भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಮಕಾಲೀಯ

(ಭೌ) ೧. ಸ್ಥಿರವಾದ ಆವೃತ್ತಿ ಅಥವಾ ಅವಧಿ ಉಳ್ಳ. ೨. ಒಂದೇ ಕಾಲದಲ್ಲಿ ಸಮ ಕಾಲಾಂತರ ಗಳಲ್ಲಿ ಮತ್ತೆ ಮತ್ತೆ ಜರುಗುವ. ಉದಾ : ಲೋಲಕದ ಚಲನೆ

ಸಮಕೇಂದ್ರೀಯ

(ಗ) ಒಂದೇ ಕೇಂದ್ರವುಳ್ಳ ಏಕಕೇಂದ್ರೀಯ. (ಭೌ) ಒಂದೇ ನಾಭಿಬಿಂದು ಮೂಲಕ ಸಾಗುವ ಕಿರಣಗಳು ಅಥವಾ ಸಮಾಂತರವಾದ ಕಿರಣಗಳು

ಸಮಕೋನೀಯ

(ಗ) ತ್ರಿಭುಜದ ಎಲ್ಲ ಕೋನ ಗಳೂ ಸಮವಾಗಿರುವುದು (=೬೦ಂ). ಆಗ ಎಲ್ಲ ಭುಜಗಳೂ ಸಮವಾಗಿದ್ದು ಅದು ಸಮಭುಜೀಯವೂ ಆಗಿರುವುದು

ಸಮಗುಚ್ಛ

(ಸ) ಇದೊಂದು ಅಸೀಮಾಕ್ಷ ಪುಷ್ಪ ಮಂಜರಿ. ಇದರಲ್ಲಿ ಮೇಲು ಭಾಗಗಳಲ್ಲಿಯ ಹೂಗಳ ತೊಟ್ಟುಗಳು ಗಿಡ್ಡವಾಗಿದ್ದು ಒಟ್ಟು ಮಂಜರಿ ಒಂದೇ ಎತ್ತರದ ಹೂಗಳಿಂದ ಆಗಿರುವಂತೆ ಕಾಣುತ್ತದೆ

ಸಮಗ್ರತಾ ಸಿದ್ಧಾಂತ

(ಜೀ) ಸಮಗ್ರ ಜೀವಿಯೊಂದು ಅದರ ಅಂಗಭಾಗಗಳ ಮೊತ್ತಕ್ಕಿಂತ ಮಿಗಿಲಾದ ವೈಶಿಷ್ಟ್ಯ ಉಳ್ಳದ್ದು, ಪ್ರಕೃತಿಯ ಸೃಜನಾತ್ಮಕ ವಿಕಸನದಲ್ಲಿ ಮುಖ್ಯವಾದವು ಈ ಸಮಗ್ರ ಜೀವಿಗಳೇ ಹೊರತು ಅವುಗಳ ಅಂಗಭಾಗಗಳಲ್ಲ, ಸಮಗ್ರತೆಗಳು ಇಡೀಯಾಗಿ ರೂಪುಗೊಳ್ಳುತ್ತವೆಯೇ ವಿನಾ ಬಿಡಿ ಘಟಕಗಳ ಕೂಡಿಕೆಯಿಂದಲ್ಲ ಎಂದು ಸಾರುವ ಸಿದ್ಧಾಂತ

ಸಮಚಕ್ರಿಕ

(ರ) ಮತ್ತೊಂದು ವಸ್ತುವಿನಂತೆ ತನ್ನ ಉಂಗುರದಲ್ಲಿಯೂ ಅಷ್ಟೇ ಸಂಖ್ಯೆಯ ಪರಮಾಣುಗಳಿರುವ

ಸಮಂಜಸ

(ಸಾ) ಮೇಳನವಿರುವ, ಹೊಂದಾಣಿಕೆ ಇರುವ, ಇನ್ನೊಂದರ ಜೊತೆಯಲ್ಲಿ ಬಳಸಬಹುದಾದ (ಸಾಧನ)

ಸಮತಲ

(ಗ) ಮೇಲ್ಮೈಯ ಯಾವುವೇ ಎರಡು ಬಿಂದುಗಳನ್ನು ಜೋಡಿಸುವ ಸರಳರೇಖೆ ಪೂರ್ತಿ ಅದರಲ್ಲೇ ನೆಲೆಸಿರುವ ತಲ. ಕಾರ್ಟೀಸಿಯನ್ ನಿರ್ದೇಶಕಗಳಲ್ಲಿ ಸಮತಲದ ಸಾರ್ವತ್ರಿಕ ಸಮೀಕರಣ. Ax+By+Cz+D=0. ತಲ

