भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೃದ್ಗತಿ ನಿಯಂತ್ರಕ

(ವೈ) ೧. ಹೃದಯದ ಸ್ನಾಯುವನ್ನು ಪ್ರಚೋದಿಸಿ, ಅದರ ಸಂಕೋಚನವನ್ನು ನಿಯಂತ್ರಿಸಿ ಹೃದಯದ ಮಿಡಿತವನ್ನು ಸುಸ್ಥಿತಿಯಲ್ಲಿಡುವ ಹೃದಯದ ಭಾಗ. ಇದು ಸ್ತನಿಗಳ ಹೃದಯದಲ್ಲಿ ಬಲ ಹೃತ್ಕರ್ಣದ ಭಿತ್ತಿಯಲ್ಲಿ ಮಹಾಸಿರೆಯ ತೆರಪಿನ ಬಳಿ ಕಂಡುಬರುವ ಪುಟ್ಟ ವಿಶೇಷ ರೀತಿಯ ಸ್ನಾಯುಕೋಶಗಳ ಸಮೂಹ. ಈ ಕೋಶಗಳು ಹೃದಯದ ಮಿಡಿತಕ್ಕೆ ಚಾಲನೆ ಕೊಟ್ಟು ಹಾಗೆಯೇ ಉಳಿಸಿಕೊಂಡು ಬರುತ್ತವೆ. ಇವು ತಮ್ಮ ಲಯಬದ್ಧ ಹಾಗೂ ಸ್ವಪ್ರೇರಿತ ಸಂಕೋಚನಗಳ ಮೂಲಕ ಹೃದಯದ ಉಳಿದ ಸ್ನಾಯುಗಳಲ್ಲೂ ಸಂಕೋಚನಗಳನ್ನು ಉದ್ದೀಪಿಸುತ್ತವೆ. ಈ ಕೋಶಗಳು ತಾವೇ ಹೃದಯದ ಮಿಡಿತದ ದರವನ್ನು ನಿರ್ಧರಿಸುವ ಸ್ವತಶ್ಚಲಿ ನರವ್ಯೂಹದಿಂದ ನಿಯಂತ್ರಿತವಾಗಿರುತ್ತವೆ. ಇಂತಹುವೇ ಹೃದ್ಗತಿ ನಿಯಂತ್ರಕಗಳು ಇತರ ಕಶೇರುಕಗಳ ಹೃದಯಗಳಲ್ಲೂ ಕಂಡುಬರುತ್ತವೆ. ೨. ಹೃದಯದ ಸಹಜ ಹೃದ್ಗತಿ ನಿಯಂತ್ರಕವು ರೋಗಗ್ರಸ್ತವಾದಾಗ ಅಥವಾ ಲೋಪಗೊಂಡಾಗ ಬಳಸುವ ಎಲೆಕ್ಟ್ರಾನಿಕ್ ಅಥವಾ ನ್ಯೂಕ್ಲಿಯರ್ ಬ್ಯಾಟರಿ ಆವಿಷ್ಟ ಉಪಕರಣ. ಇದನ್ನು ಶಸ್ತ್ರಕ್ರಿಯೆಯ ಮೂಲಕ ಎದೆಗೂಡಿನಲ್ಲಿ ಅಳವಡಿಸ ಬಹುದು. ಇದು ಹೃದಯದ ಮಿಡಿತವನ್ನು ಲಯಬದ್ಧವಾಗಿ ನಡೆಸಿಕೊಂಡು ಬರುತ್ತದೆ

