಪರ್ಶಾಂಗವುಳ್ಳ ಸಿಹಿ ನೀರಿನ ಪ್ರಾಣಿ ಜಾತಿ

Search Dictionaries

Loading Results

Follow Us :   
  Download Bharatavani App
  Bharatavani Windows App