भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹಂಸ

(ಪ್ರಾ) ದೊಡ್ಡ ಗಾತ್ರದ ನೀರುಕೋಳಿ/ಹಕ್ಕಿಗಳ ಹಲವು ಪ್ರಭೇದಗಳಲ್ಲೊಂದು. ಅನಾಟಿನೇ ಉಪಕುಟುಂಬಕ್ಕೆ ಸೇರಿದುದು. ಸಸ್ಯಾಹಾರಿ. ಶುದ್ಧ ಬಿಳಿ ಬಣ್ಣ. ಉದ್ದವಾದ ಕತ್ತು ಮತ್ತು ಚಮಚ ಆಕಾರದ ಕೊಕ್ಕು ಉಳ್ಳದ್ದು

ಹಸಿಕಡ್ಡಿ ಮೂಳೆಮುರಿತ

(ವೈ) ಮೂಳೆ ಮುರಿತದ ಒಂದು ಬಗೆ. ಮಕ್ಕಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಅವರಲ್ಲಿ ಮೂಳೆ ಪೂರ್ಣವಾಗಿ ಬೆಳೆದಿರುವುದಿಲ್ಲ. ನಮ್ಯವಾಗಿ ಇರುತ್ತದೆ. ಹಾಗಾಗಿ ಪೆಟ್ಟು ಬಿದ್ದಾಗ ಮೂಳೆ ಪೂರ್ತಿ ಮುರಿದು ಎರಡು ತುಂಡಾಗದೆ ಒಂದು ಕಡೆ ಚಿಪ್ಪೆದ್ದು ಇನ್ನೊಂದು ಕಡೆ ಬಾಗಿ ಎರಡು ತುಂಡುಗಳೂ, ಹಸಿಕಡ್ಡಿಯಲ್ಲಿ ಆಗುವಂತೆ, ಅಂಟಿಕೊಂಡೇ ಇರುತ್ತವೆ

ಹಸಿರು ಪೈರು

(ಸ) ಪಯಿರು, ಪಚ್ಚೆ. ಸಸ್ಯ ವರ್ಗದ ಹರಿದ್ವರ್ಣತೆ

ಹಸಿರು ಕ್ರಾಂತಿ

(ಸ) ಅಭಿವೃದ್ಧಿಶೀಲ ದೇಶಗಳಲ್ಲಿ ವ್ಯವಸಾಯದಲ್ಲಾಗಿರುವ ಪ್ರಗತಿ

ಹಸಿರು ಪಟ್ಟಿ

(ಪವಿ) ಬೆಳೆಯುತ್ತಿರುವ ನಗರಗಳಲ್ಲಿ ಪರಿಸರ ಸಂರಕ್ಷಣೆಯ ಸಲುವಾಗಿ ನಗರದ ಸುತ್ತ ಗಿಡಮರಗಳನ್ನೂ ಉದ್ಯಾನಗಳನ್ನೂ ಬೆಳೆಸಲು ಯೋಜಿಸಿದ ಪಟ್ಟಿ

ಹಸಿರು ವಿಟ್ರಿಯಲ್

(ತಂ) FeSO4. 7H2O ಈ ನೈಸರ್ಗಿಕ ಪದಾರ್ಥಕ್ಕೆ ಕಾಪರಾಸ್ ಎಂದು ಹೆಸರು. ಹಸಿರು ಬಣ್ಣ. ಹರಳುರೂಪ. ಜಲವಿಮೋಚಕ. ನೀಲಿ-ಕಪ್ಪು ಶಾಯಿಯ ತಯಾರಿಕೆಯಲ್ಲಿ ಇದರ ಮುಖ್ಯ ಉಪಯೋಗ. ವರ್ಣಬಂಧಕ. ಜೊಂಡು ನಾಶಕ. ನೀರನ್ನು ತಿಳಿಗೊಳಿಸಲು ಪಟಿಕಕ್ಕಿಂತ ಉತ್ತಮ

