भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೆಬ್ಬೆಕ್ಕು

(ಪ್ರಾ) ಲಿಂಕ್ಸ್ ಜಾತಿಯ ಹಲವಾರು ಕಾಡು ಬೆಕ್ಕುಗಳ ಪೈಕಿ ಒಂದು. ಉದ್ದ ಕಾಲು, ಮೊಟಕು ಬಾಲ, ಕಿವಿಗಳ ತುದಿಗಳಲ್ಲಿ ಗೊಂಚಲು ಕೂದಲು, ಚುಕ್ಕೆ ಚುಕ್ಕೆ ತುಪ್ಪಳ, ತೀಕ್ಷ್ಣ ದೃಷ್ಟಿ ಇದರ ವಿಶಿಷ್ಟ ಲಕ್ಷಣ. ಮಾರ್ಜಾಲ

ಹೆಬ್ಬೆರಳು

(ಪ್ರಾ) ಮಾನವನ ಕೈಬೆರಳುಗಳಲ್ಲಿ ಗಿಡ್ಡ ಆದರೆ ಹೆಚ್ಚು ಬಲಶಾಲಿಯಾಗಿದ್ದು ಇತರ ಬೆರಳುಗಳಿಗೆ ಎದುರುಮುಖವಾದುದು. ವಸ್ತುಗಳನ್ನು ಹಿಡಿಯಲು ಮತ್ತು ಇತರ ಕಾರ್ಯ ನಿರ್ವಹಿಸಲು ಉಪಯುಕ್ತ. ಅಂಗುಷ್ಠ

ಹೆರಾಯಿನ್

(ರ) C21H23O5N. ಮಾರ್ಫಿನ್‌ನಿಂದ (ಅಫೀಮು ಸಾರ) ತಯಾರಿಸಿದ ಬಿಳಿ ಸ್ಫಟಿಕೀಯ ಪುಡಿ. ನಿದ್ರಾಜನಕ. ನೋವು ಶಮನಕಾರಿ. ಮತ್ತೇರಿಸುವ ಮಾದಕವಸ್ತು

ಹೆರಿಂಗ್

(ಪ್ರಾ) ಕ್ಲೂಪಿಯಿಡೀ ಕುಟುಂಬಕ್ಕೆ ಸೇರಿದ ಮೀನು. ಉತ್ತರ ಅಟ್ಲಾಂಟಿಕ್ ಸಾಗರವಾಸಿ. ಮೊಟ್ಟೆಯಿಡಲು ಸಮುದ್ರ ತೀರಕ್ಕೆ ಗುಂಪಾಗಿ ಬರುತ್ತವೆ. ಆಹಾರವಾಗಿ ಬಳಕೆ

ಹೆರೆಕೆ

(ವೈ) ಶರೀರದ ಸೊಟ್ಟಗಾದ ಅಂಗವನ್ನು ನೇರ್ಪಡಿಸಲು ಆ ಅಂಗದ ಒಂದು ಭಾಗವನ್ನು, ವಿಶೇಷತಃ ಸಂಧಿ ರೂಪಿಸುವ ಮೂಳೆಗಳ ಇಲ್ಲವೇ ಇತರ ರಚನೆಗಳ ತುದಿಗಳನ್ನು ಕತ್ತರಿಸಿ ಹಾಕುವುದು, ಇಲ್ಲವೇ ಹೆರೆಯುವುದು. ಸವರಿಕೆ

ಹೆರೆಗತ್ತರಿ

(ತಂ) ಗಿಡಗಳನ್ನು ಸವರಲು ಬಳಸುವ ಕತ್ತರಿ

ಹೆಲಟಿಸಮ್

(ಜೀ) ಎರಡು ರೀತಿಯ ಸಸ್ಯಗಳು ಅಥವಾ ಪ್ರಾಣಿಗಳು, ಒಂದು ಇನ್ನೊಂದಕ್ಕೆ (ದಾಸನಂತೆ) ಆಹಾರ ಒದಗಿಸುತ್ತ, ಒಟ್ಟಿಗೇ ಜೀವನ ನಡೆಸುವ ವ್ಯವಸ್ಥೆ. ತೊತ್ತುಗಾರಿಕೆ

