भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಂಧಿಸ್ಥ ಉಷ್ಣತೆ

(ರ) ಯಾವ ಉಷ್ಣತೆಯಲ್ಲಿ ಒಂದು ವಸ್ತುವಿನ ದ್ರವಸ್ಥಿತಿಯ ಸಾಂದ್ರತೆ ಹಾಗೂ ಅನಿಲ ಸ್ಥಿತಿಯ ಸಾಂದ್ರತೆ ಒಂದೇ ಆಗಿರುವುದೋ ಅಂತಹ ಉಷ್ಣತೆ. (ತಂ) ಕಾಂತ ವಸ್ತುಗಳು ತಮ್ಮ ಕಾಂತೀಯ ಗುಣಗಳನ್ನು ಕಳೆದುಕೊಳ್ಳುವ ಉಷ್ಣತೆ. ನೋಡಿ : ಕ್ಯೂರಿ ಬಿಂದು (ಭೌ) ಯಾವ ಉಷ್ಣತೆಗೂ ಮೇಲಿನ ಉಷ್ಣತೆಯಲ್ಲಿ ದತ್ತ ಅನಿಲ ದ್ರವೀಕರಣವಾಗದೋ ಆ ಉಷ್ಣತೆ

ಸಂಧಿಸ್ಥ ಒತ್ತಡ

(ರ) ಸಂಧಿಸ್ಥ ಉಷ್ಣತೆಯಲ್ಲಿ ಅನಿಲವನ್ನು ದ್ರವೀಕರಿಸುವಾಗ ಒದಗಿಸಬಹುದಾದ ಒತ್ತಡ

ಸಂಧಿಸ್ಥ ಗಾತ್ರ

(ರ) ಸಂಧಿಸ್ಥ ಉಷ್ಣತೆ ಮತ್ತು

ಸಂಧಿಸ್ಥಳ

(ಜೀ) ಶರೀರದಲ್ಲಿ ಎರಡು ದೊಡ್ಡ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಇಕ್ಕಟ್ಟಾದ ಭಾಗ. ಉದಾ: ಕಶೇರುಕಗಳಲ್ಲಿ ಮಿದುಳಿನ ಮಧ್ಯ, ಹಿಂಬದಿಗಳಿಗೆ ಸಂಪರ್ಕ ಕಲ್ಪಿಸುವ ಭಾಗ. (ಭೂ) ಎರಡು ದೊಡ್ಡ ಭೂಭಾಗಗಳನ್ನು ಸೇರಿಸುವ ಕಿರಿದಾದ ಭೂಭಾಗ. ಭೂಕಂಠ. ಭೂಸಂಧಿ

ಸಂಧಿಹಿಡಿತ

(ವೈ) ಅಸ್ಥಿಸಂಧಿಯಲ್ಲಿ ಗಡಸು ಪದಾರ್ಥ ಬೆಳೆದು ಚಲನೆಗೆ ಊನ ತರುವುದು. ಎರಡು ಅಥವಾ ಮೂರು ಮೂಳೆಗಳು ಇಲ್ಲವೇ ಗಡಸು ಭಾಗಗಳು ಒಂದಾಗಿ ಬೆಸೆದು ಕೊಳ್ಳುವುದು. ಸಂಧಿಚಲನೆ ನಷ್ಟ. ಕೀಲುಗಳ ಹಿಡಿತ

ಸಂಧ್ಯಕಾಲೀ

(ಪ್ರಾ) ಸಾಯಂಕಾಲದಲ್ಲಿ ಚುರುಕಾಗಿರುವ, ಸಾಯಂಕಾಲ ಹಾರುವ ಹಕ್ಕಿ. (ಸ) ಸಾಯಂಕಾಲ ಅರಳುವ ಹೂವು. ಉದಾ: ಬ್ರಹ್ಮಕಮಲ

ಸಂನಾಭಿ ಶಂಕುಜಗಳು

(ಗ) ಉಭಯ ನಾಭಿಗಳೂ ಸಾಮಾನ್ಯವಾಗಿರುವ ಶಂಕುಜಗಳು

ಸನ್ನಿ

(ವೈ) ತೀವ್ರ ಜ್ವರ, ತಲೆಗಾಯ, ಮಿದುಳು ವಿಕಾರಗಳು ಮುಂತಾದವುಗಳಿಂದಾಗಿ ತುಂಬ ಅವ್ಯವಸ್ಥೆಗೊಳಗಾದ ಮನೋಸ್ಥಿತಿ. ಮಾನಸಿಕ ಗೊಂದಲ. ಅಸಂಬದ್ಧ ಮಾತು ಮನೋವಿಕಲ್ಪಗಳು ಇದರ ಲಕ್ಷಣ. ಉನ್ಮಾದ

