भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567895354Next >

ಸಂಕರ ತಳಿ ಸತ್ವ

(ಜೀ) ಸ್ವಪರಾಗಣ/ಸ್ವನಿಶೇಚನಗಳಿಂದ ಕುಂದಿದ ಆನುವಂಶಿಕ ಅಂಶಗಳನ್ನು ಅಡ್ಡತಳೀಕರಣದಿಂದ ಮತ್ತೆ ವರ್ಧಿಸುವುದು

ಸಂಕರ ತ್ರಾಣ

(ಜೀ) ಆನುವಂಶಿಕವಾಗಿ ಭಿನ್ನವಾದ ಜನ್ಮದಾತೃಗಳಿಂದ ಹುಟ್ಟಿದ ಸಂತಾನ ತೋರುವ ಹೆಚ್ಚಿನ ಸಾಮರ್ಥ್ಯ. ಉದಾ : ವಿಭಿನ್ನ ಬೆಳೆ ಮಾದರಿಗಳನ್ನು ತಳಿ ಮಾಡಿ ಬೆಳೆಸಿದ ಮಿಶ್ರಬೆಳೆ ಮೂಲ ಮಾದರಿಗಳಿಗಿಂತ ಹೆಚ್ಚು ಶಕ್ತಿಯುತವೂ ಹೆಚ್ಚು ಫಲದಾಯಕವೂ ಆಗಿರುವುದು. ಹೆಣ್ಣು ಕುದುರೆ ಹಾಗೂ ಕತ್ತೆಗಳ ಕೂಡಿಕೆಯಿಂದ ಹುಟ್ಟಿದ ಹೇಸರಕತ್ತೆ. ಕುದುರೆ ಕತ್ತೆಗಳಿಗಿಂತ ಹೆಚ್ಚು ಶಕ್ತಿಯುತ. ಅಧಿಕ ರೋಗ ನಿರೋಧಕ ಮತ್ತು ದೀರ್ಘಾಯುಷಿ

ಸಂಕರಕೋಶ

(ಜೀ) ಪ್ರತಿಕಾಯಗಳನ್ನು ಸಂಶ್ಲೇಷಿಸುವ, ಬಿ-ಲಿಂಫೊಸೈಟ್ ಮತ್ತು ನಶಿಸದೆ ನಿರಂತರ ವಿಭಜನೆಗೊಳ್ಳುತ್ತ ಹೋಗುವ ಕ್ಯಾನ್ಸರ್‌ಪೀಡಿತ (ಮಯಲೋಮ) ಬಿಳಿ ರಕ್ತಗಳ ನಡುವಣ ಕೋಶ. ಈ ಸಂಕರ ಕೋಶಗಳು ಶಾಶ್ವತವಾಗಿ ಉಳಿಯು ವುದರಿಂದ ಮಾನೋಕ್ಲೋನಲ್ ಪ್ರತಿಕಾಯಗಳನ್ನು ಹೇರಳವಾಗಿ ಉತ್ಪಾದಿಸುತ್ತ ಹೋಗುತ್ತವೆ. ೧೯೭೫ರಲ್ಲಿ ಸಿ. ಮಿಲ್‌ಸ್ಟೈನ್ ಮತ್ತು ಜಿ-ಕೋಹೆಲರ್ ಮೊದಲಿಗೆ ಇಂತಹ ಸಂಕರಕೋಶ ಸೃಷ್ಟಿಸಿದರು

ಸಂಕರಣ

(ರ) ವೇಲೆನ್ಸೀಯ ಕಕ್ಷಕಗಳು ತಮ್ಮ ವಿಶಿಷ್ಟತೆಯನ್ನು ಕಳೆದುಕೊಂಡು ಅಷ್ಟೇ ಸಂಖ್ಯೆಯ ಆದರೆ ಸಮಸ್ವರೂಪದ ಕಕ್ಷಕಗಳಾಗುವಿಕೆ

ಸಂಕರಣ ಪರಿಣಾಮ

(ಭೌ) ಬರುತ್ತಿರುವ ಅಧಿಕ ಆವೃತ್ತಿಯ ರೇಡಿಯೋ ಸಂಜ್ಞೆಗೆ ಸ್ಥಳದಲ್ಲೇ ಉತ್ಪತ್ತಿ ಮಾಡಿದ ಇನ್ನೊಂದು ಆವೃತ್ತಿಯ ಸಂಜ್ಞೆಯನ್ನು ಸೇರಿಸಿ ಅವೆರಡರ ವ್ಯತ್ಯಾಸವುಳ್ಳ ಆವೃತ್ತಿಯನ್ನು ಉಂಟುಮಾಡುವುದು. ಭಿನ್ನಾವೃತ್ತೀಯ ಪರಿಣಾಮ