ಸಮತಲ ಜ್ಯಾಮಿತಿ

(ಗ) ಯೂಕ್ಲಿಡಿಯನ್ ಸಮತಲದಲ್ಲಿ ಸರಳರೇಖೆ, ತ್ರಿಭುಜ ಮತ್ತು ಬಹುಭಜಗಳ ಅಧ್ಯಯನ. ನೋಡಿ : ಯೂಕ್ಲಿಡಿಯನ್ ಜ್ಯಾಮಿತಿ

ಸಮತಲ ತ್ರಿಕೋಣಮಿತಿ

(ಗ) ನೋಡಿ: ತ್ರಿಕೋಣಮಿತಿ

ಸಮತಲನ

(ಭೂವಿ) ಭೂಸವೆತದ ಪ್ರಕ್ರಿಯೆ. ಇದರಲ್ಲಿ ಮೇಲ್ಮೈ ಸವೆದು ಸಮತಲವಾಗುತ್ತದೆ. ಉದಾ: ಸುತ್ತು ಬಳಸಿ ಹರಿಯುವ ನದಿಗಳ ಪಾರ್ಶ್ವೀಯ ನಗ್ನೀಕರಣ

ಸಮತೂಕ

(ತಂ) ೧.ಒಂದು ತೂಕವನ್ನು ಸಮತೋಲಿಸಲು ಬಳಸುವ ಇನ್ನೊಂದು ತೂಕ. ಪ್ರತಿಭಾರ. ಕೌಂಟರ್‌ಪಾಯ್ಸ್. ೨.ನೆಲದ ಮೇಲ್ಮೈಯಿಂದ ತುಸು ಎತ್ತರದಲ್ಲಿ ಇರಿಸಲಾದ ವಿದ್ಯುದ್ವಾಹಕಗಳ ಜಾಲಬಂಧ. ಇದರ ಮತ್ತು ನೆಲದ ನಡುವೆ ಅವಾಹಕಗಳನ್ನು ಅಳವಡಿಸಲಾಗಿದ್ದು ಶಕ್ತಿ ನಷ್ಟವಾಗುವುದನ್ನು ಕಡಿಮೆ ಮಾಡಲಾಗಿರುತ್ತದೆ. ಈ ವ್ಯವಸ್ಥೆ ಆಂಟೆನಾಗಳಿಗೆ ಭೂಸಂಪರ್ಕಗೊಳಿಸುವಲ್ಲಿ ಬಳಕೆ

ಸಮತೋಕ್ತಿ

(ಗ) ನೋಡಿ : ದ್ವಿಬಂಧಿತ

ಸಮತೋಲ

(ಭೌ) ಶ್ರಾಂತಸ್ಥಿತಿಯಲ್ಲಿರುವ ಅಥವಾ ಸ್ಥಿರವೇಗದಲ್ಲಿ ಚಲಿಸುತ್ತಿರುವ ವಸ್ತುವೊಂದರ ಸ್ಥಿತಿ. ವಸ್ತುವಿನ ಮೇಲೆ ವಿವಿಧ ಬಲಗಳು ವರ್ತಿಸುತ್ತಿರುವಾಗ ಅವುಗಳ ಫಲಿತಬಲ ಶೂನ್ಯವಾದಾಗ ಆ ವಸ್ತು ಸಮತೋಲದಲ್ಲಿದೆ ಎನ್ನುತ್ತೇವೆ. ಸಮತೋಲದಲ್ಲಿರುವ ವಸ್ತುವನ್ನು ತುಸುವೇ ವಿಚಲಿಸಿದಾಗ ಅದು ಮತ್ತೆ ಸಮತೋಲಕ್ಕೆ ಮರಳಿದರೆ ಆ ಸ್ಥಿತಿಗೆ ಸ್ಥಿರಸಮತೋಲ ಎಂದೂ ಮರಳದಿದ್ದರೆ ಅಸ್ಥಿರ ಸಮತೋಲವೆಂದೂ ಹೆಸರು. ಸಮಸ್ಥಿತಿ. (ರ) ವಿಪರ್ಯಯಶೀಲ ಕ್ರಿಯೆಯಲ್ಲಿ ಎರಡು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಕ್ರಿಯೆ ಜರಗಿಸುವ ವೇಗಗಳು ಸಮವಾಗಿದ್ದು ವ್ಯವಸ್ಥೆಯಲ್ಲಿ ಮತ್ತೆ ಬದಲಾಗುವ ಯಾವುದೇ ಪ್ರವೃತ್ತಿ ಇಲ್ಲದಿದ್ದಾಗ ಆ ವ್ಯವಸ್ಥೆ ಸಮಸ್ಥಿತಿ ತಲುಪಿರುತ್ತದೆ

