भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹದ್ದು

(ಪ್ರಾ) ಆಕ್ಸಿಪಿಟ್ರಿಡೀ ಕುಟುಂಬಕ್ಕೆ ಸೇರಿದ ಹಗಲಿನಲ್ಲಿ ಚುರುಕಾದ, ತೀಕ್ಷ್ಣ ದೃಷ್ಟಿಯೂ ಪ್ರಬಲವಾದ ಹಾರು ಶಕ್ತಿಯೂ ಉಳ್ಳ ದೊಡ್ಡ ಗಾತ್ರದ ಹಿಂಸ್ರ ಪಕ್ಷಿ. ಇದರಲ್ಲಿ ಹಲವಾರು ಬಗೆಗಳಿವೆ. ಗೃಧ್ರ

ಹದ್ದು

(ಪ್ರಾ) ಉದ್ದ ರೆಕ್ಕೆಗಳೂ ಸಾಮಾನ್ಯವಾಗಿ ಕವಲೊಡೆದ ತೋಕೆಯೂ ಉಳ್ಳ ಡೇಗೆಯ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಪಕ್ಷಿ. ಗಿಡುಗ, ಗರುಡ

ಹನಿ ನೀರಾವರಿ

(ಸ) ವಿಶೇಷ ಕೊಳವೆಗಳ ಮೂಲಕ ನೇರವಾಗಿ ಸಸ್ಯಗಳ ಬುಡಕ್ಕೆ ಹನಿ ಹನಿಯಾಗಿ ನೀರು ಹಾಯಿಸುವ ವಿಧಾನ. ಇದು ನೀರಿನ ಗರಿಷ್ಠ ಉಪಯುಕ್ತತೆಯನ್ನು ಸಾಧಿಸುತ್ತದೆ ಮತ್ತು ನೀರು ಪೋಲಾಗುವುದನ್ನು ತಪ್ಪಿಸುತ್ತದೆ

ಹನ್ವಸ್ಥಿ

(ಪ್ರಾ) ಕಶೇರುಕಗಳಲ್ಲಿ ಕೆಳದವಡೆ; ಆರ್ತ್ರೊ ಪೊಡಗಳಲ್ಲಿ ಬಾಯಿಯ ಸಂಧ್ಯಂತರದಲ್ಲಿರುವ ಜಗಿಯುವ ಉಪಾಂಗ; ಪಾಲಿಕೇಟ್ ಹಾಗೂ ಶೀರ್ಷಪಾದಿಗಳಲ್ಲಿ ಗಲ್ಲದ ಕುಹರದೊಳಗಿರುವ, ಕೊಂಬು ಪದಾರ್ಥದಿಂದ ಆದ ಜೋಡಿ ದವಡೆಗಳಲ್ಲೊಂದು. ಸ್ತನಿಗಳ ಮತ್ತು ಮೀನುಗಳ ಕೆಳದವಡೆ. ಕೀಟಗಳಲ್ಲಿ ಜೋಡು ದವಡೆಯ ಅರ್ಧಭಾಗ. ಕೆಳದವಡೆ

ಹಂಬುಕಾಂಡ

(ಸ) ಕೆಲವು ಸಸ್ಯಗಳಲ್ಲಿರುವಂತೆ ಭೂಮಿಯ ಮೇಲೆ ಬಳ್ಳಿಯಂತೆ ಹಬ್ಬಿ ಬೇರು ಬಿಡುವ ಕಾಂಡ ಶಾಖೆ.ಧಾವನ ಕಾಂಡ

