भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಂಪುಟ

(ಸಾ) ಒಡವೆ, ಕಾಗದ, ಸತ್ತವರ ಬೂದಿ ಮೊದಲಾದವನ್ನಿಡುವ, ಅಲಂಕಾರಿಕ ಸಣ್ಣ ಪೆಟ್ಟಿಗೆ. ಕರಂಡಕ

ಸಂಪೂರ್ಣ ಆಂತರಿಕ ಪ್ರತಿಫಲನ

(ಭೌ) ಬೆಳಕಿನ ಕಿರಣವು ಒಂದು ಮಾಧ್ಯಮದಿಂದ ದ್ಯುತೀಯವಾಗಿ ಕಡಿಮೆ ಸಾಂದ್ರತೆಯ ಇನ್ನೊಂದು ಮಾಧ್ಯಮಕ್ಕೆ – ಉದಾ: ಗಾಜಿನಿಂದ ವಾಯುವಿಗೆ-ಹಾಯುವಾಗ ಲಂಬರೇಖೆಯಿಂದ ದೂರವಾಗಿ ಬಾಗುವುದು. ಈಗ, ವಕ್ರೀಭವಿತ ಕಿರಣವು ಲಂಬರೇಖೆಗೆ ೯೦ಂಗಿಂತಲೂ ಹೆಚ್ಚು ಬಾಗುವಂತೆ, ಆಪಾತ ಕಿರಣ ಮೇಲ್ಮೈಯನ್ನು ಯಾವುದೋ ಕೋನದಲ್ಲಿ ಸಂಧಿಸಿದುದಾದರೆ ಆಗ ಅದು ಆ ಮಾಧ್ಯಮದಿಂದ ಹೊರಹಾಯಲಾರದು. ಪೂರ್ತಿಯಾಗಿ ಅದರೊಳಕ್ಕೇ ಪ್ರತಿಫಲಿಸುತ್ತದೆ. ಸಂಪೂರ್ಣ ಆಂತರಿಕ ಪ್ರತಿಫಲನ ಏರ್ಪಡುವ ಪರಿಮಿತೀಯ ಅಥವಾ ಪರ್ವ ಆಪಾತಕೋನಕ್ಕೆ ಆ ಮಾಧ್ಯಮದ ಕ್ರಾಂತಿಕೋನವೆಂದು ಹೆಸರು. ದ್ಯುತಿ ಗಾಜಿನ ಕ್ರಾಂತಿ ಕೋನ ಸಾಮಾನ್ಯವಾಗಿ ೪೦0, ಕೆಲವು ದ್ಯುತಿ ಉಪಕರಣಗಳಲ್ಲಿ ಸಂಪೂರ್ಣ ಆಂತರಿಕ ಪ್ರತಿಫಲನವನ್ನು ಪಡೆಯಲು ಕನ್ನಡಿಗಳ ಬದಲು ಆಶ್ರಗಗಳನ್ನು ಬಳಸಲಾಗುತ್ತದೆ

ಸಂಪೂರ್ಣ ಯಾದೃಚ್ಛಿಕ ವಿನ್ಯಾಸ

(ಸಂ) ಯಾವುದೇ ಚರದ ಮೇಲೆ ಹಲವು ಅಂಶಗಳ ಸರಾಸರಿ ಪರಿಣಾಮವನ್ನು ಹೋಲಿಸಲು ಅಂಶಗಳನ್ನು ಪ್ರಾಯೋಗಿಕ ವಸ್ತು ಗಳಿಗೆ ಸಂಪೂರ್ಣವಾಗಿ ಯಾದೃಚ್ಛಿಕವಾಗಿ ನಿಗದಿಪಡಿಸುವುದು. ಉದಾ : ೪ ರೀತಿಯ ರಸಗೊಬ್ಬರಗಳನ್ನು ೧೫ ಹೊಲಗಳಿಗೆ ಯಾದೃಚ್ಛಿಕವಾಗಿ ವಿಂಗಡಿಸಿ ಬಳಸುವುದು