ಹಸಿರು ಹಾಸು

(ಸ) ನೋಡಿ : ಹುಲ್ಲುನೆಲ

ಹಸಿವು

(ವೈ) ಆಹಾರವಿಲ್ಲದ್ದರಿಂದಾಗುವ ಒಂದು ಬಗೆಯ ಸಂಕಟ. ಆಹಾರದ ಆವಶ್ಯಕತೆ. ಆಹಾರ ಸೇವನೆಯನ್ನು ನಿಯಂತ್ರಿಸುವ ಶಾರೀರಿಕ ಹಾಗೂ ಮಾನಸಿಕ ವ್ಯವಸ್ಥೆ

ಹಸಿಹಗೇವು ಮೇವು

(ಸ) ದನಗಳ ಹಸಿರು ಮೇವನ್ನು ಒಣಗಿಸದೆ ಹಾಗೆಯೇ ತಕ್ಕ ಹಗೇವುಗಳಲ್ಲಿ ಹಾಕಿ ಮುಚ್ಚಿಟ್ಟು ರಕ್ಷಿಸಿದ ಮೇವು. ಕಿಣ್ವನದಿಂದಾಗಿ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿ

ಹಸು

(ಪ್ರಾ) ಬಾಸ್ ಜಾತಿಗೆ ಸೇರಿದ ಸಾಕುಪ್ರಾಣಿ, ಪ್ರಾಯಕ್ಕೆ ಬಂದ ಹೆಣ್ಣು ಪಶು. ಹಾಲು ತುಂಬ ಪುಷ್ಟಿಯುತ. ಆವು, ಆಕಳು

ಹಸ್ಕ್

(ಪವೈ) ಕುರಿಗಳ ಅಥವಾ ದನಗಳ ಶ್ವಾಸನಾಳಗಳಲ್ಲಿ ನೆಮಟೋಡ್ ಹುಳುಗಳು ಸೇರಿಕೊಂಡು ಉಂಟುಮಾಡುವ ಕೆಮ್ಮುರೋಗ. ವಾಸಿ ಮಾಡಲು ಲಸಿಕೆ ಲಭ್ಯ

ಹಸ್ತ

(ಪ್ರಾ) ವಸ್ತುವನ್ನು ಹಿಡಿಯಲು ಅನುಕೂಲವಾಗುವಂತೆ ಮಣಿಕಟ್ಟಿನಿಂದ ಮುಂದೆ ರೂಪಿತವಾದ ತೋಳಿನ ಭಾಗ. ಕೈ

ಹಸ್ತಾಂಗುಷ್ಠ

(ಪ್ರಾ) ಚತುಷ್ಪಾದಿಗಳ ಮುಂಗಾಲಿನ ಅತ್ಯಂತ ಕಿರಿದಾದ ಬೆರಳು

ಹಳದಿ ಜ್ವರ

(ವೈ) ಏಡೆಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಹರಡುವ ಕಪ್ಪು ವಾಂತಿ ಆಗುವ, ಉಷ್ಣ ದೇಶದ ವೈರಸ್ ರೋಗ. ಸಾಂಕ್ರಾಮಿಕ. ಜ್ವರ ವಿಷಮಿಸುವುದು ಕಾಮಾಲೆರೋಗಕ್ಕೆ ಕಾರಣ

ಹಾಗಲಕಾಯಿ

(ಸ) ಕುಕರ್ಬಿಟೇಸೀ (ಸೌತೆ) ಕುಟುಂಬಕ್ಕೆ ಸೇರಿದ, ನೆಲದ ಮೇಲೆ ಆಥವಾ ಚಪ್ಪರದ ಮೇಲೆ ಹಬ್ಬುವ ಬಳ್ಳಿಸಸ್ಯ. ಮೊಮೊರ್ಡಿಕ ಚರಂಟಿಯ ವೈಜ್ಞಾನಿಕ ನಾಮ. ರುಚಿ ಕಹಿ. ತರಕಾರಿಯಾಗಿ ಬಳಕೆ. ಔಷಧೀಯ ಗುಣಗಳುಂಟು