ಹಬೆ

(ಭೌ) ನೀರು ಕುದಿಯುವಾಗ ಬರುವ ಬಿಸಿಯಾದ ಆವಿ. ನೀರಿಗೆ ಅದರ ಕುದಿಬಿಂದುವಿನಲ್ಲಿ ಬಾಷ್ಪೀಕರಣದ ವಿಶಿಷ್ಟ ಗುಪ್ತೋಷ್ಣವನ್ನು ಒದಗಿಸಿದಾಗ ಹಬೆ ರೂಪುಗೊಳ್ಳುತ್ತದೆ. ವಿಶಿಷ್ಟ ಗುಪ್ತೋಷ್ಣ ಒತ್ತಡದೊಂದಿಗೆ ವ್ಯತ್ಯಾಸವಾಗುತ್ತ ಹೋಗುತ್ತದೆ. ವಾತಾವರಣ ಒತ್ತಡದಲ್ಲಿ ಅದು ಸರಿಸುಮಾರು ೨೨೫೭ ಕಿಲೊ ಜೂಲ್/ಕಿಗ್ರಾಂ ಆಗಿರುತ್ತದೆ. ಉಗಿ

ಹಬ್ಬುವ

(ಸ) ವಿವಿಧೆಡೆಗಳಲ್ಲಿ ಬೇರು ಬಿಡುತ್ತ, ಮೇಲಕ್ಕೆ ಬೆಳೆಯದೆಯೇ ನೆಲದ ಮೇಲೆ ಹಬ್ಬುತ್ತ ಹೋಗುವ (ಕಾಂಡ)

ಹಯಲಾಯ್ಡ್

(ವೈ) ಕಣ್ಣಿನ ಒಳಗಡೆ ಇರುವ ಕಾಚ ದ್ರವವನ್ನು ಸುತ್ತುಗಟ್ಟಿರುವ ಪಾರಕ ಪೊರೆ

ಹಯಲೊಪ್ಲಾಸ್ಮ್

(ಜೀ) ಪ್ರೋಟೊಪ್ಲಾಸ್ಮ್‌ನ (ಜೀವಧಾತುವಿನ) ತಿಳಿಯಾದ ದ್ರವ ಭಾಗ

ಹಯಸಿಂತ್

(ಸ) ಬಗೆಬಗೆಯ ಬಣ್ಣಗಳ, ಮುಖ್ಯವಾಗಿ, ಧೂಮ್ರ ನೀಲವರ್ಣದ, ಗಂಟೆಯ ಆಕಾರದ ಹೂ ಬಿಡುವ, ಗಡ್ಡೆ ಗಿಡಗಳ ವಿವಿಧ ಜಾತಿ. (ಭೂವಿ) ಜಿರ್‌ಕಾನ್ ಎಂಬ ಕಿತ್ತಳೆ ಬಣ್ಣದ ಪ್ರಶಸ್ತ ಖನಿಜ

ಹರಟೆ ಹಕ್ಕಿ

(ಪ್ರಾ) ಸಾಮಾನ್ಯವಾಗಿ ಗುಂಪುಗಳಲ್ಲಿ ಬಾಳುವ ಮತ್ತು ಗುಬ್ಬಚ್ಚಿಯಿಂದ ಮೈನಾವರೆಗಿನ ವಿವಿಧ ಗಾತ್ರಗಳಲ್ಲಿರುವ ಉದ್ದ ಕಾಲಿನ ಹಕ್ಕಿಗಳ ಪೈಕಿ ಯಾವುದೇ ಒಂದು. ಈ ಹಕ್ಕಿಗಳು ತರಗೆಲೆಗಳ ಮೇಲೆ ಹರಡಿ ಕುಳಿತು ಹುಳು ಹುಪ್ಪಟೆ ಹೆಕ್ಕುವ ಸಲುವಾಗಿ ಅವನ್ನು ಕೆದಕುವಾಗ ಉಂಟಾಗುವ ಸದ್ದಿನಿಂದಾಗಿ ಇಂಗ್ಲಿಷಿನಲ್ಲಿ ಇವುಗಳಿಗೆ ಬ್ಯಾಬ್ಲರ್‌ಗಳೆಂದು (ಹರಟೆ ಮಲ್ಲ) ಹೆಸರು ನೀಡಲಾಗಿದೆ

