भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಂದಿಗ್ಧ ಪರಿಸ್ಥಿತಿ

(ಗ) ತ್ರಿಭುಜಗಳ ಪರಿಹಾರದಲ್ಲಿ ದತ್ತ ತ್ರಿಭುಜ ಧಾತುಗಳಿಗೆ ಎರಡು ಸಾಧ್ಯ ಪರಿಹಾರಗಳ ಇರುವಿಕೆ. ಸಮತಲ ತ್ರಿಕೋಣಮಿತಿಯಲ್ಲಿ ಎರಡು ಭುಜಗಳು ಮತ್ತು ಅವು ಒಳಗೊಂಡಿರದ ಲಘುಕೋನ ದತ್ತವಾಗಿರುವಾಗ ಸಂದಿಗ್ಧ ಪರಿಸ್ಥಿತಿ ಉದ್ಭವಿಸಬಹುದು. ಈ ಸಂದರ್ಭದಲ್ಲಿ ಪರಿಹಾರವಾಗಿ ಎರಡು ಸಾಧ್ಯ ತ್ರಿಭುಜಗಳು ಲಭಿಸುತ್ತವೆ: ಒಂದು ಲಘುಕೋನ ತ್ರಿಭುಜ, ಇನ್ನೊಂದು ಅಧಿಕ ಕೋನ ತ್ರಿಭುಜ. a, b, Aಗಳು ದತ್ತ ಭುಜಗಳು ಮತ್ತು ಅವು ಒಳಗೊಂಡಿರದ ಕೋನವಾಗಿರಲಿ ಆಗ b > a > b sin A ಆಗಿದ್ದಲ್ಲಿ ಸಂದಿಗ್ಧ ಪರಿಸ್ಥಿತಿ ಉದ್ಭವಿಸುತ್ತದೆ

ಸಂದಿಗ್ಧತೆ

(ಸಾ) ಒಂದು ಸಮಸ್ಯೆಗೆ ಒಂದಕ್ಕಿಂತ ಹೆಚ್ಚು ಪರಿಹಾರಗಳಿರುವುದು

ಸದಿಶ

(ಗ) ಪರಿಮಾಣವನ್ನೂ (ಮ್ಯಾಗ್ನಿಟ್ಯೂಡ್) ದಿಶೆಯನ್ನೂ (ಡೈರೆಕ್ಷನ್) ನಿರೂಪಿಸಲಾಗಿರುವ ಭೌತರಾಶಿ. ದೂರ ಮತ್ತು ಜವ (ಸ್ಪೀಡ್) ಅದಿಶ ರಾಶಿಗಳು, ಸ್ಥಾನಾಂತರಣೆ (ವಿಸ್ಥಾಪನೆ), ಕ್ಷೇತ್ರ ಸಾಮರ್ಥ್ಯ, ಬಲ ಮತ್ತು ವೇಗ (ವೆಲಾಸಿಟಿ) ಸದಿಶ ರಾಶಿಗಳು. ನೋಡಿ : ಅದಿಶ.

ಸದಿಶಗಳ ತ್ರಿಭುಜ

(ಗ) ಏಕಬಿಂದುಸ್ಥ ವಾಗಿದ್ದು ಲಬ್ಧ (ರಿಸಲ್ಟೆಂಟ್) ಇಲ್ಲದ ಮೂರು ಸಮತಲೀಯ ಸದಿಶಗಳಲ್ಲಿ ಒಂದೊಂದನ್ನು ಈ ತ್ರಿಭುಜದ ಒಂದೊಂದು ಭುಜ ಪ್ರತಿನಿಧಿಸುತ್ತದೆ. ಭುಜಗಳ ನಡುವೆ ತೆರಪುಗಳೇ ಇಲ್ಲದಂತೆ ಈ ತ್ರಿಭುಜವನ್ನು ಪೂರ್ತಿಗೊಳಿಸುವುದು ಸಾಧ್ಯವಾದರೆ ಆಗ ಸದಿಶಗಳು ಸಮತೋಲದಲ್ಲಿ ಇರುತ್ತವೆ. ಸದಿಶಗಳು ಬಲಗಳಾಗಿದ್ದರೆ ದೊರೆಯುವ ಚಿತ್ರ ಬಲಗಳ ತ್ರಿಭುಜ, ವೇಗಗಳಾಗಿದ್ದರೆ ವೇಗಗಳ ತ್ರಿಭುಜ