ಹಾಗ್

(ಪ್ರಾ) ವೀರ್ಯಗುಂದಿಸಿ ಮಾಂಸಕ್ಕಾಗಿ ಬೆಳೆಸಿದ ಗಂಡುಹಂದಿ. ಒಂದು ಸಾರಿಯೂ ಉಣ್ಣೆ ಕತ್ತರಿಸಿಲ್ಲದ ಚಿಕ್ಕಕುರಿ

ಹಾಫ್ನಿಯಮ್

(ರ) ಆವರ್ತಕೋಷ್ಟಕದಲ್ಲಿ ೪ನೆಯ ಗುಂಪಿನಲ್ಲಿರುವ ಲೋಹಧಾತು. ಪ್ರತೀಕ Hf. ಪಸಂ.೭೨, ಸಾಪರಾ ೧೭೮.೪೯, ಸಾಸಾಂ ೧೨.೧, ದ್ರಬಿಂ ೨೧೫೦0 ಸೆ ಕುಬಿಂ ೫೪೦೦0 ಸೆ. ಜಿರ್ಕೋನಿಯಮ್ ಖನಿಜಗಳಲ್ಲಿ ಲಭ್ಯ. ಟಂಗ್‌ಸ್ಟನ್ ತಂತುಗಳ ತಯಾರಿಕೆಯಲ್ಲಿಯೂ ಬೈಜಿಕ ಕ್ರಿಯಾಕಾರಿಗಳಲ್ಲಿ ನ್ಯೂಟ್ರಾನ್ ಅವಶೋಷಕವಾಗಿಯೂ ಬಳಕೆ

ಹಾಯಿ

(ತಂ) ಬೀಸುಗಾಳಿ ಬಳಸಿ ದೋಣಿ ನಡೆಸಲು ಅನುವಾಗುವಂತೆ ಜೋಡಿಸಿರುವ ವಿಶೇಷವಾಗಿ ನೇಯ್ದ ವಸ್ತ್ರವುಳ್ಳ ವ್ಯವಸ್ಥೆ. ಮೂಲದಲ್ಲಿ ಒತ್ತಾಗಿ ಹೆಣೆದ ಹತ್ತಿ ಅಥವಾ ಲಿನೆನ್ ಕ್ಯಾನ್ವಾಸುಗಳನ್ನು ಬಳಸಲಾಗುತ್ತಿತ್ತು. ಈಚೆಗೆ ಹೆಚ್ಚಾಗಿ ನೈಲಾನ್ ಪಾಲಿಸ್ಟರ್ ಬಟ್ಟೆಗಳ ಉಪಯೋಗ. ನೌಕಾಪಟ

ಹಾರಾಟ

(ತಂ) ವಾಯುಬಲವಿಜ್ಞಾನ ಕ್ರಿಯೆ ಅಥವಾ ಇತರ ಬಲಗಳ ಬೆಂಬಲದಿಂದ ವಾತಾವರಣದ ಮೂಲಕ ಅಥವಾ ಆಕಾಶದ ಮೂಲಕ ವಸ್ತುವಿನ ಚಲನೆ. ಲಂಘನ

ಹಾರಾಟ ದಾಖಲೆ ಸಾಧನ

(ತಂ) ಯಾನದಲ್ಲಿರುವ ವಿಮಾನದ ಮತ್ತು ಅದರ ವ್ಯವಸ್ಥೆಗಳ ಕಾರ್ಯ ನಿರ್ವಹಣೆಯ ಬಗೆಗೂ ಭವಿಷ್ಯತ್ತಿನಲ್ಲಿ ಉಪಯೋಗಕ್ಕಾಗಿ ಯಾನ ವೇಳೆಯಲ್ಲಿ ವಿಮಾನ ಎದುರಿಸಿದ ಪರಿಸ್ಥಿತಿಗಳ ಬಗೆಗೂ ಮಾಹಿತಿಗಳನ್ನು ದಾಖಲಿಸುವ ಸಲಕರಣೆ ಅಥವಾ ಸಾಧನ

Search Dictionaries

Loading Results

Follow Us :   
  Download Bharatavani App
  Bharatavani Windows App