भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೀರಿಕೆ

(ರ) ನೋಡಿ : ಚೋಷಣ

ಹೀರುನಳಿಕೆ

(ಪ್ರಾ) ಕೆಲವು ಪ್ರಾಣಿಗಳಲ್ಲಿ ಅಂಗವಾಗಿ ಇರುವ, ಕೆಲವು ಯಂತ್ರೋಪಕರಣಗಳಲ್ಲಿ ರಬ್ಬರ್ ಮೊದಲಾದವುಗಳಿಂದ ಮಾಡಿ ಹೊಂದಿಸಿರುವ, ಇನ್ನೊಂದರ ಮೇಲೆ ಇಟ್ಟಾಗ ಹೀರಿಕೆ ಯಿಂದಲೂ ಗಾಳಿಯ ಒತ್ತಡದಿಂದಲೂ ಅದನ್ನು ಕಚ್ಚಿಕೊಳ್ಳುವ, ಚಪ್ಪಟೆಯಾದ ಅಥವಾ ಬಟ್ಟಲಿನ ಆಕಾರದ ಅಂಗ. (ಸ) ನೆಲದ ಒಳಗಿನ ಬುಡದಿಂದ ಅಥವಾ ಪ್ರಧಾನ ಕಾಂಡದಿಂದ ದೂರವಿರುವ ಬೇರಿನಿಂದ ಅಥವಾ ಪರ್ವಸ್ಥಾನದಿಂದ ಹೊರಟ ಅಥವಾ ಬುಡದಿಂದಾಗಲೀ ಕೊಂಬೆಯಿಂದಾಗಲೀ ಸಹಜ ರೀತಿಗೆ ವ್ಯತಿರಿಕ್ತವಾಗಿ ಹೊರಟ ಕುಡಿ. ಬೇರು ಸಸಿ. ಕಂದು

ಹೀಲಿಯಮ್

(ರ) ಆವರ್ತಕೋಷ್ಟಕದ ‘೦’ ಗುಂಪಿನ ಶ್ರೇಷ್ಠಾನಿಲ. He. ಬಣ್ಣ, ವಾಸನೆ ಇಲ್ಲದ ಅಲೋಹೀಯ ಜಡಾನಿಲ ದಾತು. ಪಸಂ. ೨, ಸಾಪರಾ ೪.೦೦೨೬, ದ್ರಬಿಂ-೨೭೨.೨0 ಸೆ. ಕುಬಿಂ-೨೬೮.೯೩0 ಸೆ. ವಸ್ತುಗಳಲ್ಲೆಲ್ಲ ಇದರದು ಅತ್ಯಂತ ನಿಮ್ನ ಕುಬಿಂ. ಒತ್ತಡದಡಿಯಷ್ಟೆ ಘನೀಕರಿಸಲು ಸಾಧ್ಯ. ಹೈಡ್ರೊಜನ್ ಬಿಟ್ಟರೆ ಇದೇ ಅತ್ಯಂತ ಹಗುರ. ಹಾಗಾಗಿ ಬಲೂನ್‌ಗಳಲ್ಲಿ ಬಳಕೆ. ೧೮೬೮ರಲ್ಲಿ ಲಾಕ್ಕೈರ್, ಸೌರರೋಹಿತದಲ್ಲಿ ಇದನ್ನು ಪತ್ತೆಹಚ್ಚಿದರು. ೧೮೯೫ರಲ್ಲಿ ರ‍್ಯಾಮ್‌ಸೆ ಇದನ್ನು ಕ್ಲೀವೈಟ್ ಖನಿಜದಿಂದ ಬೇರ್ಪಡಿಸಿದರು. ಆಲ್ಫ ಕಣವೇ ಹೀಲಿಯಮ್‌ನ ನ್ಯೂಕ್ಲಿಯಸ್. ಇದು ಅತ್ಯಂತ ಸ್ಥಿರ. ದ್ರವೇಂಧನದ ರಾಕೆಟ್‌ಗಳಲ್ಲೂ ವೈದ್ಯಕೀಯದಲ್ಲೂ ಬೈಜಿಕ ವಿದ್ಯುತ್ ಸ್ಥಾವರಗಳಲ್ಲೂ ಕ್ರಯೊಜನಿಕ್ ಎಂಜಿನ್‌ಗಳಲ್ಲೂ ಜಡ ಅನಿಲ ರಕ್ಷಣೆಯ ಬೆಸುಗೆಗಳಲ್ಲೂ ಬಳಕೆ