ಹೆಲಿಕ್ಸ್

(ಗ) ಶಂಕು ಅಥವಾ ಉರುಳೆಯ ಮೇಲಿದ್ದು ಇದರ ಜನಕ ರೇಖೆಗಳನ್ನು ನಿಯತಕೋನದಲ್ಲಿ ಛೇದಿಸುವ ಸುರುಳಿ. ಉದಾ : ಬೋಲ್ಟಿನ ಸೂತ್ರ (ಥ್ರೆಡ್). ಸಮತಲದ ಮೇಲೆ ಸರಳ ರೇಖೆಯನ್ನೆಳೆದು ಆ ಸಮತಲವನ್ನು ಒಂದು ಸಿಲಿಂಡರಿಗೆ ಸುತ್ತಿದರೆ ಆ ರೇಖೆಯು ರಚಿಸುವ ಆಕೃತಿ. (ವೈ) ಹೊರಗಿವಿಯ ಅಂಚು

ಹೆಲಿಕಾಪ್ಟರ್

(ತಂ) ಮೇಲೇರುವುದಕ್ಕೂ ಮುಂದಕ್ಕೆ ಸಾಗುವುದಕ್ಕೂ ಊರ್ಧ್ವ ಅಕ್ಷದ ಸುತ್ತ ಕ್ಷಿತಿಜೀಯವಾಗಿ ತಿರುಗುವ ಆಲಗುಗಳಿಂದಲೇ ಪ್ರಚೋದನೆ ಪಡೆಯುವ, ಹಾಗಾಗಿ ನೇರವಾಗಿಯೇ ಮೇಲಕ್ಕೆ ಏಳುವ ಹಾಗೂ ಕೆಳಕ್ಕೆ ಇಳಿಯುವ, ಮೇಲಕ್ಕೆ ಕೆಳಕ್ಕೆ ಹಾಗೂ ಸಮಾಂತರವಾಗಿ ಚಲಿಸಬಲ್ಲ ರೆಕ್ಕೆಗಳಿಲ್ಲದ ವಿಮಾನ, ಹಾರುಯಂತ್ರ. ರೋಟರ್‌ಕ್ರಾಫ್ಟ್

ಹೆಲಿಕಾಯ್ಡ್

(ಗ) ಸಮತಲೀಯ ಅಥವಾ ತಿರುಚಿದ ವಕ್ರರೇಖೆಯನ್ನು ಸ್ಥಿರಾಕ್ಷದ ಸುತ್ತ ಆವರ್ತಿಸಿ ಅದನ್ನು ಆ ಅಕ್ಷದ ದಿಶಾನೇರ ಉಭಯಚಲನ (ಆವರ್ತನೆ ಮತ್ತು ಸರಳಚಲನೆ) ದರಗಳ ನಿಷ್ಪತ್ತಿ ನಿಯತವಾಗಿರುವಂತೆ ಸರಿಸಿದಾಗ ದೊರೆಯುವ ತಲ. ಕುಂಡಲಿನಿ ರೂಪಿ

ಹೆಲ್ಮಿಂತ್

(ವೈ) ಕರುಳಿನಲ್ಲಿರುವ ರೋಗಕಾರಕ ಪರೋಪಜೀವಿ. ಕರುಳುಕ್ರಿಮಿ

ಹೇಡ್ರಾನ್

(ಭೌ) ಇತರ ಕಣಗಳೊಂದಿಗೆ ತೀವ್ರವಾಗಿ ವರ್ತಿಸುವ ಮೂಲಕಣ. ಬಾರ್ಯಾನ್ (ಬಾರ್ಯಾನ್‌ಗಳು ಪ್ರೋಟಾನ್‌ಗಳಾಗಿ ಕ್ಷಯಿಸುತ್ತವೆ ಮತ್ತು ಮೂರು ಕ್ವಾರ್ಕ್‌ಗಳಿಂದ ಕೂಡಿರುತ್ತವೆ), ಮೀಸಾನ್‌ಗಳಿಂದ (ಮೀಸಾನ್‌ಗಳು ಲೆಪ್ಟಾನ್ ಹಾಗೂ ಫೋಟಾನ್‌ಗಳಾಗಿ ಇಲ್ಲವೇ ಪ್ರೋಟಾನ್ – ಜೋಡಿಗಳಾಗಿ ಕ್ಷಯಿಸುತ್ತವೆ ಮತ್ತು ಒಂದು ಕ್ವಾರ್ಕ್ ಹಾಗೂ ಒಂದು ಆಂಟಿಕ್ವಾರ್ಕ್ ಗಳಿಂದ ಕೂಡಿರುತ್ತವೆ) ಕೂಡಿದೆ. ಇದಕ್ಕೆ ಕ್ವಾರ್ಕ್‌ಸಹಿತವಾದ ಆಂತರಿಕ ರಚನೆ ಇರುವುದರಿಂದ ಇದು ನಿಜಕ್ಕೂ ಮೂಲಕಣವಲ್ಲ ಎಂದು ನಂಬಲಾಗಿದೆ

