भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹಾಸಿಗೆಬೋಗುಣಿ

(ವೈ) ರೋಗಿ ಮಲಗಿದ್ದಲ್ಲೇ ಮಲ ಮೂತ್ರ ವಿಸರ್ಜಿಸಲು ಅನುಕೂಲವಾಗುವ ಪಾತ್ರೆ. ಶೌಚಪಾತ್ರೆ

ಹಾಸು ಹೊಕ್ಕು

(weft) (ತಂ) ವಸ್ತ್ರದ ನೇಯ್ಗೆಯಲ್ಲಿ ನೀಳ (ಉದ್ದ) ಹಾಗೂ ಅಡ್ಡ ಎಳೆಗಳು

ಹಿಗ್ಗಿಕೆ

(ರ) ಒತ್ತಡಕ್ಕೀಡಾದಾಗ ಕೆಲವು ಕಲಿಲಗಳು ಘನೀಕರಿಸಿ ಗಾತ್ರದಲ್ಲಿ ಹಿಗ್ಗುವ ಪ್ರವೃತ್ತಿ

ಹಿಂಚದರಿಕೆ

(ಭೌ) ವಿಕಿರಣದ ಇಲ್ಲವೇ ಕಣಗಳ ಮೂಲ ಚಲನದಿಶೆ ಕುರಿತಂತೆ ಅವುಗಳ ಪಥಚ್ಯುತಿ ೯೦0 ಮೀರಿರುವುದು

ಹಿಂಜರಿಕೆ

(ವೈ) ಸಂಧಿವಾತ ರೋಗದ ವಿಷಯದಲ್ಲಿ ಒಳಕ್ಕೆ ವ್ಯಾಪಿಸುವುದು

ಹಿಂಜುಯಂತ್ರ

(ತಂ) ಹತ್ತಿ ನಾರನ್ನು ಬೀಜ ಗಳಿಂದ ಬಿಡಿಸುವ ಯಂತ್ರ

ಹಿಂಜೋಲು

(ಖ) ಉಲ್ಕಾಪಾತದ ವೇಳೆ ಉಲ್ಕೆಯ ಜಾಡಿನಲ್ಲಿ ಕಂಡುಬರುವ ಬೆಳಕಿನ ರೇಖೆ. ಅನುಬಂಧ. ಬಾಲ. ತೋಕೆ

ಹಿಂಡಿ

(ರ) ಎಣ್ಣೆ ತೆಗೆದ ಮೇಲೆ ಗಾಣದಲ್ಲಿ ಅಥವಾ ಒತ್ತು ಯಂತ್ರದಲ್ಲಿ ಉಳಿಯುವ ಎಣ್ಣೆ ಬೀಜಗಳ (ನಾರಗಸೆ, ಹತ್ತಿಬೀಜ, ಸೋಯಾಬೀನ್ಸ್ ಇತ್ಯಾದಿಗಳ) ಘನಪದಾರ್ಥ. ದನಗಳ ಮೇವಿಗೂ ಗೊಬ್ಬರಕ್ಕೂ ಉಪಯೋಗ

ಹಿಡಿಕೆ

(ತಂ) ಕಡೆತ / ಚರಕಿ ಯಂತ್ರದಲ್ಲಿ ವಸ್ತುವನ್ನು ಭದ್ರವಾಗಿ ಹಿಡಿದಿರುವ ಸಲಕರಣೆ. ಹಿಡಿಬಿಲ್ಲೆ

ಹಿತ್ತಾಳೆ

(ರ) ಮುಖ್ಯವಾಗಿ ತಾಮ್ರ ಮತ್ತು ಸತುವು ಸೇರಿ ಆದ ಮಿಶ್ರಲೋಹ. ಹಳದಿ ಬಣ್ಣದ ಹಿತ್ತಾಳೆಯಲ್ಲಿ ಶೇ. ೬೭ ತಾಮ್ರ, ಶೇ. ೩೩ ಸತುವು ಇರಬಹುದು. ಅಲ್ಯೂಮಿನಿಯಮ್ ಮ್ಯಾಂಗನೀಸ್ ಮುಂತಾದ ಇತರ ಪದಾರ್ಥಗಳನ್ನೂ ಬೆರೆಸುವುದುಂಟು

