भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567892021Next >

ಹಕ್ಕಳೆ

(ವೈ) ಗಾಯ ಮಾಯುವಲ್ಲಿ ಅದರ ಮೇಲೆ ಕಟ್ಟುವ ಒರಟು ಒಣಕಲು ಪದರ. ಹುರುಪು. ಕಿರಟು

ಹಕ್ಕಿಕಡಪಿನ ರೋಗ

(ವೈ) ಮಕ್ಕಳಲ್ಲಿ ಮೂಳೆ ವಕ್ರಗೊಂಡ ರೋಗ. ಕುಟಿಲವಾತ. ನೋಡಿ : ರಿಕೆಟ್ಸ್

ಹಗರು

(ವೈ) ಕೆಳಗಡೆ ಹೊಸ ಚರ್ಮ ಹುಟ್ಟಿದ ಹಾಗೆಲ್ಲ ಮೇಲುಗಡೆ ಉದುರುತ್ತ ಹೋಗುವ ಸತ್ತ ಚರ್ಮ. ಹುರುಪೆ. ಉದಾ : ತಲೆಹೊಟ್ಟು

ಹಗೇವು

(ತಂ) ಧಾನ್ಯಗಳು, ಹಸಿರು ಮೇವು ಮೊದಲಾದವನ್ನು ಶೇಖರಿಸಿಡಲು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ ನೆಲದಡಿಯ ರಚನೆ. ಕಣಜ

ಹಡಗು ಕಟ್ಟೆ

(ತಂ) ರೇವಿನಲ್ಲಿ ಹಡಗಿಗೆ ಸರಕು ತುಂಬಿಸಲು ಇಲ್ಲವೇ ಅದರಿಂದ ಸರಕನ್ನು ಇಳಿಸಲು ನಿಗದಿಯಾಗಿರುವ ಸ್ಥಳ

ಹಡಗು ಜಗಲಿ

(ತಂ) ಸಾಮಾನು ತುಂಬುವುದು, ಇಳಿಸುವುದು ಮೊದಲಾದವಕ್ಕಾಗಿ ಹಡಗನ್ನು ಪಕ್ಕದಲ್ಲಿ ನಿಲ್ಲಿಸಲು ಅನುಕೂಲಿಸುವಂತೆ ತೀರಕ್ಕೆ ಸಮಾಂತರವಾಗಿ ನಿರ್ಮಿಸಿದ ಮರದ ಆಥವಾ ಕಲ್ಲಿನ ಜಗಲಿ. ಸರಕು ಕಟ್ಟೆ. ಬಂದರು ಕಟ್ಟೆ

ಹಡಗುಕೊರಕ

(ಪ್ರಾ) ನೋಡಿ : ಟೆರೆಡೊ

ಹಂಡ್ರೆಡ್‌ವೇಟ್

(ಸಾ) ತೂಕದ ಏಕಮಾನ. ಪ್ರತೀಕ CWt. ಬ್ರಿಟನ್‌ನಲ್ಲಿ = ೧೧೨ ಪೌಂಡ್. ಮೆಟ್ರಿಕ್ ಮಾನದಲ್ಲಿ = ೫೦ ಕಿಗ್ರಾಮ್. ಅಮೆರಿಕದಲ್ಲಿ = ೧೦೦ ಪೌಂಡ್

ಹಣತೆ ಮಸಿ

(ರ) ೧. ದೀಪದ ಹೊಗೆ ಕಪ್ಪಿನಿಂದ ತಯಾರಿಸಿದ ವರ್ಣದ್ರವ್ಯ. ಕಾರ್ಬನ್‌ನ ಭಿನ್ನವರ್ತಕ ರೂಪ. ೨. ಅಧಿಕ ಪ್ರಮಾಣದಲ್ಲಿ ಕಾರ್ಬನ್ ಇರುವ ಖನಿಜಯುತ ತೈಲ, ಟರ್ಪೆಂಟೈನ್, ಡಾಮರು ಇತ್ಯಾದಿಗಳನ್ನು ಸೀಮಿತ ವಾಯು ಹರವಿನಲ್ಲಿ ಹೊಗೆ ಕಾರುವ ಜ್ವಾಲೆಯೊಂದಿಗೆ ಉರಿಯುವಂತೆ ಮಾಡಿದಾಗ ಲಭಿಸುವ ಮಸಿ. ಇದು ಕಪ್ಪಗಿದ್ದು ಇದರಲ್ಲಿ ಶೇ. ೮೦-೮೫ರಷ್ಟು ಕಾರ್ಬನ್ ಮತ್ತು ಅಲ್ಪ ಪ್ರಮಾಣದಲ್ಲಿ ತೈಲ ಸಾಮಗ್ರಿ ಇರುತ್ತವೆ. ನೋಡಿ : ಕಾರ್ಬನ್ ಬ್ಲ್ಯಾಕ್