ಸಪ್ತಕ

(ರ) ಏಳು ವೇಲೆನ್ಸಿ ಉಳ್ಳ ಧಾತು

ಸಪ್ತಭುಜ

(ಗ) ಏಳು ಭುಜಗಳು (ಏಳು ಕೋನಗಳು) ಇರುವ ಬಹುಭುಜ. ನೋಡಿ: ಬಹುಭುಜ

ಸಂಬಂಧ

(ಗ) ಎರಡು ಅಥವಾ ಹೆಚ್ಚು ವಸ್ತುಗಳ ನಡುವಿನ ಬಾಂಧವ್ಯ ಅಥವಾ ಗುಣ. ಉದಾ: “x = y,” “aಯು b ಮತ್ತು c ನಡುವೆ ಇದೆ” ಇವು ಸಂಬಂಧಗಳು. ಆದರೆ “ಸಂಖ್ಯೆ n ಅವಿಭಾಜ್ಯವಲ್ಲ”; ಇದು ಸಂಬಂಧವಲ್ಲ. ರೂಪ್ಯಕವಾಗಿ ಹೇಳುವ ದಾದರೆ ಗಣ Aಯಿಂದ ಗಣ Bಗೆ ಸಂಬಂಧ Rನ್ನು AABಯ ಒಂದು ಉಪಗಣವೆಂದು ವ್ಯಾಖ್ಯಿಸುತ್ತೇವೆ. (x,y) R ಆದಾಗ ಇದನ್ನು xRY ಎಂದು ಬರೆದು x ಧಾತು yಗೆ R -ಸಂಬಂಧಿತ ವಾಗಿದೆ ಎಂದು ಓದುತ್ತೇವೆ. A = B ಆದಾಗ R ಎಂಬುದು A ಗಣದ ಮೇಲಿನ ಸಂಬಂಧ. ಉದಾ: x < y ಆಗಿದ್ದು x ಮತ್ತು y ನೈಜಸಂಖ್ಯೆಗಳಾಗಿರುವ ಎಲ್ಲ (x, y) ಕ್ರಮಯುಗ್ಮಗಳ ಗಣ R ಎಂಬುದು ನೈಜ ಸಂಖ್ಯೆಗಳ ಗಣದ ಮೇಲೆ ನಿರೂಪಿಸಿದ “-ಕ್ಕಿಂತ ಕಡಿಮೆ" ಸಂಬಂಧ < page 625.tif> ಇದೇ ರೀತಿ < page 625a.tif> ಧನ ಪೂರ್ಣಾಂಕಗಳ ಗಣದ ಮೇಲೆ ‘-ರ ಅಪವರ್ತನ’ ಸಂಬಂಧ. R ಎಂಬುದು ಗಣ Aಯಿಂದ ಗಣ Bಗೆ ಒಂದು ಸಂಬಂಧವಾಗಿರಲಿ. ಆಗ Bಯಿಂದ Aಗೆ < page 625b.tif> ಎಂದು ವ್ಯಾಖ್ಯಿಸಲಾದ ಸಂಬಂಧ Rನ ಪ್ರತಿಲೋಮ ಸಂಬಂಧ. ಉದಾ: ‘-ರ ಅಪವರ್ತನ’ ಸಂಬಂಧದ ಪ್ರತಿಲೋಮ ‘-ರ ಅಪವರ್ತ್ಯ’ ಸಂಬಂಧ. ಗಣ Aಯ ಮೇಲೆ ದ್ವಿ ಸಂಬಂಧ R. (೧) ಎಲ್ಲ x x Aಗೆ xRx ಆಗಿದ್ದರೆ ಸ್ವತುಲ್ಯ ಸಂಬಂಧ (೨) xRy ಸದಾ yRxನ್ನು ನಿಬಂಧಿಸಿದರೆ ಸಮಮಿತೀಯ ಸಂಬಂಧ (೩) xRy ಮತ್ತು yRz ಒಟ್ಟಾಗಿ

ಸಂಬಂಧಿತ ಕೋನ

(ಗ) ಒಂದು ಕೋನವು ಆಗಿದ್ದರೆ ಅದರ ‘ಸಂಬಂಧಿತ’ ಕೋನಗಳು ೯೦0–, ೯00++, ೧೮೦0–, ೧೮೦0++, ೨೭೦0–, ೨೭೦0++, ೩೬೦0–, ೩೬೦0++ ಮತ್ತು (-()