ಹಿತ್ತಾಳೆ ಬೆಸೆತ

(ತಂ) ಹಿತ್ತಾಳೆಯಂಥ ಕಬ್ಬಿಣೇತರ ಲೋಹವನ್ನು ಕರಗಿಸುವ ಮೂಲಕ ಲೋಹಗಳಿಗೆ ಬೆಸುಗೆ ಹಾಕುವುದು. ಸಂಪರ್ಕ ಬಿಂದುವಿನಲ್ಲಿ ಈ ಲೋಹದ ದ್ರವಣ ಬಿಂದು ಮೂಲ ಲೋಹಗಳ ದ್ರವಣ ಬಿಂದುಗಳಿಗಿಂತ ಕಡಿಮೆ

ಹಿಂದೆರೆ

(ಭೂವಿ) ಹಿಂದಕ್ಕೆ ತೆರಳುವ ಅಲೆ

ಹಿನ್ನಾಡು

(ಭೂವಿ) ಸಮುದ್ರ ತೀರಕ್ಕೆ ಅಥವಾ ನದಿಯ ದಡಕ್ಕೆ ಹಿಂಭಾಗದಲ್ಲಿರುವ ಪ್ರದೇಶ. ರೇವಿಗೆ ವ್ಯಾಪಾರದ ಸರಕುಗಳನ್ನು ಒದಗಿಸುವ ಒಳನಾಡು ಪ್ರದೇಶ

ಹಿನ್ನಿ

(ಪ್ರಾ) ಹೆಣ್ಣು ಕತ್ತೆಗೆ ಗಂಡು ಕುದುರೆಯಿಂದ ಹುಟ್ಟಿದ ಸಂಕರ ಪ್ರಾಣಿ. ಭಾರ ಎಳೆಯಲು ಖ್ಯಾತಿ. ನೋಡಿ: ಹೇಸರಗತ್ತೆ

ಹಿನ್ನೀರು

(ಭೂ) ಕಟ್ಟೆ ಕಟ್ಟಿ ನಿಲ್ಲಿಸಿದ ಹೊಳೆ ನೀರು ಅಥವಾ ಜಲಾಶಯ. ಕಡಲಿನಿಂದ ಬೇರ್ಪಟ್ಟಿದ್ದರೂ ಇಕ್ಕಟ್ಟು ಭೂಸಂಧಿ ಮೂಲಕ ಅದರ ಜೊತೆ ಸಂಪರ್ಕವಿರುವ ನೀರಿನ ರಾಶಿ. ಒತ್ತು ನೀರು

ಹಿನ್ನೆಲೆ ಗದ್ದಲ

(ಭೌ) ವಿವಿಧ ಸಂಜ್ಞೆಗಳನ್ನು (ಉದಾ: ರೇಡಿಯೊ ಸಂಜ್ಞೆಗಳನ್ನು) ಉತ್ಪಾದಿಸಲು/ಪತ್ತೆ ಹಚ್ಚಲು, ಅಳೆಯಲು/ದಾಖಲಿಸಲು ಬಳಸುವ ವ್ಯವಸ್ಥೆಯಲ್ಲಿ ಯಾವುದೇ ಕಾರಣದಿಂದ ಹಣುಕುವ ಮತ್ತು ಅಪೇಕ್ಷಿತ ಸಂಜ್ಞೆಗಳೊಂದಿಗೆ ಪ್ರತ್ಯೇಕಿಸಲಾಗದಂತೆ ಮಿಳನಗೊಂಡಿರುವ, ಎಲ್ಲ ಬಗೆಯ ಅಡ್ಡಿ ಅಡಚಣೆಗಳ ಸಮಗ್ರ ಪರಿಣಾಮ