ಸನ್ನಿಪಾತ

(ವೈ) ತೀವ್ರ ಭಾವೋದ್ರೇಕ, ಸಂವೇದನೆ ಮತ್ತು ಕ್ರಿಯಾಶಕ್ತಿಗಳ ಪ್ರಕ್ಷೋಭೆ ಮೊದಲಾದ ವಿವಿಧ ಅಪಸಾಮಾನ್ಯ ಪರಿಣಾಮಗಳು, ಅರಿವಳಿಕೆ, ಸೆಳವು ಮೊದಲಾದವುಗಳಿಂದ ಕೂಡಿದ, ಸಾಮಾನ್ಯವಾಗಿ ನೈತಿಕ, ಬೌದ್ಧಿಕ ಚಾಂಚಲ್ಯಗಳನ್ನೊಳ ಗೊಂಡ ನರವ್ಯಾಧಿ. ಚಿತ್ತವಿಕೋಪ

ಸನ್ನಿಹಿತ

(ಗ) ಗುರಿಗೆ ತೀರ ಹತ್ತಿರದ ಬೆಲೆ. ಅಜಮಾಸು, ಸರಿಸುಮಾರು

ಸನ್ನಿಹಿತ ವಿಶ್ಲೇಷಣೆ

(ರ) ಸಂಕೀರ್ಣ ಮಿಶ್ರಣವನ್ನು ಅದನ್ನು ರೂಪಿಸುವ ಸಂಕೀರ್ಣ ಸಂಯುಕ್ತಗಳಾಗಿ ವಿಭಜಿಸುವುದು

ಸನ್ನೆಗೋಲು

(ತಂ) ‘ಆನಿಕೆ’ ಎಂಬ ಸ್ಥಿರ ಆಧಾರ ಭಾಗ, ಭಾರ ಮೀಟುವ ಎರಡನೆಯ ಭಾಗ ಮತ್ತು ಬಲ ಪ್ರಯೋಗಿಸುವ ಮೂರನೆಯ ಭಾಗ ಉಳ್ಳ, ಗಡಸಾದ, ಬಾಗದ, ಲೋಹದ ಪಟ್ಟಿ ಅಥವಾ ದಂಡ. ಭಾರವಾದ ಅಥವಾ ಹೂತಿರುವ ವಸ್ತುವನ್ನು ಮೀಟಿ ಎತ್ತಲು ಬಳಸಲಾಗುತ್ತದೆ. ಮೀಟು ಗೋಲು (ಚಿತ್ರದಲ್ಲಿ ಮೂರು ಬಗೆಯ ಸನ್ನೆಗೋಲುಗಳು)

ಸಂಪತನ

(ಸಾ) ಒಂದೆಡೆ ಸೇರು. ಒಂದಾಗು, ಹೊಂದಿಕೆ. ಕಾಕತಾಲೀಯತೆ. ಸಂಪಾತ (ಭೌ) ಎರಡು ಅಥವಾ ಹೆಚ್ಚು ಗ್ರಾಹಕಗಳಲ್ಲಿ ಅಯಾನೀಕಾರಕ ಕಣಗಳು ಏಕಕಾಲದಲ್ಲಿ ಕಾಣಿಸಿಕೊಳ್ಳುವುದು

ಸಂಪರ್ಕ ವಿಧಾನ

(ರ) ಗಂಧಕಾಮ್ಲವನ್ನು (H2SO4 ಸಲ್ಫ್ಯೂರಿಕ್ ಆಮ್ಲ) ಔದ್ಯಮಿಕವಾಗಿ ತಯಾರಿಸುವ ಪ್ರಮುಖ ರೀತಿ. ಸಾಧಾರಣವಾಗಿ ಪ್ಲ್ಯಾಟಿನಮ್ ಅಥವಾ ಪ್ಲ್ಯಾಟಿನೀಕೃತ ಕಲ್ನಾರು ಇಲ್ಲಿಯ ಕ್ರಿಯಾವರ್ಧಕ. ಇದನ್ನು ಕಾಸಿ ಇದರ ಮೂಲಕ ಸಲ್ಫರ್ ಡೈಆಕ್ಸೈಡನ್ನೂ (SO2) ಆಕ್ಸಿಜನ್ನನ್ನೂ (O) ಹಾಯಿಸಿ ಒಂದುಗೂಡಿಸಿ ಸಲ್ಫರ್ ಟ್ರೈಆಕ್ಸೈಡನ್ನು (SO3) ಪಡೆಯಲಾಗುವುದು. ನೀರಿನಲ್ಲಿ (H2O) ಇದರ (SO3) ದ್ರಾವಣವೇ ಗಂಧಕಾಮ್ಲ. ನೋಡಿ : ಸೀಸ ಕೋಷ್ಠ ವಿಧಾನ

ಸಂಪರ್ಕರೋಧ

(ವೈ) ಸೋಂಕು ಹರಡದಂತೆ ಮಾಡಲು ರೋಗ ತಗಲಿದ ವ್ಯಕ್ತಿಯ ಚಲನವಲನಗಳ ಮೇಲೆ ತಾತ್ಕಾಲಿಕವಾಗಿ ವಿಧಿಸುವ ನಿರ್ಬಂಧ, ಬಲವಂತವಾಗಿ ಬೇರ್ಪಡಿಸಿ ಇರಿಸುವುದು

