भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೆಟೆರೊಗಮೀಟ್

(ಜೀ) ತನ್ನೊಂದಿಗೆ ಐಕ್ಯವಾಗುವ ಲೈಂಗಿಕ-ಕೋಶದಿಂದ ಗಾತ್ರ ಅಥವಾ ರೂಪದಲ್ಲಿ ಭಿನ್ನವಾದ ಲೈಂಗಿಕ-ಕೋಶ. ಭಿನ್ನಯುಗ್ಮಕ

ಹೆಟೆರೊಗೈನಸ್

(ಪ್ರಾ) ಒಂದಕ್ಕಿಂತ ಹೆಚ್ಚು ಬಗೆಯ ಹೆಣ್ಣುಗಳಿರುವ ಉದಾ: ಜೇನುಹುಳುಗಳು

ಹೆಟೆರೊಫೇಸಿಯ

(ವೈ) ವ್ಯಕ್ತಿ ಮಾತುಗಳನ್ನು ತಪ್ಪಾಗಿ ಬಳಸುವ ಸ್ಥಿತಿ

ಹೆಟೆರೊಲೇಲಿಯ

(ವೈ) ಯಾವುದೇ ವ್ಯಕ್ತಿ ತಾನು ಹೇಳಬೇಕೆಂದುದಕ್ಕೆ ಭಿನ್ನವಾದ ಮಾತುಗಳನ್ನು ಹೇಳುವ ಸ್ಥಿತಿ. ಇಬ್ಬಗೆಯ ಮಾತುಗಳನ್ನಾಡುವುದು

ಹೆಟೆರೊಸೈಕ್ಲಿಕ್

(ರ) ಅಣುರಚನೆಯಲ್ಲಿ ಕಾರ್ಬನ್ ಮತ್ತಿತರ ಮಾದರಿಯ ಪರಮಾಣುಗಳಿಂದಾದ ಚಕ್ರವಿರುವ (ರಾಸಾಯನಿಕ ಸಂಯುಕ್ತ). ಉದಾ: ಪಿರಿಡೀನ್ C5H5N. ಭಿನ್ನ ಚಕ್ರೀಯ

ಹೆಡ್‌ಫೋನ್

(ತಂ) ರೇಡಿಯೋ, ದೂರವಾಣಿ ಅಥವಾ ಇತರ ಶ್ರವ್ಯ ಆವೃತ್ತಿ ಸಂಕೇತ ಮೂಲಗಳಿಂದ ಬರುವ ಧ್ವನಿ ಕಾರ್ಯಕ್ರಮಗಳನ್ನು ಖಾಸಗಿಯಾಗಿ ಕೇಳಿಸಿಕೊಳ್ಳಲು ಕಿವಿಯ ಬಳಿ ಸಿಕ್ಕಿಸಿಕೊಳ್ಳಬಹುದಾದ ವಿದ್ಯುತ್ ಧ್ವನಿಕ ಟ್ರಾನ್ಸ್‌ಡ್ಯೂಸರ್. ಶಿರೋವಾಣಿ

ಹೆಡಕು

(ವೈ) ಮನುಷ್ಯನಲ್ಲಿ ಕತ್ತಿನ ಹಿಂಭಾಗ

ಹೆಡತಲೆ

(ಪ್ರಾ) ಕಶೇರುಕಗಳ ತಲೆಬುರುಡೆಯ ಹಿಂಭಾಗ. ಅನುಕಪಾಲ

ಹೆಡತಲೆ ಮೂಳೆ

(ವೈ) ಕಪಾಲದ ಹಿಂಭಾಗವನ್ನು ರೂಪಿಸುವ ಮೂಳೆಗಳಲ್ಲೊಂದು. ಬೃಹತ್ ರಂಧ್ರದ ಸುತ್ತಲೂ ಇದ್ದು ಎಲುಗೆಣ್ಣಿನ ಮೂಲಕ ತಲೆಚಿಪ್ಪಿಗೆ ಆಧಾರವಾಗಿರುವ ಅಗ್ರ ಕಶೇರು ಅಟ್ಲಾಸ್‌ನೊಂದಿಗೆ ಕೂಡುತ್ತದೆ

ಹೆಡೆ

(ಪ್ರಾ) ನೀರುನಾಯಿ ಮೊದಲಾದ ಕೆಲವು ಪ್ರಾಣಿಗಳ ತಲೆಯ ಮೇಲೆ ಉಡುಗೆಯಂತಿರುವ ಮುಸುಕು ಅಂಗ. ಕೆಲವು ಬಗೆಯ ಹಾವುಗಳ ಕತ್ತಿನ ಇಬ್ಬದಿಗಳಲ್ಲೂ ಹೊರಚಾಚಿದ ಚರ್ಮದ ಪದರ. ಕುಂಚಿಗೆ