ಹೃದ್ರೋಗಭೀತಿ

(ವೈ) ಹೃದಯಸ್ತಂಭನಗೊಂಡು ಪ್ರಾಣ ಹೋದೀತೆಂಬ ಭಯ

ಹೃನ್ನಾಳಸಂಬಂಧಿತ

(ವೈ) ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ್ದು

ಹೃಲ್ಲೇಖ

(ವೈ) ಹೃದಯ ಮಿಡಿತದ ವೇಳೆ ಉತ್ಪತ್ತಿ ಯಾಗುವ ವೋಲ್ಟೇಜ್ ತರಂಗ ರೂಪವನ್ನು ತೋರಿಸುವ ಆಲೇಖ. ಇದನ್ನು ದಾಖಲಿಸಲು ವಿದ್ಯುತ್ ಹೃಲ್ಲೇಖಿ (ಇಸಿಜಿ- ಎಲೆಕ್ಟ್ರೋ ಕಾರ್ಡಿಯೋಗ್ರಾಫ್) ಎಂಬ ಉಪಕರಣವನ್ನು ಬಳಸಲಾಗುತ್ತದೆ. ಎದೆಯ ಮೇಲೆ ಮತ್ತು ಎರಡು ತೋಳು ಹಾಗೂ ಒಂದು ಕಾಲಿನ ಮೇಲೆ ಲಗತ್ತಿಸಿದ ಎಲೆಕ್ಟ್ರೋಡ್‌ಗಳಿಂದ ಹೃದಯದ ವಿದ್ಯುತ್ ಚಟುವಟಿಕೆಯನ್ನು ದಾಖಲಿಸಲಾಗುತ್ತದೆ. ಆ ಲೇಖವು ಸಹಜ ನಮೂನೆಯಿಂದ ಭಿನ್ನವಾಗಿದ್ದಲ್ಲಿ ಅದು ಹೃದಯದ ಕ್ರಮರಹಿತ ಚಟುವಟಿಕೆಯ ಅಥವಾ ರೋಗದ ಲಕ್ಷಣ ಸೂಚಕವಾಗಿರುತ್ತದೆ

ಹೆಂಡ

(ರ) ೧. ಸಸ್ಯಜನ್ಯ (ಈಚಲು, ತೆಂಗು, ತಾಳೆ ಮೊದಲಾದವುಗಳ) ಮಾದಕ ಪೇಯ. ಆಲ್ಕಹಾಲ್ ಅಂಶ ಕಡಿಮೆ. ೨. ಸಕ್ಕರೆ, ಬಿಸಿನೀರು, ಸಂಬಾರ ಪದಾರ್ಥ ಸೇರಿಸಿ ಮಾಡಿದ ಮದ್ಯ ಪಾನೀಯ

ಹೆಕ್ಸ್

(ಸಾ) ಗ್ರೀಕ್ ಭಾಷೆಯಲ್ಲಿ ೬ ಎಂಬ ಸಂಖ್ಯೆ ಸೂಚಿಸುವ ಪೂರ್ವ ಪ್ರತ್ಯಯ. (ರ) ಅನಿಲ ವಿಸರಣೆಯ ಮೂಲಕ ಯುರೇನಿಯಮ್ ಸಮಸ್ಥಾನಿಗಳನ್ನು ಪ್ರತ್ಯೇಕಗೊಳಿಸಲು ಬಳಸುವ ಸಂಯುಕ್ತವಸ್ತು ಯುರೇನಿಯಮ್ (VI) ಫ್ಲೂರೈಡ್‌ನ ಬಳಕೆ ಮಾತು

ಹೆಕ್ಕಳಿಕೆ

(ವೈ) ಗಾಯದಲ್ಲಿ ಅಥವಾ ಸೋಂಕು ತಗುಲಿದ ಜಾಗದಲ್ಲಿ ಮೂಡುವ ಸತ್ತ ಮೃದು ಊತಕ

ಹೆಕ್ಟೇರ್

(ಸಾ) ಮೆಟ್ರಿಕ್ ವ್ಯವಸ್ಥೆಯಲ್ಲಿ ವಿಸ್ತೀರ್ಣವನ್ನು ಅಳೆಯುವ ಒಂದು ಶಿಷ್ಟಮಾನ. ೧ ಹೆಕ್ಟೇರ್ = ೧೦,೦೦೦ ಚ.ಮೀಟರ್ =೨.೪೭೧ ಎಕರೆಗಳು