ಹೀಲಿಯಮ್ ನಕ್ಷತ್ರ

(ಖ) B ರೋಹಿತ ವರ್ಗದ ನಕ್ಷತ್ರ. ಕೆಂಪುಬಣ್ಣ. ಈ ನಕ್ಷತ್ರದ ಗರ್ಭದಲ್ಲಿ ಜರಗುವ ಬೈಜಿಕ ಪ್ರಕ್ರಿಯೆಗಳಿಗೆ ಇಂಧನ ಹೀಲಿಯಮ್. ಈ ನಕ್ಷತ್ರದ ರೋಹಿತದಲ್ಲಿ ಕಪ್ಪು ಗೆರೆಗಳಷ್ಟೆ ಕಾಣಬರುತ್ತವೆ. ಅವುಗಳಲ್ಲೂ ಹೀಲಿಯಮ್ ಧಾತುವಿನ ಗೆರೆಗಳೇ ಪ್ರಧಾನ. ಕೆಂಪುದೈತ್ಯ. ಉದಾ : ರೋಹಿಣಿ, ಆರ್ದ್ರಾ, ಜ್ಯೇಷ್ಠಾ

ಹೀವ್

(ಭೂವಿ) ಒಂದು ಖನಿಜನಾಳ ಅಥವಾ ಸ್ತರ ಇನ್ನೊಂದು ಖನಿಜನಾಳ ಅಥವಾ ಸ್ತರವನ್ನು ಸಮಾಂತರವಾಗಿ (ಅಂದರೆ ಸ್ತರಭಂಗದ ಸಮತಲಕ್ಕೆ ಲಂಬವಾಗಿರುವಂತೆ) ಸ್ಥಳಾಂತರಿಸುವುದು. ವಿಸ್ತರಣೆ ಅಥವಾ ಸ್ಥಳಾಂತರದಿಂದಾಗಿ ಮೇಲ್ಮೈಯ ಊರ್ಧ್ವಚಲನೆ

ಹುಚ್ಚು

(ವೈ) ಬುದ್ಧಿ ಸ್ಥಿಮಿತವಿಲ್ಲದಿರುವುದು. ಉನ್ಮಾದ. ಮತಿಭ್ರಮಣೆ

ಹುಚ್ಚುಹಸು ರೋಗ

(ಪ್ರಾ) ಸತ್ತ ಸಾಕು ಪ್ರಾಣಿಗಳ ಉಳಿದ ಭಾಗಗಳನ್ನು ದನಗಳಿಗೆ ಮೇವಾಗಿ ತಿನ್ನಿಸುವುದರಿಂದ ಬರುವ ಸೋಂಕು ರೋಗ. ಇದಕ್ಕೆ bovine spongiform encepholopathy (ದನದ ಮಿದುಳುರಿತ BSE) ಎನ್ನುತ್ತಾರೆ. ೧೯೮೬ರಲ್ಲಿ ಬ್ರಿಟನ್ನಿನಲ್ಲಿ ಈ ರೋಗ ಮೊದಲು ಪತ್ತೆಯಾಯಿತು. ಈ ಸೋಂಕು ತಗುಲಿದಾಗ ಹಸು ತುಂಬ ದುರ್ಬಲವಾಗಿ ನಿಲ್ಲಲೂ ಆಗದೆ ನಡುಗ ತೊಡಗುತ್ತದೆ. ಅದಕ್ಕೇ ಈ ರೋಗಕ್ಕೆ ‘ಉನ್ಮತ್ತ ಗೋ ರೋಗ’ ಅಥವಾ ‘ಹುಚ್ಚುಹಸು ರೋಗ’ ಅನ್ನುವುದು. ಇಂಥ ಹಸುವಿನ ಮಿದುಳಿನಲ್ಲಿ ಅಪಸಾಮಾನ್ಯ ಪ್ರಮಾಣದಲ್ಲಿ ಪ್ರಿಯಾನ್ ಎಂಬ ಪ್ರೋಟೀನ್ ಸಂಚಯವಾಗಿರುತ್ತದೆ