ಹೆಣ್ಣು

(ಸ) ಕೇಸರಗಳಿರದ ಪುಷ್ಪ. (ಪ್ರಾ) ಮರಿಗಳನ್ನು ಧರಿಸುವ ಅಥವಾ ತತ್ತಿಗಳನ್ನು ಉತ್ಪಾದಿಸುವ ಜೀವಿ

ಹೆದ್ದಾರಿ

(ಎಂ) ಮುಖ್ಯರಸ್ತೆ: ರಾಷ್ಟ್ರದ ಮುಖ್ಯ ಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸುವುದು – ರಾಷ್ಟ್ರೀಯ ಹೆದ್ದಾರಿ; ರಾಜ್ಯದ ಮುಖ್ಯ ಊರುಗಳ ನಡುವೆ ಸಂಪರ್ಕ ಕಲ್ಪಿಸುವುದು-ರಾಜ್ಯ ಹೆದ್ದಾರಿ. ಗ್ರಾಮಾಂತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದು – ಗ್ರಾಮಾಂತರ ಹೆದ್ದಾರಿ

ಹೆನ್ರಿ

(ಭೌ) ವಿದ್ಯುತ್ ಪ್ರೇರಕತೆಯನ್ನು ಅಳೆಯುವ ಒಂದು ಎಸ್‌ಐ ಏಕಮಾನ. ಪ್ರತೀಕ H. ಸಂವೃತ ವಿದ್ಯುನ್ಮಂಡಲದಲ್ಲಿ ವಿದ್ಯುತ್ ಪ್ರವಾಹವು ಸೆಕೆಂಡಿಗೆ ೧ಆಂಪೆರ್‌ನಂತೆ ಏಕಪ್ರಕಾರವಾಗಿ ವ್ಯತ್ಯಯವಾಗುತ್ತಿರುವಾಗ ೧ವೋಲ್ಟ್‌ನಷ್ಟು ವಿದ್ಯುತ್ ಚಾಲಕ ಬಲ ಉಂಟಾಗುವಾಗಿನ ಪ್ರೇರಕತೆ. ಅಮೆರಿಕದ ಭೌತವಿಜ್ಞಾನಿ ಜೋಸೆಫ್ ಹೆನ್ರಿ (೧೭೯೭-೧೮೭೮) ಗೌರವಾರ್ಥ ಈ ಹೆಸರು

ಹೆಪಟೈಟಿಸ್

(ವೈ) ಸೋಂಕಿನಿಂದಾಗಿ ಯಕೃತ್ತಿನ ಉರಿಯೂತ. ಅರಿಸಿನ ಕಾಮಾಲೆ ರೋಗ ಉಂಟುಮಾಡ ಬಹುದು. ಹಲವು ರೀತಿಯ ವೈರಸ್‌ಗಳು ಇದಕ್ಕೆ ಕಾರಣ. ಹೆಪಟೈಟಿಸ್-ಎ ವೈರಸ್‌ನಿಂದ ಆಗುವ ರೋಗ ಬೇಗ ಹೆಚ್ಚುತ್ತದೆ. ಆದರೆ ತೀವ್ರವಲ್ಲ. ಹೆಪಟೈಟಸ್-ಬಿ ವೈರಸ್‌ನಿಂದಾಗುವ ಸೋಂಕು ನಿಧಾನವಾಗಿ ಹೆಚ್ಚುತ್ತದೆ. ಆದರೆ ದೀರ್ಘಕಾಲ ಇರುತ್ತದೆ. ಮಾರಕವೂ ಆಗಬಹುದು. ಗುಣಪಡಿಸಲು ಲಸಿಕೆಗಳು ಲಭ್ಯವಿವೆ

ಹೆಪ್ಟೇನ್

(ರ) C7H16. ಏಳು ಪರಮಾಣುಗಳಿರುವ ತೆರೆದ ಸರಣಿಯ ಪರ್ಯಾಪ್ತ ಹೈಡ್ರೊಕಾರ್ಬನ್. ನೀರಿನಲ್ಲಿ ಅವಿಲೇಯ, ಜ್ವಲೀಯ, ನಿರ್ವರ್ಣ ದ್ರವ. ಕುಬಿಂ ೯೮0 ಸೆ ಸಾಸಾಂ ೦.೬೮. ದ್ರಬಿಂ -೯೦.೬0 ಸೆ ಪೆಟ್ರೋಲಿಯಮ್‌ನಲ್ಲಿ ಇರುವುದು. ಒಂಬತ್ತು ಸಮಾಂಗಿಗಳಿವೆ. ಸಹಜ ಹೆಪ್ಟೇನ್ ರಾಸಾಯನಿಕ ವರ್ತನೆಯಲ್ಲಿ ಹೆಕ್ಸೇನನ್ನು ಹೋಲುತ್ತದೆ