ಸಂದುಗೂಡಿಕೆ

(ಪ್ರಾ) ಎರಡು ಅಥವಾ ಹೆಚ್ಚು ಮೂಳೆಗಳ ನಡುವೆ ಚಲಿಸುವ ಅಥವಾ ಚಲಿಸದ ಕೂಡಿಕೆ

ಸದೃಶ

(ಗ) ಮಾನಕಗಳಲ್ಲಿ ಭಿನ್ನವಾಗಿದ್ದು ರೂಪಗಳಲ್ಲಿ ಒಂದೇ ಆಗಿರುವ ಎರಡು ಆಕೃತಿಗಳು. ಒಂದು ಇನ್ನೊಂದರ ವ್ಯಾಕೋಚನ ಇಲ್ಲವೇ ಸಂಕೋಚನ ಆಗಿರುತ್ತದೆ

ಸದೃಶ ತ್ರಿಭುಜಗಳು

(ಗ) ಎರಡು ತ್ರಿಭುಜಗಳ ಸಂವಾದಿ ಕೋನಗಳು ಸಮವಾಗಿರುವುದು. ಇವುಗಳಲ್ಲಿ ಸಂವಾದಿ ಭುಜಗಳು ಅನುಪಾತೀಯವಾಗಿರುತ್ತವೆ

ಸದೃಶ ಧ್ರುವಗಳು

(ಭೌ) ದಂಡಕಾಂತಗಳಲ್ಲಿ ಪರಸ್ಪರ ವಿಕರ್ಷಿಸುವ ಒಂದು ಜೊತೆ ಧ್ರುವಗಳು. ಉತ್ತರ-ಉತ್ತರ, ದಕ್ಷಿಣ-ದಕ್ಷಿಣ.ನೋಡಿ : ವಿದೃಶ ಧ್ರುವಗಳು

ಸದೃಶ ಬಹುಭುಜಗಳು

(ಗ) ಎರಡು ಬಹುಭುಜಗಳಲ್ಲಿ ಸಂವಾದಿಕೋನಗಳು ಸಮವಾಗಿರುವುದು ಮತ್ತು ಸಂವಾದಿ ಭುಜಗಳು ಅನುಪಾತೀಯವಾಗಿರುವುದು

ಸದೃಶ ಭಾಗ

(ಪ್ರಾ) ಎರೆಹುಳುಗಳಂಥ ಕೆಲವು ಪ್ರಾಣಿಗಳ ಶರೀರಗಳಲ್ಲಿ ತುದಿಯಿಂದ ತುದಿಗೆ ಕೂಡಿಕೊಂಡಿರುವ, ಒಂದೇ ಬಗೆಯ, ಆದರೆ ಕೆಲವು ವಿಶೇಷ ಅಭಿವರ್ಧನೆ ಹೊಂದಿರ ಬಹುದಾದ, ಭಾಗಗಳಲ್ಲಿ ಯಾವುದೇ ಒಂದು. ವಿಖಂಡ

ಸದೃಶಾಂಗಗಳು

(ಜೀ) ನೋಟ ಮತ್ತುಕ್ರಿಯೆ ಇಲ್ಲವೇ ನೋಟ ಅಥವಾ ಕ್ರಿಯೆ ಕುರಿತಂತೆ ಸದೃಶವಾಗಿದ್ದು ರೂಪರಾಚನಿಕವಾಗಿಯಾಗಲೀ ವಿಕಾಸಮೂಲವಾಗಿಯಾಗಲೀ ಸಮಾನವಾಗಿರದ ಅವಯವಗಳು. ಉದಾ: ಪುಷ್ಪದಳ ಇತ್ಯಾದಿ ಅಲ್ಲದ ಎಲೆಗಳು, ಕ್ಲ್ಯಾಡೋಡ್‌ಗಳು; ಹಕ್ಕಿ ಮತ್ತು ಕೀಟಗಳ ರೆಕ್ಕೆಗಳು

ಸಂಧಿ

(ತಂ) ಅರೆವಾಹಕದಲ್ಲಿ ಮುಖ್ಯವಾಗಿ ಎಲೆಕ್ಟ್ರಾನ್‌ಗಳ ಚಲನೆಯಿಂದ ಆಗುತ್ತಿರುವ ವಹನದ ಪ್ರದೇಶಕ್ಕೂ, ಮುಖ್ಯವಾಗಿ ರಂಧ್ರಗಳ ಚಲನೆಯಿಂದ ಆಗುತ್ತಿರುವ ವಹನದ ಪ್ರದೇಶಕ್ಕೂ ನಡುವಿನ ಭಾಗ

