भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅಂತಃಸ್ಫೋಟ

(ರ) ರಾಸಾಯನಿಕ ಕ್ರಿಯೆಯ ಅಥವಾ ಸ್ಥಿತಿ ಪರಿವರ್ತನೆಯ ಪರಿಣಾಮವಾಗಿ ಒತ್ತಡ ಕಡಿಮೆಯಾಗಿ ಹಠಾತ್ತನೆ ಸಂಭವಿಸುವ ಹೊರ ಆವರಣದ ಒಳಕುಸಿತ (ನಿಪತನ)

ಅಂತರ

(ಗ) ದತ್ತವಾಗಿರುವ ಎರಡು ನೈಜ ಸಂಖ್ಯೆಗಳ ನಡುವಿನ ಸಮಸ್ತ ಸಂಖ್ಯೆಗಳ ಗಣ. ದತ್ತ ಸಂಖ್ಯೆಗಳಿಗೆ ಅಂತಿಮ ಬಿಂದುಗಳೆಂದು ಹೆಸರು. ಅವು a ಮತ್ತು b ಆಗಿದ್ದರೆ (a < b) ಅವೆರಡನ್ನೂ ಒಳಗೊಂಡಿರುವ ಅಂತರಕ್ಕೆ ಸಂವೃತಾಂತರವೆಂದೂ ಒಳಗೊಂಡಿರದ ಅಂತರಕ್ಕೆ ವಿವೃತಾಂತರವೆಂದೂ ಹೆಸರು. ಇವನ್ನು ಅನುಕ್ರಮವಾಗಿ [a, b]={x | a ≤ x ≤ b}, [a,b] ={x | a < x ≤ b}, ಎಡ ವಿವೃತವಾಗಿದ್ದರೆ [a, b]={x | a ≤ x < b}. ಬಲ ವಿವೃತವಾಗಿದ್ದರೆ [a, b] = {x | a ≤ x < b} ಎಂದು ಬರೆಯುತ್ತೇವೆ

ಅಂತರಕೀಲಕ

(ಕಂ) ಕಂಪ್ಯೂಟರ್‌ನ ಯಂತ್ರಾಂಶ (ಹಾರ್ಡ್‌ವೇರ್) ಹಾಗೂ ತಂತ್ರಾಂಶ (ಸಾಫ್ಟ್‌ವೇರ್)ಗಳಲ್ಲಿ ಎರಡು ಅಥವಾ ಹೆಚ್ಚು ಪ್ರಕ್ರಿಯೆಗಳನ್ನು ಅನ್ಯೋನ್ಯಗೊಳಿಸಲು ಮತ್ತು ಒಂದು ಪ್ರಕ್ರಿಯೆ ಯುಕ್ತ ಸ್ಥಿತಿ ತಲುಪಿದ ನಂತರ

ಅಂತರಕ್ರಿಯೆ

(ಭೌ) ೧. ಎರಡು ಕಣಗಳ ನಡುವೆ ಶಕ್ತಿ ವರ್ಗಾವಣೆ. ೨. ಕಣಗಳಿಗೂ ತರಂಗ ಚಲನೆಗೂ ನಡುವೆ ಶಕ್ತಿ ವಿನಿಮಯ. ೩. ಅಲೆಗಳ ನಡುವೆ ಶಕ್ತಿ ವರ್ಗಾವಣೆ. ೪. ಅನೇಕ ಕಣ, ಕಾಯ ಅಥವಾ ವ್ಯವಸ್ಥೆಗಳ ನಡುವೆ ಜರಗುವ ಕ್ರಿಯೆ. ಫಲವಾಗಿ ಅವುಗಳಲ್ಲೊಂದರಲ್ಲೋ ಹೆಚ್ಚಿನವಲ್ಲೋ ಕೆಲವು ಭೌತಿಕ ಅಥವಾ ರಾಸಾಯನಿಕ ವ್ಯತ್ಯಯಗಳು ಉಂಟಾಗುತ್ತವೆ. ಅಂತರ್ವರ್ತನ