ಹಣ್ಣು

(ಸ) ಬೀಜಗಳು ಪಕ್ವಗೊಂಡಂತೆ ಆವೃತಬೀಜೀಯ ಅಂಡಾಶಯದಿಂದ ವಿಕಸಿಸುವ ಸಸ್ಯಭಾಗ. ಮಿಥ್ಯಾ ಫಲ, ಸತ್ಯ ಫಲಗಳ ಜೊತೆರಚನೆಗಳಿರಬಹುದು, ಇಲ್ಲದಿರಬಹುದು. ಫಲ

ಹತ್ತಿ

(ಸ) ಮ್ಯಾಲ್ವೇಸೀ ಕುಟುಂಬಕ್ಕೆ ಸೇರಿದ, ವಾಣಿಜ್ಯ ಪ್ರಾಮುಖ್ಯ ಇರುವ ಗಿಡ. ಗಾಸಿಪಿಯಮ್ ಹೆರ್ಬೇಸಿಯಮ್ ವೈಜ್ಞಾನಿಕ ನಾಮ. ಕೂದಲಿನಂಥ ಬಿಳಿ/ಕಂದು ಬಣ್ಣದ ಎಳೆಗಳು ಈ ಗಿಡದ ಬೀಜಗಳನ್ನು ಸುತ್ತುವರಿದಿರುತ್ತವೆ. ಪ್ರಧಾನವಾಗಿ ಸೆಲ್ಯುಲೋಸ್‌ನಿಂದ ರಚಿತವಾದ ಇವುಗಳ ಉದ್ದ ವಿಭಿನ್ನ. ಸರಾಸರಿಯಲ್ಲಿ ೨-೩ ಸೆಂಮೀ ಎನ್ನಬಹುದು. ಈಜಿಪ್ಟ್ ಹತ್ತಿಯ ಎಳೆಗಳು ಹೆಚ್ಚು ಉದ್ದ. ಉನ್ನತದರ್ಜೆಯ ನವುರಾದ ವಸ್ತ್ರಗಳನ್ನೂ ಹೊಲಿಗೆ ದಾರಗಳನ್ನೂ ತಯಾರಿಸಲು ಬಳಕೆ. ಅರಳೆ

ಹತ್ಯಾರು

(ತಂ) ಮರ ಕೆಲಸ, ಲೋಹ ಕೆತ್ತನೆ, ಮಣ್ಣಿನ ಅಗೆತ ಮುಂತಾದ ಕಾರ್ಯಗಳಲ್ಲಿ ಬಳಸುವ ಸಲಕರಣೆ. ಉದಾ : ಬೈರಿಗೆ, ಹಾರೆ, ಗುದ್ದಲಿ, ಅರ, ಕತ್ತಿ, ಸುತ್ತಿಗೆ ಇತ್ಯಾದಿ

ಹದ

(ತಂ) ಉದ್ದೇಶಕ್ಕೆ ತಕ್ಕಂತೆ ವಸ್ತುವಿನ ಗುಣವನ್ನು ನಿರ್ಬಂಧಿಸುವುದು. ಉದಾ : ಉಕ್ಕನ್ನು ಹದಗೊಳಿಸುವುದು

ಹದಗೊಳಿಸುವಿಕೆ

(ತಂ) ಚೌಬೀನೆಯನ್ನು ನಿಯಂತ್ರಿತ ಸ್ಥಿತಿಯಲ್ಲಿ ಶುಷ್ಕವಾಗಿಸುವ ಪ್ರಕ್ರಿಯೆ. ಬಳಕೆಗೆ ಮುಂಚೆ ಹದಗೊಳಿಸುವುದರಿಂದ ಕುಗ್ಗುವರಿಯಿಂದಾಗುವ ವಿಕಾರಗಳನ್ನು ತಡೆಯಬಹುದು. ಚೆನ್ನಾಗಿ ಹದಗೊಳಿಸಿದ ಚೌಬೀನೆಯಲ್ಲಿ ತೇವಾಂಶವು ಶೇ. ೧೦ರಿಂದ ೧೨ ಇರುತ್ತದೆ