ಹರಡು

(ಪ್ರಾ) ಕಣಕಾಲು ಹಾಗೂ ಪಾದಗಳ ನಡುವಿನ ಕೀಲು. ಹಿಮ್ಮಡಿ ಸಂಧಿ

ಹರಡೆಲುಬು

(ಪ್ರಾ) ಕೆಳಕಾಲಿನ ಎಲುಬುಗಳಾದ ಫಿಬ್ಯುಲ ಮತ್ತು ಟಿಬಿಯ ಜೊತೆ ಕೀಲು ಜೋಡಣೆಯಾಗಿರುವ ಹಿಮ್ಮಡಿ ಮೂಳೆ. ಇದರ ಹೆಸರು ಅಸ್ಟ್ರಾಗಲಸ್. ನೋಡಿ : ಗುಲ್ಫಾಸ್ಥಿ

ಹರಳು

(ಭೂವಿ) ಶಿಲಾರೂಪಕ ಖನಿಜಯುತ ಹರಳುಗಳ ಸರಾಸರಿ ಗಾತ್ರ. ಶಿಲಾಭಂಗ ಪ್ರವೃತ್ತಿ ಸೂಚಕ ದಿಶೆ. ಲೋಹದ ಕಣ. ಭಂಗಗೊಂಡ ಮೇಲ್ಮೆಯ ರಚನೆಯ ನಿರೂಪಣೆ. ರವೆ

ಹರಳೆಣ್ಣೆ

(ಸ) ಔಡಲ ಬೀಜದ ಎಣ್ಣೆ. ಹಳದಿ-ಕಂದು ಬಣ್ಣದ ಮಂದ ದ್ರವ. ೧೦0ಸೆನಲ್ಲಿ ದ್ರವಿಸುತ್ತದೆ. ಸಾಸಾಂ ೦.೯೬-೦.೯೭. ಮೆರುಗೆಣ್ಣೆ ತಯಾರಿಕೆ, ಯಂತ್ರಚಾಲನೆ ಮುಂತಾದವುಗಳಲ್ಲಿಯೂ, ಔಷಧವಾಗಿಯೂ ಬಳಕೆ

ಹರಾತ್ಮಕ

(ಗ) ನೋಡಿ : ಸಂಗತ

ಹರಿತ್ತು

(ಸ) ಎಲೆಗಳಲ್ಲಿರುವ ಹಸಿರು ವರ್ಣಕ. ಇದು ಸೂರ್ಯರಶ್ಮಿಯಿಂದ ಶಕ್ತಿ ಹೀರಿಕೊಂಡು ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ

ಹರಿದಳ

(ಭೂವಿ) ಏಕನತ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುವ ನೈಸರ್ಗಿಕ ಆರ್ಸೆನಿಕ್ ಟ್ರೈಸಲ್ಫೈಡ್ (As2S3). ಹಳದಿ ಬಣ್ಣದ ಖನಿಜ. ಕಾಠಿಣ್ಯಾಂಕ ೧.೫-೨. ಸಾಸಾಂ ೩.೪೯. ಹಳದಿ ಆರ್ಸೆನಿಕ್ ಎಂದೂ ಕರೆಯುವುದುಂಟು. ಕೆಲವು ಬಿಸಿನೀರಿನ ಬುಗ್ಗೆಗಳಲ್ಲಿ ನಿಕ್ಷೇಪವಾಗಿ ಲಭ್ಯ. ವರ್ಣಕವಾಗಿ ಬಳಕೆ. ಆರ್ಪಿಮೆಂಟ್

ಹರಿದ್ರೇಣು

(ಸ) ಹರಿತ್ತನ್ನು ಒಳಗೊಂಡಿರುವ ಪುಟ್ಟ ಕೋಶದ ಅಂಗಕ. ಸಸ್ಯಕೋಶಗಳಲ್ಲಿರುತ್ತದೆ

ಹರಿದ್ವರ್ಣತೆ

(ಸ) ಸಾಧಾರಣವಾಗಿ ಹಸಿರು ಬಣ್ಣದವಲ್ಲದ ಸಸ್ಯಭಾಗಗಳು (ಉದಾ: ದಳಗಳು) ರೋಗದ ಕಾರಣವಾಗಿ ಹಸಿರು ಬಣ್ಣ ತಳೆಯವುದು

Search Dictionaries

Loading Results

Follow Us :   
  Download Bharatavani App
  Bharatavani Windows App