ಸಂಬಾರ

(ಸ) ಆಹಾರ ಪದಾರ್ಥಗಳನ್ನು ರುಚಿಗೊಳಿಸಲು ಉಪಯೋಗಿಸುವ ಮೆಣಸು, ಲವಂಗ, ಜಾಯಿಪತ್ರೆ ಇತ್ಯಾದಿ ಸುವಾಸನೆಯ ಅಥವಾ ಖಾರದ ಸಸ್ಯ ಪದಾರ್ಥ. ಮಸಾಲೆ

ಸಬ್‌ವೇ

(ತಂ) ರಸ್ತೆ ಮೊದಲಾದವುಗಳ ಅಡಿಯಲ್ಲಿ ಪಾದಚಾರಿಗಳು ಹಾದುಹೋಗಲು ಮಾಡಿರುವ ನೆಲದ ಒಳಗಿನ ದಾರಿ. ಭೂಗರ್ಭ ರೈಲುಮಾರ್ಗ. ಸುರಂಗಮಾರ್ಗ

ಸಭಾಂಗಣ

(ಸಾ) ಸಾರ್ವಜನಿಕ ನಾಟಕಶಾಲೆ ಮೊದಲಾದವುಗಳಲ್ಲಿ ಶ್ರೋತೃಗಳಿಗಾಗಿ ಏರ್ಪಡಿಸಿರುವ ಪ್ರದೇಶ. ಶ್ರವಣಶಾಲೆ. ಶ್ರೋತೃಸ್ಥಳ. ಪ್ರೇಕ್ಷಾಗೃಹ

ಸಂಭಾವ್ಯತೆ

(ಸಂಕ) ಘಟನೆ ಸಂಭವಿಸುವುದರ ಸಾಧ್ಯತೆಯನ್ನು ಅಳೆಯುವ ಸಾಂಖ್ಯಕ ಮಾನ. ಪ್ರಯೋಗವೊಂದರಲ್ಲಿ n ಸಮಗ್ರ ಹಾಗೂ ಪರಸ್ಪರ ಪ್ರತ್ಯೇಕಿತ ರೀತಿಗಳಿದ್ದು ಇವುಗಳ ಪೈಕಿ m ರೀತಿಗಳಲ್ಲಿ ಘಟನೆ A ಸಂಭವಿಸಿದರೆ ಆಗ ಅದರ ಸಂಭಾವ್ಯತೆ < page 626.tif>. ಯಾವುದೇ ಘಟನೆಯ n ಪರೀಕ್ಷಾರ್ಥಕ ಪ್ರಯೋಗಗಳ ಯಾದೃಚ್ಛಿಕ ಶ್ರೇಣಿಯಲ್ಲಿ m ಅನುಕೂಲ ಘಟನೆಗಳಾಗಿದ್ದರೆ ಆಗ ಆ ಘಟನೆಯ ಸಂಭಾವ್ಯತೆಯು n ಅತಿಬೃಹತ್ತಾಗಿರುವಾಗ < page 626a.tif>ನ ಪರಿಮಿತಿ. ಈ ಪರಿಮಿತಿ ೦ ಮತ್ತು ೧ರ ನಡುವೆ ಇದೆ. P(A) = 0 ಎಂದರೆ ಘಟನೆ ಸಂಭವಿಸದು. P(A) = 1 ಎಂದರೆ ಘಟನೆ ಸಂಭವಿಸುವುದು ಖಂಡಿತ

ಸಂಭೋಗ

(ಜೀ) ಲೈಂಗಿಕ ಕ್ರಿಯೆ

ಸಂಭೋಗೋದ್ರೇಕ

(ವೈ) ಲೈಂಗಿಕ ಕ್ರಿಯೆಯ ಪರಾಕಾಷ್ಠೆ. ಪುರುಷನ ಶಿಶ್ನದಿಂದ ರೇತಸ್ಸು ಸ್ತ್ರೀಯ ಗರ್ಭಾಶಯದೊಳಕ್ಕೆ ಉತ್ಸರ್ಜಿಸಿ ಇಬ್ಬರಿಗೂ ಅತ್ಯಂತ ಪ್ರಬಲವಾದ, ಸುಖಕರವಾದ, ಸಂಕೀರ್ಣ ಭಾವನೆಗಳ ಅನುಭವವಾಗುವ ಸ್ಥಿತಿ