ಸಮತೋಲ

(ಜೀ) ದೇಹ ಮತ್ತು ಮನಸ್ಸು ಸಮಸ್ಥಿತಿಯಲ್ಲಿ ಇರುವುದು. (ಭೌ) ಸ್ಟುಡಿಯೋಗಳಲ್ಲಿ ಧ್ವನಿ ಆಕರಗಳನ್ನು ಯುಕ್ತವಾಗಿ ಹೊಂದಿಸಿ ಅಂತಿಮ ಪ್ರೇಷಣೆ ಕಲಾತ್ಮಕ ಪ್ರಮಾಣಕ್ಕೆ ಅನುಗುಣವಾಗಿರುವಂತೆ ಮಾಡುವುದು

ಸಮತೋಲಿತ ಲೋಲಕ

(ಭೌ) ಎರಡು ವಿಭಿನ್ನ ಪದಾರ್ಥಗಳಿಂದ ರಚಿತವಾಗಿದ್ದು ಉಷ್ಣತೆಯ ಏರಿಳಿತಗಳು ಒಂದರ ಮೇಲೆ ಬೀರುವ ಪರಿಣಾಮ (ವ್ಯಾಕೋಚನ ಸಹಾಂಕ) ಇನ್ನೊಂದರ ಮೇಲೆ ಬೀರುವ ಪರಿಣಾಮದಿಂದ (ವ್ಯಾಕೋಚನ ಸಹಾಂಕದಿಂದ) ಸರಿದೂಗಲ್ಪಡುವಂತೆ, ಹಾಗಾಗಿ ಲೋಲಕದ ಉದ್ದ ಬದಲದೆ ಆಂದೋಲನ ದರ ಸ್ಥಿರವಾಗಿರುವಂತೆ ಏರ್ಪಡಿಸಿದ ಲೋಲಕ

ಸಮತೋಲಿತ ಸಮೀಕರಣ

(ರ) ರಾಸಾಯನಿಕ ಕ್ರಿಯೆಯಲ್ಲಿ ಪ್ರತಿಯೊಂದು ಅಭಿಕಾರಕದ ಮತ್ತು ಉತ್ಪನ್ನದ ನಿಖರ ಸಾಪೇಕ್ಷ ಮೋಲ್‌ಗಳ ಸಂಖ್ಯೆಗಳನ್ನು ಕಾಣಿಸಿರುವ ಸಮೀಕರಣ

ಸಮದಂತಿ

(ಪ್ರಾ) ಒಂದೇ ಅಳತೆ, ಆಕಾರದ ದಂತಗಳಿರುವ. (ಹಾವಿನ ವಿಷಯದಲ್ಲಿ) ಸಮ ಉದ್ದದ ದವಡೆ ಹಲ್ಲುಗಳಿರುವ

ಸಮದಿಕ್ಚ್ಯುತಿ ರೇಖೆ

(ಭೌ) ಸಮ ಕಾಂತೀಯ ದಿಕ್ಚ್ಯುತಿಗಳ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆಳೆದ ರೇಖೆ

ಸಮದೂರ

(ಗ) ಮೂರು ಬಿಂದುಗಳು A,B,C ಗಳಾಗಿದ್ದು AB=AC ಆಗಿದ್ದರೆ B ಮತ್ತು C ಬಿಂದುಗಳು A ಬಿಂದುವಿನಿಂದ ಸಮದೂರವಾಗಿ ಇರುತ್ತವೆ. ಅಂತೆಯೇ AB ಎಂಬ ಸರಳರೇಖೆಯಿಂದ P ಮತ್ತು Q ಎಂಬ ಬಿಂದುಗಳ ಲಂಬದೂರಗಳು ಸಮನಾಗಿದ್ದರೆ ಆಗ P ಮತ್ತು Q ಬಿಂದುಗಳು AB ಸರಳರೇಖೆಯಿಂದ ‘ಸಮದೂರ’ದಲ್ಲಿರುತ್ತವೆ. ಇಲ್ಲಿ P ಮತ್ತು Q ಬಿಂದುಗಳು AB ಸರಳರೇಖೆಯ ಒಂದೇ ಪಾರ್ಶ್ವದಲ್ಲಿ ಅಥವಾ ಎರಡು ವಿರುದ್ಧ ಪಾರ್ಶ್ವಗಳಲ್ಲಿರಬಹುದು

Search Dictionaries

Loading Results

Follow Us :   
  Download Bharatavani App
  Bharatavani Windows App