ಅಂತರಗಂಗೆ

(ಸ) ಏರೇಸೀ ಕುಟುಂಬಕ್ಕೆ ಸೇರಿದ ಮತ್ತು ನೀರ ಮೇಲೆ ತೇಲುತ್ತ ಜೀವಿಸುವ ಜಲಸಸ್ಯ. ಉಷ್ಣವಲಯವಾಸಿ

ಅಂತರಗ್ನಿ ಶಿಲೆಗಳು

(ಭೂವಿ) ಭೂಮಿಯ ಅತ್ಯಂತ ಆಳದಲ್ಲಿ ಘನೀಭವಿಸಿದ ಅಗ್ನಿಶಿಲೆಗಳು. ಇವು ಅಂತಸ್ಸರಣಗಳಾಗಿ ಕಂಡುಬರುತ್ತವೆ. ಪ್ಲೂಟೋನಿಕ್ ಶಿಲೆಗಳು

ಅಂತರಗ್ರಹ ಯಾನ

(ಖ) ರಾಕೆಟ್, ಗಗನ ನೌಕೆ ಮತ್ತು ಉಪಗ್ರಹಗಳ ನೆರವಿನಿಂದ ಗ್ರಹದಿಂದ ಗ್ರಹಕ್ಕೆ ಮಾಡುವ ಪ್ರಯಾಣ

ಅಂತರಗ್ರೀವಾಸ್ಥಿ

(ಪ್ರಾ) ಕಶೇರುಕಗಳಲ್ಲಿ ಕೊರಳಿನ ಎಲುಬುಗಳ ಮಧ್ಯೆ ಇರುವ ಹಾಗೂ ಎದೆ ಅಸ್ಥಿಚಕ್ರ ರೂಪಿಸುವ ಒಂದು ಮೂಳೆ. ಅಂತರಜತ್ರು

ಅಂತರಪ್ರವರ್ಧ

(ಪ್ರಾ) ಸಂಧಿಪದಿಗಳಲ್ಲಿ ಹೊರ ಪೊರೆಯ ಒಳ ಬೆಳೆತ; ಇದು ರೂಪಿಸುವ ಆಂತರಿಕ ಅಸ್ಥಿಪಂಜರದ ಚೌಕಟ್ಟಿಗೆ ಸ್ನಾಯುಗಳು ಬಂಧಿತವಾಗಿರುವುವು

ಅಂತರಮುಖ

(ರ) ನೋಡಿ : ಇಂಟರ್‌ಫೇಸ್

ಅಂತರರಾಷ್ಟ್ರೀಯ ದಿನಾಂಕ ರೇಖೆ

(ಖ) ಉತ್ತರ ದಕ್ಷಿಣ ಧ್ರುವಗಳನ್ನು ಸಂಧಿಸುವಂತೆ ಗೋಳದ ಮೇಲ್ಮೈ ಮೇಲೆ ಎಳೆದ ಕಾಲ್ಪನಿಕ ರೇಖೆ. ೧೮೦0 ರೇಖಾಂಶ ವೃತ್ತ ಪೆಸಿಫಿಕ್ ಸಾಗರದ ನಿರ್ಜನ ಪ್ರದೇಶದ ಮೇಲೆ ಹಾದು ಹೋಗುತ್ತದೆ. ಹೀಗೆ ಸಾಗುವಾಗ ಒಂದೆರಡು ದ್ವೀಪಗಳನ್ನು ಬಳಸಿ ಹೋಗುವಂತೆ ಎಳೆದಿದೆ. ಈ ರೇಖೆಯಿಂದ ಜಪಾನ್ ಕಡೆಗೆ ಪೂರ್ವ, ಅಮೆರಿಕ ಕಡೆಗೆ ಪಶ್ಚಿಮ ಎಂದು ಅಂಗೀಕರಿಸಿದೆ. ಎಂದೇ ಪಶ್ಚಿಮದಿಂದ ಪೂರ್ವಕ್ಕೆ ಇದನ್ನು ದಾಟುವಾಗ ತಾರೀಖು ಪಟ್ಟಿಯಲ್ಲಿ ೧ ದಿವಸ ಹೆಚ್ಚು ಮಾಡಬೇಕು. ಪೂರ್ವದಿಂದ ಪಶ್ಚಿಮಕ್ಕೆ ದಾಟುವಾಗ ಕಡಿಮೆ ಮಾಡಬೇಕು. ನಾಗರಿಕ ಜೀವನದ ಸೌಲಭ್ಯಕ್ಕಾಗಿ ಈ ಏರ್ಪಾಡು. ‘ಅಂತರರಾಷ್ಟ್ರೀಯ ಮೆರಿಡಿಯನ್ ಸಮ್ಮೇಳನ’ ೧೮೮೪ರಲ್ಲಿ ಈ ೧೮೦0 ರೇಖಾಂಶ ವೃತ್ತವನ್ನು ದಿನಾಂಕ ರೇಖೆಯಾಗಿ ಆಯ್ಕೆ ಮಾಡಿತು