ಹೇಮಂತ ತ್ರಿಭುಜ

(ಖ) ಪೂರ್ವಶ್ವಾನ- ಆರ್ದ್ರಾ-ಲುಬ್ಧಕ ನಕ್ಷತ್ರಗಳು ರಚಿಸುವ ಸಮಭುಜ ತ್ರಿಭುಜ. ಹೇಮಂತ ಋತುವಿನ ರಾತ್ರಿ ವೇಳೆಗಳಲ್ಲಿ ಎದ್ದು ಪ್ರಕಟವಾಗುವು ದರಿಂದ ಈ ಹೆಸರು. ಶಿಶಿರ ತ್ರಿಭುಜ. ನೋಡಿ : ಗ್ರೀಷ್ಮ ತ್ರಿಭುಜ

ಹೇರ್‌ಸ್ಪ್ರಿಂಗ್

(ತಂ) ಗಡಿಯಾರದ ಗತಿ ನಿಯಂತ್ರಕ ತುಲಾಚಕ್ರದ (ಬ್ಯಾಲೆನ್ಸ್ ವ್ಹೀಲ್) ಕಂಪನವನ್ನು ನಿಯಂತ್ರಿಸುವ ಸೂಕ್ಷ್ಮವಾದ ಸುರುಳಿ ತಂತಿ. ಬ್ಯಾಲೆನ್ಸ್ ಸ್ಪ್ರಿಂಗ್

ಹೇಸರಗತ್ತೆ

(ಪ್ರಾ) ಹೆಣ್ಣು ಕುದುರೆಯಲ್ಲಿ ಗಂಡುಕತ್ತೆಗೆ, ಹೆಣ್ಣು ಕತ್ತೆಯಲ್ಲಿ ಗಂಡು ಕುದುರೆಗೆ, ಹುಟ್ಟಿದ ಸಂಕರ ಪ್ರಾಣಿ. ಭಾರ ಎಳೆಯಲು ಉಪಯೋಗ. ನೋಡಿ: ಹಿನ್ನಿ

ಹೇಳಿಕೆ

(ಗ) ಗಣಿತ ತರ್ಕಶಾಸ್ತ್ರದಲ್ಲಿ ನಿಜ ಮೌಲ್ಯ ನಿರ್ಧರಿಸಲಾಗದ ಮಾತು. ಉದಾ: ಎಂಥ ಮುದ್ದು! ಎಂಥ ಸೊಗಸು! ನೋಡಿ: ಉಕ್ತಿ

ಹೈಗ್ರೊಫಾನಸ್

(ಭೌ) ಆರ್ದ್ರವಾಗಿರುವಾಗ ಮಾತ್ರ ಬೆಳಕನ್ನು ಹರಿಯಗೊಡುವ

ಹೈಡತೋಡ್

(ಸ) ಕೆಲವು ಸಸ್ಯಗಳ ಎಲೆಗಳ

ಹೈಡ್ರಜೀನ್

(ರ) H2N.NH2. ಹೊಗೆಯಾಡುವ ಪ್ರಬಲ ಪ್ರತ್ಯಾಮ್ಲೀಯ ದ್ರವ. ಕುಬಿಂ ೧೧೩0 ಸೆ. ಪ್ರಬಲ ಅಪಕರ್ಷಣಕಾರಿ. ಶಕ್ತಿಶಾಲಿ ಕ್ರಿಯಾಪಟು. ಆರ್ಗ್ಯಾನಿಕ್ ಸಂಶ್ಲೇಷಣೆಯಲ್ಲೂ ರಾಕೆಟ್ ನೋದಕವಾಗಿಯೂ ಒಂಟಿಯಾಗಿ ಇಲ್ಲವೇ ಡೈಮಿಥೈಲ್ ಜನ್ಯ ಪದಾರ್ಥಗಳೊಂದಿಗೆ ಬಳಕೆ

ಹೈಡ್ರಾಂತ್

(ಪ್ರಾ) ಹೈಡ್ರೊಜೋವ ಪ್ರಾಣಿವರ್ಗದಲ್ಲಿ ಹೈಡ್ರಾಯ್ಡ್ ಸಮುದಾಯದ ಆಹಾರ ಸಂಚಯನ (ಜೀವ ಪೋಷಕ) ಘಟಕ

Search Dictionaries

Loading Results

Follow Us :   
  Download Bharatavani App
  Bharatavani Windows App