ಹಿನ್ನೆಲೆ ವಿಕಿರಣ

(ಖ) ಸುಮಾರು ೧೫,೦೦೦,೦೦೦,೦೦೦ ವರ್ಷಗಳ ಹಿಂದೆ ವಿಶ್ವದ ಆದಿಯನ್ನು ಸಾರಿದ ಮಹಾಬಾಜಣೆ ಆಸ್ಫೋಟನೆಯ ಶೇಷ ವಿದ್ಯುತ್ಕಾಂತ ವಿಕಿರಣ. ಇದಕ್ಕೆ 3K ಹಿನ್ನೆಲೆ ಅಥವಾ ವಿಶ್ವದ ಹಿನ್ನೆಲೆ ಕ್ಷೋಭೆ ಎಂಬ ಹೆಸರುಗಳೂ ಉಂಟು. ಅತಿ ದುರ್ಬಲ, ಆದರೆ ಅತಿ ಖಚಿತ ವಿಕಿರಣ. ೧೯೬೪ರಲ್ಲಿ ಮೊತ್ತಮೊದಲು ಆವಿಷ್ಕೃತವಾದಾಗ ಆ ತನಕ ಕೇವಲ ಊಹೆಯಾಗಿದ್ದ ಮಹಾಬಾಜಣೆ ವಾದಕ್ಕೆ ಖಚಿತ ಪುರಾವೆ ದೊರೆತಂತಾಯಿತು. ಸೂಕ್ಷ್ಮ ತರಂಗ ಹಿನ್ನೆಲೆ (ಪವಿ) ಭೂ ಮೇಲ್ಮೈಯಲ್ಲಿ ಮತ್ತು ವಾತಾವರಣದಲ್ಲಿರುವ ಕಡಿಮೆ ತೀವ್ರತೆಯ ಆಯಾನೀಕೃತ ವಿಕಿರಣ. ಭೂಮಿಯ ಶಿಲೆ, ಮಣ್ಣು ಮತ್ತು ವಾತಾವರಣದಲ್ಲಿರುವ ರೇಡಿಯೋ ಸಮಸ್ಥಾನಿಗಳಿಂದ ಮತ್ತು ವಿಶ್ವವಿಕಿರಣದಿಂದ ಇದು ಉಂಟಾಗುತ್ತದೆ. ಈ ರೇಡಿಯೋ ಸಮಸ್ಥಾನಿಗಳು ಸಹಜವಾಗಿ ಆದವುಗಳಾಗಿರಬಹುದು. ಇಲ್ಲವೇ ಬೈಜಿಕ ವಿಕಿರಣ ದೂಳಿನಿಂದ ಅಥವಾ ವಿದ್ಯುದುತ್ಪಾದನಾ ಕೇಂದ್ರ ಗಳಿಂದ ಹೊರಬರುವ ತ್ಯಾಜ್ಯ ಅನಿಲಗಳಿಂದಲೂ ಉಂಟಾಗಿರ ಬಹುದು. ನಿರ್ದಿಷ್ಟ ಆಕರದಿಂದ ಉತ್ಪನ್ನವಾಗುವ ವಿಕಿರಣವನ್ನು ಅಳೆಯಬೇಕಾದಾಗ ಈ ಹಿನ್ನೆಲೆ ವಿಕಿರಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕು

ಹಿನ್ಸರಿತ

(ತಂ) ಯಂತ್ರದ ಎರಡು ಚಲನಶೀಲ ಭಾಗಗಳ ನಡುವಿನ ಸಂಯೋಜಕದ ರಚನೆಯಲ್ಲಿ ಇಲ್ಲವೇ ಹೊಂದಾಣಿಕೆಯಲ್ಲಿ ಊನ ತಲೆದೋರಿದಾಗ ಮೊದಲ ಭಾಗವು ಎರಡನೆಯದಕ್ಕೆ ಚಲನೆಯನ್ನು ಸಂವಹಿಸುವ ಮುನ್ನ ನಡೆಸಬೇಕಾಗಿ ಬರುವ ಅತ್ಯಲ್ಪ ಮುಕ್ತಚಲನೆ. ಈ ಚಲನೆ ಆಗುವ ವೇಳೆ ಚಲನಶೀಲ ಭಾಗಗಳು ಬಾಧಿತವಾಗವು

ಹಿಪ್ನಾಲಜಿ

(ವೈ) ನಿದ್ರಾವಸ್ಥೆಯನ್ನು ಕುರಿತ ವಿಜ್ಞಾನ. ಸುಪ್ತಿವಿಜ್ಞಾನ

ಹಿಪ್ನೋಸಿಸ್

(ವೈ) ಶಾಬ್ದಿಕ (ಮಾತು) ಅಥವಾ ಅಶಾಬ್ದಿಕ (ಮಾತಿಲ್ಲದ) ವಿಧಾನಗಳಿಂದ ತಾತ್ಕಾಲಿಕ ಸುಪ್ತಸ್ಥಿತಿಯನ್ನು ಉಂಟುಮಾಡುವುದು. ಈ ಸ್ಥಿತಿಯಲ್ಲಿ ವ್ಯಕ್ತಿ ಬಾಹ್ಯ ಭಾವ ಪ್ರೇರಣೆಗಳಿಗೆ ಹೆಚ್ಚು ಸುಲಭವಾಗಿ ಓಗೊಡುತ್ತಾನೆ

Search Dictionaries

Loading Results

Follow Us :   
  Download Bharatavani App
  Bharatavani Windows App