ಅಂತರರಾಷ್ಟ್ರೀಯ ವ್ಯಾವಹಾರಿಕ ಉಷ್ಣತಾ ಮಾನಕ

(ಭೌ) ಉಷ್ಣಗತೀಯ ಮಾನಕಕ್ಕೆ ಆದಷ್ಟೂ ಸಮೀಪವಿರುವಂತೆ ೧೯೬೮ರಲ್ಲಿ ನಿರೂಪಿಸಿದ ವ್ಯಾವಹಾರಿಕ ಉಷ್ಣತಾಮಾನಕ. ಆರಂಭದಲ್ಲಿ ಅನಿಲ ಉಷ್ಣತಾಮಾಪಕ ಬಳಸಿಕೊಂಡು ಹನ್ನೊಂದು ಸ್ಥಿರ ಬಿಂದುಗಳನ್ನು ನಿರೂಪಿಸಲಾಯಿತು. ಉಷ್ಣತಾ ವ್ಯಾಪ್ತಿಗನುಸಾರ ಗೊತ್ತಾದ ಉಷ್ಣತಾ ಮಾಪಕದಿಂದ ಮಧ್ಯಂತರ ಉಷ್ಣತೆಗಳನ್ನು ಅಳೆಯಲಾಗುತ್ತದೆ. ಈಗ ಈ ಮಾನಕದ ಬಲುಮಟ್ಟಿಗಿನ ಉಷ್ಣತೆಯ ಅಳತೆಗಳನ್ನು ಪ್ಲಾಟಿನಮ್ ರೋಧಕ ಉಷ್ಣತಾ ಮಾಪಕದಿಂದ ಮಾಡಲಾಗುತ್ತದೆ

ಅಂತರವಕಾಶ

(ಜೀ) ಕೆಲವು ಬಗೆಯ ಸಂಯೋಜಕ ಊತಕಗಳಲ್ಲಿ ಕೋಶಗಳ ಮತ್ತು ತಂತುಗಳ ನಡುವಿನ ತೆರಪುಗಳ ಪೈಕಿ ಒಂದು. ಎಲೆಯ ಸಿರೆಗಳ ನಡುವಣ ಅಥವಾ ಕೀಟದ ರೆಕ್ಕೆಯ ಮೇಲಿನ ನರಗಳ ನಡುವಣ, ಬಲು ಸಣ್ಣ ಪ್ರದೇಶ. ಕಿರುಸಂಧಿ. (ವೈ) ವರ್ಣವಲಯ, ದುಂಡಗಿರುವ ಬಣ್ಣದ ಭಾಗ. ಉದಾ: ಮೊಲೆ ತೊಟ್ಟಿನ ಅಥವಾ ಕಣ್ಣಿನ ಪಾಪೆಯ ಸುತ್ತಲಿನ ಭಾಗ