ಹದಗೊಳಿಸುವುದು

(ತಂ) ಉಕ್ಕಿನಂಥ ಮಿಶ್ರಲೋಹಕ್ಕೆ ಅಪೇಕ್ಷಿತ ಮಟ್ಟದ ದೃಢತೆಯನ್ನು ಒದಗಿಸುವ ಪ್ರಕ್ರಿಯೆ. ಮಿಶ್ರ ಲೋಹವನ್ನು ಪೂರ್ವ ನಿರ್ಧರಿತ ಉಷ್ಣತೆಗೆ ಕಾಸಿ, ಅದೇ ಉಷ್ಣತೆಯನ್ನು ಪೂರ್ವನಿರ್ಧರಿತ ಕಾಲ ಉಳಿಸಿಕೊಂಡಿದ್ದು ಅನಂತರ ಅದನ್ನು ಪೂರ್ವನಿರ್ಧರಿತ ದರದಲ್ಲಿ ಕೋಣೆಯ ಉಷ್ಣತೆಗೆ ತಂಪು ಮಾಡಲಾಗುತ್ತದೆ. ಉಕ್ಕಿನ ಪ್ರಸಂಗದಲ್ಲಿ ಅದರಲ್ಲಿರುವ ಹೆಚ್ಚಿನ ಕಾರ್ಬೈಡ್ ಅಂಶವು ಘನ ದ್ರಾವಣದ ಹೊರಗೆ ಅವಕ್ಷೇಪನಗೊಳ್ಳುವವರೆಗೂ ಕಾಸಿ, ಅನಂತರ ಉಕ್ಕನ್ನು ತಣ್ಣೀರಿನಲ್ಲಿ ಅದ್ದಿ ಶೀಘ್ರವಾಗಿ ತಂಪು ಮಾಡಲಾಗುತ್ತದೆ

ಹದಬೆರಕೆ

(ಸಾ) ವಿಭಿನ್ನ ಗುಣ, ಬಣ್ಣ, ಸಾಂದ್ರತೆ, ರುಚಿ, ಪರಿಮಳ ಮುಂತಾದವುಗಳಿರುವ ಪದಾರ್ಥಗಳನ್ನು ಹದವಾಗಿ ಬೆರೆಸಿ ಅವಶ್ಯಕ ಗುಣ ಇಲ್ಲವೇ ರುಚಿ ಸಾಧಿಸುವುದು. ಉದಾ : ಚಹಾಪುಡಿಗಳ ಯುಕ್ತ ಹದಬೆರಕೆ

ಹಂದಿ

(ಪ್ರಾ) ಆರ್ಟಿಯೋಡ್ಯಾಕ್ಟಿಲ ಗಣದ ಸುವಾಯ್ಡಿಯ

ಹಂದಿಕೊಬ್ಬು

(ಪ್ರಾ) ಅಡುಗೆಗೂ ಔಷಧಕ್ಕೂ ಉಪಯೋಗಿಸುವ, ಶುದ್ಧಿ ಮಾಡಿ ಕರಗಿಸಿರುವ ಹಂದಿಯ ಕಿಬ್ಬೊಟ್ಟೆ ಕೊಬ್ಬು. ಚರಬಿ. ನೆಣ. ತುಪ್ಪ

ಹಂದಿಗೂದಲು

(ಪ್ರಾ) ಕಾಡುಹಂದಿಯ ಮೈಮೇಲಿನ ಬಿರುಗೂದಲು. ಮುಳ್ಳುಕೂದಲು. ಕಂಟೆಕೇಶ. ವರಾಹಕೇಶ

ಹದಿಹರಯ

(ಮ) ವ್ಯಕ್ತಿಯ ಅಭಿವರ್ಧನೆಯಲ್ಲಿ ನಾಲ್ಕನೆಯ ಹಂತ. ಸುಮಾರು ೧೩-೧೯ ವರ್ಷ. ನೋಡಿ : ಹುಡುಗತನ/ಹುಡುಗಿತನ. ಪ್ರಬುದ್ಧತೆ
< previous1234567892021Next >

Search Dictionaries

Loading Results

Follow Us :   
  Download Bharatavani App
  Bharatavani Windows App