ಹೆಕ್ಸೇನ್

(ರ) C6H14. ಆಲ್ಕೇನ್ ಶ್ರೇಣಿಯಲ್ಲಿ ಆರನೆಯದು. ಪೆಟ್ರೋಲಿಯಮ್‌ನಲ್ಲಿ ಲಭ್ಯ. ಐದು ಸಮಸ್ಥಾನಿ ಗಳಿವೆ. ನಿರ್ವರ್ಣ ದ್ರವ. ಕುಬಿಂ ೬೯ಂ ಸೆ. ಸಾಸಾಂ ೦.೬೬

ಹೆಗಲು

(ಜೀ) ಮನುಷ್ಯನ ಶರೀರದಲ್ಲಿ ಕೈಗಳ ಮೇಲ್ಭಾಗ ಹಾಗೂ ಮುಂಡ ಸೇರುವ ಸ್ಥಳ. ಭುಜ. ಸ್ಕಂಧ. ಪ್ರಾಣಿಯ ಮುಂಗಾಲು. ಹಕ್ಕಿಯ ರೆಕ್ಕೆ ಸೇರಿದ ಶರೀರ ಭಾಗ

ಹೆಗಲೆಲುಬು

(ಪ್ರಾ) ಮೇಲುಬೆನ್ನಿನ ದೊಡ್ಡ ಚಪ್ಪಟೆಯ ಮೂಳೆ. ಭುಜಾಸ್ಥಿ. ನೋಡಿ: ಸ್ಕಂಧಾಸ್ಥಿ

ಹೆಗ್ಗಣ

(ಪ್ರಾ) ರೋಡೆನ್ಷಿಯ (ದಂಶಕ) ಗಣದ ಹಲವು ಕುಟುಂಬಗಳಿಗೆ ಸೇರಿದ ೬೫೦ ಪ್ರಭೇದದ ಸ್ತನಿಗಳಿಗೆ ಕೊಟ್ಟಿರುವ ಹೆಸರು. ಇದು ಮೂಷಕ (ಇಲಿ)ಗಳಿಗಿಂತ ಭಿನ್ನ ಮತ್ತು ದೊಡ್ಡದು. ಜಗಿಯಲು ಗಟ್ಟಿ ಹಲ್ಲುಗಳಿರುತ್ತವೆ. ಹೆಗ್ಗಣದ ಉಗಮ ಮಧ್ಯ ಏಷ್ಯಾದಲ್ಲಾಗಿರಬಹುದು. ನೋಡಿ : ಇಲಿ

ಹೆಜ್ಜೆ

(ರ) ರಾಸಾಯನಿಕ ಕ್ರಿಯೆಯಲ್ಲಿಯ ಒಂದು ಹಂತ. ಉದಾ: ಹೈಡ್ರೊಜನ್ ಕ್ಲೋರೈಡನ್ನು ಎಥಿಲೀನ್‌ಗೆ ಸೇರಿಸಿ ಈಥೈಲ್ ಕ್ಲೋರೈಡ್ ಪಡೆಯುವುದು ಮೂರು ಹಂತ (ಹೆಜ್ಜೆ)ಗಳಲ್ಲಿ ಜರಗುವ ಕ್ರಿಯೆ:

ಹೆಜ್ಜೇನು

(ಪ್ರಾ) ಬೊಂಬಸ್ ಜಾತಿ ಹಾಗೂ ಎಪಿಡಿ ಕುಟುಂಬಕ್ಕೆ ಸೇರಿದ ಹಲವಾರು ದೊಡ್ಡ ಗಾತ್ರದ ರೋಮಕ ಸಂಘಜೀವಿ ಜೇನು ನೊಣಗಳ ಸಾಮಾನ್ಯ ನಾಮ. ಉಗ್ರ ಬಗೆಯದು. ಎತ್ತರದ ಮನೆ ಸೂರು, ಮರ ಮುಂತಾದೆಡೆಗಳಲ್ಲಿ ಗೂಡುಕಟ್ಟಿ ಬಾಳುತ್ತದೆ

ಹೆಟರಾಕ್ಸಿಯಲ್

(ಪ್ರಾ) ಪರಸ್ಪರ ಲಂಬಕೋನದಲ್ಲಿ ಸಂಧಿಸುವ ಮೂರು ಅಸಮ ಅಕ್ಷಗಳುಳ್ಳ (ಪ್ರಾಣಿ)