ಸಂಕರ್ಮ

(ಪವಿ) ಇದೊಂದು ಪರಿಸರಾತ್ಮಕ ಸಹಯೋಗ. ಇದರಲ್ಲಿ ಜೀವಿಯ ದೈಹಿಕ ಪ್ರಕ್ರಿಯೆಗಳು/ವರ್ತನೆಗಳು ಸಮೀಪದಲ್ಲಿರುವ ಇನ್ನೊಂದು ಜೀವಿಯಿಂದಾಗಿ ವರ್ಧಿಸುತ್ತವೆ. (ವೈ) ಚಲನೆ ಉಂಟುಮಾಡುವಲ್ಲಿ ಒಂದು ಸ್ನಾಯು ಇನ್ನೊಂದರ ಜೊತೆ ನಿರ್ವಹಿಸುವ ಸಂಕಲಿತ ಕ್ರಿಯೆ

ಸಂಕಲನ

(ಗ) ಅಂಕಗಣಿತದ ನಾಲ್ಕು ಮೂಲ ಪರಿಕರ್ಮಗಳ ಪೈಕಿ ಒಂದು. ಉಳಿದವು ವ್ಯವಕಲನ, ಗುಣಾಕಾರ ಮತ್ತು ಭಾಗಾಹಾರ. a+b=c ಆಗಿರಲಿ. ಈ ಒಟ್ಟು ಪರಿಕರ್ಮ ಸಂಕಲನ. aಗೆ ಸಂಕಲ್ಯ (ಯೋಜ್ಯ) bಗೆ ಸಂಕಲಿತ (ಯೋಜಕ) ಮತ್ತು cಗೆ ಸಂಕಲನ ಫಲಲಬ್ಧವೆಂದು ಹೆಸರು. ಚಿಹ್ನೆ +. ಉದಾ: ೨+೩=೫. ಕೂಡುವುದು

ಸಂಕಲನ ಕ್ರಿಯೆ

(ಗ) ಮೊತ್ತವನ್ನು ಪಡೆಯುವುದು. (ರ) ಕಾರ್ಬನಿಕ ಅಣುವೊಂದಕ್ಕೆ ಇನ್ನೊಂದು ಅಣು ರಾಸಾಯನಿಕವಾಗಿ ಸೇರ್ಪಡೆ ಆಗುವ ಕ್ರಿಯೆ

ಸಂಕಲನ ನಿಯಮ

(ಸಂ) ಯಾವುದೇ ಯಾದೃಚ್ಛಿಕ ಸನ್ನಿವೇಶಕ್ಕೆ ಸಂಬಂಧಿಸಿದಂತೆ A ಮತ್ತು B ಎರಡು ಘಟನೆಗಳನ್ನು ಸೂಚಿಸಿದರೆ ಇವುಗಳ ಪೈಕಿ ಒಂದಾದರೂ ನಡೆಯುವ ಸಂಭವತೆ P(APB) = P(A) + P(B) – P(AB). ಇಲ್ಲಿ AB ಎರಡೂ ಘಟನೆಗಳು ಒಟ್ಟೊಟ್ಟಿಗೆ ನಡೆಯುವುದನ್ನು ಸೂಚಿಸುತ್ತದೆ. ಈ ನಿಯಮ ವನ್ನು ಎರಡಕ್ಕಿಂತ ಹೆಚ್ಚು ಘಟನೆಗಳಿಗೆ ಸಾರ್ವತ್ರೀಕರಿಸಬಹುದು

ಸಂಕಲನಶೀಲ ಗುಣಗಳು

(ರ) ದ್ರಾವಣ ಗಳಲ್ಲಿ ವಿಲೀನವಾಗಿರುವ ಕಣಗಳ, ಅಯಾನ್‌ಗಳ ಮತ್ತು ಅಣುಗಳ ಸ್ವಭಾವಗಳನ್ನು ಅವಲಂಬಿಸದೆ ಅವುಗಳ ಸಾರತೆಯನ್ನು ಮಾತ್ರ ಅವಲಂಬಿಸಿದ ಗುಣಗಳು. ಘನೀಭವನ ಬಿಂದುವಿನ ಇಳಿತ, ಕುದಿ ಬಿಂದುವಿನ ಏರಿಕೆ ಮತ್ತು ಪರಾಸರಣ ಒತ್ತಡ ಈ ಗುಣಗಳಲ್ಲಿ ಕೆಲವು

ಸಂಕಲ್ಯ ಫಲನ

(ಗ) f (x+y) = f(x) + f(y) ಗುಣ ಪ್ರದರ್ಶಿಸುವ ಫಲನ f (x). ಹೀಗಲ್ಲದೆ f (x+y) < f (x)+f (y) ಆಗಿದ್ದರೆ ಇದು ಅವಸಂಕಲ್ಯ ಫಲನ; f (x+y) > f (x)+f (y) ಆಗಿದ್ದರೆ ಅಧಿಸಂಕಲ್ಯ ಫಲನ