ಸಂಧಿಕಾಲ

(ವೈ) ಜೀವಿಯಲ್ಲಿ ಸಂಭವಿಸುವ ಉತ್ಕಟ ಬದಲಾವಣೆಯ ಕಾಲ. ಉದಾ: ಋತುಸ್ತಂಭನ. ಪ್ರಜನನ ಸಾಮರ್ಥ್ಯಾಂತರ ಕಾಲ. ಗಂಡ ಕಾಲ (ಸ) ಕೆಲವು ಹಣ್ಣುಗಳು, ಉದಾ : ಸೇಬು ಮಾಗುವ ಕಾಲ. ಸಸ್ಯಗಳ ಉಸಿರಾಟದ ಗತಿ ಹೆಚ್ಚಿ ಗರಿಷ್ಠ ಆಮ್ಲಜನಕವನ್ನು ಹೀರಿ ಕಾರ್ಬನ್ ಡೈಆಕ್ಸೈಡನ್ನು ಹೊರಬಿಡುವ ಕಾಲ

ಸಂಧಿಬಂಧನ

(ಪ್ರಾ) ಎರಡು ಅಥವಾ ಹೆಚ್ಚು ಮೂಳೆಗಳ ನಡುವಿನ ಚಲನಶೀಲ ಅಥವಾ ಚಲನರಹಿತ ಸಂಯೋಜನೆ. ಕೀಲುಜೋಡಣೆ

ಸಂಧಿಯುಕ್ತ

(ಪ್ರಾ) ಕೀಲುಗಳಿರುವ. ಸಂಧಿಸಂಬಂಧೀ

ಸಂಧಿರಹಿತ

(ಜೀ) ಹುಳುಗಳ ಒಡಲು, ಸಸ್ಯದ ಕಾಂಡ ಖಂಡಖಂಡಗಳಿಂದ ಕೂಡಿಲ್ಲದಿರುವುದು; ವಿಶೇಷವಾಗಿ ಕೆಲವು ಕಡಲ ಪ್ರಾಣಿಗಳ ಒಡಲು ಕೀಲುಗಳಿಂದ ಕೂಡಿಲ್ಲ ದಿರುವುದು, ಕೀಲುಗಳಿಲ್ಲದ ಚಿಪ್ಪಿರುವುದು

ಸಂಧಿವಾತ

(ವೈ) ದೇಹದ ಸಣ್ಣ ಕೀಲುಗಳು (ಮುಖ್ಯವಾಗಿ ಕಾಲಿನ ಹೆಬ್ಬೆಟ್ಟು) ಊದಿ, ಬಹಳ ನೋಯುತ್ತ, ಕೀಲುಗಳಲ್ಲಿ ಸೀಮೆಸುಣ್ಣದಂಥ ಉಂಡೆಗಳು ರಚನೆಯಾಗಿ ಥಟ್ಟನೆ ಕೆರಳುವ ರೋಗ. ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಾಗಿ ಅದು ಮೂಳೆ ಕೀಲು ಗಳಲ್ಲೂ ಎಲುಬುಗಳಲ್ಲೂ ಅಸ್ಥಿರಜ್ಜುಗಳಲ್ಲೂ ಮೆಲ್ಲೆಲುಬುಗಳಲ್ಲೂ ಸೋಡಿಯಮ್ ಬೈಯೂರೇಟ್ ಆಗಿ ಸಂಚಯಿಸುವುದರಿಂದ ಈ ರೋಗ ಉಂಟಾಗುತ್ತದೆ

ಸಂಧಿವಾತ ಜ್ವರ

(rheumatism) (ವೈ) ಕೀಲು ಗಳಲ್ಲಿ ಉರಿಯೂತ ನೋವು ಆಗುವ ಸಾಂಕ್ರಾಮಿಕವಲ್ಲದ ಜ್ವರ

ಸಂಧಿಸಂಬಂಧಿ

(ಪ್ರಾ) ನೋಡಿ : ಸಂಧಿಯುಕ್ತ

ಸಂಧಿಸ್ಥ

(ಸಾ) ಅವಧಿಕ. ಕ್ರಾಂತಿ, ಸ್ಥಿತಿ ಬದಲಾವಣೆ ಹಂತ

Search Dictionaries

Loading Results

Follow Us :   
  Download Bharatavani App
  Bharatavani Windows App