ಹೆಟೆರಡಾನ್ಟ್

(ಪ್ರಾ) ವಿಭಿನ್ನ ಕಾರ್ಯವೆಸಗುವಂಥ ವಿಭಿನ್ನ ಗಾತ್ರ ಆಕಾರಗಳ ಹಲ್ಲುಗಳುಳ್ಳ, ಉದಾ : ಕೋರೆಹಲ್ಲು, ದವಡೆಹಲ್ಲು ಇತ್ಯಾದಿ ಬೇರೆ ಬೇರೆ ತೆರನಾದ ಹಲ್ಲುಗಳುಳ್ಳ (ಪ್ರಾಣಿ). ಹೆಚ್ಚಿನ ಸ್ತನಿಗಳು ಭಿನ್ನದಂತಿಗಳು. ಹೋಲಿಸಿ: ಹೊಮೊಡಾನ್ಟ್

ಹೆಟೆರಾಂಡ್ರಸ್

(ಸ) ಉದ್ದದಲ್ಲೂ ರೂಪದಲ್ಲೂ ಪರಸ್ಪರ ಭಿನ್ನವಾದ ಕೇಸರಗಳುಳ್ಳ. ಭಿನ್ನಕೇಸರೀ

ಹೆಟೆರಾಕ್ಸೆಸಿಸ್

(ಸ) ವಿಷಮ ಬೆಳವಣಿಗೆ. ಗಿಡದ ಒಂದು ಭಾಗ ಮತ್ತೊಂದು ಭಾಗಕ್ಕಿಂತ ಹೆಚ್ಚು ಶೀಘ್ರವಾಗಿ ಬೆಳವಣಿಗೆಗೊಳ್ಳುವುದು. ಇದರಿಂದ ಗಿಡ ಬಾಗುವುದು ಇತ್ಯಾದಿ ಪರಿಣಾಮಗಳಿಗೆ ಒಳಗಾಗುತ್ತದೆ

ಹೆಟೆರೊಕಾರ್ಪಸ್

(ಸ) ಎರಡು ಭಿನ್ನ ರೀತಿಯ ಫಲಗಳನ್ನು ನೀಡುವ. ಭಿನ್ನಫಲೀ

ಹೆಟೆರೊಗಮಿ

(ಪ್ರಾ) ದೊಡ್ಡ ಗಾತ್ರದ ಅಂಡಾಣು ಹಾಗೂ ಚಿಕ್ಕ ಚಲ ರೇತ್ರಾಣುಗಳ ಒಂದುಗೂಡುವಿಕೆಯಿಂದ ಸಂತಾನಾಭಿವೃದ್ಧಿಯಾಗುವಿಕೆ. ಭಿನ್ನಯುಗ್ಮಕತೆ. (ಸ) ಒಂದೇ ಹೂ ಗೊಂಚಲಲ್ಲಿ ಪುಂ, ಸ್ತ್ರೀ, ಪುಂ-ಸ್ತ್ರೀ ಹಾಗೂ ಅಲೈಂಗಿಕ ಅಥವಾ ಇವುಗಳಲ್ಲಿ ಯಾವುದೇ ಎರಡು ರೀತಿಯ ಹೂಗಳಿರುವ ಸ್ಥಿತಿ. ಭಿನ್ನ ಪುಷ್ಪಿ. ಒಂದು ಸಂತತಿ ಲೈಂಗಿಕವಾಗಿ ಇನ್ನೊಂದು ಅಲೈಂಗಿಕವಾಗಿ ಆಗುವುದು. ಸಲಿಂಗ ನಿರ್ಲಿಂಗ ಉತ್ಪತ್ತಿಗಳು ಪರ್ಯಾಯವಾಗಿ ಸಂಭವಿಸುವುದು. ಭಿನ್ನಯುಗ್ಮಕತೆ

Search Dictionaries

Loading Results

Follow Us :   
  Download Bharatavani App
  Bharatavani Windows App