ಹುಚ್ಚೆಳ್ಳು

(ಸ) ನೋಡಿ: ಗುರೆಳ್ಳು

ಹುಂಜ

(ಪ್ರಾ) ಮನೆಯಲ್ಲಿ ಸಾಕುವ ಹಾಗೂ ಕುಕ್ಕುಟ ಜಾತಿಯ ಹಕ್ಕಿಗಳ ವಯಸ್ಕ ಗಂಡುಪ್ರಾಣಿ. ಗಂಡು ಹಕ್ಕಿ

ಹುಟ್ಟಿಸು

(ಪ್ರಾ) ಜನ್ಮ ಕೊಡು. ಪ್ರಜನನಿಸು

ಹುಟ್ಟು

(ತಂ) ದೋಣಿ ನಡೆಸುವುದಕ್ಕೆ ಉಪಯೋಗಿಸುವ ದೊಡ್ಡ ಕೋಲು

ಹುಟ್ಟು ಗಾಲಿ

(ತಂ) ನೀರನ್ನು ಹಿಂದಕ್ಕೆ ಒತ್ತುವಂತೆ ಪರಿಧಿಯ ಸುತ್ತಲೂ ಹಲಗೆಗಳನ್ನು ಅಳವಡಿಸಿರುವ ದೋಣಿ/ ಹಡಗು ನಡೆಸುವ ಗಾಲಿ

ಹುಡ್

(ತಂ) ಹೊಗೆ ಕೊಳವಿಯಂಥ ಯಾವುದೇ ವಸ್ತುವಿನ ಮೇಲೆ ಮಳೆ ನೀರು ಒಳಹೋಗದಂತೆ ತಡೆಯಲು ಅಥವಾ ಗಾಳಿ ಇತ್ಯಾದಿಗಳ ಪ್ರವಾಹ ಅಪೇಕ್ಷಿತ ದಿಶೆಯಲ್ಲೇ ಹೋಗುವಂತೆ ಮಾಡಲು ಸ್ವಲ್ಪ ಎತ್ತರದಲ್ಲಿ ಅಳವಡಿಸಿದ ಛತ್ರಿ ಅಥವಾ ಚಾವಣಿ ಆಕೃತಿಯ ಕಟ್ಟಣೆ

ಹುಣಿಸೆ

(ಸ) ಫ್ಯಾಬೇಸೀ ಕುಟುಂಬದ ಸೀಸಾಲ್ ಪಿನಾಯ್ಡೀ ಉಪಕುಟುಂಬಕ್ಕೆ ಸೇರಿದ ಮರ. ಟ್ಯಾಮರಿಂಡಸ್ ಇಂಡಿಕ ವೈಜ್ಞಾನಿಕ ನಾಮ. ಅಡುಗೆಗೆ ಬಳಸುವ ಹುಳಿ ಹಣ್ಣು

ಹುಣ್ಣಿಮೆ

(ಖ) ಸೂರ್ಯ ಚಂದ್ರರ ಭೂಕೇಂದ್ರೀಯ ರೇಖಾಂಶ ವ್ಯತ್ಯಾಸ ೧೮೦ಂ ಆಗಿರುವಾಗ ಭೂಮಿಯಿಂದ ಕಾಣುವಂತೆ ಪೂರ್ಣ ಚಂದ್ರ ಬಿಂಬ, ಅದು ಕಾಣುವ ದಿನ ಯಾ ಕಾಲ. ನೋಡಿ : ಅಮಾವಾಸ್ಯೆ