ಸಂಕಲ್ಯ ಸಂಯುಕ್ತ

(ರ) ಅಣುವಿಗೆ ಪರಮಾಣುವನ್ನು ಅಥವಾ ಪರಮಾಣು ಸಮೂಹವನ್ನು ಕೂಡಿಸಿದಾಗ ದೊರೆಯುವ ಸಂಯುಕ್ತ

ಸಂಕಲ್ಯಗಳು

(ಪವಿ) ಯಾವುದೇ ಮಿಶ್ರಣಕ್ಕೆ ಅಥವಾ ಮಿಶ್ರಲೋಹಕ್ಕೆ ಒಂದು ನಿರ್ದಿಷ್ಟ ಗುಣ ತರಲು ಸೇರಿಸುವ ಪದಾರ್ಥ. ಉದಾ : ಆಹಾರ ವಸ್ತುಗಳಿಗೆ ಬಣ್ಣ, ವಾಸನೆ, ರುಚಿ ಮೊದಲಾದ ವಿಶಿಷ್ಟ ಗುಣಗಳನ್ನು ಕೊಡಲು ಬಳಸುವ ಪದಾರ್ಥ ಗಳು. ಇವುಗಳ ಪ್ರಮಾಣ ಹೆಚ್ಚಿದಾಗ ಇಲ್ಲವೇ ರಾಸಾಯನಿಕ ಕ್ರಿಯೆಗೆ ಒಳಗಾದಾಗ ಇವು ಮಾಲಿನ್ಯ ಉಂಟುಮಾಡುತ್ತವೆ

ಸಂಕೀರ್ಣ

(ರ) ಪರಮಾಣುಗಳ ರಾಸಾಯನಿಕ ಸಂಯೋಗದಿಂದ ಆದ ವಿವಿಧ ಅಣುಗಳು, ಅಯಾನ್‌ಗಳು ಮೊದಲಾದವು ಪುನಃ ಒಂದರೊಡನೊಂದು ಸಂಯೋಗಿಸಿ ಉಂಟುಮಾಡುವ ಸಂಯುಕ್ತ

ಸಂಕೀರ್ಣ ಪುಷ್ಪಗುಚ್ಛ

(ಸ) ಒಂದೊಂದು ಕವಲಲ್ಲೂ ಒಂದೊಂದು ಗೊಂಚಲು ಇರುವಂತೆ ಕವಲೊಡೆದ ಹೂಗೊಂಚಲು

ಸಂಕುಲ

(ಗ) ನೋಡಿ : ಗ್ರೂಪ್

ಸಂಕುಲ

(ಜೀ) ದೊಡ್ಡದಾದ ಒಂದು ಸಮೂಹದ ಒಳಗೆ ಏಕ ಘಟಕವಾಗಿ ಗುಂಪುಗೂಡಿರುವ ಹಲವಾರು ಪ್ರಾಣಿಗಳು ಅಥವಾ ಸಸ್ಯಗಳು

ಸಂಕುಲನ ಗುಣಾಂಕ

(ಭೌ) ಪರಮಾಣು ರಾಶಿ ಘಟಕಗಳಲ್ಲಿ ವ್ಯಕ್ತಗೊಳಿಸಲಾದ ನ್ಯೂಕ್ಲೈಡ್‌ನ ರಾಶಿ M, ರಾಶಿ ಸಂಖ್ಯೆ A ಇದ್ದಾಗ (M-A) / Aಯನ್ನು ಸಂಕುಲನ ಗುಣಾಂಕ ಎನ್ನುತ್ತಾರೆ. ಉದಾ: ಕ್ಲೋರೀನ್‌ನ ಸಮಸ್ಥಾನಿಯ ರಾಶಿ ೩೨.೯೮೬೦. ರಾಶಿ ಸಂಖ್ಯೆ ೩೩. ಇದರ ಸಂಕುಲನ ಗುಣಾಂಕ (೩೨.೯೮೬-೩೩)/೩೩

ಸಂಕೇತ

(ಸಾ) ಸುದ್ದಿ ಸಮಾಚಾರಗಳನ್ನು ಕಳುಹಲು ಸಂಕ್ಷೇಪ ವಾಗಿಸಲು, ರಹಸ್ಯ ಕಾಪಾಡಲು, ಸಮಾಚಾರವನ್ನು ಯಂತ್ರದಲ್ಲಿ ಪರಿಷ್ಕರಿಸಲು ಬಳಸುವ, ಅನಿಯತವಾದ ಅರ್ಥಗಳಿರುವ ಅಕ್ಷರ, ಸಂಖ್ಯೆ, ಪದಗುಚ್ಛ ಅಥವಾ ಸಂಕೇತಗಳನ್ನ್ನು ಒಳಗೊಂಡ ಯಾವುದೇ ವ್ಯವಸ್ಥೆ. ಉದಾ : ಮಾರ್ಸ್ ಕೋಡ್

ಸಂಕೇತನ

(ಸಾ) ಮಾಹಿತಿಯನ್ನು ನಿರ್ದಿಷ್ಟ ವಿಧಿಗಳ ಅನುಸಾರ ಸಂಕೇತ ಭಾಷೆಗೆ ಪರಿವರ್ತಿಸುವುದು
< previous1234567895354Next >

Search Dictionaries

Loading Results

Follow Us :   
  Download Bharatavani App
  Bharatavani Windows App