ಸಮ

(ಗ) a ಸಮ b (a=b) ಎನ್ನುವಾಗ a ಮತ್ತು b ಅನನ್ಯವಾಗಿರುತ್ತವೆ. ಉದಾ: < page 632.tif> ಇತ್ಯಾದಿ. a ಸಮಾನ b ಎನ್ನುವಾಗ a ಮತ್ತು bಗಳ ಮೌಲ್ಯಗಳು ಸಮವಾಗಿವೆ ಎಂದರ್ಥ. a ಒಂದು ಜೊತೆ ಪಾದರಕ್ಷೆಗಳನ್ನು b ಒಂದು ಷರಾಯಿಯನ್ನು ಪ್ರತಿನಿಧಿಸಿದ್ದು ಇವುಗಳ ಬೆಲೆ ಒಂದೇ ಆಗಿದ್ದರೆ ಆಗ a ಮತ್ತು b ಸಮಾನ ಎನ್ನುತ್ತೇವೆ

ಸಮ ಗಭೀರತಾ ಉಷ್ಣತಾರೇಖೆ

(ಭೂವಿ) ಭೂಮಿಯ ಮೇಲ್ಮೈ ಕೆಳಗೆ ಸಮ ತಗ್ಗುಗಳಲ್ಲಿ ಅದೇ ಉಷ್ಣತೆ ಇರುವ ಸ್ಥಳಗಳನ್ನು ಸಂಬಂಧಿಸುವಂತೆ ಭೂಪಟದ ಮೇಲೆ ಎಳೆದ ರೇಖೆ. ಭೂಮ್ಯಂತಸ್ಸಮ ಉಷ್ಣತಾರೇಖೆ

ಸಮ ಗಭೀರತಾ ರೇಖೆ

(ತಂ) ಸಮ ತಗ್ಗುಗಳನ್ನು ಸೇರಿಸಿ ಎಳೆದ ಸುತ್ತು ಗೆರೆ

ಸಮ ಚತುರ್ಭುಜೀಯ ವ್ಯವಸ್ಥೆ

(ಭೂವಿ) ಸ್ಫಟಿಕ ವಿನ್ಯಾಸ ಶೈಲಿ. ಇದರಲ್ಲಿ ಮೂರು ಸ್ಫಟಿಕೀಯ ಅಕ್ಷಗಳಿದ್ದು ಅವು ಪರಸ್ಪರ ಲಂಬವಾಗಿರುತ್ತವೆ ಮತ್ತು ವಿಭಿನ್ನ ಉದ್ದದವಾಗಿ ಇರುತ್ತವೆ. ಆಲಿವಿನ್, ಟೊಪಾಜ್ ಮತ್ತು ಬೆರೈಟಿಸ್ ಖನಿಜಗಳು ಈ ವ್ಯವಸ್ಥೆಯವು. ವಿಷಮ ಲಂಬಾಕ್ಷ ವ್ಯವಸ್ಥೆ

ಸಮ ನಮನ ಇಳುಕಲು

(ಭೂವಿ) ಎರಡು ಪಕ್ಕಗಳಲ್ಲೂ ಒಂದೇ ಪ್ರಮಾಣದ ನಮನ (ಇಳುಕಲು) ಇರುವ ಶಿಲಾಮಡಿಕೆ

ಸಮಕರ್ಷಕ

(ರ) ಪರಾಸರ (ಆಸ್ಮಾಟಿಕ್) ಒತ್ತಡ ಒಂದೇ ಆಗಿರುವ. (ವೈ) ಸ್ನಾಯು ಕ್ರಿಯೆಯ ಸಾಧಾರಣ ಅಥವಾ ಮಾಮೂಲು ಸಂಕೋಚನೆಯಿಂದ ನಡೆಯುವ

ಸಮಕಸಿ ಕವಾಟಗಳು

(ವೈ) ಶವದ ಹೃದಯದಿಂದ ಹೊರತೆಗೆದ ಕವಾಟಗಳು. ಇವನ್ನು ಕವಾಟ ದೋಷಗಳಿರುವವರಿಗೆ ಕಸಿ ಮಾಡಬಹುದು

Search Dictionaries

Loading Results

Follow Us :   
  Download Bharatavani App
  Bharatavani Windows App