ಹುರಿಯುವಿಕೆ

(ರ) ಸಲ್ಫೈಡ್ ಅದಿರುಗಳನ್ನು ಕಾಸಿ ಆಕ್ಸೈಡ್ ಆಗಿ ಪರಿವರ್ತಿಸುವ ಕ್ರಿಯೆ. ಉತ್ಪಾದನೆಯಾಗುವ ಗಂಧಕದಿಂದ ಕೂಡಿದ ಅನಿಲಗಳನ್ನು ಸಲ್ಫ್ಯೂರಿಕ್ ಆಮ್ಲ ತಯಾರಿಸಲು ಕೆಲವೊಮ್ಮೆ ಬಳಸಲಾಗುತ್ತದೆ

ಹುಲಿ

(ಪ್ರಾ) ಫೀಲಿಡೀ ಕುಟುಂಬಕ್ಕೆ ಸೇರಿದ ಮತ್ತು ಏಷ್ಯ ನಿವಾಸಿ ಮಾಂಸಾಹಾರಿ ಸ್ತನಿ. ಫಿಲಿಸ್ ಟೈಗ್ರಿಸ್ (ಪ್ಯಾಂತರ ಟೈಗ್ರಿಸ್) ವೈಜ್ಞಾನಿಕ ನಾಮ. ಮೈಮೇಲೆ ಕಪ್ಪು ಅಡ್ಡ ಪಟ್ಟಿಗಳು, ಹಳದಿ ಕಂದು ಬಣ್ಣದ ಚರ್ಮ ಹಾಗೂ ಬಿಳಿ ಉದರ ಭಾಗ ಇದರ ಲಕ್ಷಣ. ಉದ್ದ ೩ಮೀ. ತೂಕ ಸುಮಾರು ೨೦೦ ಕಿ.ಗ್ರಾಂ

ಹುಲಿಪಟ್ಟೆ ಚಿಟ್ಟೆ

(ಪ್ರಾ) ಸಿಸಿಂಡೆಲಿಡೀ ಕುಟುಂಬಕ್ಕೆ ಸೇರಿದ ಉಜ್ಜ್ವಲ ವರ್ಣದ ರೆಕ್ಕೆಗಳಿರುವ ಜೀರುಂಡೆ

ಹುಲ್ಲು

(ಸ) ಪೋಯೀಸೀ ಕುಟುಂಬಕ್ಕೆ ಸೇರಿದ ಏಕದಳೀಯ ಸಸ್ಯ. ಜೊಂಡು ಮತ್ತು ಬಿದಿರಿನ ಹತ್ತಿರ ಸಂಬಂಧಿ. ೯೦೦೦ ಪ್ರಭೇದಗಳಿವೆ. ಎಲೆಗಳು ಉದ್ದ. ಕಿರಿದಗಲ. ಆಹಾರವಾಗಿ (ಅಕ್ಕಿ, ಗೋದಿ, ಓಟ್ಸ್, ಜೋಳ, ಕಬ್ಬು ಇತ್ಯಾದಿ) ಮೇವಾಗಿ, ಪೀಠೋಪಕರಣ ನಿರ್ಮಾಣ ಸಾಮಗ್ರಿಯಾಗಿ, ಉಪಯೋಗ

ಹುಲ್ಲು ನೆಲ

(ಸ) ಹುಲ್ಲು ಮೊದಲಾದವು ಬೆಳೆದಿರುವ ನೆಲದ ಮೇಲುವರಿಸೆಯ ಮಣ್ಣು. ಹಸಿರು ಹಾಸು

Search Dictionaries

Loading Results

Follow Us :   
  Download Bharatavani App
  Bharatavani Windows App