ಸಂಪರ್ಕೋಪಗ್ರಹ

(ತಂ) ದತ್ತಾಂಶ ಗಳನ್ನೂ ಮನುಷ್ಯ ವಾಣಿಯನ್ನೂ ದೂರದರ್ಶನವನ್ನೂ ಪ್ರಪಂಚಾದ್ಯಂತ ಬಿತ್ತರಿಸಿ ದೇಶ ದೇಶಗಳ ನಡುವೆ ಸಂಪರ್ಕ ಏರ್ಪಡಿಸುವ ಸಲುವಾಗಿ ಆಕಾಶದಲ್ಲಿ ಸ್ಥಾಪಿಸಿರುವ ಕೃತಕ ಉಪಗ್ರಹ. ಇದು ಭೂಮಿ ಸುತ್ತ ಎಷ್ಟೇ ಎತ್ತರದಲ್ಲಿ ಸುತ್ತು ತ್ತಿರಬಹುದು. ಆದರೆ ಸಾಮಾನ್ಯವಾಗಿ ವಿಶಾಲ ಪ್ರದೇಶಕ್ಕೆ ನಿರಂತರವಾಗಿ ಉಪಯೋಗಕ್ಕೆ ಬರುವಂತೆ ಭೂ ಸಮಶ್ಚರ ಕಕ್ಷೆಯಲ್ಲಿ (ಅಥವಾ ನಿರ್ದಿಷ್ಟವಾಗಿ ಭೂಸ್ಥಾಯಿ ಕಕ್ಷೆಯಲ್ಲಿ) ಸ್ಥಾಪಿಸಲಾಗುತ್ತದೆ. ಇದರಲ್ಲಿ ಸೌರಶಕ್ತಿ ಚಾಲಿತ ಟ್ರಾನ್ಸ್‌ಪಾಂಡರನ್ನು ಅಳವಡಿಸಲಾಗಿರುತ್ತದೆ.

ಸಂಪೀಡಕ

(ಸಾ) ಇಕ್ಕಟ್ಟಾದ, ಸಂಕುಚಿತವಾದ ಅಥವಾ ಅಗಲ ಕಿರಿದಾದ ಭಾಗ. ಉದಾ : ರೋಗಿಯ ದೇಹದ ಉಷ್ಣತೆಗೆ ಅನುಸಾರವಾಗಿ ವೈದ್ಯಕೀಯ ಉಷ್ಣತಾಮಾಪಕದಲ್ಲಿ ಏರಿದ ಪಾದರಸ ಸ್ತಂಭವು ಹಿಂದಕ್ಕೆ ಕುಸಿಯದಂತೆ ತಡೆದು ನಿಲ್ಲಿಸುವುದು ಆ ನಳಿಕೆಯ ಬುಡದಲ್ಲಿರುವ ಸಂಪೀಡಕ. (ವೈ) ತಾನು ಸಂಕೋಚಿಸು ವುದರ ಮೂಲಕ ಒಂದು ರಚನೆಯನ್ನೋ ಸ್ನಾಯುವನ್ನೋ ಅದುಮುವ (ಸೆಡೆಸುವ) ಸ್ನಾಯು ಅಥವಾ ರಜ್ಜು. ಸಂಪೀಡನಕಾರಿ

ಸಂಪೀಡನ

(ಭೌ) ಅದುಮಲ್ಪಡುವುದು. ಸಂಪೀಡನೆಗೆ ಒಳಗಾದಾಗ ವಸ್ತುವಿನ ಗಾತ್ರ ಎಷ್ಟು ಕುಗ್ಗಿತೆಂಬುದರ ಪ್ರಮಾಣ

ಸಂಪೀಡನಶೀಲತೆ

(ಭೌ) ಒತ್ತಡ ಹೇರಿದಾಗ ವಸ್ತುವಿನ ಗಾತ್ರ ಸಂಕೋಚಿಸುವ ಗುಣ

ಸಂಪೀಡಿತ ವಾಯು

(ತಂ) ವಾಯುಮಂಡಲ ಒತ್ತಡಕ್ಕಿಂತ ಅಧಿಕ ಒತ್ತಡದಲ್ಲಿರುವ ಸಂಕೋಚಿತ ವಾಯು. ವಿದ್ಯುಚ್ಛಕ್ತಿಯ ಅಥವಾ ಅಂತರ್ದಹನ ಎಂಜಿನ್ನಿನ ಬಳಕೆ ಅಪಾಯ ಕಾರಿಯಾದಂಥ ಸ್ಥಳಗಳಲ್ಲಿ (ಉದಾ: ಗಣಿಗಳಲ್ಲಿ)- ಸಂಪೀಡಿತ ವಾಯುವು ಶಕ್ತಿಪ್ರೇರಕವಾಗಿ ಉಪಯುಕ್ತ. ತಂಪಾಗಿಸಲು ಅಥವಾ ವಾತಾಯನವೇರ್ಪಡಿಸಲು ನಿಷ್ಕಾಸ ವಾಯುವನ್ನು ಬಳಸಬಹುದು

Search Dictionaries

Loading Results

Follow Us :   
  Download Bharatavani App
  Bharatavani Windows App