ಅಂತರವಾಹ

(ಭೌ) ವಿದ್ಯುನ್ಮಂಡಲದ ಯಾವುದೋ ಬಿಂದುವಿನಲ್ಲಿ ಹಾಕಿದ ವಿದ್ಯುತ್ ಪ್ರೇರಕಬಲದ ಪ್ರತಿಯೊಂದು ಏಕಮಾನ ಆಧಿಕ್ಯಕ್ಕೆ ಆ ಮಂಡಲದ ಇನ್ನೊಂದು ಭಾಗದಲ್ಲಿ ಕಂಡುಬರುವ ವಿದ್ಯುತ್ ಪ್ರವಾಹದ ಆಧಿಕ್ಯ. ಪರಸ್ಪರ ವಾಹ ಒಂದು ವಿಶಿಷ್ಟ ನಿದರ್ಶನ

ಅಂತರಸಂಸ್ತರಿತ

(ಭೂವಿ) ಎರಡು ಶಿಲಾ ಸ್ತರಗಳ ಮಧ್ಯೆ ಇರುವ; ಭಿನ್ನ ಸಾಮಗ್ರಿಯ ಇತರ ಸ್ತರಗಳಿಗೆ ಸಮಾಂತರವಾದ ಸ್ತರದಲ್ಲಿರುವ

ಅಂತರಹೃತ್‌ಸ್ತರ

(ಜೀ) ಕಶೇರುಕಗಳಲ್ಲಿ ಹೃದಯದ ಪೊಳ್ಳುಭಾಗವನ್ನು ಆವರಿಸಿರುವ ಒಳಪೊರೆ. ಹೃದಯದ ಒಳಪೊರೆ. ಹೃತ್ಪೊರೆ

ಅಂತರಾಂಗಗಳು

(ಪ್ರಾ) ಜೀವಿಯ ದೇಹ ಕುಹರಗಳೊಳಗಿನ ಅಂಗಗಳು. ಉದಾ: ಮಿದುಳು, ಶ್ವಾಸಕೋಶ, ಹೃದಯ, ಜಠರ

ಅಂತರಾಣವಿಕ ಬಲಗಳು

(ಭೌ) ಯಾವುದೇ ಸಂಯುಕ್ತದಲ್ಲಿ ಒಂದು ಅಣುವನ್ನು ಇನ್ನೊಂದ ರೊಂದಿಗೆ ಬಂಧಿಸುವ ಬಲಗಳು. ಇವು ಒಂದು ಅಣುವಿನಲ್ಲೇ ಪರಮಾಣುಗಳನ್ನು ಪರಸ್ಪರ ಬಂಧಿಸುವ ಬಲಗಳಿಗಿಂತ ತೀರ ದುರ್ಬಲವಾದವು

ಅಂತರಾಯಿಕ

(ಭೌ) ಬಿಟ್ಟು ಬಿಟ್ಟು ಪ್ರಾರಂಭ ವಾಗುವ. ಕ್ರಿಯೆಗಳ ನಡುವೆ ಕ್ರಮಬದ್ಧ ಅಥವಾ ಕ್ರಮರಹಿತ ಅಂತರಗಳಲ್ಲಿ ನಿಂತು ಮುಂದುವರಿಯುವ. ಸವಿರಾಮ.

ಅಂತರಾವಸ್ಥೆ

(ಪ್ರಾ) ಪ್ರಾಣಿಯ ಜೀವನದಲ್ಲಿ ಯಾವುದೇ ಸುಸ್ಪಷ್ಟ ಗಮನಾರ್ಹ ಘಟ್ಟ , ವಿಶೇಷವಾಗಿ ಎರಡು ಅನುಕ್ರಮ ಪೊರೆ ಬಿಡುವಿಕೆಗಳ (ಉರ್ಚು) ನಡುವಿನ ಅವಧಿ

Search Dictionaries

Loading Results

Follow Us :   
  Download Bharatavani App
  Bharatavani Windows App