ಹೆಪ್ಯಾಟಿಸೀ

(ಸ) ಬ್ರಯೊಫೈಟ (ಶೈವಲ ಸಸ್ಯ) ವರ್ಗದ ಗಿಡಗಳು. ಇವುಗಳಲ್ಲಿ ಗೆಮೀಟೋಫೈಟ್‌ಗಳು (ಯುಗ್ಮಕ ಸಸ್ಯಗಳು) ಕಾಂಡ ಹಾಗೂ ಎಲೆಗಳಾಗಿ ಅಭಿವರ್ಧಿಸುವುದಿಲ್ಲ

ಹೆಬೆಫ್ರೇನಿಯ

(ವೈ) ಒಂದು ಮಾದರಿಯ ಷಿ(ಸ್ಕಿ)ಜೊಫ್ರೇನಿಯ (ಇಚ್ಚಿತ್ತ ವಿಕಲತೆ). ಪ್ರೌಢಾವಸ್ಥೆಗೆ ಬರುವಾಗ ಕೆಲವರಲ್ಲಿ ಕಾಣಬರುವ ಚಿತ್ತ ವೈಕಲ್ಯ. ಅಸಂಗತ ಚಿಂತನೆ, ವಿಚಿತ್ರವಾದ ಹಾಗೂ ಮಗುವಿನಂಥ ವರ್ತನೆ, ಅಸಂಬದ್ಧ ಭಾವಾಭಿವ್ಯಕ್ತಿ ಇತ್ಯಾದಿ ಇದರ ಲಕ್ಷಣ

ಹೆಬ್ಬಕ

(ಪ್ರಾ) ಕೊಕ್ಕರೆ ಜಾತಿಯ ಸ್ಥೂಲಕಾಯದ ಪಕ್ಷಿ; ಭಾರತವಾಸಿ. ನೋಡಿ : ಬಸ್ಟರ್ಡ್

ಹೆಬ್ಬಾತು

(ಪ್ರಾ) ಅನಾಟಿಡೀ ಕುಟುಂಬ, ಆನ್ಸರಿನೀ ಉಪಕುಟುಂಬಕ್ಕೆ ಸೇರಿದ ಹಿರಿ ಗಾತ್ರದ ಪಕ್ಷಿ. ಹಂಸಪಕ್ಷಿಗೆ ಹತ್ತಿರ ಸಂಬಂಧಿ. ಮೊಟ್ಟೆ, ಮಾಂಸ ಮತ್ತು ತುಪ್ಪುಳಕ್ಕಾಗಿ ಸಾಕುವುದುಂಟು

ಹೆಬ್ಬಾವು

(ಪ್ರಾ) ಪೈಥಾನಿನೀ ಉಪಕುಟುಂಬದ ಸರೀಸೃಪಗಳ ಸಾಮಾನ್ಯ ನಾಮ. ಕಾಡಿನಲ್ಲಿ ಗಿಡಮರಗಳ ಶಾಖೋಪಶಾಖೆಗಳ ಮೇಲೆ ವಾಸ. ದೊಡ್ಡ ಗಾತ್ರ. ಸುಮಾರು ೧೦ ಮೀಟರ್ ಉದ್ದ ಬೆಳೆಯಬಲ್ಲದು. ಮರ ಹತ್ತುತ್ತದೆ, ನೀರಿನಲ್ಲಿ ಈಜುತ್ತದೆ. ಬಹುತೇಕ ಅಂಡಜ. ದೇಹ ಶಕ್ತಿ ಅಪಾರ. ಮೊಲ ಜಿಂಕೆಗಳನ್ನು ಇಡೀಯಾಗಿ ನುಂಗಬಲ್ಲದು. ವಿಷ ಜಾತಿಯಲ್ಲ. ಆಡನ್ನೂ ನುಂಗುವುದರಿಂದ ಅಜಗರ ಎಂಬ ಹೆಸರು ಬಂದಿದೆ. ದಾಸರಹಾವು

Search Dictionaries

Loading Results

Follow Us :   
  Download Bharatavani App
  Bharatavani Windows App